ವಿಶ್ವ ಆರೋಗ್ಯ ಸಂಸ್ಥೆಯ ನಕ್ಷೆಯಲ್ಲಿ ಜಮ್ಮು – ಕಾಶ್ಮೀರ ಮತ್ತು ಲಡಾಖ್ ಭಾರತದಿಂದ ಬೇರೆ ತೋರಿಸಲಾಗಿದೆ !

ಚೀನಾದ ಕೈವಾಡ ಇರುವ ಸಾಧ್ಯತೆ

ವಿಶ್ವ ಆರೋಗ್ಯ ಸಂಸ್ಥೆಯ ಈ ಭಾರತ ದ್ವೇಷದ ಬಗ್ಗೆ ಭಾರತ ಸರಕಾರವು ಕಠೋರವಾಗಿ ಸ್ಪಷ್ಟೀಕರಣ ಕೇಳಿ ಅದಕ್ಕೆ ಪಾಠ ಕಲಿಸುವುದು ಅಪೇಕ್ಷಿತವಿದೆ !

ನವ ದೆಹಲಿ – ವಿಶ್ವ ಆರೋಗ್ಯ ಸಂಸ್ಥೆಯಿಂದ ಜಾರಿ ಮಾಡಲದ ನಕ್ಷೆಯಲ್ಲಿ ಜಮ್ಮು – ಕಾಶ್ಮೀರ ಮತ್ತು ಲಡಾಖ್ ಭೂಭಾಗವನ್ನು ಭಾರತದಿಂದ ಬೇರೆಯಾಗಿರುವಂತೆ ತೋರಿಸಲಾಗಿದೆ. ಈ ಬಣ್ಣದ ನಕ್ಷೆಯು ಸಂಸ್ಥೆಯ ಅಧಿಕೃತ ಜಾಲತಾಣದಲ್ಲಿ ಲಭ್ಯವಿದೆ ಮತ್ತು ಭಾರತೀಯ ಪ್ರದೇಶವನ್ನು ಕಡು ನೀಲಿ ಬಣ್ಣದಲ್ಲಿ ತೋರಿಸಲಾಗಿದ್ದು, ಜಮ್ಮು – ಕಾಶ್ಮೀರ ಮತ್ತು ಲಡಾಖ್‌ನ ಭಾಗವನ್ನು ಬೂದು ಬಣ್ಣದಲ್ಲಿ ತೋರಿಸಲಾಗಿದೆ.

(WHO ವು ಈ ರೀತಿಯ ವಿಕೃತ ಭಾರತದ ನಕ್ಷೆಯನ್ನು ಪ್ರಸಾರ ಮಾಡಿದೆ)

ಜಾಗತಿಕವಾಗಿ ಯಾವ ದೇಶಗಳಲ್ಲಿ ಕೊರೋನಾದ ಎಷ್ಟು ರೋಗಿಗಳು ಕಂಡುಬಂದಿವೆ ಮತ್ತು ಯಾವ ದೇಶಗಳಲ್ಲಿ ಕೊರೋನಾದಿಂದ ಎಷ್ಟು ಸಾವುಗಳು ಸಂಭವಿಸಿವೆ ಎಂಬ ಮಾಹಿತಿಯನ್ನು ಈ ನಕಾಶೆಯಲ್ಲಿ ತೋರಿಸಲಾಗಿದೆ. ‘ವಿಶ್ವಸಂಸ್ಥೆಯ ಮಾರ್ಗಸೂಚಿಗಳನ್ನು ಸಂಸ್ಥೆಯು ಅನುಸರಿಸುತ್ತದೆ ಮತ್ತು ನಕ್ಷೆಯನ್ನು ವೀಕ್ಷಿಸಲಾಗುತ್ತದೆ, ಅರ್ಥಮಾಡಿಕೊಳ್ಳಲಾಗುತ್ತದೆ ಮತ್ತು ಅದಕ್ಕೆ ಅನುಗುಣವಾಗಿ ತೋರಿಸಲಾಗುತ್ತದೆ’ ಎಂದು ಸಂಸ್ಥೆ ಸ್ಪಷ್ಟೀಕರಣದಲ್ಲಿ ತಿಳಿಸಿದೆ. (ಅಂತಹ ನಕ್ಷೆಯನ್ನು ವಿಶ್ವಸಂಸ್ಥೆ ಪ್ರಕಟಿಸಿದರೆ, ಭಾರತವು ವಿಶ್ವಸಂಸ್ಥೆಯನ್ನು ಖಂಡಿಸಬೇಕು ಮತ್ತು ಅದನ್ನು ಬದಲಾಯಿಸುವಂತೆ ಒತ್ತಾಯಿಸಬೇಕು ! – ಸಂಪಾದಕ)

ಲಂಡನ್‌ನಲ್ಲಿ ಪ್ರವಾಸಿ ಭಾರತೀಯ ಪಂಕಜ ಇದನ್ನು ಮೊದಲು ಗಮನಿಸಿದರು. ‘ಇದರ ಹಿಂದೆ ಚೀನಾದ ಕೈವಾಡವಿರಬಹುದು; ಕಾರಣ ವಿಶ್ವ ಆರೋಗ್ಯ ಸಂಸ್ಥೆಗೆ ಚೀನಾ ಹೆಚ್ಚಿನ ಪ್ರಮಾಣದ ಆರ್ಥಿಕ ನೆರವು ನೀಡುತ್ತಿರುತ್ತದೆ’, ಎಂದು ಪಂಕಜ ಹೇಳಿದ್ದಾರೆ.


(ಸೌಜನ್ಯ : Republic World)