ಬಾಲಾಕೋಟ್ ಏರ್ ಸ್ಟ್ರೈಕ್‌ನಲ್ಲಿ ೩೦೦ ಜಿಹಾದಿ ಭಯೋತ್ಪಾದಕರು ಸಾವನ್ನಪ್ಪಿದ್ದು ನಿಜ !

ಪಾಕಿಸ್ತಾನದ ಮಾಜಿ ರಾಜಕೀಯ ಅಧಿಕಾರಿ ಆಗಾ ಹಿಲಾಲಿಯ ಸ್ವೀಕೃತಿ

ಭಾರತೀಯ ವಾಯುಪಡೆಯ ಕಾರ್ಯಾಚರಣೆಯ ಕುರಿತು ಪ್ರಶ್ನೆಗಳನ್ನು ಎತ್ತಿದವರು ಈಗ ಮಾತನಾಡುತ್ತಾರೆಯೇ ?

ಇಸ್ಲಾಮಾಬಾದ್ – ಭಾರತವು ಫೆಬ್ರವರಿ ೨೬, ೨೦೧೯ ರಂದು ಬೆಳಗ್ಗೆ ಪಾಕಿಸ್ತಾನದ ಬಾಲಕೋಟ್‌ನಲ್ಲಿ ಜಿಹಾದಿ ಉಗ್ರಗಾಮಿ ಗುಂಪು ಜೈಶ್-ಎ-ಮೊಹಮ್ಮದಿನ ತರಬೇತಿ ನೆಲೆಯ ಮೇಲೆ ನಡೆಸಿದ ವಾಯುದಾಳಿಯಲ್ಲಿ (ಏರ್ ಸ್ಟ್ರೈಕ್‌ನಲ್ಲಿ) ೩೦೦ ಉಗ್ರರು ಸಾವನ್ನಪ್ಪಿದ್ದಾರೆ ಎಂದು ಪಾಕಿಸ್ತಾನದ ಮಾಜಿ ರಾಜಕೀಯ ಅಧಿಕಾರಿ ಆಗಾ ಹಿಲಾಲಿ ಇವರು ಒಪ್ಪಿಕೊಂಡಿದ್ದಾರೆ. ಅವರು ಪಾಕಿಸ್ತಾನದ ಸುದ್ದಿ ವಾಹಿನಿಯೊಂದರಲ್ಲಿ ಮಾತನಾಡುತ್ತಿದ್ದರು. ಕಾಶ್ಮೀರದ ಪುಲ್ವಾಮಾದಲ್ಲಿ ಕೇಂದ್ರ ಮೀಸಲು ಪೊಲೀಸ್ ಪಡೆ ವಾಹನದ ಮೇಲೆ ನಡೆದ ಭಯೋತ್ಪಾದಕ ದಾಳಿಯಲ್ಲಿ ೪೦ ಸೈನಿಕರು ಹುತಾತ್ಮರಾದ ನಂತರ ಭಾರತ ಈ ಕಾರ್ಯಾಚರಣೆ ಕೈಗೊಂಡಿತ್ತು. ಈ ಘಟನೆಯಲ್ಲಿ ಹೆಚ್ಚಿನ ಸಂಖ್ಯೆಯ ಭಯೋತ್ಪಾದಕರು ಸಾವನ್ನಪ್ಪಿದ್ದಾರೆ ಎಂಬ ವರದಿಗಳನ್ನು ಪಾಕಿಸ್ತಾನ ನಿರಾಕರಿಸಿತ್ತು ಮತ್ತು ಭಾರತದಲ್ಲಿ ಅನೇಕರು ಈ ಕಾರ್ಯಾಚರಣೆಯ ಯಶಸ್ಸಿನ ಬಗ್ಗೆ ಪ್ರಶ್ನಿಸಿದ್ದರು.

ಆಗಾ ಹಿಲಾಲಿಯವರು ತಮ್ಮ ಮಾತನ್ನು ಮುಂದುವರೆಸುತ್ತಾ, ಭಾರತವು ಅಂತರರಾಷ್ಟ್ರೀಯ ಗಡಿಯನ್ನು ದಾಟಿ ಯುದ್ಧ ಮಾಡಿದ್ದು ಇದರಲ್ಲಿ ಕನಿಷ್ಠ ೩೦೦ ಜನರು ಸಾವನ್ನಪ್ಪಿದ್ದಾರೆ. ಅವರ ಗುರಿಗಿಂತ ನಮ್ಮ ಗುರಿ ಬೇರೆಯಾಗಿತ್ತು. ನಾವು ಅವರ ಹೈಕಮಾಂಡ್ ಅನ್ನು ಗುರಿಯಾಗಿಸಿದ್ದೆವು ಎಂದು ಹೇಳಿದರು.