೨೦೨೦ ರಲ್ಲಿ ಬಾಂಗ್ಲಾದೇಶದಲ್ಲಿ ೧೪೯ ಹಿಂದೂಗಳ ಹತ್ಯೆ ಹಾಗೂ ೨೬೨೩ ಹಿಂದೂಗಳು ಮತಾಂತರ

ಮುಸ್ಲಿಂ ಬಹುಸಂಖ್ಯಾತ ದೇಶದಲ್ಲಿ ಅಲ್ಪಸಂಖ್ಯಾತ ಹಿಂದೂಗಳ ಸ್ಥಿತಿ !

  • ಹಿಂದೂಗಳ ಮೇಲೆ ೪೦ ಸಾವಿರ ೭೦೩ ದಾಳಿಯ ಘಟನೆಗಳು

  • ೩೭೦ ದೇವತೆಗಳ ವಿಗ್ರಹಗಳ ಧ್ವಂಸ

  • ೧೬೩ ದೇವಾಲಯಗಳ ಧ್ವಂಸ

  • ದೇಶದಿಂದ ೨ ಸಾವಿರ ೧೨೫ ಹಿಂದೂ ಕುಟುಂಬಗಳ ಪಲಾಯನ

  • ಭಾರತವು ಬಹುಸಂಖ್ಯಾತ ಹಿಂದೂಗಳನ್ನು ಹೊಂದಿರುವ ದೇಶವಾಗಿದ್ದರೂ, ಅಲ್ಪಸಂಖ್ಯಾತರ ವಿಷಯದಲ್ಲಿ ಇಂತಹ ಯಾವುದೇ ಘಟನೆ ನಡೆಯುವುದಿಲ್ಲ, ತದ್ವಿರುದ್ಧ ಅಲ್ಪಸಂಖ್ಯಾತರಾಗಿರುವ ಮತಾಂಧರಿಂದ ಹಿಂದೂಗಳ ಮೇಲೆ ದಾಳಿ, ಅವರ ದೇವಸ್ಥಾನಗಳ ಹಾಗೂ ದೇವತೆಗಳ ವಿಗ್ರಹವನ್ನು ಧ್ವಂಸ ಮಾಡುವುದು, ಲವ್ ಜಿಹಾದ ಇತ್ಯಾದಿ ಘಟನೆಗಳು ನಡೆಯುತ್ತವೆ, ಆದರೂ ಮತಾಂಧರನ್ನು ‘ಜಾತ್ಯತೀತರು’ ಹಾಗೂ ಹಿಂದೂಗಳಿಗೆ ‘ಅಸಹಿಷ್ಣು’ ಎಂದು ಕರೆಯಲಾಗುತ್ತದೆ !
  • ಬಾಂಗ್ಲಾದೇಶದಲ್ಲಿ ಮಾತ್ರವಲ್ಲ, ಪಾಕಿಸ್ತಾನ, ಅಫ್ಘಾನಿಸ್ತಾನದಲ್ಲಿಯೂ ಇದೇ ರೀತಿಯ ಘಟನೆಗಳು ನಡೆಯುತ್ತವೆ ಹಾಗೂ ಭಾರತ ಸೇರಿದಂತೆ ವಿಶ್ವದಾದ್ಯಂತ ಹಿಂದೂಗಳು ನಿಷ್ಕ್ರಿಯರಾಗಿರುತ್ತಾರೆ !

ಢಾಕಾ – ೨೦೨೦ ರಲ್ಲಿ ಬಾಂಗ್ಲಾದೇಶದಲ್ಲಿ ನಡೆದ ವಿವಿಧ ಘಟನೆಗಳಲ್ಲಿ ಒಟ್ಟು ೧೪೯ ಹಿಂದೂಗಳ ಹತ್ಯೆ ಮಾಡಲಾಗಿದ್ದರೆ, ೭೦೩೬ ಹಿಂದೂಗಳು ಗಾಯಗೊಂಡಿದ್ದಾರೆ. ಅಲ್ಲದೆ ೨ ಸಾವಿರ ೬೨೩ ಹಿಂದೂಗಳನ್ನು ಮತಾಂತರಗೊಳಿಸಿ ಅವರನ್ನು ಮುಸಲ್ಮಾನರನ್ನಾಗಿಸಲಾಯಿತು. ‘ಜಟಿಯಾ ಹಿಂದೂ ಮಹಾಜೋತ’ ಎಂಬ ಸಂಘಟನೆಯು ಪತ್ರಿಕಾಗೋಷ್ಠಿಯಲ್ಲಿ ಈ ಅಂಕಿ ಅಂಶಗಳನ್ನು ಬೆಳಕಿಗೆ ತಂದಿದೆ. ಈ ಸಂಖ್ಯೆ ೨೦೧೯ ವರ್ಷಕ್ಕಿಂತ ಹೆಚ್ಚಾಗಿದೆ. ೨೦೧೯ ರಲ್ಲಿ ವಿವಿಧ ಘಟನೆಗಳಲ್ಲಿ ೧೦೮ ಹಿಂದೂಗಳ ಹತ್ಯೆಯಾಗಿತ್ತು, ಹಾಗೂ ೪೮೪ ಹಿಂದೂಗಳು ಗಾಯಗೊಂಡಿದ್ದರು.

ಈ ಸಂಘಟನೆಯ ಪ್ರಧಾನ ಕಾರ್ಯದರ್ಶಿ ಗೋಬಿಂದ ಚಂದ್ರ ಪ್ರಮಾಣಿಕ ಇವರು,

೧. ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲಿನ ದೌರ್ಜನ್ಯಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿವೆ. ಕಳೆದ ಒಂದು ವರ್ಷದಲ್ಲಿ ೯೪ ಹಿಂದೂಗಳನ್ನು ಅಪಹರಿಸಲಾಗಿದೆ. ೨೦೧೯ ರಲ್ಲಿ ೭೬ ಹಿಂದೂಗಳನ್ನು ಅಪಹರಿಸಿದ್ದರೆ ೧೮ ಹಿಂದೂಗಳನ್ನು ಮತಾಂತರಗೊಳಿಸಲಾಯಿತು.

೨. ೨೦೨೦ ರಲ್ಲಿ ೫೩ ಹಿಂದೂ ಮಹಿಳೆಯರ ಮತ್ತು ಹುಡುಗಿಯರ ಮೇಲೆ ಅತ್ಯಾಚಾರ ಮಾಡಲಾಯಿತು ಮತ್ತು ೩೭೦ ದೇವಾಲಯಗಳಲ್ಲಿ ವಿಗ್ರಹಗಳನ್ನು ಧ್ವಂಸ ಮಾಡಲಾಗಿದೆ. ೨೦೧೯ ರಲ್ಲಿ ಈ ಸಂಖ್ಯೆಗಳು ಕ್ರಮವಾಗಿ ೪೨ ಮತ್ತು ೨೪೬ ಆಗಿದ್ದವು.

೩. ೨೦೨೦ ರಲ್ಲಿ ದೇವಾಲಯ ಧ್ವಂಸಗೊಳಿಸಿದ ೧೬೩ ಘಟನೆಗಳು ನಡೆದಿವೆ. ೨೦೧೯ ರಲ್ಲಿ ಇಂತಹ ೧೫೩ ಘಟನೆಗಳು ನಡೆದಿತ್ತು.

೪. ಕಳೆದ ವರ್ಷ ೨೧೨೫ ಹಿಂದೂ ಕುಟುಂಬಗಳನ್ನು ದೇಶ ತೊರೆಯಯವಂತೆ ಮಾಡಲಾಯಿತು. ೨೦೧೯ ರಲ್ಲಿ ೩೭೯ ಕುಟುಂಬಗಳು ದೇಶವನ್ನು ತೊರೆದಿದ್ದರು.

೫. ೨೦೨೦ ರಲ್ಲಿ ಹಿಂದೂಗಳ ಮೇಲೆ ವಿವಿಧ ದಾಳಿಗಳು ಮತ್ತು ದೌರ್ಜನ್ಯಗಳ ೪೦,೭೦೩ ಘಟನೆಗಳು ನಡೆದರೆ, ೨೦೧೯ ರಲ್ಲಿ ಇಂತಹ ೩೧,೫೦೫ ಘಟನೆಗಳು ನಡೆದಿವೆ ಎಂದು ಹೇಳಿದರು.