ನೂರಾರು ಮತಾಂಧರಿಂದ ಪಾಕಿಸ್ತಾನದಲ್ಲಿ ‘ಅಲ್ಲಾಹು ಅಕ್ಬರ್’ ಕೂಗುತ್ತಾ ಹಿಂದೂ ದೇವಸ್ಥಾನ ನೆಲಸಮಗೊಳಿಸಿ ಬೆಂಕಿಗಾಹುತಿ !

  • ಪಾಕಿಸ್ತಾನ ಮತ್ತು ಬಾಂಗ್ಲಾದೇಶದಲ್ಲಿ ಮಾತ್ರವಲ್ಲ; ಜಗತ್ತಿನ ಎಲ್ಲೆಡೆಗಳಲ್ಲಿ ಹಿಂದೂಗಳ ಮೇಲೆ ಅನ್ಯಾಯವಾಗುತ್ತಿರುವುದು ಸ್ವಾತಂತ್ರ್ಯದ ನಂತರದ ಆಡಳಿತಗಾರರು ಏನನ್ನೂ ಮಾಡದಿರುವುದರ ಪರಿಣಾಮ!
  • ಹಿಂದೂಗಳು, ಪಾಕಿಸ್ತಾನದ ಹಿಂದೂಗಳನ್ನು ಮತ್ತು ಅವರ ಪೂಜಾ ಸ್ಥಳಗಳನ್ನು ರಕ್ಷಿಸಲು ಭಾರತ ಸೇರಿದಂತೆ ವಿಶ್ವದ ಯಾವುದೇ ದೇಶವು ಮುಂದೆ ಬರುತ್ತಿಲ್ಲ ಎಂಬುದನ್ನು ಅರಿತುಕೊಳ್ಳಿ ಮತ್ತು ಸಂಘಟಿತರಾಗುವುದರ (ಒಗ್ಗಟ್ಟಾಗುವುದರ) ಮಹತ್ವವನ್ನು ಅರಿತುಕೊಳ್ಳಿ!
  • ಪಾಕಿಸ್ತಾನದಲ್ಲಿ ಮಾತ್ರವಲ್ಲ, ಜಗತ್ತಿನಾದ್ಯಂತದ ಹಿಂದೂಗಳನ್ನು ರಕ್ಷಿಸಲು ಮೊತ್ತಮೊದಲು ಹಿಂದೂ ರಾಷ್ಟ್ರವನ್ನು ಭಾರತದಲ್ಲಿ ಸ್ಥಾಪಿಸುವುದು ಅತ್ಯಗತ್ಯ!

ಕರಕ್ (ಪಾಕಿಸ್ತಾನ) – ಪಾಕಿಸ್ತಾನದ ಖೈಬರ್ ಪಖ್ತುನ್ಖ್ವಾ ಪ್ರಾಂತ್ಯದ ಕರಕ್ ಜಿಲ್ಲೆಯಲ್ಲಿ ನೂರಾರು ಮತಾಂಧರು ಹಿಂದೂ ದೇವಾಲಯವನ್ನು ಧ್ವಂಸಗೊಳಿಸಿ ಬೆಂಕಿ ಹಚ್ಚಿದರು. ಈ ಹಿಂದೂವಿರೋಧಿ ಕೃತ್ಯವನ್ನು ಮೌಲ್ವಿಯ ನೇತೃತ್ವದಲ್ಲಿ ನಡೆಸಲಾಯಿತು. ಇದರ ವಿಡಿಯೋವನ್ನು ಸೋಷಿಯಲ್ ಮೀಡಿಯಾದಲ್ಲಿ ಪ್ರಸಾರ ಮಾಡಲಾಗಿದೆ. ಇದು ನೂರಾರು ಮತಾಂಧರು ದೇವಾಲಯದ ಗೋಡೆಗಳು ಮತ್ತು ಛಾವಣಿಗಳನ್ನು ಕಿತ್ತುಹಾಕುವುದರ ಜೊತೆಗೆ ದೇವಾಲಯಕ್ಕೆ ಬೆಂಕಿ ಹಚ್ಚುವುದನ್ನು ತೋರಿಸುತ್ತದೆ. ‘ಉದ್ರಿಕ್ತ ಜನರ ಗುಂಪು ದೇವಾಲಯದ ಹಳೆಯ ವಾಸ್ತುವಿನೊಂದಿಗೆ ಹೊಸದನ್ನು ಸಹ ನೆಲಸಮ ಮಾಡಿದೆ’ ಎಂದು ಜಿಲ್ಲಾ ಪೊಲೀಸ್ ಅಧಿಕಾರಿ ಇರ್ಫಾನ್ ಮಾರ್ವಾತ್ ಹೇಳಿದರು. ಈ ಪ್ರಕರಣದಲ್ಲಿ ಈವರೆಗೆ ೩೦ ಮತಾಂಧರರನ್ನು ಬಂಧಿಸಿದ್ದಾರೆ. ಪಾಕಿಸ್ತಾನದ ಹಿಂದೂಗಳು ಪ್ರತಿ ಗುರುವಾರ ಈ ದೇವಾಲಯಕ್ಕೆ ಭೇಟಿ ನೀಡುತ್ತಿದ್ದರು. ಈ ಘಟನೆಯು ವಿಶ್ವದಾದ್ಯಂತದ ಮಾನವ ಹಕ್ಕುಗಳ ಕಾರ್ಯಕರ್ತರಿಂದ ತೀವ್ರ ಟೀಕೆಗೆ ಗುರಿಯಾಗಿದೆ.

ಡೈಲಿ ಟೈಮ್ಸ್ ಪತ್ರಿಕೆಯ ಹೇಳಿಕೆಗನುಪ್ರಕಾರ, ಪಾಕಿಸ್ತಾನದ ಸುನ್ನಿ ರಾಜಕೀಯ ಪಕ್ಷವಾದ ಜಮೀಯತ್ ಉಲೆಮಾ-ಇ-ಇಸ್ಲಾಂ-ಫಲ್ಜ್ ಅವರು ದೇವಾಲಯದ ಬಳಿ ಸಭೆ ಆಯೋಜಿಸಿದ್ದರು. ಪ್ರಚೋದನಕಾರಿ ಭಾಷಣಗಳನ್ನು ಮಾಡಲಾಗಿತ್ತು. ಅನಂತರ ದೇವಾಲಯದ ಮೇಲೆ ಮತಾಂಧರ ಗುಂಪೊಂದು ದಾಳಿ ಮಾಡಿತು.

ಪಾಕಿಸ್ತಾನದ ಸುಪ್ರೀಂ ಕೋರ್ಟ್‌ನ ಆದೇಶದಂತೆ ದೇವಾಲಯದ ಜೀರ್ಣೋದ್ಧಾರದ ಕಾರ್ಯ ನಡೆಯುತ್ತಿತ್ತು !

ತೇರಿ ಗ್ರಾಮದಲ್ಲಿರುವ ಈ ದೇವಾಲಯವು ಬಹಳ ಪ್ರಾಚೀನವಾಗಿದೆ. ಇಲ್ಲಿ ೧೯೧೯ ರಲ್ಲಿ ಪರಮಹಂಸಜಿ ಮಹಾರಾಜರ ಸಮಾಧಿಯನ್ನು ನಿರ್ಮಿಸಲಾಯಿತು. ೧೯೯೭ ರಲ್ಲಿ ಓರ್ವ ಮುಫ್ತಿಯವರ ಆದೇಶದ ಮೇರೆಗೆ ಮತಾಂಧರು ದೇವಾಲಯದ ಮೇಲೆ ದಾಳಿ ನಡೆಸಿ ಧ್ವಂಸ ಮಾಡಿದರು. ಅಂದಿನಿಂದ ಹಿಂದೂಗಳು ಈ ದೇವಾಲಯದ ನಿರ್ಮಾಣಕ್ಕಾಗಿ ಹೋರಾಡುತ್ತಿದ್ದರು. ೨೦೧೫ ರಲ್ಲಿ ಪಾಕಿಸ್ತಾನದ ಸರ್ವೋಚ್ಚ ನ್ಯಾಯಾಲಯವು ದೇವಾಲಯದ ಜೀರ್ಣೋದ್ಧಾರ ಮತ್ತು ವಿಸ್ತರಣೆಗೆ ಅನುಮತಿ ನೀಡಿತು. ಅವರ ಪ್ರಕಾರ ಅಲ್ಲಿ ನಿರ್ಮಾಣ ನಡೆಯುತ್ತಿರುವಾಗ ಮತಾಂಧರು ಪುನಃ ಈ ದಾಳಿ ನಡೆಸಿದ್ದಾರೆ.

ಪೊಲೀಸರು ಮತ್ತು ಆಡಳಿತ ಮೌನವಾಗಿದೆ!

೧. ಕರಾಚಿ ಮೂಲದ ಪತ್ರಕರ್ತ ಮುಬಾಶೀರ್ ಜೈದಿ ಅವರು “ಸ್ಥಳೀಯ ಮೌಲ್ವಿಗಳ ನೇತೃತ್ವದಲ್ಲಿ ದೇವಾಲಯವನ್ನು ನೆಲಸಮ ಮಾಡಲಾಗಿದೆ. ಈ ದೇವಾಲಯದ ನಿರ್ಮಾಣಕ್ಕಾಗಿ ಸ್ಥಳೀಯ ಹಿಂದೂಗಳು ಆಡಳಿತದ ಪೂರ್ವಾನುಮತಿಯನ್ನು ಪಡೆದಿದ್ದರು; ಆದರೆ, ದೇವಾಲಯವನ್ನು ನೆಲಸಮಗೊಳಿಸುವಾಗ ಪೊಲೀಸರು ಮತ್ತು ಆಡಳಿತ ಮೌನವಾಗಿತ್ತು. ’

೨. “ಇದು ಹೊಸ ಪಾಕಿಸ್ತಾನ” ಎಂದು ಲಂಡನ್ ಮೂಲದ ಮಾನವ ಹಕ್ಕುಗಳ ಕಾರ್ಯಕರ್ತೆ ಶಾಮಾ ಜುನೈಜೊ ಹೇಳಿದ್ದಾರೆ. ಇದು ನಾಚಿಕೆಗೇಡಿನ ದಿನ ಮತ್ತು ಈ ಕೃತ್ಯವು ಖಂಡನೆಗೂ ಮೀರಿದೆ. ಆ ಗುಂಪು ‘ಅಲ್ಲಾಹು ಅಕ್ಬರ್’ ಎಂದು ಘೋಷಣೆ ಕೂಗುತ್ತಿದ್ದರು; ಅದಕ್ಕಾಗಿಯೇ ಪೊಲೀಸರು ಅವರನ್ನು ತಡೆಯಲಿಲ್ಲ, ಇದು ನಾಚಿಕೆಗೇಡಿನ ಸಂಗತಿಯಾಗಿದೆ.

೩. ಪಾಕಿಸ್ತಾನದಲ್ಲಿ ಅಲ್ಪಸಂಖ್ಯಾತರೊಂದಿಗೆ ಹೇಗೆ ವರ್ತಿಸಲಾಗುತ್ತದೆ ಎಂಬುದಕ್ಕೆ ಇದು ಸ್ಪಷ್ಟ ಉದಾಹರಣೆಯಾಗಿದೆ ಎಂದು ಮಾನವ ಹಕ್ಕುಗಳ ಕಾರ್ಯಕರ್ತ ಇಹ್ತೇಶಮ್ ಅಫಘಾನ್‌ಇವರು ಟ್ವೀಟ್ ನಲ್ಲಿ ತಿಳಿಸಿದ್ದಾರೆ.

೪. ಪಾಕಿಸ್ತಾನದ ಮಾನವ ಆಯೋಗದ ಕಾರ್ಯದರ್ಶಿ ಲಾಲ್‌ಚಂದ್ ಮಾಲ್ಹಿ ಈ ಘಟನೆಯನ್ನು ತೀವ್ರವಾಗಿ ಖಂಡಿಸಿದ್ದಾರೆ. ‘ಕೆಲವು ಸಮಾಜ ವಿರೋಧಿ ಶಕ್ತಿಗಳು ಪಾಕಿಸ್ತಾನವನ್ನು ಕೆಣಕಲು ಪ್ರಯತ್ನಿಸುತ್ತಿವೆ. ಸರಕಾರವು ಅವರಿಗೆ ಆಶ್ರಯ ನೀಡಬಾರದು. ಜಿಲ್ಲಾಡಳಿತ ಕೂಡಲೇ ಪ್ರಕರಣ ದಾಖಲಿಸಿ ಅಪರಾಧಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ದೇವಾಲಯದ ಮೇಲಿನ ದಾಳಿ ದುರದೃಷ್ಟಕರ! – ಖೈಬರ್ ಪಖ್ತುನ್‌ಖ್ವಾದ ಮಹಮೂದ್ ಖಾನ್ ಮುಖ್ಯಮಂತ್ರಿ

(ಈ ಮೇಲಿನ ಚಿತ್ರವನ್ನು ಯಾರ ಭಾವನೆಗಳಿಗೆ ನೋವನ್ನುಂಟುಮಾಡುವ ಉದ್ದೇಶವಾಗಿರದೆ ಕೇವಲ ನಿಜವಾದ ಸಂಗತಿಯನ್ನು ತೋರಿಸುವ ಉದ್ದೇಶವಾಗಿದೆ)

‘ದೇವಾಲಯದ ದಾಳಿ ಮತ್ತು ವಿಧ್ವಂಸಕ ಕೃತ್ಯ ದುರದೃಷ್ಟಕರ’ ಎಂದು ಖೈಬರ್ ಪಖ್ತುನ್‌ಖ್ವಾದ ಮುಖ್ಯಮಂತ್ರಿ ಮಹಮೂದ್ ಖಾನ್ ಹೇಳಿದ್ದಾರೆ. (ಮೆಹಮೂದ್ ಖಾನ್‌ರ ಮೊಸಳೆಕಣ್ಣೀರು! ಪಾಕಿಸ್ತಾನದ  ನಾಯಕರು ಮತ್ತು ರಾಜಕಾರಣಿಗಳು ಹಿಂದೂಗಳ ಹಿತಾಸಕ್ತಿಗಳನ್ನು ಎಂದಿಗೂ ನೋಡಿಕೊಳ್ಳುವುದಿಲ್ಲ. ಅದಕ್ಕಾಗಿಯೇ ಅಲ್ಲಿ ಹಿಂದೂಗಳ ಮೇಲೆ ದೌರ್ಜನ್ಯ ನಡೆಯುತ್ತಿದೆ! – ಸಂಪಾದಕರು) ಈ ಪ್ರಕರಣದಲ್ಲಿ ಅವರು ಪೊಲೀಸರಿಂದ ವರದಿ ಕೋರಿದ್ದು, ಅಪರಾಧಿಗಳನ್ನು ಕೂಡಲೇ ಬಂಧಿಸುವಂತೆ ಆದೇಶಿಸಿದ್ದಾರೆ. ‘ಈ ಘಟನೆಯು ಹಿಂದೂಗಳ ಭಾವನೆಗಳನ್ನು ಘಾಸಿಗೊಳಿಸಿದೆ’ ಎಂದು ಪೇಶಾವರದ ಹಿಂದೂ ಸಮುದಾಯದ ಮುಖಂಡ ಹರುನ್ ಸರಬಯಾಲ್ ಹೇಳಿದ್ದಾರೆ.