ಸೋಮನಾಥ ದೇವಸ್ಥಾನಕ್ಕೆ 75 ವರ್ಷ ಪೂರ್ತಿ; ಪ್ರಧಾನಿ ಮೋದಿಯವರಿಂದ ಕುಂಭಾಭಿಷೇಕ!
ಈ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಶಿವಾಭಿಷೇಕ ಮಾಡಿದರು. ತದನಂತರ, ರಿಮೋಟ್ ಮೂಲಕ ದೇವಸ್ಥಾನದ ಕುಂಭಾಭಿಷೇಕವನ್ನು ನೆರವೇರಿಸಿದರು. ವೈದಿಕ ಮಂತ್ರೋಚ್ಚಾರಗಳ ನಡುವೆ 11 ಪವಿತ್ರ ತೀರ್ಥಗಳ ಜಲವನ್ನು ಶಿಖರದ ಮೇಲೆ ಅರ್ಪಿಸಲಾಯಿತು.