ಕರ್ಣಾವತಿ ಅಪರಾಧ ವಿಭಾಗದ ಕಾರ್ಯಾಚರಣೆ

ಕರ್ಣಾವತಿ (ಗುಜರಾತ) – ದೇಶದ ವಿವಿಧ ಭಾಗಗಳಲ್ಲಿ ಬಾಂಬ್ ಸ್ಫೋಟದ ಬೆದರಿಕೆ ಇ-ಮೇಲ್‌ಗಳನ್ನು ಕಳುಹಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ಣಾವತಿ ಅಪರಾಧ ವಿಭಾಗ ಮತ್ತು ಸೈಬರ್ ಅಪರಾಧ ವಿಭಾಗವು ಮುಖ್ಯ ಆರೋಪಿಯನ್ನು ಬಂಧಿಸಿದೆ. ಸೌರಭ ಬಿಸ್ವಾಸ ಎಂಬ ಈ ಆರೋಪಿಯನ್ನು ಬಂಗಾಳದಿಂದ ವಶಕ್ಕೆ ಪಡೆಯಲಾಗಿದೆ. ಹಲವಾರು ಶಾಲೆಗಳು, ನ್ಯಾಯಾಲಯಗಳು ಮತ್ತು ಸರಕಾರಿ ಕಚೇರಿಗಳಿಗೆ ಬಾಂಬ್ ಸ್ಫೋಟದ ಬೆದರಿಕೆ ಇ-ಮೇಲ್ ಕಳುಹಿಸಿದ ಆರೋಪ ಈತನ ಮೇಲಿದೆ.
ಮಾರ್ಚ್ ೨, ೨೦೨೬ ರಂದು ದೆಹಲಿಯ ಆರ್ಮಿ ಪಬ್ಲಿಕ್ ಸ್ಕೂಲ್, ಸಲ್ವಾನ್ ಪಬ್ಲಿಕ್ ಸ್ಕೂಲ್, ಸರ್ದಾರ್ ಪಟೇಲ್ ವಿದ್ಯಾಲಯ, ಹಾಗೆಯೇ ಆಕ್ಸಿಸ್ ಬ್ಯಾಂಕ್ ಮತ್ತು ಸ್ಟೇಟ್ ಬ್ಯಾಂಕ್ ಶಾಖೆಗಳು ಸೇರಿದಂತೆ ೩ ಬ್ಯಾಂಕುಗಳಿಗೆ ಬೆದರಿಕೆ ಇ-ಮೇಲ್‌ಗಳು ಬಂದಿದ್ದವು. ಅದೇ ದಿನ ಭೋಪಾಲ್ ಮತ್ತು ಗೋವಾದಲ್ಲಿಯೂ ಇಂತಹುದೇ ನಕಲಿ ಇ-ಮೇಲ್ ಗಳನ್ನು ಕಳುಹಿಸಲಾಗಿತ್ತು. ಭೋಪಾಲ್ ನಲ್ಲಿರುವ ‘ಏಮ್ಸ್’ (ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆ), ೧ ವಿಶ್ವವಿದ್ಯಾಲಯ, ‘ಜಿಪಿಒ’ (ಜನರಲ್ ಪೋಸ್ಟ್ ಆಫೀಸ್) ಮತ್ತು ಪ್ರಾದೇಶಿಕ ಪಾಸ್ ಪೋರ್ಟ್ ಕಚೇರಿಗಳಿಗೂ ಬೆದರಿಕೆಗಳು ಬಂದಿದ್ದವು. ಗೋವಾದ ಪಾಸ್ ಪೋರ್ಟ್ ಭವನಕ್ಕೂ ಇ-ಮೇಲ್ ಬಂದ ನಂತರ ಕಟ್ಟಡವನ್ನು ತೆರವುಗೊಳಿಸಲಾಗಿತ್ತು. ತೆಲಂಗಾಣ ಮತ್ತು ಪಂಜಾಬ ರಾಜ್ಯಗಳಿಗೂ ಇಂತಹ ಬೆದರಿಕೆ ಇ-ಮೇಲ್‌ಗಳು ಬಂದಿದ್ದವು.
೧. ಕರ್ಣಾವತಿ ವಿಶೇಷ ಅಪರಾಧ ದಳ ನಡೆಸಿದ ಕಾರ್ಯಾಚರಣೆಯಲ್ಲಿ ಸೌರಭ ಬಿಸ್ವಾಸ ಎಂಬಾತನನ್ನು ಬಂಗಾಳದಿಂದ ಬಂಧಿಸಲಾಯಿತು.
೨. ಇತ್ತೀಚಿನ ದಿನಗಳಲ್ಲಿ ಬಾಂಬ್ ಸ್ಫೋಟದ ಬೆದರಿಕೆ ಇ-ಮೇಲ್‌ಗಳನ್ನು ಕಳುಹಿಸಿ ಸಾರ್ವಜನಿಕರಲ್ಲಿ ಭೀತಿ ನಿರ್ಮಿಸಿದ ಆರೋಪ ಈತನ ಮೇಲಿದೆ. ಪೊಲೀಸ್ ಆಯುಕ್ತ ಜಿ.ಎಸ್. ಮಲಿಕ್ ಮತ್ತು ಜಂಟಿ ಆಯುಕ್ತ ಶರದ ಸಿಂಘಾಲ್ ಅವರ ಮಾರ್ಗದರ್ಶನದಲ್ಲಿ ಈ ಕಾರ್ಯಾಚರಣೆ ನಡೆದಿದೆ.
೩. ಆರೋಪಿ ಸೌರಭ ಬಿಸ್ವಾಸನನ್ನು ಕರ್ಣಾವತಿಗೆ ಕರೆತರಲಾಗಿದ್ದು, ಸೈಬರ್ ತಜ್ಞರು ಈ ಪ್ರಕರಣದ ಮುಂದಿನ ತನಿಖೆ ನಡೆಸುತ್ತಿದ್ದಾರೆ.
ಸಂಪಾದಕೀಯ ನಿಲುವುಇಂತಹ ಇ-ಮೇಲ್ ಕಳುಹಿಸಿ ಸಮಾಜದಲ್ಲಿ ಭೀತಿ ನಿರ್ಮಿಸುವ ಸಮಾಜಘಾತುಕ ಶಕ್ತಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದು ಅವಶ್ಯಕ ! |
ಈಗ ಮಥುರಾ, ಬೃಂದಾವನ ಮತ್ತು ಶ್ರೀಕೃಷ್ಣ ಜನ್ಮಭೂಮಿ ಕುರಿತೂ ಬಹಿರಂಗವಾಗಿ ಚರ್ಚೆಯಾಗಬೇಕು! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್
ಬಿಹಾರದಲ್ಲಿ ಮಿಷನರಿಗಳಿಂದ ಹಿಂದೂಗಳಿಗೆ ಆಮಿಷವೊಡ್ಡಿ ಕ್ರೈಸ್ತರನ್ನಾಗಿ ಮಾಡುವ ಪ್ರಯತ್ನ!
ರಾಜ್ಯದಲ್ಲಿ ಎರಡು ಬೇರೆ ಬೇರೆ ಘಟನೆಗಳಲ್ಲಿ ಮತಾಂಧ ಮುಸಲ್ಮಾನರಿಂದ ಇಬ್ಬರು ಹಿಂದೂ ಯುವತಿಯರ ಹತ್ಯೆ
ಮುಂಬಯಿನಲ್ಲಿ 6 ಹೋಟೆಲ್ ಸೇರಿದಂತೆ ಬೇಕರಿ ಮತ್ತು ಕ್ಲಬ್ಗಳ ಪರವಾನಗಿ ಅಮಾನತು: 19 ಜನರ ಬಂಧನ!
ಚಿಕ್ಕಮಗಳೂರು ದತ್ತಪೀಠ ಪ್ರದೇಶದ ಇಸ್ಲಾಮೀಕರಣದ ಪಿತೂರಿ ನಡೆಯುತ್ತಿದೆ ಎಂದು ಆರೋಪ!
ಹಾವೇರಿ : ಮಸೀದಿ ಎದುರು ಪಟಾಕಿ ಸಿಡಿಸಿದ ಕಾರಣಕ್ಕೆ ರೈತನ ಕೈ ಕತ್ತರಿಸಿದ ಮತಾಂಧರು!