(ಕುಂಭಾಭಿಷೇಕ ಎಂದರೆ ವೈದಿಕ ಮಂತ್ರೋಚ್ಚಾರಗಳೊಂದಿಗೆ 11 ಪವಿತ್ರ ತೀರ್ಥಗಳ ಜಲವನ್ನು ಶಿಖರದ ಮೇಲೆ ಅರ್ಪಿಸುವುದು)

ಜಾಮ್‌ನಗರ (ಗುಜರಾತ್) – 12 ಜ್ಯೋತಿರ್ಲಿಂಗಗಳಲ್ಲಿ ಒಂದಾದ ಗುಜರಾತಿನ ಸೋಮನಾಥ ದೇವಸ್ಥಾನದ ಜೀರ್ಣೋದ್ಧಾರಕ್ಕೆ ಮೇ 11 ರಂದು 75 ವರ್ಷಗಳು ಪೂರೈಸಿವೆ. 11 ಮೇ 1951 ರಂದು ಸ್ವತಂತ್ರ ಭಾರತದಲ್ಲಿ ಹೊಸದಾಗಿ ನಿರ್ಮಿಸಲಾದ ಸೋಮನಾಥ ದೇವಾಲಯದ ಪ್ರಾಣಪ್ರತಿಷ್ಠಾಪನೆ ನಡೆದಿತ್ತು. ಈ ಐತಿಹಾಸಿಕ ಘಟನೆಯನ್ನು ಸ್ಮರಿಸಲು ‘ಸೋಮನಾಥ ಅಮೃತ ಮಹೋತ್ಸವ’ವನ್ನು ಆಚರಿಸಲಾಯಿತು.
Prime Minister Narendra Modi performs Kumbhabhisheka to mark 75 years of the Somnath Temple
It has also been 1,000 years since Mahmud Ghaznavi first destroyed the Somnath Temple after attacking it in the year 1026.
सोमनाथ l नरेंद्र मोदी pic.twitter.com/Jry0YsMum6
— Sanatan Prabhat (@SanatanPrabhat) May 11, 2026
ಈ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಶಿವಾಭಿಷೇಕ ಮಾಡಿದರು. ತದನಂತರ, ರಿಮೋಟ್ ಮೂಲಕ ದೇವಸ್ಥಾನದ ಕುಂಭಾಭಿಷೇಕವನ್ನು ನೆರವೇರಿಸಿದರು. ವೈದಿಕ ಮಂತ್ರೋಚ್ಚಾರಗಳ ನಡುವೆ 11 ಪವಿತ್ರ ತೀರ್ಥಗಳ ಜಲವನ್ನು ಶಿಖರದ ಮೇಲೆ ಅರ್ಪಿಸಲಾಯಿತು. 90 ಮೀಟರ್ ಎತ್ತರದ ಕ್ರೇನ್ ಸಹಾಯದಿಂದ ಕಳಶವನ್ನು ದೇವಸ್ಥಾನದ ಮೇಲೆ ಇರಿಸಲಾಗಿತ್ತು. ಅಭಿಷೇಕದ ನಂತರ ಚೇತಕ್ ಹೆಲಿಕಾಪ್ಟರ್ ಮೂಲಕ ದೇವಸ್ಥಾನದ ಮೇಲೆ ಪುಷ್ಪವೃಷ್ಟಿ ಮಾಡಲಾಯಿತು.
A thousand years ago, the first of many attacks on Somnath took place. Those who kept engaging in such attacks believed they could shatter the ethos of our land. But, they were wrong. Thanks to fiercely courageous children of Bharat Mata, Somnath kept getting rebuilt.… pic.twitter.com/dN6qGEN4c9
— Narendra Modi (@narendramodi) May 11, 2026
ವಾಯುಸೇನೆಯ ಸೂರ್ಯಕಿರಣ್ ವಿಮಾನ ತಂಡವು ದೇವಸ್ಥಾನದ ಮೇಲೆ 15 ನಿಮಿಷಗಳ ಕಾಲ ‘ಏರ್ ಶೋ’ (ವೈಮಾನಿಕ ಪ್ರದರ್ಶನ) ನಡೆಸಿತು.
ಕ್ರಿ.ಶ. 1026 ರಲ್ಲಿ ಮಹಮೂದ್ ಘಜ್ನಿ ಸೋಮನಾಥ ದೇವಸ್ಥಾನದ ಮೇಲೆ ಆಕ್ರಮಣ ಮಾಡಿ ಮೊದಲ ಬಾರಿ ಧ್ವಂಸಗೊಳಿಸಿದ್ದನು. ಆ ದಾಳಿ ನಡೆದು ಈಗ 1,೦೦೦ ವರ್ಷಗಳು ಪೂರ್ಣಗೊಂಡಿವೆ.
ಕೇರಳಮ್ದಲ್ಲಿ ‘ಇಸ್ಲಾಂ ಫ್ರೆಂಡ್ಲಿ’ ಜಿಮ್ ಕುರಿತು ವಿವಾದ
ಪುಣೆ ನಗರದಲ್ಲಿ ಮತ್ತೆ ‘ಕಾರ್ಪೊರೇಟ್ ಜಿಹಾದ್’ ಪ್ರಕರಣ
‘ದಾರುಲ್ ಉಲೂಮ್ ದೇವಬಂದ್’ ಭಯೋತ್ಪಾದಕರ ಕೇಂದ್ರವಾಗಿರುವುದರಿಂದ ಅದನ್ನು ನೆಲಸಮ ಮಾಡಿ ! – ಹಿಂದೂ ರಕ್ಷಾ ದಳದ ಬೇಡಿಕೆ
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಭಗವಾನ್ ಶಿವನ ರೂಪದಲ್ಲಿ ತೋರಿಸಿದ ‘ವಿಶ್ವವಾಣಿ’ ಪತ್ರಿಕೆ !
‘ಭಂಡಾರ ಎಂದರೆ ಶುದ್ಧ ಅರಿಶಿನ’ ಎಂದು ಘೋಷಿಸುವಂತೆ ಅನ್ನ ಮತ್ತು ಔಷಧ ಆಡಳಿತಕ್ಕೆ (FDA) ಆಗ್ರಹ!
ಪಾನ್ ಮಸಾಲಾ, ಗುಟ್ಕಾ ಮತ್ತು ಕಲಬೆರಕೆ ಆಹಾರ ಪದಾರ್ಥಗಳ ಒಂದೂವರೆ ಕೋಟಿಗೂ ಹೆಚ್ಚು ಮೌಲ್ಯದ ದಾಸ್ತಾನು ವಶ