
ಗಾಂಧಿನಗರ (ಗುಜರಾತ್) – ಗುಜರಾತ್‌ನ ಭಾಜಪ ಸರಕಾರವು ವಿಧಾನಸಭೆಯಲ್ಲಿ ಸಮಾನ ನಾಗರಿಕ ಕಾನೂನು ವಿಧೇಯಕವನ್ನು ಬಹುಮತದಿಂದ ಅಂಗೀಕರಿಸಿದೆ. ಇದರೊಂದಿಗೆ ಉತ್ತರಾಖಂಡದ ನಂತರ ದೇಶದಲ್ಲಿ ಸಮಾನ ನಾಗರಿಕ ಕಾನೂನನ್ನು ಜಾರಿಗೆ ತಂದ ಎರಡನೇ ರಾಜ್ಯವಾಗಿ ಗುಜರಾತ್ ಹೊರಹೊಮ್ಮಿದೆ. ಗೋವಾದಲ್ಲಿ ಪೋರ್ಚುಗೀಸರ ಕಾಲದಿಂದಲೂ ಈ ಕಾಯ್ದೆ ಅಸ್ತಿತ್ವದಲ್ಲಿದೆ.
Gujarat becomes the 2nd state after Uttarakhand to pass the #UCC Bill! 🇮🇳
Key highlights:
🔹 Mandatory marriage & live-in registration
🔹 Uniform divorce laws for all religions
🔹 Out-of-court divorces now illegal
🔹 4-year jail term for bigamy#UniformCivilCode
PC: The Logical… pic.twitter.com/aWB3bRjLl3— Sanatan Prabhat (@SanatanPrabhat) March 25, 2026
ಕಾಯ್ದೆಯಲ್ಲಿ ಏನಿದೆ ?
ಈ ಕಾಯ್ದೆಯಲ್ಲಿ ವಿವಾಹದ ಕಡ್ಡಾಯ ನೋಂದಣಿ, ವಿಚ್ಛೇದನದ ಸಮಾನ ನಿಯಮಗಳು ಮತ್ತು ದಂಡದಂತಹ ಕೆಲವು ಪ್ರಮುಖ ನಿಬಂಧನೆಗಳಿವೆ. ವಿವಾಹದ ನೋಂದಣಿ ಮಾಡದವರಿಗೆ ೧೦ ಸಾವಿರ ರೂಪಾಯಿ ದಂಡ ಮತ್ತು ಒಂದಕ್ಕಿಂತ ಹೆಚ್ಚು ವಿವಾಹವಾಗುವವರಿಗೆ ೪ ವರ್ಷಗಳ ಶಿಕ್ಷೆಯಿದೆ. ನ್ಯಾಯಾಲಯದ ಹೊರಗಿನ ವಿಚ್ಛೇದನಗಳು ಅಸಿಂಧುವಾಗಿರುತ್ತವೆ. ನ್ಯಾಯಾಲಯದ ಹೊರಗೆ ವಿಚ್ಛೇದನ ಪಡೆದರೆ ಅದು ಶಿಕ್ಷಾರ್ಹ ಅಪರಾಧವಾಗಲಿದೆ. ‘ಲಿವ್-ಇನ್ ರಿಲೇಶನ್‌ಶಿಪ್’ಗಾಗಿ (ಜೋಡಿಗಳು ವಿವಾಹವಾಗದೆ ಜೊತೆಯಲ್ಲಿ ವಾಸಿಸಲು) ೩ ತಿಂಗಳೊಳಗೆ ನೋಂದಣಿ ಮಾಡಿಕೊಳ್ಳುವುದು ಕಡ್ಡಾಯವಾಗಿದೆ. ‘ಲಿವ್-ಇನ್ ರಿಲೇಶನ್‌ಶಿಪ್’ ನಿಬಂಧನೆಯು ಕಾನೂನು ರಕ್ಷಣೆಗಾಗಿ ಇರಲಿದೆ. ಅಂತಹ ಪ್ರಕರಣಗಳಲ್ಲಿ ವಂಚಿಸುವವರಿಗೆ ಗುಜರಾತ್‌ನಲ್ಲಿ ಸ್ಥಾನವಿಲ್ಲ. ಪ್ರತಿಯೊಂದು ಸಮಾಜ ಮತ್ತು ಧರ್ಮದವರಿಗೂ ವಿಚ್ಛೇದನದ ಸಮಾನ ನಿಯಮಗಳು ಅನ್ವಯವಾಗಲಿವೆ.
‘ಶ್ರೀಕೃಷ್ಣ ಮುಸಲ್ಮಾನರಾಗಿದ್ದರು ಮತ್ತು ದಿನಕ್ಕೆ ೫ ಬಾರಿ ನಮಾಜ್ ಮಾಡುತ್ತಿದ್ದರಂತೆ!’– Maulana Jarjis Ansari
ವಂಚನೆ ಅಥವಾ ಬ್ಲ್ಯಾಕ್ ಮೇಲ್ ಮೂಲಕ ದೈಹಿಕ ಸಂಬಂಧವಾದರೆ, ಅದನ್ನು ‘ಬಲಾತ್ಕಾರ’ ಎಂದು ಪರಿಗಣಿಸಲಾಗುವುದು! – ಮದ್ರಾಸ್ ಉಚ್ಚ ನ್ಯಾಯಾಲಯ
‘ಐ.ಆರ್.ಸಿ.ಟಿ.ಸಿ.’ಯ ಹೊಸ ಜಾಲತಾಣ ಕಾರ್ಯಾರಂಭ : ಟಿಕೆಟ್ ಕಾಯ್ದಿರಿಸುವಿಕೆ ಮತ್ತಷ್ಟು ಸುಲಭ
ಪುರಿಯಿಂದ ಜಗತ್ಪ್ರಸಿದ್ಧ ಜಗನ್ನಾಥ ರಥಯಾತ್ರೆಗೆ ಚಾಲನೆ!
ಭಾಗ್ಯನಗರ (ತೆಲಂಗಾಣ): ಹಿಂದೂ ವಿದ್ಯಾರ್ಥಿಗೆ ಮನೆ ಪಾಠದಲ್ಲಿ ‘ಕಲ್ಮಾ’ ಕಂಠಪಾಠ ಮಾಡಲು ಹೇಳಿದ ಶಿಕ್ಷಕಿ; ನೌಕರಿಯಿಂದ ವಜಾ!
ರಾಜಸ್ಥಾನ : ವಾಸ್ತವಕ್ಕಿಂತ ಹೆಚ್ಚು ಗೋವುಗಳಿವೆ ಎಂದು ಹೇಳಿ ಕೋಟ್ಯಂತರ ರೂಪಾಯಿಗಳ ಸರಕಾರಿ ಅನುದಾನ ಲೂಟಿ !