ಸೂರತ (ಗುಜರಾತ) ಇಲ್ಲಿನ ಘಟನೆ

ಸೂರತ (ಗುಜರಾತ) – ಇಲ್ಲಿನ ವಿವಾಹಿತ ಹಿಂದೂ ಮಹಿಳೆಯನ್ನು ಪ್ರೇಮಜಾಲದಲ್ಲಿ ಸಿಲುಕಿಸಿದ ಮುಸಲ್ಮಾನ ಜಿಮ್ ತರಬೇತುದಾರನನ್ನು ಪೊಲೀಸರು ಬಂಧಿಸಿದ್ದಾರೆ. ಸಬ್ಬೀರ್ ಅಸ್ಗರ್ ಟ್ರಂಕವಾಲಾ ಬಂಧಿತ ಆರೋಪಿ.
🚨 Surat (Gujarat): Gym Trainer Arrested in Blackmail & Exploitation Case
A trainer identified as Sabbir Azgar Trunkwala was arrested after luring a married woman, threatening to leak private photos, demanding ₹5 lakh, and issuing death threats to her husband.
Police acted… https://t.co/PToMGxW7u3 pic.twitter.com/SClTEFvt3m
— Sanatan Prabhat (@SanatanPrabhat) April 15, 2026
ಸಂತ್ರಸ್ತ ವಿವಾಹಿತ ಮಹಿಳೆಯು ಪ್ರತಿಷ್ಠಿತ ಶ್ರೀಮಂತ ಹಿಂದೂ ಕುಟುಂಬಕ್ಕೆ ಸೇರಿದವರಾಗಿದ್ದಾರೆ. ಈ ಮಹಿಳೆಯು ಸಿಟಿಲೈಟ್ ಪ್ರದೇಶದ ವ್ಯಾಯಾಮ ಶಾಲೆಯೊಂದಕ್ಕೆ ನಿಯಮಿತವಾಗಿ ಹೋಗುತ್ತಿದ್ದರು. ಅಲ್ಲಿ ಸಬ್ಬೀರ್ ಅಸ್ಗರ್ ಟ್ರಂಕವಾಲಾ ತರಬೇತುದಾರನಾಗಿ ಕೆಲಸ ಮಾಡುತ್ತಿದ್ದನು. ಅವನು ಸಿಹಿ ಮಾತುಗಳನ್ನಾಡಿ ಮಹಿಳೆಯನ್ನು ಪ್ರೇಮಪಾಶಕ್ಕೆ ಸಿಲುಕಿಸಿದ್ದನು. ಸಬ್ಬೀರ್ ಕಳೆದ ೭ ವರ್ಷಗಳಿಂದ ಮಹಿಳೆಯ ಸಂಪರ್ಕದಲ್ಲಿದ್ದನು. ಈ ವಿಷಯ ಮಹಿಳೆಯ ಪತಿಗೆ ತಿಳಿದಾಗ, ಅವರು ಸಬ್ಬೀರನನ್ನು ಭೇಟಿಯಾಗಿ ತನ್ನ ಪತ್ನಿಯಿಂದ ದೂರವಿರುವಂತೆ ತಿಳಿಸಿದ್ದರು. ಇದಕ್ಕೆ ಪ್ರತಿಯಾಗಿ ಸಬ್ಬೀರ್ ಮಹಿಳೆಯೊಂದಿಗಿನ ಕೆಲವು ಖಾಸಗಿ ಭಾವಚಿತ್ರಗಳನ್ನು ಬಹಿರಂಗಪಡಿಸುವುದಾಗಿ ಬೆದರಿಕೆ ಹಾಕಿ, ಪತಿಯ ಬಳಿ ೫ ಲಕ್ಷ ರೂಪಾಯಿ ನೀಡುವಂತೆ ಬೇಡಿಕೆಯಿಟ್ಟಿದ್ದನು ಮತ್ತು ಕೊಲೆ ಬೆದರಿಕೆಯನ್ನೂ ಹಾಕಿದ್ದನು. ಪತಿಯು ದೂರು ನೀಡಿದ ನಂತರ ಪೊಲೀಸರು ಆರೋಪಿ ಸಬ್ಬೀರನನ್ನು ಬಂಧಿಸಿದ್ದಾರೆ.
ಚಾರಿತ್ರ್ಯವನ್ನು ಪರಿಶೀಲಿಸಿದ ನಂತರವೇ ತರಬೇತುದಾರರನ್ನು ಕೆಲಸಕ್ಕೆ ಇಟ್ಟುಕೊಳ್ಳಿ! – ಪೊಲೀಸರ ಸೂಚನೆ
ಪೊಲೀಸ ಉಪಾಯುಕ್ತ ರಾಜದೀಪ ಸಿಂಗ ನಕುಮ ಮಾತನಾಡಿ, ಕೆಲವು ದಿನಗಳ ಹಿಂದೆ ವ್ಯಾಯಾಮ ತರಬೇತುದಾರರು ಮತ್ತು ಸಂಚಾಲಕರ ಸಭೆಯನ್ನು ಕರೆಯಲಾಗಿತ್ತು. ಅದರಲ್ಲಿ ನೀವು ಯಾರನ್ನು ತರಬೇತುದಾರರನ್ನಾಗಿ ನೇಮಿಸುತ್ತೀರೋ, ಅವರ ಚಾರಿತ್ರ್ಯದ ಬಗ್ಗೆ ಕೂಲಂಕಷವಾಗಿ ಪರಿಶೀಲಿಸಬೇಕು ಮತ್ತು ಆ ನಂತರವೇ ಅವರಿಗೆ ಕೆಲಸ ನೀಡಬೇಕು ಎಂದು ಸೂಚಿಸಲಾಗಿದೆ, ಎಂದು ಹೇಳಿದರು.
ಕಳೆದ 24 ಗಂಟೆಗಳಲ್ಲಿ ಲವ್ ಜಿಹಾದ್ನ 4 ಮತ್ತು ಮತಾಂತರದ 2 ಘಟನೆಗಳು ಬೆಳಕಿಗೆ! : Love Jihad
ಹಸುವನ್ನು ರಾಷ್ಟ್ರಮಾತೆ ಎಂದು ಘೋಷಿಸಿ! – ಪೂ. ಕಿಶೋರ್ಶಾಸ್ತ್ರಿ ದವೆ : Declare Cow Mother of Nation
೬೦೦ ಮಿಲಿಯನ್ ಲೀಟರ್ ಕೊಳಚೆ ನೀರನ್ನು ನೇರವಾಗಿ ನದಿಗೆ ಬಿಡುತ್ತಿರುವುದರಿಂದ ಪುಣೆ ನಗರದ ನದಿಗಳು ಮಾಲಿನ್ಯದ ಸುಳಿಗೆ!
ಉತ್ತರ ಪ್ರದೇಶ : ಭಗವಾನ್ ಹನುಮಂತನ ಮೂರ್ತಿ ಧ್ವಂಸ ಪ್ರಕರಣದಲ್ಲಿ ಅಸದ್ ವಿರುದ್ಧ ಆರೋಪ
ಮಹಾರಾಷ್ಟ್ರದಲ್ಲಿ ಸಮಾನ ನಾಗರಿಕ ಸಂಹಿತೆಯ ಕರಡು ಸಿದ್ದಪಡಿಸಲಾಗುವುದು! – ಯೋಗೇಶ್ ಕದಮ್, ಗೃಹ ರಾಜ್ಯ ಸಚಿವರು, ಮಹಾರಾಷ್ಟ್ರ
‘ತ್ರಿವಳಿ ತಲಾಖ್’ ಮತ್ತು ‘ಬಹುಪತ್ನಿತ್ವ’ದ ವಿಷಯವಾಗಿ ಮಹಾರಾಷ್ಟ್ರದ ವಿಧಾನಸಭೆಯಲ್ಲಿ ಗದ್ದಲ