ತಪಸ್ವೀ ಅನಸೂಯೆಯಿಂದ ಆದ ದತ್ತನ ಜನ್ಮದ ಅದ್ಭುತ ಕಥೆ

ದತ್ತಾತ್ರೆಯರ ಜನ್ಮದ ಕಥೆ ಅದ್ಭುತವಾಗಿದೆ. ಒಮ್ಮೆ ಬ್ರಹ್ಮಾ,ವಿಷ್ಣು ಮತ್ತು ಮಹೇಶರು ಅನುಸೂಯಾಳಲ್ಲಿಗೆ ಋಷಿಗಳ ವೇಶದಲ್ಲಿ ಭಿಕ್ಷೆ ಬೇಡಲು ಹೋದರು; ಏಕೆಂದರೆ, ಭಗವಂತನು ಮಾತಾ ಅನುಸೂಯೆಗೆ ನಾನು ನಿನ್ನ ಉದರದಲ್ಲಿ ಜನ್ಮ ತಾಳುವೆನು, ಎಂದು ವರ ನೀಡಿದ್ದನು. ಅನಸೂಯೆಯ ಪತಿ ಅತ್ರಿ ಋಷಿ ಅಂದರೆ ಬ್ರಹ್ಮದೇವರ ಪುತ್ರರಾಗಿದ್ದರು.

ಶ್ರೀ ದತ್ತ ಜಯಂತಿ (ಡಿಸೆಂಬರ್ ೨೯)

‘ಹಿಂದಿನ ಕಾಲದಲ್ಲಿ ಪೃಥ್ವಿಯ ಮೇಲೆ ಸ್ಥೂಲ ಮತ್ತು ಸೂಕ್ಷ್ಮರೂಪ ದಲ್ಲಿ ಅಸುರೀ ಶಕ್ತಿಗಳು ಪ್ರಾಬಲ್ಯ ಬಹಳ ಹೆಚ್ಚಾಗಿತ್ತು. ಅವರನ್ನು ದೈತ್ಯ ರೆಂದು ಕರೆಯಲಾಗುತ್ತಿತ್ತು. ದೇವಗಣರು ಆ ಅಸುರೀ ಶಕ್ತಿಗಳನ್ನು ನಾಶಗೊಳಿಸಲು ಮಾಡಿದ ಪ್ರಯತ್ನ ಗಳೆಲ್ಲವೂ ವಿಫಲವಾದವು. ಆಗ ಬ್ರಹ್ಮದೇವನ ಆಜ್ಞೆಗನುಸಾರ ಬೇರೆ ಬೇರೆ ಕಡೆಗಳಲ್ಲಿ ಬೇರೆ ಬೇರೆ ರೂಪಗಳಲ್ಲಿ ದತ್ತನು ಅವತಾರ ತಾಳಬೇಕಾಯಿತು. ಆನಂತರ ದೈತ್ಯರು ನಾಶವಾದರು. ದತ್ತನು ಅವತಾರ ತಾಳಿದ ದಿನವನ್ನು ‘ದತ್ತಜಯಂತಿಯೆಂದು ಆಚರಿಸಲಾಗುತ್ತದೆ.

ದೀಪಾವಳಿಯ ನಿಮಿತ್ತ ದೇವತೆಯ ತತ್ತ್ವ ಆಕರ್ಷಿಸುವ ಮತ್ತು ಪ್ರಕ್ಷೇಪಿಸುವ ರಂಗೋಲಿಯನ್ನು ಬಿಡಿಸಿರಿ !

ದೀಪಾವಳಿಯ ನಿಮಿತ್ತ ದೇವತೆಯ ತತ್ತ್ವ ಆಕರ್ಷಿಸುವ ಮತ್ತು ಪ್ರಕ್ಷೇಪಿಸುವ ರಂಗೋಲಿಯನ್ನು ಬಿಡಿಸಿರಿ !

ಆಧ್ಯಾತ್ಮಿಕ ಲಾಭ ಮತ್ತು ಚೈತನ್ಯ ನೀಡುವ ಮಂಗಲಕರ ದೀಪಾವಳಿ !

ಆಶ್ವಯುಜ ಕೃಷ್ಣ ತ್ರಯೋದಶಿ ಈ ದಿನ ವ್ಯಾಪಾರಿಗಳು ಕೊಪ್ಪರಿಗೆಯನ್ನು (ಕೋಶಾಗಾರ) ಪೂಜಿಸುತ್ತಾರೆ. ವ್ಯಾಪಾರಿ ವರ್ಷವು ಒಂದು ದೀಪಾವಳಿಯಿಂದ ಇನ್ನೊಂದು ದೀಪಾವಳಿಯವರೆಗೆ ಇರುತ್ತದೆ. ಹೊಸ ವರ್ಷದ ಲೆಕ್ಕದ ಖಾತೆ ಕಿರ್ದಿಗಳನ್ನು (ಪುಸ್ತಕಗಳನ್ನು) ಈ ದಿನವೇ ತರುತ್ತಾರೆ. ವಾಸ್ತವದಲ್ಲಿ ಲಕ್ಷ್ಮೀ ಪೂಜೆಯ ಸಮಯ ದಲ್ಲಿ ಇಡೀ ವರ್ಷದ ಜಮಾಖರ್ಚನ್ನು ಕೊಡುವುದಿರುತ್ತದೆ.

ದೇಶ ವಿದೇಶಗಳಲ್ಲಿ ವಿವಿಧ ಪದ್ಧತಿಯಿಂದ ಆಚರಿಸಲ್ಪಡುವ ಹಿಂದೂಗಳ ಹಬ್ಬ ದೀಪಾವಳಿ

ಥೈಲ್ಯಾಂಡನಲ್ಲಿ ದೀಪಾವಳಿಯನ್ನು ಲುಯಿ ಕ್ರಥೋಂಗ ಎಂದು ಆಚರಿಸಲಾಗುತ್ತದೆ. ದೀಪಾವಳಿಯ ನಿಮಿತ್ತ ಸಿದ್ದಪಡಿಸಿರುವ ದೀಪಗಳನ್ನು ಬಾಳೆ ಎಲೆಗಳಿಂದ ತಯಾರಿಸಲಾಗುತ್ತದೆ. ಹೀಗೆ ಸಾವಿರಾರು ದೀಪಗಳನ್ನು ನದಿಯಲ್ಲಿ ತೇಲಿ ಬಿಡುತ್ತಾರೆ. ಈ ದೀಪೋತ್ಸವ ಅತ್ಯಂತ ನಯನಮನೋಹರವಾಗಿರುತ್ತದೆ.

ಧನ್ವಂತರಿ ಜಯಂತಿ (ನವೆಂಬರ್ ೧೩)

ಆಯುರ್ವೇದದ ದೃಷ್ಟಿಯಿಂದ ನಿಜ ಆಶ್ವಯುಜ ಕೃಷ್ಣ ಪಕ್ಷ ತ್ರಯೋದಶಿಯಂದು ಧನ್ವಂತರಿ ಜಯಂತಿಯ ದಿನವಾಗಿದೆ. ವೈದ್ಯರು ಈ ದಿನ ಧನ್ವಂತರಿಯ (ಆಯುರ್ವೇದದ ದೇವತೆ) ಪೂಜೆಯನ್ನು ಮಾಡುತ್ತಾರೆ. ಬೇವಿನ ಎಲೆಯ ಸಣ್ಣ-ಸಣ್ಣ ತುಂಡು ಮತ್ತು ಸಕ್ಕರೆಯನ್ನು ‘ಪ್ರಸಾದ’ವೆಂದು ಎಲ್ಲರಿಗೂ ಹಂಚುತ್ತಾರೆ.

ಲಕ್ಷ್ಮೀಪೂಜೆ (ನವೆಂಬರ್ ೧೪)

ನರಕ ಚತುರ್ದಶಿಯಂದು ಶ್ರೀವಿಷ್ಣುವು ಲಕ್ಷ್ಮೀ ಸಹಿತ ಎಲ್ಲ ದೇವತೆಗಳನ್ನು ಬಲಿ ಚಕ್ರವರ್ತಿಯ ಸೆರೆಮನೆಯಿಂದ ಮುಕ್ತಗೊಳಿಸಿದನು ಅನಂತರ ಆ ಎಲ್ಲ ದೇವತೆಗಳು ಕ್ಷೀರಸಾಗರದಲ್ಲಿ ಹೋಗಿ ಮಲಗಿದರು ಎನ್ನುವ ಕಥೆ ಇದೆ. ಈ ದಿನ ‘ಪ್ರಾತಃಕಾಲದಲ್ಲಿ ಮಂಗಲಸ್ನಾನ ಮಾಡಿ ದೇವರ ಪೂಜೆ, ಮಧ್ಯಾಹ್ನ ಪಾರ್ವಣಶ್ರಾದ್ಧ ಹಾಗೂ ಬ್ರಾಹ್ಮಣಭೋಜನ ಮತ್ತು ಪ್ರದೋಷಕಾಲದಲ್ಲಿ ಎಲೆ-ಬಳ್ಳಿಗಳಿಂದ ಶೃಂಗರಿಸಿದ ಮಂಟಪದಲ್ಲಿ ಲಕ್ಷ್ಮೀ, ಶ್ರೀವಿಷ್ಣು ಮುಂತಾದ ದೇವತೆಗಳು ಮತ್ತು ಕುಬೇರನ ಪೂಜೆಯನ್ನು ಮಾಡುತ್ತಾರೆ.

ನರಕ ಚತುರ್ದಶಿ (ನವೆಂಬರ್ ೧೪)

ಆಕಾಶದಲ್ಲಿ ನಕ್ಷತ್ರಗಳಿರುವಾಗ ಬ್ರಾಹ್ಮೀ  ಮಹೂರ್ತದಲ್ಲಿ ಅಭ್ಯಂಗಸ್ನಾನವನ್ನು ಮಾಡುತ್ತಾರೆ ಉತ್ತರಣೆಯ ಗೆಲ್ಲಿನಿಂದ ತಲೆಯಿಂದ ಕಾಲುಗಳವರೆಗೆ ಮತ್ತು ಪುನಃ ಕಾಲುಗಳಿಂದ ತಲೆಯವರೆಗೆ ನೀರನ್ನು ಸಿಂಪಡಿಸಿಕೊಳ್ಳುತ್ತಾರೆ. ಇದಕ್ಕಾಗಿ ಬೇರಿರುವ ಉತ್ತರಣೆಯನ್ನು ಉಪಯೋಗಿಸುತ್ತಾರೆ.

 ಬಲಿಪಾಡ್ಯ (ನವೆಂಬರ್ ೧೬)

ಬಲಿಪಾಡ್ಯದಂದು ೫ ಬಣ್ಣಗಳ ರಂಗೋಲಿಯಿಂದ ಬಲಿ ಮತ್ತು ಅವನ ಪತ್ನಿ ವಿಂಧ್ಯಾವಲಿಯ ಚಿತ್ರಗಳನ್ನು ಬಿಡಿಸಿ ಅವರ ಪೂಜೆಯನ್ನು ಮಾಡುತ್ತಾರೆ. ನಂತರ ಬಲಿ ಪ್ರೀತ್ಯರ್ಥ ದೀಪ ಮತ್ತು ವಸ್ತ್ರಗಳ ದಾನವನ್ನು ಮಾಡುತ್ತಾರೆ. ಈ ದಿನ ಪ್ರಾತಃಕಾಲ ಅಭ್ಯಂಗಸ್ನಾನ ಮಾಡಿದ ನಂತರ ಸ್ತ್ರೀಯರು ತಮ್ಮ ಪತಿಗೆ ಆರತಿಯನ್ನು ಬೆಳಗುತ್ತಾರೆ.

ಕೊರೋನಾ ಮಹಾಮಾರಿಯಿಂದ ಉದ್ಭವಿಸಿರುವ ಆಪತ್ಕಾಲದ ಸ್ಥಿತಿಯಲ್ಲಿ ದೀಪಾವಳಿ ಹಾಗೂ ತುಳಸಿಪೂಜೆ ಹೇಗೆ ಆಚರಿಸಬೇಕು ?

‘ಈ ವರ್ಷ ೧೩ ರಿಂದ ೧೬ ನವೆಂಬರ್ ಈ ಅವಧಿಯಲ್ಲಿ ದೀಪಾವಳಿ ಹಬ್ಬವಿದೆ. ಕೊರೋನಾ ಮಹಾಮಾರಿಯ ಹಿನ್ನೆಲೆಯಲ್ಲಿ ಜಾರಿಗೊಳಿಸಲಾಗಿದ್ದ ಸಂಚಾರ ಸಾರಿಗೆ ನಿರ್ಬಂಧವನ್ನು ಹಂತ ಹಂತವಾಗಿ ತೆರವುಗೊಳಿಸಲಾಗುತ್ತಿದ್ದು, ಜನಜೀವನ ಮೊದಲಿನಂತಾಗುತ್ತಿದ್ದರೂ, ಕೆಲವು ಸ್ಥಳಗಳಲ್ಲಿ ಸಾರ್ವಜನಿಕ ನಿರ್ಬಂಧಗಳಿಂದ ನಿತ್ಯದಂತೆ ದೀಪಾವಳಿಯನ್ನು ಆಚರಿಸಲು ಮಿತಿ ಇದೆ. ಇಂತಹ ಸ್ಥಳಗಳಲ್ಲಿ ದೀಪಾವಳಿಯನ್ನು ಹೇಗೆ ಆಚರಿಸಬೇಕು