ಮಹಾಕುಂಭ ಕ್ಷೇತ್ರದಲ್ಲಿ ‘ಚಕ್ಕರ್ ಪ್ಲೇಟ್’ ರಸ್ತೆಗಳನ್ನು ದುರಸ್ತಿ ಮಾಡಲು ಆಡಳಿತದ ಮುಂದೆ ಸವಾಲು !

ಶ್ರೀ. ಸಾಗರ ಗರುಡ್, ಪ್ರತಿನಿಧಿ, ಪ್ರಯಾಗರಾಜ್

ಚೆಕ್ಕರ ಪ್ಲೇಟ್ ರಸ್ತೆಗಳನ್ನು ದುರಸ್ತಿ ಮಾಡುವ ಕಾರ್ಮಿಕರು

(ಚೆಕರ್ಡ್ ಪ್ಲೇಟ್ ಎಂದರೆ ನದಿಪಾತ್ರದಲ್ಲಿ ಮರಳಿನ ಮೇಲೆ ನಡೆಯಲು ಸ್ಥಾಪಿಸಲಾದ ದೊಡ್ಡ ಕಬ್ಬಿಣದ ಪ್ಲೇಟ್)

ಪ್ರಯಾಗರಾಜ್, ಜನವರಿ 19 (ಸುದ್ದಿ.) – ಮಹಾಕುಂಭ ಕ್ಷೇತ್ರದಲ್ಲಿ ಗಂಗಾನದಿಯ ಮರಳಿನಲ್ಲಿ ನೂರಾರು ರಸ್ತೆಗಳನ್ನು ಚಕರ್ಡ ಪ್ಲೇಟ್‌ಗಳ ಆಧಾರದ ಮೇಲೆ ಸಿದ್ಧಪಡಿಸಲಾಗಿದೆ. ಈ ರಸ್ತೆಗಳಿಂದಾಗಿಯೇ ಮಹಾಕುಂಭ ಮೇಳದ ಉದ್ದಕ್ಕೂ ಸುಗಮ ಸಂಚಾರ ಮುಂದುವರಿಯುತ್ತದೆ. ಕಳೆದ ವಾರದಿಂದ ಸಂಚಾರ ದಟ್ಟಣೆಯಿಂದಾಗಿ ಚಕರ್ಡ ಪ್ಲೇಟ್‌ನ ಕೆಳಗಿರುವ ಹೆಚ್ಚಿನ ಮರಳು ಜಾರಿವೆ. ಪರಿಣಾಮವಾಗಿ, ಚಕರ್ಡ ಪ್ಲೇಟ್‌ಗಳು ಮೇಲೆ-ಕೆಳಗೆ ಆಗಿದ್ದರಿಂದ, ಅವುಗಳ ಮೇಲೆ ಸಾಗಲು ಕಷ್ಟವಾಗುತ್ತದೆ. ಚಕರ್ಡ ಪ್ಲೇಟ್ ಅಡಿಯಲ್ಲಿ ಮರಳನ್ನು ಹಾಕುವ ಮೂಲಕ ಅದನ್ನು ನೆಲಸಮ ಮಾಡುವುದು ಅತ್ಯಗತ್ಯವಾಗಿದೆ. ಆದ್ದರಿಂದ, ಕಳೆದ 2 ದಿನಗಳಿಂದ, ನೂರಾರು ಕಾರ್ಮಿಕರು ಚಕರ್ಡ ಪ್ಲೇಟ್ ರಸ್ತೆಗಳನ್ನು ದುರಸ್ತಿ ಮಾಡುವ ಕೆಲಸದಲ್ಲಿ ತೊಡಗಿದ್ದಾರೆ.

ಮಹಾ ಕುಂಭ ಮೇಳದಲ್ಲಿ ನೂರಾರು ವಿವಿಧ ಅಖಾಡಗಳಿಗೆ ಬೇಕಾದ ಧಾನ್ಯ ದಾಸ್ತಾನು ಮತ್ತು ಇತರ ಸಾಮಗ್ರಿಗಳನ್ನು ಟ್ರಕ್‌ಗಳು, ಟ್ರ್ಯಾಕ್ಟರ್‌ಗಳು ಮುಂತಾದ ಭಾರೀ ವಾಹನಗಳ ಮೂಲಕ ಪೂರೈಸಲಾಗುತ್ತದೆ. ಈ ಎಲ್ಲಾ ಸಂಚಾರವನ್ನು ಚಕರ್ಡ ಪ್ಲೇಟ್ ರಸ್ತೆಗಳಲ್ಲಿ ನಡೆಸಲಾಗುತ್ತಿದೆ. ಭಾರೀ ವಾಹನಗಳ ದಟ್ಟಣೆಯಿಂದಾಗಿ ಚಕರ್ಡ ಪ್ಲೆಟ್ ಕೆಳಗಿರುವ ಮರಳು ಹೆಚ್ಚಿನ ಪ್ರಮಾಣದಲ್ಲಿ ಜಾರುತ್ತಿದೆ. ಪರಿಣಾಮವಾಗಿ, ಅನೇಕ ರಸ್ತೆಗಳು ಕಡಿದಾದ ಮತ್ತು ಅಸಮವಾಗಿ ಮಾರ್ಪಟ್ಟಿದ್ದು, ದ್ವಿಚಕ್ರ ವಾಹನಗಳು ಅವುಗಳಲ್ಲಿ ಪ್ರಯಾಣಿಸಲು ಕಷ್ಟಕರವಾಗಿದೆ. ಆದ್ದರಿಂದ, ಆಡಳಿತವು ಈ ರಸ್ತೆಗಳ ದುರಸ್ತಿ ಕಾರ್ಯವನ್ನು ಸಮರೋಪಾದಿಯಲ್ಲಿ ಕೈಗೆತ್ತಿಕೊಂಡಿದೆ. ಕುಂಭಮೇಳದಲ್ಲಿ, ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಸೇರಿರುವಾಗ ಮತ್ತು ರಸ್ತೆಗಳಲ್ಲಿ ವಾಹನ ಸಂಚಾರ ಹೆಚ್ಚುತ್ತಿರುವಾಗ, ಚಕರ್ಡ ಪ್ಲೇಟ್‌ನ ಸ್ಕ್ರೂಗಳನ್ನು ತೆಗೆದು, ಅದರ ಕೆಳಗೆ ಮರಳನ್ನು ಸುರಿಯುವುದು ಮತ್ತು ಗುಂಡಿಗಳನ್ನು ಮುಚ್ಚುವುದು ಒಂದು ದೊಡ್ಡ ಸವಾಲಾಗಿದೆ.