ಪಠ್ಯಪುಸ್ತಕಗಳಲ್ಲಿ ವೈದಿಕ ಸಂಸ್ಕೃತಿ ಮತ್ತು ಧರ್ಮದ ಶಿಕ್ಷಣ ಕಲಿಸಿದರೆ, ದೇಶದಲ್ಲಿ ಅನೈತಿಕತೆ ನಿರ್ಮೂಲನೆಯಾಗುತ್ತದೆ ! – ಪ.ಪೂ. ಅಗ್ನಿಪೀಠಾಧೀಶ್ವರ ಆಚಾರ್ಯ ಮಹಾಮಂಡಲೇಶ್ವರ ಶ್ರೀಮದ್ ರಾಮಕೃಷ್ಣಾನಂದ ಮಹಾರಾಜ್, ಪಂಚಾಗ್ನಿಪೀಠ, ಮಧ್ಯಪ್ರದೇಶ

ಪ.ಪೂ. ಅಗ್ನಿಪೀಠಾಧೀಶ್ವರ ಆಚಾರ್ಯ ಮಹಾಮಂಡಲೇಶ್ವರ ಶ್ರೀಮದ್ ರಾಮಕೃಷ್ಣಾನಂದ ಮಹಾರಾಜ್

ಪ್ರಯಾಗರಾಜ್, ಜನವರಿ 19 (ಸುದ್ದಿ.) – ದೇಶದಲ್ಲಿ ಮತಾಂತರದ ಘಟನೆಗಳು ಹೆಚ್ಚುತ್ತಿವೆ. ಸರಕಾರ ಜನರಿಗೆ ವಿದ್ಯುತ್, ನೀರು, ಆಹಾರ ಇತ್ಯಾದಿ ಸೌಲಭ್ಯಗಳನ್ನು ಒದಗಿಸಿದ್ದರೆ, ಜನರು ಮತಾಂತರಗೊಳ್ಳುತ್ತಿರಲಿಲ್ಲ. ಒಬ್ಬ ವ್ಯಕ್ತಿಯ ದೃಷ್ಟಿಕೋನವು ಸಂಕುಚಿತರಾಗಿರಬಾರದು, ಬದಲಾಗಿ ವಿಶಾಲವಾಗಿರಬೇಕು. ಸರಕಾರವು ಪಠ್ಯಪುಸ್ತಕಗಳಲ್ಲಿ ವೈದಿಕ ಸಂಸ್ಕೃತಿ ಮತ್ತು ಧರ್ಮದ ಶಿಕ್ಷಣ ಕಲಿಸಿದರೆ, ದೇಶದಲ್ಲಿ ಅನೈತಿಕತೆ ನಿರ್ಮೂಲನೆಯಾಗುತ್ತದೆ ಎಂದು ಮಧ್ಯಪ್ರದೇಶದ ಅನ್ನಾಪುರ ಜಿಲ್ಲೆಯ ಅಮರಕಂಟಕ್‌ನಲ್ಲಿರುವ ಪಂಚಾಗ್ನಿಪೀಠದ ಪ.ಪೂ. ಅಗ್ನಿಪೀಠಾಧೀಶ್ವರ ಆಚಾರ್ಯ ಮಹಾಮಂಡಲೇಶ್ವರ ಶ್ರೀಮದ್ ರಾಮಕೃಷ್ಣಾನಂದ ಮಹಾರಾಜರು ಹೇಳಿದರು.

ಪ.ಪೂ. ಅಗ್ನಿಪೀಠಾಧೀಶ್ವರ ಆಚಾರ್ಯ ಮಹಾಮಂಡಲೇಶ್ವರ ಶ್ರೀಮದ್ ರಾಮಕೃಷ್ಣಾನಂದ ಮಹಾರಾಜರು ಮಾತನಾಡಿ, “ಭಗವಾನ್ ಶ್ರೀ ರಾಮ ನಮ್ಮ ಆದರ್ಶ ವ್ಯಕ್ತಿಯಾಗಿದ್ದಾನೆ”. ರಾಮ ರಾಜ್ಯದ ಕಲ್ಪನೆ ಮಾಡಿಕೊಳ್ಳಬೇಕು. ಸನಾತನ ಧರ್ಮದ ಮಾರ್ಗವನ್ನು ಅನುಸರಿಸಿದರೆ ಜೀವನ ಕಲ್ಯಾಣವಾಗುತ್ತದೆ. ಮಹಾಕುಂಭ ಮೇಳದಲ್ಲಿ ಸನಾತನದ ವಿರಾಟ ದರ್ಶನ ಎಲ್ಲೆಡೆ ಕಾಣುವಂತೆ ಇತರ ಧರ್ಮದಲ್ಲಿ ಈ ರೀತಿಯ ದರ್ಶನ ಆಗುತ್ತದೆಯೇ ? ನಾವು ಸನಾತನಿ ಆಗಿದ್ದೇವೆ, ನಮ್ಮ ಬುಡಕಟ್ಟು ಮತ್ತು ಅರಣ್ಯವಾಸಿ ಸಹೋದರರಿಗೆ ನಮ್ಮ ಧರ್ಮ, ಸಂಸ್ಕೃತಿ ಮತ್ತು ಪೂರ್ವಜರ ಮಾಹಿತಿ ತಿಳಿಸಬೇಕು. ಧರ್ಮದಿಂದ ಮಾತ್ರ ವ್ಯಕ್ತಿಯನ್ನು ಒಗ್ಗೂಡಿಸಲು ಸಾಧ್ಯ. “ದೇಶದಲ್ಲಿ ಜಾತಿ ಭೇದಗಳು ನಿವಾರಣೆಯಾದರೆ, ಎಲ್ಲರ ಆಚರಣೆಯು ಕ್ರಮಬದ್ಧವಾಗುವುದು.” ಎಂದು ಹೇಳಿದರು.

“ಸನಾತನ ಸಂಸ್ಥೆಯ ಪ್ರದರ್ಶನವನ್ನು ನೋಡಿದ ನಂತರ ನಮಗೆ ತುಂಬಾ ಆನಂದವಾಯಿತು.” ಹಿಂದೂಗಳ ಹಿತಕ್ಕಾಗಿ ಸನಾತನ ಸಂಸ್ಥೆ ಮಾಡುತ್ತಿರುವ ಪ್ರಯತ್ನಗಳು ಉತ್ತಮವಾಗಿವೆ,” ಎಂದು ಹೇಳಿ ಪ.ಪೂ. ಅಗ್ನಿಪೀಠಾಧೀಶ್ವರ ಆಚಾರ್ಯ ಮಹಾಮಂಡಲೇಶ್ವರ ಶ್ರೀಮದ್ ರಾಮಕೃಷ್ಣಾನಂದ ಮಹಾರಾಜರು ಸನಾತನದ ಪ್ರದರ್ಶನವನ್ನು ಶ್ಲಾಘಿಸಿದರು.