ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರಿಂದ ಕುಂಭ ಕ್ಷೇತ್ರದ ವೈಮಾನಿಕ ಸಮೀಕ್ಷೆ !

ತ್ರಿವೇಣಿ ಸಂಗಮದಲ್ಲಿ ಇಲ್ಲಿಯವರೆಗೆ 8 ಕೋಟಿ ಭಕ್ತರಿಂದ ಸ್ನಾನ !

ಪ್ರಯಾಗರಾಜ – ಮಹಾಕುಂಭದ 7 ನೇ ದಿನದಂದು, ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ಹೆಲಿಕಾಪ್ಟರನಿಂದ ಮಹಾಕುಂಭ ಮೇಳವನ್ನು ಪರಿಶೀಲಿಸಿ, ಮಹಾಕುಂಭ ವ್ಯವಸ್ಥೆಗಳ ವರದಿಯನ್ನು ಪರಿಶೀಲಿಸಿದರು. ಜನವರಿ 29 ರಂದು ಮೌನಿ ಅಮಾವಾಸ್ಯೆಯಂದು ಸುಮಾರು 8-10 ಕೋಟಿ ಭಕ್ತರು ಸ್ನಾನ ಮಾಡಲು ಬರುವ ಸಾಧ್ಯತೆಯಿದೆ. ಜನವರಿ 22 ರಂದು ಮಹಾಕುಂಭದಲ್ಲಿ ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ರಾಷ್ಟ್ರಪತಿಗಳ ಮಹಾಕುಂಭದ ಉದ್ದೇಶಿತ ಕಾರ್ಯಕ್ರಮಗಳ ಕುರಿತು ಚರ್ಚಿಸಲಾಗುವುದು. ಜನವರಿ 19 ರಂದು ಮಧ್ಯಾಹ್ನ 12 ಗಂಟೆಯವರೆಗೆ ತ್ರಿವೇಣಿ ಸಂಗಮದಲ್ಲಿ 31 ಲಕ್ಷ ಭಕ್ತರು ಸ್ನಾನ ಮಾಡಿದರು. ಇಲ್ಲಿಯವರೆಗೆ ಒಟ್ಟು 8 ಕೋಟಿ ಜನರು ಸ್ನಾನ ಮಾಡಿದ್ದಾರೆ. ಜನವರಿ 27 ರಂದು ನಡೆಯುವ ಮಹಾಕುಂಭದಲ್ಲಿ ಗೃಹ ಸಚಿವ ಅಮಿತ್ ಶಾ ಭಾಗವಹಿಸಲಿದ್ದಾರೆ.

ಮಹಾಕುಂಭದ ಪ್ರಮುಖ ಘಟನಾವಳಿಗಳು

1. ಶಂಕರಾಚಾರ್ಯ ಅವಿಮುಕ್ತೇಶ್ವರಾನಂದ ಸರಸ್ವತಿ ಅವರ ಅಖಾಡದಲ್ಲಿ ಬಾಂಬ್ ಇರುವ ವದಂತಿ !

ಜನವರಿ 18 ರಂದು ರಾತ್ರಿ 10 ಗಂಟೆಗೆ, ಮಹಾಕುಂಭದ ಸಮಯದಲ್ಲಿ ಶಂಕರಾಚಾರ್ಯ ಅವಿಮುಕ್ತೇಶ್ವರಾನಂದ ಸರಸ್ವತಿ ಅವರ ಅಖಾಡದಲ್ಲಿ ಬಾಂಬ್ ಇಡಲಾಗಿದೆ ಎಂಬ ವದಂತಿಗಳು ಎಲ್ಲೆಡೆ ಹರಡಿತು. ಇದರಿಂದ ಮಹಾಕುಂಭ ಪ್ರದೇಶದಲ್ಲಿ ಭಯದ ವಾತಾವರಣವನ್ನು ಸೃಷ್ಟಿಸಿತು. ಈ ಮಾಹಿತಿ ಸಿಕ್ಕ ನಂತರ ಪೊಲೀಸ್ ಪಡೆ ಘಟನಾ ಸ್ಥಳಕ್ಕೆ ತಲುಪಿತು. ಆಖಾಡಾವನ್ನು ಪರಿಶೀಲಿಸಿದ ನಂತರ, ಯಾವುದೇ ಅನುಮಾನಾಸ್ಪದ ವಸ್ತುಗಳು ಕಂಡುಬಂದಿಲ್ಲ. ತದನಂತರ ಎಲ್ಲರೂ ನೆಮ್ಮದಿಯ ನಿಟ್ಟುಸಿರು ಬಿಟ್ಟರು.

2. ಕೇಂದ್ರ ಸಚಿವ ಮನೋಹರ ಲಾಲ ಖಟ್ಟರ ಇವರು ಪ್ರಯಾಗರಾಜ್ ತಲುಪಿದ್ದಾರೆ. ಅವರು ಮಹಾಕುಂಭ ಸೆಕ್ಟರ್ 18 ರಲ್ಲಿರುವ ಜುನಾ ಆಖಾಡಾದಲ್ಲಿ ಅವಧೇಶಾನಂದ ಮಹಾರಾಜರನ್ನು ಭೇಟಿಯಾದರು.

3. ಮಹಾಕುಂಭವು ಭವ್ಯತೆ ಮತ್ತು ದೈವತ್ವದಿಂದ ನಡೆಯುತ್ತಿದೆ ! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ

ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಮಾತನಾಡಿ, “ಮಹಾಕುಂಭ ವೈಭವ ಮತ್ತು ದೈವತ್ವದಿಂದ ನಡೆಯುತ್ತಿದೆ. ಪ್ರಧಾನಿ ನರೇಂದ್ರ ಮೋದಿಯವರು ನೀಡಿದ ದೃಷ್ಟಿಕೋನವನ್ನು ಕಾರ್ಯಗತಗೊಳಿಸಲು ಎಲ್ಲರೂ ಸಂಪೂರ್ಣ ವಚನಬದ್ಧತೆಯಿಂದ ಕೆಲಸ ಮಾಡುತ್ತಿದ್ದಾರೆ. ಪುಷ್ಯ ಹುಣ್ಣಿಮೆ ಮತ್ತು ಮಕರ ಸಂಕ್ರಾಂತಿಯ ದಿನಗಳಲ್ಲಿ ಸ್ನಾನ ಮಾಡಲಾಗಿದೆ. ಮೌನಿ ಅಮಾವಾಸ್ಯೆ ಮತ್ತು ವಸಂತ ಪಂಚಮಿ ದಿನಗಳಲ್ಲಿ ಸುಮಾರು 1 ಕೋಟಿಗೂ ಹೆಚ್ಚು ಭಕ್ತರು ಬರುತ್ತಾರೆ ಎಂದು ಅಂದಾಜಿಸಲಾಗಿದೆ. 7 ಸಾವಿರಕ್ಕೂ ಹೆಚ್ಚು ಸಂಸ್ಥೆಗಳು ಮಹಾಕುಂಭಕ್ಕೆ ಬಂದಿವೆ. ನಾವು ಅವರ ಸೌಕರ್ಯ ಮತ್ತು ಸುರಕ್ಷತೆಗಾಗಿ ಕೆಲಸ ಮಾಡುತ್ತಿದ್ದೇವೆ. ನಾವು ಮಹಾಕುಂಭವನ್ನು ಯಶಸ್ವಿಯಾಗಿ ಆಯೋಜಿಸುತ್ತೇವೆ ಎಂಬ ವಿಶ್ವಾಸ ನನಗಿದೆ ಎಂದು ಹೇಳಿದರು.

ಶ್ರೀ ಚಿಮಟೆವಾಲೆ ಬಾಬಾ ಅವರಿಂದ ಯೂಟ್ಯೂಬ ಪತ್ರಕರ್ತನ ಮೇಲೆ ಹಲ್ಲೆ!

ಶ್ರೀ ಚಿಮಟೆವಾಲೆ ಬಾಬಾ ಮಹಾಕುಂಭದಲ್ಲಿ ಯೂಟ್ಯೂಬ್ ಪತ್ರಕರ್ತನನ್ನು ಥಳಿಸಿದರು. ಪ್ರಪಂಚದಾದ್ಯಂತದ ವಿವಿಧ ಮಾಧ್ಯಮ ಸಂಸ್ಥೆಗಳ ಪ್ರತಿನಿಧಿಗಳು ಮತ್ತು ಛಾಯಾಗ್ರಾಹಕರು ಮಹಾಕುಂಭಕ್ಕೆ ಬಂದಿದ್ದಾರೆ. ಮಹಾಕುಂಭದ ಸುದ್ದಿ ತಿಳಿಯಲು ಯೂಟ್ಯೂಬರ ಒಬ್ಬ ಶ್ರೀ ಚಿಮಟೆವಾಲೆ ಬಾಬಾ ಅವರ ಬಳಿಗೆ ಹೋಗಿದ್ದ. ಅವರನ್ನು ಸಂದರ್ಶಿಸುತ್ತಿರುವಾಗ, ಪತ್ರಕರ್ತ ಬಾಬಾ ಅವರಿಗೆ ಆಕ್ಷೇಪಾರ್ಹ ಪ್ರಶ್ನೆಗಳನ್ನು ಕೇಳಿದ್ದರಿಂದ ಶ್ರೀ ಚಿಮಟೆವಾಲೆ ಬಾಬಾ ಕೋಪಗೊಂಡು ಯೂಟ್ಯೂಬ ಪತ್ರಕರ್ತನನ್ನು ಥಳಿಸಿದರು. ಈ ಕುರಿತ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.