
ಪ್ರಯಾಗರಾಜ್, ಜನವರಿ 19 (ಸುದ್ದಿ.) – ಕುಂಭನಗರಿಯ ಸೆಕ್ಟರ್ 7 ರಲ್ಲಿರುವ ‘ಕಲಾ ಕುಂಭ’ದ ಮುಂಭಾಗದ ರಸ್ತೆಯಲ್ಲಿರುವ ‘ಕಾಮಧೇನುದ್ವಾರ’ ಈ ಸ್ವಾಗತ ಕಮಾನು ದುರಸ್ತಿಗಾಗಿ ಮಹರ್ಷಿಗಳ ವಿಗ್ರಹಗಳನ್ನು ರಸ್ತೆಯಲ್ಲಿ ಇಟ್ಟಿರುವುದು ಕಂಡುಬಂದಿದೆ. ಈ ವಿಗ್ರಹಗಳನ್ನು ಹಿಂದೆ ಈ ಕಮಾನಿನ ಮೇಲೆ ಇರಿಸಲಾಗಿತ್ತು. ದುರಸ್ತಿಗಾಗಿ ರಸ್ತೆಯ ಮೇಲೆ ಕಮಾನು ಇಳಿಸುವ ಮೂಲಕ ಮಹರ್ಷಿಗಳಿಗೆ ಅಗೌರವ ತೋರಲಾಗುತ್ತಿದೆ ಎಂದು ಪ್ರದೇಶದ ಭಕ್ತರು ಸನಾತನ ಪ್ರಭಾತ ವರದಿಗಾರರಿಗೆ ಮಾಹಿತಿ ನೀಡಿದರು. ಆಡಳಿತ ಮಂಡಳಿಯು ಈ ಕಮಾನು ರೆಪೇರಿ ಆಗುವತನಕ ಈ ವಿಗ್ರಹಗಳನ್ನು ಯೋಗ್ಯವಾದ ಸ್ಥಳದಲ್ಲಿ ಇಟ್ಟು ಕಾಳಜಿ ವಹಿಸಬೇಕು ಎಂದು ಭಕ್ತರು ಒತ್ತಾಯಿಸಿದ್ದಾರೆ. ಭಕ್ತರು ಮಹರ್ಷಿಗಳ ಚಿತ್ರವನ್ನು ಯೋಗ್ಯವಾದ ಸ್ಥಳದಲ್ಲಿ ಇಡಲು ಪ್ರಯತ್ನಿಸುತ್ತಿದ್ದಾರೆ