Bangladesh Former PM Statement : ನನ್ನ ಮತ್ತು ನನ್ನ ಸಹೋದರಿಯ ಜೀವ ಕೇವಲ 20 ರಿಂದ 25 ನಿಮಿಷಗಳಲ್ಲಿ ಉಳಿಯಿತು ! – ಬಾಂಗ್ಲಾದೇಶದ ಮಾಜಿ ಪ್ರಧಾನಿ ಶೇಖ್ ಹಸೀನಾ

ಬಾಂಗ್ಲಾದೇಶದ ಮಾಜಿ ಪ್ರಧಾನಿ ಶೇಖ್ ಹಸೀನಾ ಇವರು ಮೊದಲ ಬಾರಿಗೆ ಮಾಹಿತಿ ಪ್ರಕಟ !

ಬಾಂಗ್ಲಾದೇಶದ ಮಾಜಿ ಪ್ರಧಾನಿ ಶೇಖ್ ಹಸೀನಾ

ನವದೆಹಲಿ – ನನ್ನನ್ನು ಮತ್ತು ನನ್ನ ತಂಗಿ ಶೇಖ್ ರೆಹಾನಾ ಅವರನ್ನು ಕೊಲ್ಲಲು ಸಂಚು ರೂಪಿಸಲಾಗಿತ್ತು. ನಾವು ಸ್ವಲ್ಪದರಲ್ಲೇ ಪಾರಾದೆವು. 20 ರಿಂದ 25 ನಿಮಿಷಗಳಲ್ಲಿ ನಮ್ಮ ಜೀವ ಉಳಿಯಿತು. ಇಲ್ಲದಿದ್ದರೆ ನಾವು ಸಾಯುತ್ತಿದ್ದೆವು, ಎಂದು ಬಾಂಗ್ಲಾದೇಶದ ಮಾಜಿ ಪ್ರಧಾನಿ ಶೇಖ್ ಹಸೀನಾ ಇದೇ ಮೊದಲ ಬಾರಿಗೆ ಮಾಹಿತಿ ನೀಡಿದ್ದಾರೆ. ಶೇಖ್ ಹಸೀನಾ ಅವರು ಬಾಂಗ್ಲಾದೇಶದಿಂದ ಪಲಾಯನಗೈದು ಭಾರತದಲ್ಲಿ ಆಶ್ರಯ ಪಡೆದಿದ್ದಾರೆ. ಜನವರಿ 17 ರ ರಾತ್ರಿ, ಅವರ ಆಡಿಯೊ ಸಂದೇಶವನ್ನು ಅವರ ‘ಅವಾಮಿ ಲೀಗ್ ಪಕ್ಷ’ದ ಫೇಸ್‌ಬುಕ್ ಖಾತೆಯ ಪುಟದಿಂದ ಪ್ರಸಾರ ಮಾಡಿದರು. ಇದರಲ್ಲಿ ಅವರು ಮೇಲಿನ ಮಾಹಿತಿ ನೀಡಿದ್ದಾರೆ.  ಕಳೆದ ವರ್ಷ ಆಗಸ್ಟ್‌ನಲ್ಲಿ ಬಾಂಗ್ಲಾದೇಶದಲ್ಲಿ ವಿದ್ಯಾರ್ಥಿಗಳು ನಡೆಸಿದ ಹಿಂಸಾತ್ಮಕ ಪ್ರತಿಭಟನೆಯಿಂದಾಗಿ ಶೇಖ್ ಹಸೀನಾ ಪಲಾಯನ ಮಾಡಬೇಕಾಗಿತ್ತು.

ಶೇಖ್ ಹಸೀನಾ ಅವರು ಮಾತನಾಡಿ, ನನ್ನನ್ನು ಕೊಲ್ಲುವುದಕ್ಕಾಗಿ ಹಲವು ಸಲ ಸಂಚು ರೂಪಿಸಲಾಯಿತು. ಆಗಸ್ಟ್ 21 ರಂದು ನನ್ನನ್ನು ಕೊಲ್ಲಲು ಪ್ರಯತ್ನಿಸಲಾಗಿತ್ತು. ಕೊಟ್ಲಿಪಾರಾದಲ್ಲಿ ನಡೆದ ಬಾಂಬ್ ಸ್ಫೋಟದಿಂದ ನಾನು ಸ್ವಲ್ಪದರಲ್ಲೇ ಪಾರಾದೆ. ಆಗಸ್ಟ್ 5 ರಂದು ನನ್ನ ಹತ್ಯೆಯ ಪ್ರಯತ್ನವೂ ನಡೆದಿತ್ತು; ಆದರೆ ಅಲ್ಲಾಹನ ಆಶೀರ್ವಾದದಿಂದ ನಾನು ಬದುಕುಳಿದೆ. ಬಹುಶಃ ನಾನು ಬೇರೆ ಏನಾದರೂ ಮಾಡಬೇಕೆಂದು ಅಲ್ಲಾನ ಇಚ್ಚೆ ಇರಬಹುದು. ನನಗೆ ನನ್ನ ದೇಶದ ಸ್ಥಿತಿಯನ್ನು ನೋಡಿ ತುಂಬಾ ನೋವಾಗಿದೆ. ನನ್ನ ದೇಶದಿಂದ ಮತ್ತು ನನ್ನ ಜನರಿಂದ ದೂರ ಬದುಕುವುದು, ತುಂಬಾ ಕಷ್ಟಕರವಾಗಿದೆ. ಎಲ್ಲವೂ ಸುಟ್ಟು ಬೂದಿಯಾಗಿದೆ ಎಂದು ಹೇಳಿದ್ದಾರೆ.