Hindu Killed in Beef Meat Issue : ಗೋಮಾಂಸ ಬೇಯಿಸುವುದನ್ನು ವಿರೋಧಿಸಿದ ಹಿಂದೂ ವೃದ್ಧ; ಮುಸ್ಲಿಂ ಕುಟುಂಬದಿಂದ ಕೊಲೆ !

  • ಬರೇಲಿ (ಉತ್ತರ ಪ್ರದೇಶ) ಇಲ್ಲಿನ ಘಟನೆ

  • ಮೃತ ಹಿಂದೂ ವೃದ್ಧ ಮುಸಲ್ಮಾನರ ದೌರ್ಜನ್ಯದಿಂದ ಕಾಶ್ಮೀರದಿಂದ ಸ್ಥಳಾಂತರಗೊಂಡಿದ್ದರು

ಹರಬಂಸ ಲಾಲ್

ಬರೇಲಿ (ಉತ್ತರ ಪ್ರದೇಶ) – ಗೋಮಾಂಸ ಬೇಯಿಸುವಾಗ ಬರುವ ವಾಸನೆಯಿಂದ ತೊಂದರೆ ಅನುಭವಿಸುತ್ತಿದ್ದ 79 ವರ್ಷದ ಹರಬಂಸ ಲಾಲ್ ಇವರು ವಿರೋಧ ವ್ಯಕ್ತಪಡಿಸಿದರು. ಆದ್ದರಿಂದ ಪಕ್ಕದ ಮುಸ್ಲಿಂ ಕುಟುಂಬವು ಅವರನ್ನು ಥಳಿಸಿದ್ದರಿಂದ ಅವರು ಸಾವನ್ನಪ್ಪಿದ ಘಟನೆ ಇಲ್ಲಿನ ನೀಲಕಂಠ ಕಾಲೋನಿಯಲ್ಲಿ ನಡೆದಿದೆ. ವಿಶೇಷವೆಂದರೆ ಹರಬನ್ಸ ಲಾಲ್ ಇವರು ಕಾಶ್ಮೀರಿ ಹಿಂದೂ ಆಗಿದ್ದು, ಅವನು ಅಲ್ಲಿ ನಡೆಯುತ್ತಿರುವ ದೌರ್ಜನ್ಯಗಳಿಂದಾಗಿ ಬರೇಲಿಯಲ್ಲಿ ವಾಸಿಸಲು ಬಂದಿದ್ದರು. ಈ ವಿಷಯದ ಬಗ್ಗೆ ಮಾಹಿತಿ ಪಡೆದ ಹಿಂದೂ ಸಂಘಟನೆಗಳು ಹರಬನ್ಸ ಲಾಲ್ ಅವರ ಮೃತದೇಹವನ್ನು ರಸ್ತೆಯಲ್ಲಿ ಇಟ್ಟು ಪ್ರತಿಭಟನೆ ನಡೆಸಿದರು.

ಹರಬನ್ಸ ಲಾಲರಿಗೆ ಗೋಮಾಂಸದ ವಾಸನೆ ಇಷ್ಟವಾಗದ ಕಾರಣ ಅವರು ತಮ್ಮ ಮನೆಯಲ್ಲಿ ಫೈಬರ್ ಶೀಟ್‌ಗಳನ್ನು ಅಳವಡಿಸುತ್ತಿದ್ದರು. ಇದರಿಂದ ಪಕ್ಕದ ಮನೆಯಲ್ಲಿ ವಾಸಿಸುತ್ತಿದ್ದ ಸಗೀರ ಅಹ್ಮದ ಅವರೊಂದಿಗೆ ವಾಗ್ವಾದ ಮಾಡಿದನು ಮತ್ತು ನಂತರ ಸಗೀರ, ಅವನ ಮಗ ಇಮ್ರಾನ ಮತ್ತು ಅವನ ಹೆಂಡತಿ ಕೂಡಿಕೊಂಡು ಹರಬನ್ಸ ಅವರನ್ನು ಥಳಿಸಿದರು. ಗಾಯಗೊಂಡ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತು, ಅಲ್ಲಿ ವೈದ್ಯರು ಅವರು ಮೃತಪಟ್ಟಿದ್ದಾರೆ ಎಂದು ಹೇಳಿದರು. ಈ ಪ್ರಕರಣದಲ್ಲಿ ಪೊಲೀಸರು ಅಪರಾಧ ದಾಖಲಿಸಿಕೊಂಡಿದ್ದು, ಮುಸ್ಲಿಂ ಕುಟುಂಬ ಪರಾರಿಯಾಗಿದೆ.

ಸಂಕೀರ್ಣದಲ್ಲಿರುವ 32 ಮನೆಗಳಲ್ಲಿ ಕೇವಲ 1 ಮನೆ ಮಾತ್ರ ಮುಸಲ್ಮಾನರದ್ದು

ಒಂದೇ ಮನೆ ಇರುವಾಗ ಇಷ್ಟು ತೊಂದರೆಯಾಗುತ್ತಿದ್ದರೆ ಹತ್ತು ಮನೆ ಆದಾಗ ಹಿಂದೂಗಳು ಪಲಾಯನ ಮಾಡಬೇಕಾದ ಪರಿಸ್ಥಿತಿ ಬರುತ್ತದೆ. ಇದನ್ನು ಹಿಂದೂಗಳಿಗೆ ಯಾವಾಗ ತಿಳಿಯುತ್ತದೆ ? ಹರಬನ್ಸ ಅವರ ಮಗ ಹೇಮಂತ ಲಾಲ್ ಅವರು ಮಾತನಾಡುತ್ತಾ, ಸಗೀರ ಮನೆಯಲ್ಲಿ ಪ್ರತಿದಿನ ಮಾಂಸ ಬೇಯಿಸಲಾಗುತ್ತಿತ್ತು ಮತ್ತು ನನ್ನ ತಂದೆಗೆ ಇದರಿಂದ ಸಮಸ್ಯೆ ಇತ್ತು ಎಂದು ಹೇಳಿದರು. ಸಗೀರ ನಿರಾಕರಿಸಿದ್ದರೂ, ಅವರ ಮಾತನ್ನು ಕೇಳದಿದ್ದಾಗ, ತಂದೆ ಫೈಬರ್ ಶೀಟ್‌ಗಳನ್ನು ಅಳವಡಿಸಲು ನಿರ್ಧರಿಸಿದರು; ಆದರೆ ಸಗೀರ ಅದಕ್ಕೂ ಆಕ್ಷೇಪ ವ್ಯಕ್ತಪಡಿಸಿದನು ಮತ್ತು ತಂದೆಯವರನ್ನು ಥಳಿಸಿದನು. ಇಡೀ ಸಂಕೀರ್ಣದಲ್ಲಿ 32 ಹಿಂದೂ ಮನೆಗಳಿವೆ, ಆದರೆ ಕೇವಲ ಒಂದು ಮನೆ ಮಾತ್ರ ಮುಸ್ಲಿಮರಿಗೆ ಸೇರಿದ್ದು, ಅದು ಸಗೀರ ಮನೆ ಆಗಿತ್ತು. ಬೇರೆ ಯಾವುದೇ ಕುಟುಂಬವು ಜಗಳವಾಡಲು ಹೋಗುತ್ತಿರಲಿಲ್ಲ; ಸಗೀರ ಅಹ್ಮದ ನಿರಂತರವಾಗಿ ವಿವಾದಗಳನ್ನು ಸೃಷ್ಟಿಸುತ್ತಿದ್ದನು ಎಂದು ಹೇಳಿದರು.

ಸಂಪಾದಕೀಯ ನಿಲುವು

  • ಕಾಶ್ಮೀರ ಮಾತ್ರವಲ್ಲ, ಬರೇಲಿ ಮತ್ತು ದೇಶದ ಇತರ ಸ್ಥಳಗಳು ಸಹ ಹಿಂದೂಗಳಿಗೆ ಅಸುರಕ್ಷಿತವಾಗಿವೆ, ಮತ್ತು ಈಗ ಹಿಂದೂಗಳು ಎಲ್ಲಿಗೆ ಪಲಾಯನ ಮಾಡಬೇಕು? ಈ ಪರಿಸ್ಥಿತಿ ಹಿಂದೂಗಳಿಗೆ ನಾಚಿಕೆಗೇಡಿನ ಸಂಗತಿ !
  • ಹಿಂದೂಗಳು ತಪ್ಪಾಗಿ ಒಬ್ಬ ಮುಸಲ್ಮಾನ ಸಾವನ್ನಪ್ಪಿದ್ದರೆ, ದೇಶದಲ್ಲಿನ ತಥಾಕಥಿತ ಜಾತ್ಯತೀತರು, ಪ್ರಗತಿ(ಅಧೋ)ಪರರು ಮತ್ತು ಸರ್ವಧರ್ಮ ಸಮಭಾವವನ್ನು ಉತ್ತೇಜಿಸುವವರು ದೇಶಾದ್ಯಂತ ಆಕಾಶ-ಪಾತಾಳ ಒಟ್ಟು ಮಾಡಿರುತ್ತಿದ್ದರು; ಆದರೆ ಈಗ ಅವರು ಶಾಂತವಾಗಿದ್ದಾರೆ !