
ಪ್ರಯಾಗರಾಜ್, ಜನವರಿ 19 (ಸುದ್ದಿ.) – ಶ್ರೀರಾಮ ಸೇನೆಯ ಸಂಸ್ಥಾಪಕ-ಅಧ್ಯಕ್ಷರಾದ ಶ್ರೀ. ಪ್ರಮೋದ ಮುತಾಲಿಕ್ ಅವರು ಇಲ್ಲಿನ ಸೆಕ್ಟರ್ 9, ಗಂಗೇಶ್ವರ್ ಕೈಲಾಸಪುರಿ ಚೌಕ, ಕೈಲಾಸ ದ್ವಾರದಲ್ಲಿ ಸ್ಥಾಪಿಸಲಾದ ‘ಸನಾತನ ಸಂಸ್ಕೃತಿ ಮತ್ತು ಗ್ರಂಥ ಪ್ರದರ್ಶನ’ಕ್ಕೆ ಭೇಟಿ ನೀಡಿದರು. ಈ ವೇಳೆ ಸನಾತನ ಸಂಸ್ಥೆಯ ಸಾಧಕರು ಅವರಿಗೆ ಪ್ರದರ್ಶನದಲ್ಲಿ ಹಾಕಿರುವ ಫಲಕಗಳ ಕುರಿತು ಮಾಹಿತಿ ನೀಡಿದರು. ಈ ಪ್ರದರ್ಶನದಲ್ಲಿ ತೀರ್ಥಕ್ಷೇತ್ರಗಳ ಬಗ್ಗೆ ಹಾಕಿರುವ ಫಲಕಗಳ ಬಗ್ಗೆ ಮುತಾಲಿಕ್ ಅವರು ಜಿಜ್ಞಾಸೆಯಿಂದ ತಿಳಿದುಕೊಂಡರು.