Kashmir Genocide British Parliament : ಕಾಶ್ಮೀರಿ ಹಿಂದೂಗಳಿಗೆ ನ್ಯಾಯ ಒದಗಿಸಲು ಬ್ರಿಟಿಷ್ ಸಂಸತ್ತಿನಲ್ಲಿ ಪ್ರಸ್ತಾವನೆ ಮಂಡನೆ

ಸಂಸದ ಬಾಬ ಬ್ಲಾಕಮನ್

ಲಂಡನ (ಬ್ರಿಟನ) – ಕಾಶ್ಮೀರ ಕಣಿವೆಯಲ್ಲಿ ಕಾಶ್ಮೀರಿ ಹಿಂದೂಗಳ ಹತ್ಯಾಕಾಂಡ ನಡೆದು 35 ವರ್ಷಗಳಾದ ನಿಮಿತ್ತ ಬ್ರಿಟಿಷ್ ಸಂಸತ್ತಿನಲ್ಲಿ ಒಂದು ಠರಾವನ್ನು ಮಂಡಿಸಲಾಯಿತು. ಇದರಲ್ಲಿ, ಕಾಶ್ಮೀರಿ ಹಿಂದೂಗಳ ಹಕ್ಕುಗಳ ರಕ್ಷಣೆ ಮತ್ತು ಅವರಿಗೆ ನ್ಯಾಯವನ್ನು ಒದಗಿಸುವ ಅಂಶಗಳನ್ನು ಮಂಡಿಸಲಾಯಿತು. ಸಂಸದ ಬಾಬ ಬ್ಲಾಕಮನ್ ಅವರು ಸಂಸತ್ತಿನ ಹೌಸ್ ಆಫ್ ಕಾಮನ್ಸ ನಲ್ಲಿ ಅವರು ‘ಅರ್ಲಿ ಡೇ ಮೋಶನ’ವನ್ನು ಮಂಡಿಸಿದರು. ಕಾಶ್ಮೀರಿ ಹಿಂದೂಗಳ ನೋವು ಮತ್ತು ಹೋರಾಟಕ್ಕೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮನ್ನಣೆ ಸಿಗಬೇಕೆಂದು, ಈ ಪ್ರಸ್ತಾವನೆಯನ್ನು ಮಂಡಿಸಲಾಗಿತ್ತು. ಸಂಸದ ಬಾಬ ಬ್ಲಾಕಮನ್ ಇದರ ಬಗ್ಗೆ ಮುಂದಿನಂತೆ ಹೇಳಿದರು, ಕಾಶ್ಮೀರಿ ಹಿಂದೂಗಳ ಮೇಲೆ ಜನವರಿ 1990 ರಲ್ಲಾದ ದಾಳಿಗೆ 35 ವರ್ಷಗಳು ಪೂರ್ಣಗೊಳ್ಳುತ್ತಿದೆ ಮತ್ತು ಈ ಸದನ ತೀವ್ರ ದುಃಖ ಮತ್ತು ನಿರಾಶೆಯೊಂದಿಗೆ ಅದನ್ನು ಆಚರಿಸುತ್ತಿದೆ. ಈ ಹಿಂಸಾಚಾರದಲ್ಲಿ ಸಾವನ್ನಪ್ಪಿದವರ ಕುಟುಂಬಗಳಿಗೆ ನಾವು ನಮ್ಮ ಅಂತರಂಗದಿಂದ ಸಂತಾಪಗಳನ್ನು ವ್ಯಕ್ತಪಡಿಸುತ್ತೇವೆ .

ಠರಾವಿನಲ್ಲಿ ಏನಿದೆ?

ಈ ಠರಾವಿನಲ್ಲಿ ಮುಂದಿನ ಅಂಶಗಳಿದ್ದವು ಹಿಂಸಾಚಾರದ ನಂತರ ಕಾಶ್ಮೀರಿ ಹಿಂದೂಗಳು ಸ್ಥಳಾಂತರ ಮತ್ತು ಕಷ್ಟಗಳನ್ನು ಅನುಭವಿಸಬೇಕಾಯಿತು; ಆದರೆ ಅವರಿಗೆ ಇದುವರೆಗೂ ನ್ಯಾಯ ಸಿಕ್ಕಿಲ್ಲ. ಕಾಶ್ಮೀರಿ ಹಿಂದೂಗಳನ್ನು ಗುರಿಯಾಗಿಸಿ ನಡೆದ ಭಯೋತ್ಪಾದಕ ದಾಳಿಗಳನ್ನು ಪ್ರಾಯೋಜಿಸಿದವರನ್ನು ನಾವು ಬಲವಾಗಿ ಖಂಡಿಸುತ್ತೇವೆ. ಜಮ್ಮು ಮತ್ತು ಕಾಶ್ಮೀರದಲ್ಲಿ ನಿರಂತರ ಆಗುತ್ತಿರುವ ಹಿಂದೂಗಳ ಹತ್ಯೆಗಳನ್ನು ನಾವು ಖಂಡಿಸುತ್ತೇವೆ. ಈ ಠರಾವು ಅಂತಾರಾಷ್ಟ್ರೀಯ ಸಮುದಾಯಕ್ಕೆ ಕಾಶ್ಮೀರಿ ಹಿಂದೂಗಳ ನೋವು ಮತ್ತು ಅವರ ಹಕ್ಕುಗಳ ಬಗ್ಗೆ ಅರಿವು ಮೂಡಿಸುವಲ್ಲಿ ಒಂದು ಪ್ರಮುಖ ಹೆಜ್ಜೆಯಾಗಿದೆ.

ಜನವರಿ 19 ‘ಮಹಾವಿನಾಶ ದಿವಸ’!

ಪ್ರಪಂಚದಾದ್ಯಂತದ ಕಾಶ್ಮೀರಿ ಹಿಂದೂಗಳು ಜನವರಿ 19 ಅನ್ನು ‘ಮಹಾವಿನಾಶ ದಿವಸ’ ಎಂದು ಆಚರಿಸುತ್ತಾರೆ. ಇದೇ ದಿನ, ಪಾಕಿಸ್ತಾನ ಪ್ರಾಯೋಜಿತ ಜಿಹಾದಿ ಭಯೋತ್ಪಾದಕರು ಕಾಶ್ಮೀರ ಕಣಿವೆಯಲ್ಲಿ ಕಾಶ್ಮೀರಿ ಹಿಂದೂಗಳ ಮೇಲೆ ದಾಳಿ ಮಾಡಿದ್ದರು. “ಹಿಂದೂಗಳು ತಮ್ಮ ಆಸ್ತಿ ಮತ್ತು ಮಹಿಳೆಯರನ್ನು ಬಿಟ್ಟು ಹೋಗಬೇಕು” ಎಂದು ಮಸೀದಿಗಳ ಮೇಲಿನ ಧ್ವನಿವರ್ಧಕಗಳಿಂದ ಬೆದರಿಕೆಯನ್ನು ಹಾಕಲಾಗಿತ್ತು. ಪರಿಣಾಮವಾಗಿ, ನಾಲ್ಕೂವರೆ ಲಕ್ಷ ಹಿಂದೂಗಳು ಪಲಾಯನ ಮಾಡಬೇಕಾಯಿತು.

ಸಂಪಾದಕೀಯ ನಿಲುವು

ಭಾರತದಿಂದ ಇನ್ನೂ ಕಾಶ್ಮೀರಿ ಹಿಂದೂಗಳಿಗೆ ನ್ಯಾಯ ಸಿಕ್ಕಿಲ್ಲ. ಕಾಶ್ಮೀರಿ ಹಿಂದೂಗಳ ಮೇಲೆ ನಡೆದ ದೌರ್ಜನ್ಯಗಳ ವಿರುದ್ಧ ಒಂದೇ ಒಂದು ಪ್ರಕರಣ ದಾಖಲಾಗಿಲ್ಲ ಮತ್ತು 35 ವರ್ಷಗಳಿಂದ ಯಾರ ವಿರುದ್ಧವೂ ಕ್ರಮ ಕೈಗೊಳ್ಳದಿರುವುದು ನಾಚಿಕೆಗೇಡಿನ ಸಂಗತಿ!