Advocates Compliant Against HC Judge : ‘ನ್ಯಾಯಮೂರ್ತಿ ಶೇಖರ್ ಯಾದವ್ ಇವರ ವಿರುದ್ಧ ಪ್ರಕರಣ ದಾಖಲಿಸಲು ಆದೇಶ ನೀಡಬೇಕಂತೆ!’

ಸವೋಚ್ಚ ನ್ಯಾಯಾಲಯದ 13 ವಕೀಲರಿಂದ ಮುಖ್ಯ ನ್ಯಾಯಮೂರ್ತಿಗೆ ಪತ್ರದ ಮೂಲಕ ಮನವಿ

ಪ್ರಯಾಗರಾಜ್ (ಉತ್ತರ ಪ್ರದೇಶ) – ಕಳೆದ ವರ್ಷ ಅಲಹಾಬಾದ್ ಹೈಕೋರ್ಟ್ ನ ನ್ಯಾಯಮೂರ್ತಿ ಶೇಖರ್ ಯಾದವ್ ಅವರು ಮುಸಲ್ಮಾನರ ವಿರುದ್ಧ ನೀಡಿದ ಹೇಳಿಕೆಗಳ ವಿರುದ್ಧ ಸುಪ್ರೀಂ ಕೋರ್ಟ್‌ನ 13 ಹಿರಿಯ ವಕೀಲರು ಮುಖ್ಯ ನ್ಯಾಯಮೂರ್ತಿ ಸಂಜೀವ್ ಖನ್ನಾ ಅವರಿಗೆ ಪತ್ರ ಬರೆದಿದ್ದಾರೆ. ಇದರಲ್ಲಿ ನ್ಯಾಯಮೂರ್ತಿ ಶೇಖರ್ ಯಾದವ್ ವಿರುದ್ಧ ಪ್ರಕರಣ ದಾಖಲಿಸಲು ಆದೇಶ ನೀಡುವಂತೆ ಮನವಿ ಮಾಡಲಾಗಿದೆ. ಡಿಸೆಂಬರ್ 8, 2024 ರಂದು, ವಿಶ್ವ ಹಿಂದೂ ಪರಿಷತ್ತಿನ ಸಮಾನ ನಾಗರಿಕ ಕಾನೂನಿನ ಕಾರ್ಯಕ್ರಮದಲ್ಲಿ ನ್ಯಾಯಮೂರ್ತಿ ಯಾದವ್ ಅವರು ಮಾತನಾಡಿ, ‘ಭಾರತದಲ್ಲಿ ವಾಸಿಸುವ ಬಹುಸಂಖ್ಯಾತ ಜನರ ಪ್ರಕಾರ ದೇಶವು ನಡೆಯುತ್ತದೆ, ಕಾನೂನು ಈ ಬಹುಮತದ ಬಲದ ಮೇಲೆ ನಡೆಯುತ್ತದೆ’, ಎಂದು ಹೇಳಿಕೆ ನೀಡಿದ್ದರು.

ಸಂಪಾದಕೀಯ ನಿಲುವು

ಭಾರತದಲ್ಲಿ ಸತ್ಯವನ್ನು ಹೇಳುವುದು ಅಪರಾಧವಾಗಿದೆ ಮತ್ತು ಅದರಲ್ಲಿ ವಕೀಲರೂ ಸಹಭಾಗಿಯಾಗಿದ್ದಾರೆ, ಇದು ಇದರಿಂದ ಗಮನಕ್ಕೆ ಬರುತ್ತದೆ !