ಕಾಮಕೋಟಿಯವರನ್ನು ಟೀಕಿಸಿದ ಕಾಂಗ್ರೆಸ್ ಸಂಸದ ಕಾರ್ತಿ ಚಿದಂಬರಂ
(ಐಐಟಿ ಎಂದರೆ ಇಂಡಿಯನ್ ಇನ್ಸ್ ಟಿಟ್ಯೂಟ್ ಆಫ್ ಟೆಕ್ನಾಲಜಿ – ಭಾರತೀಯ ತಂತ್ರಜ್ಞಾನ ಸಂಸ್ಥೆ)
ಚೆನ್ನೈ (ತಮಿಳುನಾಡು) – ‘ಐ.ಐ.ಟಿ.’ ಮದ್ರಾಸ ನಿರ್ದೇಶಕ ವಿ. ಕಾಮಕೋಟಿಯವರ ಗೋಮೂತ್ರದ ಔಷಧೀಯ ಗುಣಗಳ ಕುರಿತಾದ ಹೇಳಿಕೆಯ ವೀಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿದೆ. ಇದರಲ್ಲಿ ಕಾಮಕೋಟಿಯವರು ಗೋಮೂತ್ರದಿಂದ ಆರೋಗ್ಯಕ್ಕಾಗುವ ಲಾಭಗಳ ಬಗ್ಗೆ ಹೇಳುತ್ತಿದ್ದಾರೆ. ಅವರ ಹೇಳಿಕೆಗೆ ಆಕ್ಷೇಪ ವ್ಯಕ್ತಪಡಿಸಿದ ಕಾಂಗ್ರೆಸ್ ಸಂಸದ ಕಾರ್ತಿ ಚಿದಂಬರಂ, “ಅವರು ನಕಲಿ ವಿಜ್ಞಾನವನ್ನು ಪ್ರಚಾರ ಮಾಡುತ್ತಿದ್ದಾರೆ” ಎಂದು ಹೇಳಿದ್ದಾರೆ
1. ವಿ. ಕಾಮಕೋಟಿ ಅವರು ‘ಪೊಂಗಲ್’ ಹಬ್ಬದ ಸಂದರ್ಭದಲ್ಲಿ ನಡೆದ ಗೋ ಸಂರಕ್ಷಣಾ ಕಾರ್ಯಾಗಾರದಲ್ಲಿ ಭಾಗವಹಿಸಿದ್ದರು. ಈ ಕಾರ್ಯಕ್ರಮವನ್ನು ಜನವರಿ 15 ರಂದು ಆಯೋಜಿಸಲಾಗಿತ್ತು. ಈ ಸಂದರ್ಭದಲ್ಲಿ ಅವರು ಗೋಮೂತ್ರದ ಔಷಧೀಯ ಗುಣಗಳ ಬಗ್ಗೆ ಮುಂದಿನಂತೆ ಹೇಳಿದರು, ಗೋಮೂತ್ರವು ವೈರಸ್ ವಿರೋಧಿ ಮತ್ತು ಶಿಲೀಂಧ್ರ ವಿರೋಧಿ ಗುಣಗಳನ್ನು ಹೊಂದಿದೆ ಇದಲ್ಲದೆ, ಜೀರ್ಣಾಂಗ ವ್ಯವಸ್ಥೆಯನ್ನು ಆರೋಗ್ಯಕರವಾಗಿಡಲು ಮತ್ತು `ಇರಿಟೇಬಲ ಬೊವೆಲ ಸಿಂಡ್ರೋಮ’ (ಜಠರಕ್ಕೆ ಸಂಬಂಧಿಸಿದ ಕಾಯಿಲೆ) ನಂತಹ ಜೀರ್ಣಕ್ರಿಯೆಗೆ ಸಂಬಂಧಿಸಿದ ಸಮಸ್ಯೆಗಳಿಗೆ ಚಿಕಿತ್ಸೆ ನೀಡಲು ಇದು ಉಪಯುಕ್ತವಾಗಿದೆ ಮತ್ತು ಸಾವಯವ ಕೃಷಿಗೆ ಗೋಮೂತ್ರವು ತುಂಬಾ ಲಾಭದಾಯಕವಾಗಿದೆ.
2. ಕಾರ್ತಿ ಚಿದಂಬರಂ ಅವರು `ಎಕ್ಸ್’ ನಲ್ಲಿ ಪೋಸ್ಟ್ ಮಾಡಿ, “ಐ.ಐ.ಟಿ” ಮದ್ರಾಸ್ ನಿರ್ದೇಶಕರು ನಕಲಿ ವಿಜ್ಞಾನವನ್ನು ಪ್ರಚಾರ ಮಾಡುವುದು ಅತ್ಯಂತ ನಾಚಿಕೆಗೇಡಿನ ಸಂಗತಿ ಮತ್ತು ಇದು ಐಐಟಿಯಂತಹ ಪ್ರತಿಷ್ಠಿತ ಸಂಸ್ಥೆಗೆ ಯೋಗ್ಯವಲ್ಲ ಎಂದು ಹೇಳಿದ್ದಾರೆ.
ಸಂಪಾದಕೀಯ ನಿಲುವುಹಿಂದೂ ಧರ್ಮಕ್ಕನುಸಾರ ಗೋಮೂತ್ರವನ್ನು ಪವಿತ್ರವೆಂದು ಪರಿಗಣಿಸಲಾಗುತ್ತದೆ ಮತ್ತು ಅನಾದಿ ಕಾಲದಿಂದಲೂ ಇದನ್ನು ಸೇವಿಸಲಾಗುತ್ತಿದೆ. ವಿಜ್ಞಾನಕ್ಕೆ ಈಗ ಅದರ ಮಹತ್ವದ ಅರಿವಾಗುತ್ತಿರುವುದು ವಿಜ್ಞಾನದ ಮಿತಿಯನ್ನು ತೋರಿಸುತ್ತದೆ; ಆದರೆ, ಅದನ್ನೂ ಆಕ್ಷೇಪಿಸುವ ಕಾಂಗ್ರೆಸ್ಸಿಗರ ಹಿಂದೂ ಧರ್ಮ ವಿರೋಧಿ ಮನಸ್ಥಿತಿಯೇ ಮತ್ತೊಮ್ಮೆ ಇದರಿಂದ ಗಮನಕ್ಕೆ ಬರುತ್ತದೆ! |