
ಪ್ರಯಾಗರಾಜ, ಜನವರಿ 19 (ಸುದ್ದಿ) – ಮಹಾಕುಂಭ ಕ್ಷೇತ್ರದ ಸೆಕ್ಟರ್ 19 ರಲ್ಲಿ ರೈಲ್ವೆ ಸೇತುವೆಯ ಕೆಳಗಿರುವ ಟೆಂಟ್‌ಗಳಲ್ಲಿ ಭಾರಿ ಬೆಂಕಿ ಕಾಣಿಸಿಕೊಂಡಿದೆ. ಇದರಲ್ಲಿ 20-25 ಟೆಂಟ್‌ಗಳು ಸುಟ್ಟುಹೋದವು ಮತ್ತು ಟೆಂಟ್‌ಗಳಲ್ಲಿ ಇರಿಸಲಾಗಿದ್ದ ಹಲವಾರು ಸಿಲಿಂಡರ್‍ಗಳು ಬೆಂಕಿಯಲ್ಲಿ ಒಂದರ ನಂತರ ಒಂದರಂತೆ ಸ್ಫೋಟಗೊಂಡವು. ಅಗ್ನಿಶಾಮಕ ದಳದ ಸಿಬ್ಬಂದಿ ನೀರು ಸುರಿದು ಬೆಂಕಿಯನ್ನು ನಂದಿಸಿದರು. ಈ ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಈ ಬೆಂಕಿಯನ್ನು ನೋಡಲು ಭಕ್ತರು ನೆರೆದಿದ್ದರು. ಟೆಂಟ್ ಬೆಂಕಿ ಹೇಗೆ ತಗಲಿತು ಇನ್ನೂ ತಿಳಿದುಬಂದಿಲ್ಲ.