ಮುರಾದಾಬಾದ – ಉತ್ತರಪ್ರದೇಶದ ಮುರಾದಾಬಾದನಲ್ಲಿ 16 ವರ್ಷದ ಹಿಂದೂ ಬಾಲಕಿಯೊಬ್ಬಳನ್ನು ಅಪಹರಿಸಿ ಅವಳನ್ನು ಕಾರು ಚಲಾಯಿಸುತ್ತಿರುವಂತೆ ಬಲಾತ್ಕಾರ ಮಾಡಲಾಗಿದೆ. ಆರೋಪಿಯು ಅಪ್ರಾಪ್ತ ಬಾಲಕಿಯ ಮೇಲೆ ನಿರಂತರವಾಗಿ 2 ಗಂಟೆಗಳ ಕಾಲ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ನಂತರ, ಅವಳನ್ನು ಪಕ್ಕದ ಪಾನುವಾಲಾ ಗ್ರಾಮದ ಹೊರಗಿರುವ ಹೊಲದಲ್ಲಿ ಎಸೆದು ಪರಾರಿಯಾಗಿದ್ದಾನೆ. ಸಂತ್ರಸ್ತೆಯ ಕುಟುಂಬ ಪೊಲೀಸರಿಗೆ ದೂರು ನೀಡಿದೆ. ಈ ದೂರಿನ ಆಧಾರದಲ್ಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ರಶೀದ ಎಂಬ ಆರೋಪಿಯನ್ನು ಬಂಧಿಸಿದ್ದಾರೆ. ಸಂತ್ರಸ್ತ ಬಾಲಕಿಯನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದೆ. ಆರೋಪಿ ರಶೀದನನ್ನು ಪೊಲೀಸ್ ಕಸ್ಟಡಿಗೆ ಒಪ್ಪಿಸಲಾಗಿದೆ. ಈ ಪ್ರಕರಣದ ಕುರಿತು ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ. (ಹಿಂದೂ ನಾಯಕ ಯೋಗಿ ಇವರ ಆಡಳಿತವಿರುವ ಉತ್ತರಪ್ರದೇಶದಲ್ಲಿ, ಮುಸಲ್ಮಾನ ಯುವಕರು ಹಿಂದೂ ಹುಡುಗಿಯರನ್ನು ಅಪಹರಿಸಿ ಬಲಾತ್ಕರಿಸುವ ಧೈರ್ಯ ತೋರುತ್ತಾರೆ. ಇದರಿಂದ ಕಾಮುಕ ಜಿಹಾದಿಗಳಲ್ಲಿ ಭಯ ಮೂಡಿಸಲು ಆಡಳಿತದಿಂದ ಸಾಕಷ್ಟು ಪ್ರಯತ್ನಗಳಾಗುತ್ತಿಲ್ಲವೇ ಎಂಬ ಪ್ರಶ್ನೆ ಸಾಮಾನ್ಯ ಹಿಂದೂಗಳಲ್ಲಿ ಮೂಡಬಹುದು! – ಸಂಪಾದಕರು)
1. ಸಂತ್ರಸ್ತೆಯ ತಂದೆಯುು ಪೊಲೀಸರಿಗೆ ನೀಡಿರುವ ದೂರಿನಲ್ಲಿ ಮುಂದಿನಂತೆ ಹೇಳಿದ್ದಾರೆ. ಜನವರಿ 14 ರಂದು ಬೆಳಿಗ್ಗೆ 10 ಗಂಟೆ ಸುಮಾರಿಗೆ ನನ್ನ ಮಗಳು ಮನೆಯ ಕಸವನ್ನು ಸಂಗ್ರಹಿಸಿ ಗ್ರಾಮದ ಹೊರಗೆ ಎಸೆಯಲು ಹೋಗುತ್ತಿದ್ದಳು. ಅಷ್ಟರಲ್ಲಿ, ದಾರಿಯಲ್ಲಿ ಸ್ಕಾರ್ಪಿಯೋ ಕಾರು ಅವಳ ಬಳಿ ನಿಂತಿತು. ಸ್ಕಾರ್ಪಿಯೋದಿಂದ ಇಳಿದ ಯುವಕ ಆಕೆಯನ್ನು ಬಲವಂತವಾಗಿ ಕಾರಿನಲ್ಲಿ ಕೂರಿಸಿ ತನ್ನೊಂದಿಗೆ ಹೊರಗೆ ಕರೆದೊಯ್ದನು ಎಂದು ಹೇಳಿದ್ದಾರೆ.
2. ಆರೋಪಿ ಯುವಕನು ಚಲಿಸುವ ಕಾರಿನಲ್ಲಿ ಸಂತ್ರಸ್ತ ಬಾಲಕಿಯ ಮೇಲೆ ಕ್ರೂರವಾಗಿ ಬಲಾತ್ಕಾರ ಎಸಗಿದ್ದಾನೆ. ಅವಳು ಛಾಯಾಚಿತ್ರಗಳನ್ನು ತೆಗೆದು ವಿಡಿಯೋ ಮಾಡಡಿದ್ದಾನೆ. ಕಾರಿನಲ್ಲಿ ಆರೋಪಿಯ ವಿಸಿಟಿಂಗ ಕಾರ್ಡ್ ಇತ್ತು. ಅದರಿಂದ, ಆರೋಪಿಯ ಹೆಸರು ರಶೀದ ಮತ್ತು ಅವನು ಠಾಕೂರದ್ವಾರದ ನಿವಾಸಿ ಎಂದು ಹುಡುಗಿಗೆ ತಿಳಿಯಿತು.
3. ಪೊಲೀಸ್ ಅಧೀಕ್ಷಕರಾದ ಕುಂವರ ಆಕಾಶ ಅವರು ಮುಂದಿನ ಮಾಹಿತಿ ನೀಡಿದ್ದಾರೆ. ಈ ಪ್ರಕರಣದಲ್ಲಿ ಪ್ರಮುಖ ಆರೋಪಿ ರಶೀದನನ್ನು ಪೊಲೀಸರು ಬಂಧಿಸಿದ್ದಾರೆ. ಆತನನ್ನು ತನಿಖೆ ಮಾಡಲಾಗುತ್ತಿದೆ. ಈ ಘಟನೆಯಲ್ಲಿ ಆತನ ಇತರ ಕೆಲವು ಸಹಚರರು ಕೂಡ ಭಾಗಿಯಾಗಿರುವುದು ಬೆಳಕಿಗೆ ಬಂದಿದೆ. ಪೊಲೀಸರು ಅವರೆಲ್ಲರನ್ನೂ ಬಂಧಿಸಲಿದ್ದಾರೆ.