UP MLA Raja Bhaiya Statement : ನಾವು (ಹಿಂದೂಗಳು) ಆತ್ಮರಕ್ಷಣೆಗಾಗಿ ಸರಕಾರ ಅನುಮೋದಿಸಿದ ಆಯುಧಗಳನ್ನು ಸಂಗ್ರಹಿಸುತ್ತಿಲ್ಲವಾದ್ದರಿಂದ, ಕ್ಷಣಾರ್ಧದಲ್ಲಿ ನಮ್ಮಲ್ಲಿ ಅರ್ಧದಷ್ಟು ಜನರು ನಾಶವಾಗುವರು ! – ರಾಜಾ ಭಯ್ಯಾ

ಉತ್ತರ ಪ್ರದೇಶದ ಶಾಸಕ ರಾಜಾ ಭಯ್ಯಾ ಅವರು ಅಕ್ಬರುದ್ದೀನ್ ಓವೈಸಿ ಅವರ ’15 ನಿಮಿಷಗಳ ಕಾಲ..’ ಹೇಳಿಕೆ ಸರಿ ಎಂದು ಹೇಳುವ ಮೂಲಕ ಹಿಂದೂಗಳ ಕಿವಿ ಹಿಂಡಿದ್ದಾರೆ !

ಉತ್ತರ ಪ್ರದೇಶದ ಶಾಸಕ ರಾಜಾ ಭಯ್ಯಾ

ಪ್ರಯಾಗರಾಜ (ಉತ್ತರ ಪ್ರದೇಶ) – ‘ಒಂದು ವೇಳೆ ಪೊಲೀಸರನ್ನು 15 ನಿಮಿಷಗಳ ಕಾಲ ಪಕ್ಕಕ್ಕೆ ಇರಿಸಿದರೆ, ನಾವು 100 ಕೋಟಿ ಹಿಂದೂಗಳಿಗೆ ತೋರಿಸಿ ಕೊಡುತ್ತೇವೆ’, ಎಂದು ಎ.ಐ.ಎಮ್.ಐ. (ಆಲ್ ಇಂಡಿಯಾ ಮಜ್ಲಿಸ್-ಎ-ಇತ್ತೆಹಾದುಲ್ ಮುಸ್ಲಿಮೀನ್ – ಅಖಿಲ ಭಾರತೀಯ ಮುಸ್ಲಿಂ ಏಕತಾ ಸಂಘ) ಶಾಸಕ ಶಾಸಕ ಅಕ್ಬರುದ್ದೀನ ಓವೈಸಿ ಕೆಲವು ವರ್ಷಗಳ ಹಿಂದೆ ಹೇಳೀಕೆ ನೀಡಿದ್ದರು. ಅದಕ್ಕೆ ಜನಸತ್ತಾ ದಳ ಲೋಕಶಾಹಿ ಪಕ್ಷದ ಅಧ್ಯಕ್ಷ ಉತ್ತರ ಪ್ರದೇಶದ ಶಾಸಕ ರಘುರಾಜ ಪ್ರತಾಪ ಸಿಂಗ ಉರ್ಫ್ ರಾಜಾ ಭಯ್ಯಾ ಈ ಬಗ್ಗೆ ಹೇಳಿಕೆ ನೀಡಿದ್ದಾರೆ. ಅವರು, ಭಾಗ್ಯನಗರದದ ನಾಯಕನ ಹೇಳಿಕೆಯನ್ನು ನಾವು ಗಂಭೀರವಾಗಿ ಪರಿಗಣಿಸಿದರೆ, ಅವರು ಹೇಳಿದ್ದು ಬಹಳಷ್ಟು ಸರಿಯಾಗಿದೆ. ಹಾಗೆ ಸಂಭವಿಸಿದಲ್ಲಿ, ಬಹುತೇಕ ಅರ್ಧದಷ್ಟು ಹಿಂದೂಗಳು ಕ್ಷಣಾರ್ಧದಲ್ಲಿ ನಾಶವಾಗುತ್ತಾರೆ. ಕೊನೆಯಲ್ಲಿ ನಿಮ್ಮ ಬಳಿ ಏನಿದೆ? ನಾವು ನಮ್ಮ ಜನಸಂಖ್ಯೆಯನ್ನು ಹೆಚ್ಚಿಸುತ್ತಿಲ್ಲ, ಅಥವಾ ಆತ್ಮರಕ್ಷಣೆಗಾಗಿ ಸರಕಾರ ಅನುಮೋದಿಸಿರುವ ಶಸ್ತ್ರಾಸ್ತ್ರಗಳನ್ನು ಸಂಗ್ರಹಿಸುತ್ತಿಲ್ಲ. ಈ ವಿಷಯದಲ್ಲಿ ಮುಸ್ಲಿಮರು ಹಿಂದೂಗಳಿಗಿಂತ ಮುಂದಿದ್ದಾರೆ.’ ಎಂದು ಅವರು ಹೇಳಿದರು. ರಾಜಾ ಭಯ್ಯಾ ಮಹಾಕುಂಭದಲ್ಲಿ ‘ದಿವ್ಯ ಪ್ರೇಮ ಸೇವಾ ಮಿಷನ್’ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು. ಅವರು ಹಿಂದೂ ಸಮಾಜಕ್ಕೆ ‘ಸ್ವಸಂರಕ್ಷಣೆ, ಆ ಉದ್ದೇಶಕ್ಕಾಗಿ ಸರಕಾರ ಅನುಮೋದಿತ ಶಸ್ತ್ರಾಸ್ತ್ರಗಳನ್ನು ಹೊಂದಿರುವುದು ಮತ್ತು ಸಾಮಾಜಿಕ ಸುಧಾರಣೆ’ಯತ್ತ ಗಮನಹರಿಸಬೇಕೆಂದು ಅವರು ಮನವಿ ಮಾಡಿದರು.

ರಾಜಾ ಭಯ್ಯಾ ಹೇಳಿದರು,

ಧರ್ಮ ಮತ್ತು ಸಂಸ್ಕೃತಿಯನ್ನು ರಕ್ಷಿಸಲು ಶಸ್ತ್ರಾಸ್ತ್ರಗಳನ್ನು ಹೊಂದುವುದು ನಮ್ಮ ಸಂಪ್ರದಾಯ !

ಕೇವಲ ಧರ್ಮ ಗ್ರಂಥಗಳಿಂದ ಸಂಸ್ಕೃತಿಯನ್ನು ರಕ್ಷಿಸಲು ಸಾಧ್ಯವಿಲ್ಲ, ಶಸ್ತ್ರಾಸ್ತ್ರಗಳನ್ನು ಹೊಂದಿರುವುದು ಸಹ ಅಗತ್ಯ. ನಳಂದ ವಿಶ್ವವಿದ್ಯಾಲಯವನ್ನು ಮುಸ್ಲಿಂ ಆಕ್ರಮಣಕಾರನೊಬ್ಬ ನಾಶಪಡಿಸಿದನು, ಅಲ್ಲಿ ತಿಂಗಳುಗಟ್ಟಲೆ ಗ್ರಂಥಗಳು ಸುಡುತ್ತಿದ್ದವು. ಭಗವಾನ ಶ್ರೀರಾಮ ಮತ್ತು ಛತ್ರಪತಿ ಶಿವಾಜಿ ಮಹಾರಾಜರಂತಹ ವ್ಯಕ್ತಿಗಳ ಆದರ್ಶ ತೆಗೆದುಕೊಳ್ಳಬೇಕು. ಧರ್ಮ ಮತ್ತು ಸಂಸ್ಕೃತಿಯನ್ನು ರಕ್ಷಿಸಲು ಶಸ್ತ್ರಾಸ್ತ್ರಗಳನ್ನು ಹೊಂದುವುದು ನಮ್ಮ ಸಂಪ್ರದಾಯ.

ಹಿಂದೂಗಳು ಆತ್ಮರಕ್ಷಣೆಗಾಗಿ ಸಂಘಟಿತರಾಗಬೇಕಾಗುತ್ತದೆ !

ಪ್ರಸ್ತುತ, ಹಿಂದೂಗಳ ಜನಸಂಖ್ಯೆ ಹೆಚ್ಚುತ್ತಿಲ್ಲ ಮತ್ತು ಶಸ್ತ್ರಾಸ್ತ್ರಗಳ ಸಂಗ್ರಹವೂ ಇಲ್ಲ. ಮೂರ್ತಿ ವಿಸರ್ಜನೆ ಸಮಯದಲ್ಲಿ ದಾಳಿಗಳು ನಡೆಯುತ್ತಿವೆ. ಭಯೋತ್ಪಾದಕ ಚಟುವಟಿಕೆಗಳು ಸಹ ನಡೆಯುತ್ತಿವೆ. ಇದರಿಂದಾಗಿ, ಹಿಂದೂ ಸಮಾಜಕ್ಕೆ ತಮ್ಮನ್ನು ತಾವು ಸಂಘಟಿತರಾಗಬೇಕಾಗಿದೆ ಮತ್ತು ಸ್ವಸಂರಕ್ಷಣೆಗಾಗಿ ಕ್ರಮಗಳನ್ನು ತೆಗೆದುಕೊಳ್ಳಬೇಕಾಗುತ್ತದೆ. ಛತ್ರಪತಿ ಶಿವಾಜಿ ಮಹಾರಾಜರು ಹಿಂದವಿ ಸ್ವರಾಜ್ಯವನ್ನು ಸ್ಥಾಪಿಸುವ ಮೂಲಕ, ಜನರಿಗೆ `ಒಂದು ಸಂಘಟಿತ ಸಮಾಜವು ತನ್ನ ಗುರುತು ಮತ್ತು ಅಸ್ತಿತ್ವವನ್ನು ಹೇಗೆ ಉಳಿಸಿಕೊಳ್ಳಬಹುದು’ ಎನ್ನುವ ಪ್ರೇರಣೆಯನ್ನು ನೀಡಿದರು.

ಮುಸ್ಲಿಮರಿಂದ ಕಲಿಯಿರಿ!

ಮುಸ್ಲಿಮರು ತಮ್ಮ ಧರ್ಮದ ಬಗ್ಗೆ ಹೊಂದಿರುವ ಏಕತೆ ಮತ್ತು ಸಮರ್ಪಣೆಯಿಂದ ಹಿಂದೂಗಳು ಕಲಿಯಬೇಕು. ನಾವು ಕೂಡ ನಮ್ಮ ಧರ್ಮದ ಬಗ್ಗೆ ಇದೇ ರೀತಿಯ ಶ್ರದ್ಧೆ ಮತ್ತು ಸಮರ್ಪಣೆಯನ್ನು ತೋರಿಸುವ ಆವಶ್ಯಕತೆಯಿದೆ.

ಸೈನ್ಯ ಮತ್ತು ಸಶಸ್ತ್ರ ಪಡೆಗಳ ಅಗತ್ಯ

ದೇಶದ ಭದ್ರತೆಯ ಆಧಾರ ಭಾರತೀಯ ಸೇನೆ ಮತ್ತು ಸಶಸ್ತ್ರ ಪಡೆಗಳಾಗಿವೆ. ಇಸ್ರೇಲ್‌ನಂತಹ ಸಣ್ಣ ದೇಶವು ಸಶಸ್ತ್ರ ಪಡೆಯ ಮೂಲಕ ತನ್ನ ಅಸ್ತಿತ್ವವನ್ನು ಉಳಿಸಿಕೊಂಡಿದೆ.

ಸಂಪಾದಕೀಯ ನಿಲುವು

ಹಿಂದೂಗಳು ಸ್ವಸಂರಕ್ಷಣೆಗಾಗಿ ಸರಕಾರದಿಂದ ಅನುಮೋದಿತ ಶಸ್ತ್ರಾಸ್ತ್ರಗಳನ್ನು ಇಟ್ಟುಕೊಳ್ಳುವ ಹಕ್ಕನ್ನು ಹೊಂದಿದ್ದರೂ, ಅಂತಹ ಸ್ಥಿತಿ ಬರಬಾರದೆಂದು ಸರಕಾರಗಳು ಕಾರ್ಯಪ್ರವೃತ್ತರಾಗುವ ಆವಶ್ಯಕತೆಯಿದೆ. ಉತ್ತರ ಪ್ರದೇಶದಲ್ಲಿ ಯೋಗಿ ಆದಿತ್ಯನಾಥ ಸರಕಾರ ಈ ರೀತಿ ಪ್ರಯತ್ನಿಸುತ್ತಿದೆ, ಇತರರೂ ಅದೇ ರೀತಿ ಮಾಡಬೇಕು!