ದಸರಾದಂದು ಮಂದಾರದ ಎಲೆಗಳನ್ನು ಕೊಡುವುದರ ಕಾರಣಗಳು

. ಬ್ರಹ್ಮಾಂಡದಲ್ಲಿನ ನಿರ್ಗುಣ ತೇಜೋಲಹರಿಗಳು ಆಕರ್ಷಿತವಾಗಿ ಮಂದಾರದ ಬೇರಿನಲ್ಲಿ ಒಟ್ಟಾಗಿರುತ್ತವೆ. ತೇಜತತ್ತ್ವದ ಅಧಿಷ್ಠಾನ ಲಭಿಸುವುದರಿಂದ ಈ ಲಹರಿಗಳು ಕ್ರಮೇಣವಾಗಿ ಮರದ ಎಲೆಗಳಲ್ಲಿ ಕಾರ್ಯ ನಿರತವಾಗುತ್ತವೆ. ಈ ತೇಜೋಲಹರಿಗಳು ಇಚ್ಛಾ-ಕ್ರಿಯಾ ಶಕ್ತಿಗೆ ಸಂಬಂಧಪಟ್ಟಿರುತ್ತವೆ.

. ಇತರ ವೃಕ್ಷಗಳಿಗೆ ಹೋಲಿಸಿದರೆ ಮಂದಾರದ ಎಲೆಗಳಲ್ಲಿ ಪತ್ರಹರಿತ್ತಿನ ಪ್ರಮಾಣ ಹೆಚ್ಚಿರುತ್ತದೆ. ಈ ಎಲೆಗಳ ಮೇಲೆ ಸೂರ್ಯನ ಕಿರಣಗಳು ಬಿದ್ದಾಗ ಅವುಗಳಲ್ಲಿದ್ದ ತೇಜತತ್ತ್ವ ಕಾರ್ಯನಿರತವಾಗಲು ಪ್ರಾರಂಭವಾಗುತ್ತದೆ. ಈ ಎಲೆಗಳು ಒಣಗಿದರೂ ಬೇರೆ ಮರಗಳ ಎಲೆಗಳ ತುಲನೆಯಲ್ಲಿ ಇದರ ಎಲೆಗಳ ಮೂಲ ಬಣ್ಣ ಬಹಳ ಬದಲಾಗುವುದಿಲ್ಲ.

. ಎಲೆಗಳಿಂದ ಪ್ರಕ್ಷೇಪಿಸುವ ತೇಜೋಲಹರಿಗಳು ವಾತಾವರಣದಲ್ಲಿ ದೀರ್ಘಕಾಲ ಉಳಿಯುತ್ತವೆ.

. ಚಿನ್ನದ ಸಾಂಕೇತಿಕ ರೂಪವೆಂದು ಮಂದಾರದ ಎಲೆಗಳನ್ನು ಉಪಯೋಗಿಸುವುದರ ಕಾರಣ ಹೇಗೆ ಚಿನ್ನದ ಲೋಹದಲ್ಲಿ ತೇಜತತ್ತ್ವದ ಸ್ಪಂದನಗಳು ಕಾರ್ಯನಿರತವಾಗಿರುತ್ತವೆಯೋ, ಹಾಗೆ ಮಂದಾರದ ಎಲೆಗಳ ಲ್ಲಿಯೂ ಅಂಶಾತ್ಮಕ ಸ್ತರದಲ್ಲಿ ತೇಜತತ್ತ್ವದ ಸ್ಪಂದನಗಳು ಕಾರ್ಯನಿರತವಾಗಿರುತ್ತವೆ. ಆದುದರಿಂದ ಇವುಗಳನ್ನು ಚಿನ್ನದ ಸಾಂಕೇತಿಕ ರೂಪವೆಂದು ಉಪಯೋಗಿಸಲಾಗುತ್ತದೆ.

ದಸರಾ ಮತ್ತು ಮಂದಾರ ಎಲೆಗಳು

. ದಸರಾದ ದಿನವು ಮೂರುವರೆ ಮುಹೂರ್ತಗಳ ಪೈಕಿ ಒಂದಾಗಿರುವುದರಿಂದ ಆ ದಿನ ಬ್ರಹ್ಮಾಂಡಮಂಡಲದಿಂದ ದೈವೀ ಸ್ಪಂದನಗಳು ಭೂಮಿಯ ಕಡೆಗೆ ಹೆಚ್ಚಿನ ಪ್ರಮಾಣದಲ್ಲಿ ಆಕರ್ಷಿಸುತ್ತವೆ ಮತ್ತು ಭೂಮಂಡಲದ ಮೇಲೆ ಕಾರ್ಯನಿರತವಾಗಿರುತ್ತವೆ.

. ದಸರಾದಂದು ಮಂದಾರದ ಎಲೆಗಳಲ್ಲಿನ ತೇಜತತ್ತ್ವವು ಹೆಚ್ಚು ಪ್ರಮಾಣದಲ್ಲಿ ಜಾಗೃತವಾಗುವುದರಿಂದ ಆ ದಿನ ಮಂದಾರದ ಎಲೆಗಳನ್ನು ಕೊಡು ವುದಕ್ಕೆ ವಿಶೇಷ ಮಹತ್ವವಿದೆ.

ಇ. ಮಂದಾರದ ಎಲೆಗಳನ್ನು ಕೊಡುವುದರಿಂದ ತ್ಯಾಗ ಮತ್ತು ಪ್ರೀತಿ ಹೆಚ್ಚಾಗುತ್ತದೆ ಮತ್ತು ವಿಜಯದ ದಿನವೆಂದು ಆನಂದೋತ್ಸವವನ್ನು ಆಚರಿಸಲಾಗುತ್ತದೆ: ಪರಸ್ಪರರಿಗೆ ಮಂದಾರದ ಎಲೆಗಳನ್ನು ಕೊಡುವುದರಿಂದ ಇಬ್ಬರಲ್ಲಿನ ತ್ಯಾಗ ಮತ್ತು ಪ್ರೀತಿ ಹೆಚ್ಚಾಗುತ್ತದೆ. ಮಂದಾರದ ಎಲೆಗಳನ್ನು ಪರಸ್ಪರರಿಗೆ ಕೊಡುವು ದೆಂದರೆ ನಮ್ಮಲ್ಲಿನ ಚಿನ್ನದಂತಹ ಅಮೂಲ್ಯ ವಸ್ತುವನ್ನು ಇನ್ನೊಬ್ಬರಿಗೆ ಕೊಟ್ಟಂತೆ ಆಗುತ್ತದೆ. ದಸರಾವು ವಿಜಯದ ದಿನವಾಗಿರುವುದರಿಂದ ಆ ದಿನ ಮಂದಾರದ ಅಮೂಲ್ಯ ಎಲೆಗಳನ್ನು ಪರಸ್ಪರರಿಗೆ ಕೊಟ್ಟು ಆನಂದೋತ್ಸವವನ್ನು ಆಚರಿಸಲಾಗುತ್ತದೆ. ದಸರಾದಂದು ಮಂದಾರದ ಎಲೆಗಳನ್ನು ಕೊಡುವುದು ಸೌಜನ್ಯ, ಸಮೃದ್ಧಿ ಮತ್ತು ಸಂಪನ್ನತೆಯನ್ನು ತೋರಿಸುತ್ತದೆ. – ಕು. ಪ್ರಿಯಾಂಕಾ ಲೋಟಲೀಕರ, ಅಧ್ಯಾತ್ಮ ವಿಶ್ವವಿದ್ಯಾಲಯ, ಗೋವಾ.