
ಪ್ರಯಾಗರಾಜ್, ಜನವರಿ 19 (ಸುದ್ದಿ.) – ಸನಾತನ ಸಂಸ್ಥೆಯು ಧರ್ಮಕ್ಕಾಗಿ ಉತ್ತಮ ಕಾರ್ಯ ಮಾಡುತ್ತಿದೆ ಎಂದು ಬೀಡ್ ಮೂಲದ ಧರ್ಮಗುರು ಪ.ಪೂ. ಶ್ರೀ ಅಮೃತಾಶ್ರಮ ಸ್ವಾಮಿಗಳು ಶ್ಲಾಘಿಸಿದ್ದಾರೆ. ಪ.ಪೂ. ಸ್ವಾಮೀಜಿ ಅವರು ಸೆಕ್ಟರ್ ಸಂಖ್ಯೆ 19 ರ ಮೋರಿ ಮಾರ್ಗದಲ್ಲಿ ಹಾಕಲಾಗಿದ್ದ ಸನಾತನ ಸಂಸ್ಥೆಯ ಭವ್ಯ ಗ್ರಂಥ ಮತ್ತು ಫಲಕ ಪ್ರದರ್ಶನಕ್ಕೆ ಭೇಟಿ ನೀಡಿದರು. ಆ ಸಮಯದಲ್ಲಿ ಅವರು ಮಾತನಾಡುತ್ತಿದ್ದರು.
ಪ.ಪೂ. ಸ್ವಾಮಿಜಿಯವರು ಮಾತು ಮುಂದುವರೆಸಿ, “ಮಹಾಕುಂಭ ಮೇಳದಲ್ಲಿ ಸನಾತನ ಸಂಸ್ಥೆಯ ವತಿಯಿಂದ ಹಾಕಲಾಗಿರುವ ಸನಾತನದ ಗ್ರಂಥ ಪ್ರದರ್ಶನವನ್ನು ನೋಡಲು ಸನಾತನ ಧರ್ಮದವರು ಖಂಡಿತವಾಗಿ ಬರಬೇಕು” ಎಂದು ಹೇಳಿದರು. ಈ ಪ್ರದರ್ಶನದಲ್ಲಿ ಭಾರತೀಯ ಸಂಸ್ಕೃತಿ, ಸಂತರ ಪರಂಪರೆಗಳು ಇತ್ಯಾದಿಗಳ ಬಗ್ಗೆ ಮಾಹಿತಿಯನ್ನು ಒದಗಿಸಲಾಗಿದೆ. ಇದರೊಂದಿಗೆ, ಈ ಪ್ರದರ್ಶನವು ಯುವಕರು, ಮಹಿಳೆಯರು ಮತ್ತು ವಿದ್ಯಾರ್ಥಿಗಳು ಧರ್ಮಾಚರಣೆಯನ್ನು ಹೇಗೆ ಮಾಡಬೇಕು ?, ಎಂಬುದನ್ನು ಸಹ ಈ ಪ್ರದರ್ಶನದಲ್ಲಿ ನೋಡಲು ಸಿಗುತ್ತದೆ. ಇದರಿಂದ ಎಲ್ಲರೂ ಕಲಿಯಬೇಕು. ನನಗೆ ಸನಾತನ ಸಂಸ್ಥೆಯ ಪರಿಚಯ ಬಹಳ ಹಿಂದಿನಿಂದಲೂ ಇದೆ ಮತ್ತು ಮುಂದೆಯೂ ಹಾಗೆಯೇ ಇರಲಿದೆ. ಸನಾತನ ಸಂಸ್ಥೆಯು ಸನಾತನ ಧರ್ಮಕ್ಕಾಗಿ ಉತ್ತಮ ಕಾರ್ಯ ಮಾಡುತ್ತಿದೆ. ಶಂಕರಾಚಾರ್ಯರು, ಸಂತ ಜ್ಞಾನೇಶ್ವರ ಮಹಾರಾಜರು, ಸಂತ ತುಕಾರಾಮ ಮಹಾರಾಜರು, ಸಂತ ಏಕನಾಥ ಮಹಾರಾಜರು, ಸಮರ್ಥ ರಾಮದಾಸ ಸ್ವಾಮಿಗಳು, ಛತ್ರಪತಿ ಶಿವಾಜಿ ಮಹಾರಾಜರು, ಮಹಾರಾಣಾ ಪ್ರತಾಪರು ಎಲ್ಲರೂ ಮಾಡಿದ ಕಾರ್ಯವನ್ನು ಸನಾತನ ಸಂಸ್ಥೆ ಮಾಡುತ್ತಿದೆ. ಸನಾತನ ಸಾಧಕರು ಉನ್ನತ ಶಿಕ್ಷಣ ಪಡೆದಿದ್ದರೂ ಸಹ, ಅವರು ತಮ್ಮ ಸಂಸಾರ ಮತ್ತು ಮನೆಯನ್ನು ತೊರೆದು ಸನ್ಯಾಸಿಯಂತೆ ಸನಾತನಕ್ಕಾಗಿ ಅಖಂಡ ತ್ಯಾಗಗಳನ್ನು ಮಾಡುತ್ತಿದ್ದಾರೆ. ಈ ಸಾಧಕರಿಗೆ ನನ್ನ ಶುಭ ಹಾರೈಕೆಗಳನ್ನು ಕೋರುತ್ತೇನೆ ಮತ್ತು ದೇವರು ಸಾಧಕರನ್ನು ಇಂತಹ ಕೆಲಸವನ್ನು ಮುಂದುವರಿಸಲು ಆಶೀರ್ವದಿಸಲಿ ಎಂದು ಪ್ರಾರ್ಥಿಸುತ್ತೇನೆ’, ಎಂದು ಹೇಳಿದರು.