ವಿಜಯದಶಮಿಯ ನಿಮಿತ್ತ ಹಿಂದೂಗಳು ಅನೇಕ ಆಚರಣೆಗಳನ್ನು ಮಾಡುತ್ತಾರೆ. ಇತರ ಹಬ್ಬಗಳನ್ನು ಆಚರಿಸುವಾಗ ವಿಶಿಷ್ಟ ಆಚರಣೆಗಳನ್ನು ಮಾಡುವಂತೆಯೇ ದಸರಾದಂದು ಮಾಡುತ್ತಾರೆ. ದೇವಿಯ ಪೂಜೆಯು ಅದರಲ್ಲಿ ಒಂದಾಗಿದೆ. ಆ ನಿಮಿತ್ತ ಸರಸ್ವತಿ ಪೂಜೆ ಮತ್ತು ಅಪರಾಜಿತಾ ದೇವಿಯ ಪೂಜೆಯ ಬಗ್ಗೆ ತಿಳಿದುಕೊಳ್ಳೋಣ.
ಶ್ರೀ ಸರಸ್ವತಿ ದೇವಿಯ ಪೂಜೆಯನ್ನು ಮಾಡುವುದು
ದಸರಾದಂದು ಸರಸ್ವತಿತತ್ತ್ವದ ಕ್ರಿಯಾತ್ಮಕ ಪೂಜೆಯಿಂದ ಜೀವದ ವ್ಯಕ್ತಭಾವವು ಅವ್ಯಕ್ತ ಭಾವದಲ್ಲಿ ರೂಪಾಂತರವಾಗಿ ಸ್ಥಿರತೆಯು ಬರಲು ಸಹಾಯವಾಗುತ್ತದೆ.
ಅಪರಾಜಿತಾದೇವಿಯ ಪೂಜೆಯನ್ನು ಮಾಡುವುದು
ಅಪರಾಜಿತಾಪೂಜೆ : ಶಮಿಯ ಪೂಜೆಯನ್ನು ಮಾಡುವ ಸ್ಥಳದಲ್ಲಿ ಭೂಮಿಯ ಮೇಲೆ ಅಷ್ಟದಳಗಳನ್ನು ಬಿಡಿಸಿ, ಅದರ ಮೇಲೆ ಅಪರಾಜಿತೆಯ ಮೂರ್ತಿ ಇಟ್ಟು ಅವಳ ಪೂಜೆಯನ್ನು ಮಾಡುತ್ತಾರೆ.
ಹಾರೇಣ ತು ವಿಚಿತ್ರೇಣ ಭಾಸ್ವತ್ಕನಕ ಮೇಖಲಾ
ಅಪರಾಜಿತಾ ಭದ್ರರತಾ ಕರೋತು ವಿಜಯಂ ಮಮ
ಅರ್ಥ : ಕೊರಳಿನಲ್ಲಿ ವಿವಿಧ ಬಗೆಯ ಮಾಲೆ ಧರಿಸಿರುವ, ಸೊಂಟದಲ್ಲಿ ಹೊಳೆಯುವ ಸುವರ್ಣ ನಡುಪಟ್ಟಿ ಧರಿಸಿರುವ, ಸದಾಕಾಲ ಭಕ್ತರ ಕಲ್ಯಾಣ ಕಾರ್ಯದಲ್ಲಿ ನಿರತಳಾಗಿರುವ ಅಪರಾಜಿತಾ ದೇವಿಯು ನನ್ನನ್ನು ವಿಜಯಿಯನ್ನಾಗಿಸಲಿ. ಕೆಲವು ಕಡೆ ಸೀಮೋಲ್ಲಂಘನಕ್ಕೆ ಹೊರಡುವ ಮೊದಲೇ ಅಪರಾಜಿತಾ ದೇವಿಯ ಪೂಜೆ ಮಾಡುತ್ತಾರೆ.
೧. ಭೂಮಿಯ ಮೇಲೆ ಅಷ್ಟದಳವನ್ನು ಬಿಡಿಸಿ ಅದರ ಮೇಲೆ ಅಪರಾಜಿತೆಯ ಮೂರ್ತಿಯನ್ನು ಇಡುವುದು, ಇದು ಅಪರಾಜಿತಾ ಶಕ್ತಿ ತತ್ತ್ವದ ಎಂಟೂ ದಿಕ್ಕುಗಳ ಮೇಲೆ ವಿಜಯ ಪಡೆಯುವ ಕ್ಷಮತೆಯನ್ನು ದರ್ಶಿಸುತ್ತದೆ : ‘ಅಪರಾಜಿತಾ ಈ ದುರ್ಗಾದೇವಿಯ ಮಾರಕ ರೂಪವು ಪೃಥ್ವಿತತ್ತ್ವದ ಆಧಾರದಲ್ಲಿ ಭೂಗರ್ಭದಿಂದ ಪ್ರಕಟವಾಗಿ ಪೃಥ್ವಿಯ ಮೇಲಿನ ಜೀವಗಳಿಗಾಗಿ ಕಾರ್ಯವನ್ನು ಮಾಡುತ್ತದೆ. ಅಷ್ಟದಳದ ಸಿಂಹಾಸನಾರೂಢಳಾದ ಈ ತ್ರಿಶೂಲಧಾರಿ ರೂಪವು ಶಿವನ ಸಂಯೋಗದಿಂದ ದಿಕ್ಪಾಲ ಹಾಗೂ ಗ್ರಹ ದೇವತೆ ಇವರ ಸಹಾಯದಿಂದ ಅಸುರೀ ಶಕ್ತಿಗಳನ್ನು ನಾಶ ಮಾಡುತ್ತದೆ.
ಶಕ್ತಿತತ್ತ್ವದ ಭಕ್ತರ ಪ್ರಾರ್ಥನೆಗನುಸಾರ ಯಾವಾಗ ಅಷ್ಟದಳದ ಮೇಲೆ ಆರೂಢಳಾಗಿರುವ ಅಪರಾಜಿತಾ ದೇವಿಯು ಪೃಥ್ವಿಯ ಭೂಗರ್ಭ ಬಿಂದುವಿನಿಂದ ಉತ್ಪನ್ನವಾಗುತ್ತಾಳೆಯೋ, ಆಗ ಅವಳ ಸ್ವಾಗತಕ್ಕಾಗಿ ಅಷ್ಟಪಾಲ ದೇವತೆಗಳ ಆಗಮನವಾಗುತ್ತದೆ. ಅಷ್ಟದಳಗಳ ಅಗ್ರ ಬಿಂದುಗಳು ಅಷ್ಟಪಾಲ ದೇವತೆಗಳನ್ನು ಪ್ರತಿನಿಧಿಸುತ್ತವೆ. ಅಪರಾಜಿತೆಯ ಉತ್ಪತ್ತಿಯಿಂದ ಮಾರಕ ಲಹರಿಗಳು ಪ್ರಕ್ಷೇಪಿತವಾಗುತ್ತವೆ. ಅವು ಅಷ್ಟದಿಕ್ಪಾಲರ ಮಾಧ್ಯಮದಿಂದ ಅಷ್ಟದಿಕ್ಕುಗಳಿಗೆ ನಸುಗೆಂಪು ಬಣ್ಣದ ಪ್ರಕಾಶ ಲಹರಿಗಳಿಂದ ಪ್ರಕ್ಷೇಪಿತವಾಗಿ ಆಯಾ ಕೋನಗಳಲ್ಲಿ ಸಂಪುಟಿತವಾಗಿರುವ ರಜ-ತಮಾತ್ಮಕ ಶಕ್ತಿಯನ್ನು ನಾಶ ಮಾಡುತ್ತವೆ ಮತ್ತು ಪೃಥ್ವಿಯ ಮೇಲಿನ ಜೀವಗಳಿಗೆ ನಿರ್ವಿಘ್ನವಾಗಿ ಜೀವನ ನಡೆಸಲು ಅನುಕೂಲವಾಗುವಂತೆ ವಾಯುಮಂಡಲವನ್ನು ಶುದ್ಧಿಕರಿಸುತ್ತದೆ.
೨. ಬನ್ನಿಯ ಎಲೆಗಳಲ್ಲಿ ತೇಜವನ್ನು ವೃದ್ಧಿಗೊಳಿಸುವ ಗುಣವಿರುವುದರಿಂದ ಬನ್ನಿಯ ಗಿಡದ ಹತ್ತಿರ ಶ್ರೀ ದುರ್ಗಾದೇವಿಯ ಅಪರಾಜಿತಾ ರೂಪದ ಪೂಜೆಯನ್ನು ಮಾಡುತ್ತಾರೆ : ಬನ್ನಿ (ಶಮಿ) ಗಿಡದ ಹತ್ತಿರ ಶ್ರೀ ದುರ್ಗಾದೇವಿಯ ಅಪರಾಜಿತಾ ರೂಪದ ಪೂಜೆಯನ್ನು ಮಾಡುತ್ತಾರೆ; ಬನ್ನಿಯ ಎಲೆಗಳಲ್ಲಿ ತೇಜವನ್ನು ವೃದ್ಧಿಪಡಿಸುವ ಮತ್ತು ಶೇಖರಿಸಿಟ್ಟುಕೊಳ್ಳುವ ಗುಣವಿರುವುದರಿಂದ ಕಾರಂಜಿಯಂತೆ ಪ್ರಕಟವಾದ ಅಪರಾಜಿತಾ ಶಕ್ತಿಯನ್ನು ಬನ್ನಿಯ ಎಲೆಗಳು ದೀರ್ಘಕಾಲದವರೆಗೆ ಶೇಖರಿಸಿಟ್ಟುಕೊಳ್ಳುತ್ತವೆ.
ನಾವು ಈ ಬನ್ನಿಯ ಎಲೆಗಳನ್ನು ಮನೆಯಲ್ಲಿ ಇಟ್ಟುಕೊಂಡು ವರ್ಷವಿಡೀ ಈ ಲಹರಿಗಳ ಲಾಭವನ್ನು ಪಡೆದುಕೊಳ್ಳಬಹುದು.
ದಸರಾದಂದು ಸರಸ್ವತಿ ಪೂಜೆಯ ವೇಳೆ ಬಿಡಿಸಬೇಕಾದ ದೇವಿಯ ತತ್ತ್ವವನ್ನು ಆಕರ್ಷಿಸುವ ರಂಗೋಲಿ
ಬಣ್ಣಗಳು : ೧ – ಬಿಳಿ, ೨ – ನೀಲಿ, ೩ – ಕೇಸರಿ, ೪ – ಹಳದಿ ೧೦ ಚುಕ್ಕೆಗಳು ೧೦ ಸಾಲುಗಳು (ಆಧಾರ : ಸನಾತನ ನಿರ್ಮಿತ ಗ್ರಂಥ ದೇವತೆಗಳ ತತ್ತ್ವಗಳನ್ನು ಆಕರ್ಷಿಸುವ ಮತ್ತು ಪ್ರಕ್ಷೇಪಿಸುವ ‘ಸಾತ್ತ್ವಿಕ ರಂಗೋಲಿಗಳು) |