ರಾಮನಾಥ ದೇವಸ್ಥಾನ – ಭಾರತದಲ್ಲಿ ಗುರು-ಶಿಷ್ಯ ಪರಂಪರೆ ಇರುವಾಗಲೇ ವಿಶ್ವಗುರು ಆಗಿತ್ತು. ಆ ಕಾಲದಲ್ಲಿ ಅಸಂಖ್ಯಾತ ಗ್ರಂಥಗಳನ್ನು ಬರೆಯಲಾಯಿತು. ವಿದೇಶಗಳಿಂದ ಮಕ್ಕಳು ಇಲ್ಲಿಗೆ ಕಲಿಯಲು ಬರುತ್ತಿದ್ದರು ಆದರೆ ಈಗ ಅದರ ವಿರುದ್ಧ ಘಟಿಸುತ್ತಿದೆ. ೮ ಲಕ್ಷದ ೮೦ ಸಾವಿರ ಭಾರತೀಯರು ವಿದೇಶದಲ್ಲಿ ಕಲಿಯುತ್ತಿದ್ದಾರೆ ಮತ್ತು ಕಾಲಾಂತರದಲ್ಲಿ ಅವರು ಅಲ್ಲಿಯೇ ನೆಲೆಯೂರಲಿದ್ದಾರೆ. ಆದ್ದರಿಂದ ಭಾರತವು ಶಿಕ್ಷಣವ್ಯವಸ್ಥೆಯ ಗುಣಮಟ್ಟವನ್ನು ಹೆಚ್ಚಿಸಲು ಪ್ರಯತ್ನಿಸುವುದು ಆವಶ್ಯಕವಾಗಿದೆ, ಎಂದು ‘ಇಂಡಿಯನ್ ನ್ಯಾಶನಲ್ ಟ್ರಸ್ಟ್ ಫಾರ್ ಆರ್ಟ್ ಆಂಡ್ ಕಲ್ಚರಲ್ ಹೆರಿಟೆಜ್’ನ ಸಂಯೋಜಕ ಶ್ರೀ. ಅನಿಲ ಧೀರ ಇವರು ‘ವೈಶ್ವಿಕ ಹಿಂದು ರಾಷ್ಟ್ರ ಮಹೋತ್ಸವ’ದ ೫ ನೇ ದಿನ (೨೦.೬.೨೦೨೩) ತೆಗೆದರು.
ಅವರು ತಮ್ಮ ಮಾತನ್ನು ಮುಂದುವರೆಸುತ್ತಾ, “ಓಡಿಶಾದಲ್ಲಿ ೬೨ ಬುಡಕಟ್ಟು ಜನಾಂಗಗಳಿವೆ. ನಾವು ವನವಾಸಿಗಳಿಂದ ೩೦ ಸಾವಿರ ಗ್ರಂಥಗಳನ್ನು ಒಟ್ಟುಗೂಡಿಸಿದೆವು ಮತ್ತು ಅವುಗಳನ್ನು ಓಡಿಶಾ ರಾಜ್ಯದ ಸಂಗ್ರಹಾಲಯಕ್ಕೆ ಕಳುಹಿಸಿದೆವು. ಆ ಗ್ರಂಥಗಳಲ್ಲಿ ಶ್ಲೋಕ ಮುಂತಾದವುಗಳು ಇರಲಿಲ್ಲ, ಆದರೆ ವಿಮಾನಗಳ ನಿರ್ಮಿತಿ ಹೇಗೆ ಮಾಡಬೇಕು ?, ದೇವಸ್ಥಾನಗಳನ್ನು ಹೇಗೆ ಕಟ್ಟಬೇಕು ? ಮುಂತಾದ ಪ್ರತಿಯೊಂದು ವಿಷಯದ ವಿವರಣೆಯನ್ನು ನೀಡಲಾಗಿತ್ತು. ಇದರಿಂದ ಕೆಲವು ಸಾವಿರ ವರ್ಷಗಳ ಹಿಂದೆ ಅವರು ಎಷ್ಟು ಉಚ್ಚ ಮಟ್ಟದ ಬರವಣಿಗೆಯನ್ನು ಮಾಡಿದ್ದರು, ಎಂಬುದು ಗಮನಕ್ಕೆ ಬರುತ್ತದೆ. ಈ ಬುಡಕಟ್ಟು ಜನಾಂಗದವರ ಬಳಿ ಯಾವುದೇ ಲಿಪಿ ಇಲ್ಲ. ಅವರ ಈ ಜ್ಞಾನ ತಂದೆಯರಿಂದ ಮಕ್ಕಳಿಗೆ ಹಸ್ತಾಂತರವಾಗುತ್ತಾ ಹೋಯಿತು. ಈ ಬುಡಕಟ್ಟು ಜನಾಂಗದ ಮಕ್ಕಳಿಗೆ ಉತ್ತಮ ಶಿಕ್ಷಣ ಸಿಕ್ಕರೆ, ಭಾರತ ಉತ್ತಮ ಪ್ರಗತಿ ಮಾಡಿಕೊಳ್ಳಲಿದೆ. ಆದ್ದರಿಂದ ಸರಕಾರ ಅವರಿಗಾಗಿ ವಿಶೇಷ ಶಾಲೆಗಳನ್ನು ತೆರೆಯುವ ಆವಶ್ಯಕತೆ ಇದೆ”, ಎಂದು ಹೇಳಿದರು.
ಜಗನ್ನಾಥಪುರಿಯಲ್ಲಿ ಜೂನ್ ೨೦ ರಂದು ವಿಶ್ವವಿಖ್ಯಾತ ಭಗವಾನ ಜಗನ್ನಾಥರ ರಥಯಾತ್ರೆ ಇರುವಾಗಲೂ ಈ ದಿನ ಓಡಿಶಾದ ಹಿಂದು ಧರ್ಮಾಭಿಮಾನಿ ಶ್ರೀ. ಅನಿಲ ಧೀರ ಇವರು ‘ವೈಶ್ವಿಕ ಹಿಂದು ರಾಷ್ಟ್ರ ಮಹೋತ್ಸವ’ದಲ್ಲಿ ಉಪಸ್ಥಿತರಿದ್ದರು.