ಲ್ಯಾಂಡ್ ಜಿಹಾದ್ ಮೂಲಕ ಹಿಂದೂಗಳ ಮನೆ, ಆಸ್ತಿ, ಜಮೀನುಗಳನ್ನು ಕಸಿದುಕೊಳ್ಳುವ ಷಡ್ಯಂತ್ರ ರಾಜಾರೋಷವಾಗಿ ನಡೆಯುತ್ತಿದೆ ! – ಗುರುಪ್ರಸಾದ ಗೌಡ, ರಾಜ್ಯ ಸಮನ್ವಯಕರು, ಹಿಂದೂ ಜನಜಾಗೃತಿ ಸಮಿತಿ

ಹಿಂದೂ ರಾಷ್ಟ್ರ ಸ್ಥಾಪನೆಯ ಉದ್ದೇಶದಲ್ಲಿ ಹುಬ್ಬಳ್ಳಿಯಲ್ಲಿ ಆಯೋಜಿತ ಹಿಂದೂ ರಾಷ್ಟ್ರ ಅಧಿವೇಶನ ದೀಪ ಪ್ರಜ್ವಲನೆ ಮೂಲಕ ಪ್ರಾರಂಭ!

ಹುಬ್ಬಳ್ಳಿ: ಕರ್ನಾಟಕದಲ್ಲಿ 2014 ರಿಂದ 2019 ರವರೆಗೆ ಸುಮಾರು 21000 ಹಿಂದೂ ಯುವತಿಯರು ನಾಪತ್ತೆಯಾಗಿದ್ದಾರೆ, ದರ ಹಿಂದೆ ಕೇವಲ ಲವ್ ಜಿಹಾದ್ ಮೂಲಕ ಹಿಂದೂ ಹುಡುಗಿಯರನ್ನು ಮತಾಂತರಗೊಳಿಸಿ, ಹಿಂದೂ ಧರ್ಮವನ್ನು ನಾಶಮಾಡುವ ಷಡ್ಯಂತ್ರ ನಡೆಯುತ್ತಿದೆ ಎಂದು ಹಿಂದೂ ಜನಜಾಗೃತಿ ಸಮಿತಿಯ ರಾಜ್ಯ ಸಮನ್ವಯಕರಾದ ಶ್ರೀ. ಗುರುಪ್ರಸಾದ್ ಗೌಡ ಇವರು ಕಳವಳ ವ್ಯಕ್ತಪಡಿಸಿದರು. ಅವರು ಹಿಂದೂ ಜನಜಾಗೃತಿ ಸಮಿತಿ ಹುಬ್ಬಳ್ಳಿಯಲ್ಲಿ ಆಯೋಜಿಸಿದ್ದ ‘ಪ್ರಾಂತೀಯ ಹಿಂದೂ ರಾಷ್ಟ್ರ ಅಧಿವೇಶನ’ದಲ್ಲಿ ಮಾತನಾಡುತ್ತಿದ್ದರು. ಜನವರಿ 7 ಮತ್ತು 8 ರಂದು ಹುಬ್ಬಳ್ಳಿಯ ಶ್ರೀ ಕೃಷ್ಣ ಕಲ್ಯಾಣಮಂಟಪ ದೇಶಪಾಂಡೆ ನಗರದಲ್ಲಿ ಆಯೋಜಿಸಿರುವ ಈ ಅಧಿವೇಶನವನ್ನು ಇವರು ದೀಪ ಪ್ರಜ್ವಲನೆ ಮೂಲಕ ಉದ್ಘಾಟಿಸಿದರು. ಈ ಅಧಿವೇಶನದಲ್ಲಿ ಗದಗ, ಹಾವೇರಿ, ವಿಜಯನಗರ,ಮತ್ತು ಉತ್ತರಕನ್ನಡ ಸೇರಿದಂತೆ ಅನೇಕ ಹಿಂದೂ ಸಂಘಟನೆಗಳ ಕಾರ್ಯಕರ್ತರು ಮತ್ತು ಪದಧಿಕಾರಿಗಳು ಒಟ್ಟು 150 ಜನ ಧರ್ಮಪ್ರೇಮಿ ಸೇರಿದ್ದಾರೆ ಎಂದು ತಿಳಿಸಿದರು

ಗುರುಪ್ರಸಾದ್ ಗೌಡ

ಗುರುಪ್ರಸಾದ್ ಗೌಡ ಇವರು ಮುಂದೆ ಮಾತನಾಡಿ ಎಲ್ಲ ತರಹದ ಜಿಹಾದಿನ ಮೂಲಕ ಹಿಂದೂಗಳ ವಂಶನಾಶ,ಭಾರತವನ್ನು ತಮ್ಮದಾಗಿಸುಕೊಳ್ಳುವ ಪ್ರಯತ್ನ ನಡಿತಾ ಇದೆ ,ಇದರಿಂದ ನಾವು ಎಲ್ಲಾ ಹಿಂದೂಗಳು ಒಗ್ಗಟಾಗಿ ಹೋರಾಡುವ ಸಮಯ ಬಂದಿದೆ.. ಸಮಿತಿಯು ಕಳೆದ 10 ವರ್ಷಗಳಿಂದ ಈ ರೀತಿಯ ಅಧಿವೇಶನ ನಡೆಸುವುದರ ಮೂಲಕ ಜಾಗೃತಿ ಮೂಡಿಸುವ ಧರ್ಮಕಾರ್ಯ ಮಾಡುತ್ತಿದೆ ಎಂದರು.

ಮತ್ತೋರ್ವ ವಕ್ತಾರರಾದ ಎಸ್.ಬಿ.ಶೆಟ್ಟಿ ಇವರು ಮಾತನಾಡಿ, ಜಾತಿ, ಧರ್ಮಬಿಟ್ಟು ಹಿಂದೂಗಳು ಒಗ್ಗಟ್ಟಾಗಿ ಮುಂದೆ ಬಂದು ದೇಶಕ್ಕಾಗಿ,ಧರ್ಮಕ್ಕಾಗಿ ಯಾವುದೇ ಆಮಿಷಕ್ಕೆ ಒಳಗಾಗದೆ ಹೋರಾಡಲೆ ಬೇಕಾಗಿರುವ ಅನಿವಾರ್ಯತೆ ಇದೆ ಎಂದರು.

ವಕೀಲರಾದ ಶ್ರೀ. ಕೃಷರಾಜ ಕಟವೆ ಇವರು ಲವ್ ಜಿಹಾದ್ ನ ಕೆಲವು ಘಟನೆಗಳನ್ನು ವಿವರಿಸಿತ್ತ ಯಾವ ರೀತಿಯಲ್ಲಿ ಹಿಂದೂ ಯುವತಿಯರನ್ನು ಈ ಭಯಾನಕ ಜಾಲದಲ್ಲಿ ಹಂತ ಹಂತವಾಗಿ ಸಿಲುಕಿಸಲಾಗುತ್ತದೆ ಅದರ ಬಗ್ಗೆ ತಿಳಿಸಿದರು.