ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಮುಕುಲ ಗಾಡಗೀಳ ಇವರ ಬಗ್ಗೆ ಶ್ರೀಸತ್‌ಶಕ್ತಿ (ಸೌ.) ಬಿಂದಾ ನೀಲೇಶ ಸಿಂಗಬಾಳ ಇವರು ಮಾಡಿದ ಗುಣ ವರ್ಣನೆ !

ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ, ಎಂದರೆ ದೇವಿತತ್ತ್ವದ ಅನುಭೂತಿಯನ್ನು ನೀಡುವ ಮತ್ತು ಭಗವಂತನ ಚೈತನ್ಯಶಕ್ತಿಯ ರೂಪದಲ್ಲಿ ಪೃಥ್ವಿಯಲ್ಲಿ ಅವತರಿಸಿದ ಕಮಲಪುಷ್ಪ !

ಶ್ರೀಸತ್‌ಶಕ್ತಿ (ಸೌ.) ಬಿಂದಾ ನೀಲೇಶ ಸಿಂಗಬಾಳ
ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಮುಕುಲ ಗಾಡಗೀಳ

ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆಯವರ ಓರ್ವ ಆಧ್ಯಾತ್ಮಿಕ ಉತ್ತರಾಧಿಕಾರಿ ಶ್ರೀಚಿತ್‌ಶಕ್ತಿ (ಸೌ.)ಅಂಜಲಿ ಗಾಡಗೀಳರ ಬಗ್ಗೆ ಸತ್‌ಶಕ್ತಿ (ಸೌ.) ಬಿಂದಾತಾಯಿಯವರ ದೈವೀ ಗುಣವರ್ಣನೆ !

೧. ದೇವಿಯಂತೆ ತೇಜಸ್ವಿ ಮತ್ತು ಪ್ರಸನ್ನಚಿತ್ತ

ದೇವಿಯಂತೆ ಅತ್ಯಂತ ತೇಜಸ್ವಿ ಕಾಂತಿ ಹೊಂದಿರುವ ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರ ಮುಗುಳ್ನಗೆ ಸಾಧಕರಿಗೆ ಆಧಾರ ನೀಡುತ್ತದೆ. ಅವರ ನಿರ್ಮಲ ನಗು, ಎಂದರೆ ಸಾಧಕರ ಮೇಲೆ ಸುರಿಸುವ ಆನಂದದ ಚಿಲುಮೆಯೇ ಆಗಿದೆ !

೨. ಗುರುದೇವರ ಮನಸ್ಸಿನ ಪ್ರತಿಯೊಂದು ವಿಚಾರವನ್ನು ಕೃತಿಯಲ್ಲಿ ತರುವ ಮತ್ತು ಚೈತನ್ಯದ ಸ್ತರದಲ್ಲಿ ಅಪಾರ ಕಾರ್ಯ ಮಾಡುತ್ತಿದ್ದರೂ ಅಹಂಶೂನ್ಯರಾಗಿರುವ ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ !

ಶ್ರೀಮನ್ನಾರಾಯಣ ಸ್ವರೂಪ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಸ್ವರೂಪವಾಗಿರುವ ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರು ಗುರುದೇವರ ಮನಸ್ಸಿನಲ್ಲಿನ ಪ್ರತಿಯೊಂದು ವಿಚಾರವನ್ನು ಕೃತಿಯಲ್ಲಿ ತರುತ್ತಾರೆ. ತಮ್ಮಲ್ಲಿರುವ ದೈವೀ ಚೈತನ್ಯದಿಂದ ಅಖಂಡ ಕಾರ್ಯನಿರತರಾಗಿದ್ದು ಗುರುಸೇವೆಯನ್ನು ಮಾಡುವ ಚೈತನ್ಯಸ್ವರೂಪ ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರ ಅಸ್ತಿತ್ವದಿಂದ ಅಥವಾ ಕೇವಲ ಅವರ ಸ್ಮರಣೆಯಿಂದಲೂ ಸಾಧಕರಿಗೆ ಆಧ್ಯಾತ್ಮಿಕ ಚೇತನ ಪ್ರಾಪ್ತವಾಗುತ್ತದೆ ! ಶ್ರೀಚಿತ್‌ಶಕ್ತಿ (ಸೌ.) ಗಾಡಗೀಳ ಇವರು ಅಪಾರ ಕಾರ್ಯವನ್ನು ಮಾಡುತ್ತಿದ್ದರೂ ‘ಇದು ನನ್ನಿಂದಾಯಿತು; ಆದರೆ ನಾನು ಮಾಡಿಲ್ಲ’, ಎಂಬ ಸಂತ ಜ್ಞಾನೇಶ್ವರರ ದ್ವಿಪದಿಗನುಸಾರ ಅವರಲ್ಲಿ ಕಿಂಚಿತ್‌ ಅಹಂಕಾರವಿಲ್ಲ.

೩. ಭಗವಂತನು ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಮುಕುಲ ಗಾಡಗೀಳ ಇವರನ್ನು ನೋಡಲು ಕಾತುರನಾಗಿರುತ್ತಾನೆ !

ಶ್ರೀಚಿತ್‌ಶಕ್ತಿ (ಸೌ.) ಗಾಡಗೀಳ ಇವರು ಸಪ್ತರ್ಷಿಗಳ ಆಜ್ಞೆ ಗನುಸಾರ ದೇಶ-ವಿದೇಶಗಳ ವಿವಿಧ ದೇವಸ್ಥಾನಗಳಿಗೆ ಹೋಗಿ ದೇವರ ದರ್ಶನ ಪಡೆಯುತ್ತಾರೆ ಮತ್ತು ದೇವರಲ್ಲಿ ಹಿಂದೂ ರಾಷ್ಟ್ರದ-ಸ್ಥಾಪನೆಗಾಗಿ ಪ್ರಾರ್ಥನೆ ಮಾಡುತ್ತಾರೆ. ಶ್ರೀಚಿತ್‌ಶಕ್ತಿ (ಸೌ.) ಗಾಡಗೀಳ ಇವರನ್ನು ಗೌರವಿಸುತ್ತಾ ಸಪ್ತರ್ಷಿಗಳು, ‘ಸಾಮಾನ್ಯವಾಗಿ ಕಾರ್ತಿಕಪುತ್ರಿಗೆ (ಟಿಪ್ಪಣಿ) ದೇವರ ದರ್ಶನ ಪಡೆಯುವುದಿರುತ್ತದೆ; ಆದರೆ ಈಗ ದೇವರಿಗೆ ಕಾರ್ತಿಕಪುತ್ರಿಯನ್ನು ನೋಡುವುದಿರುತ್ತದೆ’, ಎಂದು ಹೇಳುತ್ತಾರೆ. ಅಂದರೆ ಸಾಕ್ಷಾತ್‌ ಭಗವಂತನು ಶ್ರೀಚಿತ್‌ಶಕ್ತಿ (ಸೌ.) ಗಾಡಗೀಳ ಇವರನ್ನು ನೋಡಲು ಕಾತುರರಾಗಿರುತ್ತಾನೆ !

ಟಿಪ್ಪಣಿ – ಶ್ರೀಚಿತ್‌ಶಕ್ತಿ (ಸೌ.) ಗಾಡಗೀಳ ಇವರನ್ನು ಸಪ್ತರ್ಷಿಗಳು ‘ಕಾರ್ತಿಕಪುತ್ರಿ’ ಎಂಬ ಹೆಸರಿನಿಂದ ಸಂಬೋಧಿಸುತ್ತಾರೆ.

೪. ಜಾಗೃತ ದೇವಿತತ್ತ್ವ ಮತ್ತು ವಾಣಿಯಲ್ಲಿನ ಚೈತನ್ಯದಿಂದ ಹಲವರಿಗೆ ಸಾಧನೆಗೆ ಪ್ರೇರೇಪಿಸುವ ಚೈತನ್ಯಮೂರ್ತಿ !

ಅಪರಿಚಿತ ವ್ಯಕ್ತಿಯೂ ಶ್ರೀಚಿತ್‌ಶಕ್ತಿ (ಸೌ.) ಗಾಡಗೀಳ ಇವರನ್ನು ನೋಡಿ ಕೈಗಳನ್ನು ಜೋಡಿಸಿ ನಮಸ್ಕಾರ ಮಾಡುತ್ತಾನೆ. ಅವರಲ್ಲಿರುವ ಜಾಗೃತ ದೇವಿತತ್ತ್ವದ ಇನ್ಯಾವ ಸಾಕ್ಷಿಬೇಕು ? ವಿವಿಧ ಸ್ಥಳಗಳಿಗೆ ಹೋದಾಗ ಅವರು ಅಲ್ಲಿನ ಜನರಿಗೆ ಸಾಧನೆಯ ಮಹತ್ವ ಹೇಳುತ್ತಾರೆ. ಅವರ ವಾಣಿಯಲ್ಲಿರುವ ಚೈತನ್ಯದಿಂದ ಸಮಾಜದ ಅನೇಕ ಜನರು ಸಾಧನೆಯನ್ನು ಮಾಡತೊಡಗಿದ್ದಾರೆ ಮತ್ತು ಅಧ್ಯಾತ್ಮಪ್ರಸಾರದ ಕಾರ್ಯದಲ್ಲಿ ಭಾಗವಹಿಸುತ್ತಾರೆ.

೫. ಪ್ರತಿಯೊಬ್ಬರಲ್ಲಿ ಭಗವಂತನ ರೂಪವನ್ನು ನೋಡಿ ಪ್ರೀತಿಯ ಸುರಿಮಳೆಯಲ್ಲಿ ಮೀಯಿಸುವ ವಾತ್ಸಲ್ಯಮೂರ್ತಿ !

ಸಂತ ಜ್ಞಾನೇಶ್ವರ ಮಹಾರಾಜರು, ಯಾವೆಲ್ಲ ಪ್ರಾಣಿ ಕಾಣಿಸುವುದೋ, ಅವನು ಪ್ರತ್ಯಕ್ಷ ಪರಮಾತ್ಮನಾಗಿದ್ದಾನೆ’, ಎಂದು ತಿಳಿಯಬೇಕು ಎಂದು ಹೇಳಿದ ದ್ವಿಪದಿಗನುಸಾರ ಶ್ರೀಚಿತ್‌ಶಕ್ತಿ (ಸೌ.) ಗಾಡಗೀಳ ಇವರ ‘ಚರಾಚರದಲ್ಲಿ ಪರಮೇಶ್ವರನಿದ್ದಾನೆ’, ಎಂಬ ಭಾವವಿರುವುದರಿಂದ ಅವರು ಕೇವಲ ಸಾಧಕರಲ್ಲಷ್ಟೇ ಅಲ್ಲ ಸಮಾಜದಲ್ಲಿಯೂ ಈಶ್ವರನ ರೂಪವನ್ನು ನೋಡುತ್ತಾರೆ ಮತ್ತು ಅವರನ್ನು ತಮ್ಮ ಪ್ರೀತಿಯ ಅಮೃತಮಯ ಸುರಿಮಳೆಯಲ್ಲಿ ಮೀಯಿಸುತ್ತಾರೆ.

೬. ಪೃಥ್ವಿಯಲ್ಲಿ ಛಾಯಾರೂಪದಲ್ಲಿ ವಾಸಿಸುವ ಆದಿಶಕ್ತಿ ಜಗದಂಬೆ !

ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರ ಪ್ರತಿಯೊಂದು ಕ್ರಿಯೆ ಮತ್ತು ವಿಚಾರಗಳಿಂದ ಅವರ ದೇವಿತತ್ತ್ವವು ಮಿಂಚುತ್ತದೆ. ಅವರು ಮಹಾಲಕ್ಷ್ಮೀಸ್ವರೂಪರಾಗಿದ್ದಾರೆ, ಹಾಗೆಯೇ ಜ್ಞಾನವನ್ನು ಪ್ರದಾನಿಸುವ ಸರಸ್ವತಿಯ ತತ್ತ್ವವೂ ಅವರಲ್ಲಿ ಕಾರ್ಯನಿರತ ವಾಗಿದೆ. ಅವರ ರೂಪದಲ್ಲಿ ಈ ಭೂಮಿಯಲ್ಲಿ ಆನಂದದಾಯಿನಿ ಮತ್ತು ಜ್ಞಾನಸ್ವರೂಪಿಣಿ ದೇವಿಯ ರೂಪವು ಪ್ರತ್ಯಕ್ಷ ಅವತರಿಸಿದೆ. ಸಪ್ತರ್ಷಿಗಳೂ ‘ಶ್ರೀಚಿತ್‌ಶಕ್ತಿ (ಸೌ.) ಗಾಡಗೀಳ ಇವರ ಮಾಧ್ಯಮದಿಂದ ಪೃಥ್ವಿಯಲ್ಲಿ ಸಾಕ್ಷಾತ್‌ ಆದಿಶಕ್ತಿ ಜಗದಂಬೆಯು ಛಾಯಾರೂಪದಲ್ಲಿ ವಾಸಿಸುತ್ತಿದ್ದಾಳೆ’, ಎಂಬ ಗೌರವೋದ್ಗಾರ ತೆಗೆದು ಅವರನ್ನು ವರ್ಣಿಸಿದ್ದಾರೆ.

ಧನ್ಯ ಆ ಭಕ್ತಶಿರೋಮಣಿ ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಮುಕುಲ ಗಾಡಗೀಳ ಮತ್ತು ಧನ್ಯ ಅವರನ್ನು ಸಿದ್ಧ ಮಾಡಿದ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ! ಶ್ರೀಚಿತ್‌ಶಕ್ತಿ (ಸೌ.) ಗಾಡಗೀಳರ ಚೈತನ್ಯಸ್ವರೂಪ ದೇವಿತತ್ತ್ವಕ್ಕೆ ನಮ್ಮೆಲ್ಲರ ಕೋಟಿ ಕೋಟಿ ಕೃತಜ್ಞತಾಪೂರ್ವಕ ವಂದನೆ !’

– ಶ್ರೀಸತ್‌ಶಕ್ತಿ (ಸೌ.) ಬಿಂದಾ ನೀಲೇಶ ಸಿಂಗಬಾಳ