ದೇಶದಲ್ಲಿನ ಹಿಂದೂ ದೇವಾಲಯಗಳು ಮತ್ತು ಅವುಗಳ ರಕ್ಷಣೆಗಾಗಿ ಹಿಂದೂಸಂಘಟನೆಯ ಮಹತ್ವ ! – ಸುಶ್ರೀ ರಾಮಪ್ರಿಯಾಶ್ರೀಜೀ (ಮಾಯಿ) ಅವಘಡ

ಸುಶ್ರೀ ರಾಮಪ್ರಿಯಾಶ್ರೀಜೀ (ಮಾಯಿ) ಅವಘಡ

ಮೆಕಾಲೆಯ ಶಿಕ್ಷಣಪದ್ಧತಿ ಯನ್ನು ಭಾರತೀಯರ ಮೇಲೆ ಎಷ್ಟು ಬಿಂಬಿಸಲಾಗಿದೆ ಎಂದರೆ, ನಾವು ದೇಹದಿಂದ ಹಿಂದೂ ಆಗಿದ್ದರೂ, ನಮ್ಮ ಬುದ್ಧಿ ಮಾತ್ರ ಆಂಗ್ಲೀಕರಣ ವಾಗಿದೆ. ಭಾರತದ ಭೂತಕಾಲ ಅತ್ಯಂತ ಗೌರವಶಾಲಿಯಾಗಿತ್ತು ಇದನ್ನು ನಾವು ತಿಳಿದುಕೊಳ್ಳಬೇಕು. ಒಂದು ವೇಳೆ ನಾವು ದಕ್ಷಿಣ ಭಾರತದಲ್ಲಿನ ಸಾವಿರಾರು ವರ್ಷಗಳ ಹಿಂದೆ ನಿರ್ಮಿಸಲಾದ ನಮ್ಮ ಪುರಾಣಕಾಲದಲ್ಲಿನ ದೇವಸ್ಥಾನಗಳನ್ನು ನೋಡಿದರೆ, ನಮಗೆ ಅವು ಗಳನ್ನು ಹೇಗೆ ಕಟ್ಟಿರಬೇಕು ಎಂಬುದರ ಆಶ್ಚರ್ಯವಾಗಬಹುದು. ಮದುರೈ (ತಮಿಳುನಾಡು) ಮೀನಾಕ್ಷಿ ದೇವಾಲಯ, ಖಜುರಾಹೋ ಇಂತಹ ಪೌರಾಣಿಕ ದೇವಾಲಯಗಳು, ರಾಮೇಶ್ವರ ದೇವಾಲಯ, ಕೈಲಾಸ ಮಂದಿರ, ಇಂತಹ ಸಾವಿರಾರು ವರ್ಷಗಳ ಹಿಂದೆ ನಿರ್ಮಿಸಿದ ಅಗಣಿತ ಮಂದಿರಗಳಿವೆ. ಈ ಮಂದಿರಗಳನ್ನು ನಿರ್ಮಿಸಿದ ಪ್ರಾಚೀನ ಭಾರತೀಯರು ಉತ್ತಮ ಅಭಿಯಂತ್ರಿಕ (ಇಂಜಿನೀಯರಿಂಗ್) ಜ್ಞಾನವನ್ನು ಹೇಗೆ ಪಡೆದಿರಬಹುದು ? ಆ ಕಾಲದಲ್ಲಿ ಅವರು ಇಷ್ಟು ಉತ್ತಮ, ದೊಡ್ಡ ದೊಡ್ಡ ದೇವಸ್ಥಾನಗಳನ್ನು ಹೇಗೆ ಕಟ್ಟಿರಬಹುದು ? ಆ ಕಾಲದಲ್ಲಿ ಇಷ್ಟು ದೊಡ್ಡ ದೊಡ್ಡ ಬಂಡೆಕಲ್ಲುಗಳನ್ನು ಒಂದರ ಮೇಲೆ ಒಂದನ್ನಿಡಲು ಎಂತಹ ‘ಕ್ರೈನ್‌ ಇದ್ದಿರಬಹುದು ? ಆ ಕಾಲದಲ್ಲಿ ಇಷ್ಟು ದೊಡ್ಡ ಶಿಲೆಗಳನ್ನು ಮೇಲೆ ಹೇಗೆ ಒಯ್ದಿರಬಹುದು ? ಇಷ್ಟು ಎತ್ತರದ ದೇವಸ್ಥಾನಗಳ ನಿರ್ಮಾಣ ಕಾರ್ಯವನ್ನು ಹೇಗೆ ಮಾಡಿರಬಹುದು ? ಸಾವಿರಾರು ವರ್ಷಗಳ ನಂತರವೂ ನೂರಾರು ಪ್ರಾಚೀನ ದೇವಸ್ಥಾನಗಳು ಯಥಾಸ್ಥಿತಿಯಲ್ಲಿವೆ. ಇಂತಹ ದೇವಸ್ಥಾನಗಳ ನಿರ್ಮಾಣವನ್ನು ಹೇಗೆ ಮಾಡಲಾಗುತ್ತದೆ ? ಎಂಬುದು ವಿದೇಶದಲ್ಲಿನ ಜನರಿಗೆ ಇಂದಿಗೂ ತಿಳಿದಿಲ್ಲ; ಆದರೆ ನಮ್ಮ ಭಾರತೀಯರಿಗೆ ಅತೀಪ್ರಾಚೀನ ಕಾಲದಿಂದಲೂ ಆ ಜ್ಞಾನವಿತ್ತು. ನಮ್ಮ ದೇವಸ್ಥಾನಗಳು ನಮಗೆ ಶ್ರದ್ಧೆ, ಪ್ರೇರಣೆ ಹಾಗೂ ಚೈತನ್ಯವನ್ನು ಕೊಡುವ ಕೇಂದ್ರಗಳಾಗಿವೆ ಹಾಗೂ ಇಂತಹ ನಮ್ಮ ಶ್ರದ್ಧಾಕೇಂದ್ರಗಳ ಮೇಲೆ ಪರಕೀಯ ಆಕ್ರಮಕರಿಂದ ಕಠೋರ ಪ್ರಹಾರವನ್ನು ಮಾಡಲಾಯಿತು. ಆಕ್ರಮಕರು ೫ ಲಕ್ಷಕ್ಕಿಂತಲೂ ಹೆಚ್ಚು ದೇವಸ್ಥಾನಗಳನ್ನು ಒಡೆದರು, ಇದು ನಮ್ಮ ದೊಡ್ಡ ದುರ್ಭಾಗ್ಯವಾಗಿದೆ.

೧. ಹಿಂದೂಗಳು ದೇವಸ್ಥಾನಗಳನ್ನು ನಿರ್ಮಿಸುವುದರ ಹಿಂದಿನ ಕಾರಣ

ಇಂದು ಅನೇಕರು ದೇವಸ್ಥಾನಗಳ ವ್ಯವಸ್ಥಾಪನೆಯ ವಿಷಯದಲ್ಲಿ ಚಿಂತನೆಯನ್ನು ಮಾಡುತ್ತಿದ್ದಾರೆ. ನಾವು ಪುರಾತನ ಕಾಲದಿಂದಲೂ ಹಿಂದೂ ದೇವಸ್ಥಾನಗಳನ್ನು ಏಕೆ ನಿರ್ಮಿಸಿದೆವು ? ದೇವಸ್ಥಾನಗಳ ನಿರ್ಮಿತಿಯ ಉದ್ದೇಶವೇನು ? ಅದರ ಕಾರಣಗಳು ಮುಂದಿನಂತಿವೆ :

ಅ. ಮೊದಲ ಕಾರಣ, ಯಾವ ಸ್ಥಳದಲ್ಲಿ ದೇವಸ್ಥಾನÀ ಇರುತ್ತದೆಯೋ, ಅದರ ಸುತ್ತಮುತ್ತಲಿನ ಪರಿಸರ ಚೈತನ್ಯಮಯವಾಗುತ್ತದೆ.
ಆ. ಎರಡನೆಯ ಕಾರಣ, ಜನರಿಗೆ ತಮ್ಮಲ್ಲಿ ಸಭ್ಯತೆಯನ್ನು ಮತ್ತು ನೈತಿಕತೆಯನ್ನು ಹೆಚ್ಚಿಸಲಿಕ್ಕಿದ್ದರೆ, ಅವರಿಗೆ ಸಾಧನೆಯನ್ನು ಮಾಡಬೇಕಾಗುತ್ತದೆ. ಸಾಧನೆ ಮಾಡಲು ಸಾಧಕರಿಗೆ ಏಕಾಂತ ಸಿಗಬೇಕೆಂದು ನಮ್ಮ ದೇವಸ್ಥಾನಗಳನ್ನು ನಿರ್ಮಿಸಲಾಗಿದೆ.
ಇ. ಮೂರನೇ ಕಾರಣ, ಜನರಿಗೆ ಸಹಜವಾಗಿ ದೇವಸ್ಥಾನಗಳು ಕಾಣಿಸಬೇಕು ಮತ್ತು ದೇವಸ್ಥಾನದಲ್ಲಿ ಸ್ಥಾಪಿಸಿದ ದೇವತೆಗಳ ಮೂರ್ತಿಗಳನ್ನು ಜನರಿಗೆ ನೋಡಲು ಸಾಧ್ಯವಾಗಬೇಕು. ಇದರಿಂದ ಜನರು ದೇವತೆಗಳ ಪೂಜೆ, ಉಪಾಸನೆ ಮಾಡುತ್ತಾ ತಮ್ಮ ಅಂತಃಕರಣ ದಲ್ಲಿನ ದೇವತ್ವವನ್ನು ಜಾಗೃತಗೊಳಿಸಬಹುದು. ಜನರು ಈ ರೀತಿ ಪ್ರಯತ್ನಿಸಬೇಕು, ಎಂಬುದು ಇದರ ಹಿಂದಿನ ಉದ್ದೇಶವಾಗಿದೆ. ಈ. ನಮ್ಮ ಮಂದಿರಗಳ ನಿರ್ಮಾಣದ ನಾಲ್ಕನೇ ಉದ್ದೇಶವೇನೆಂದರೆ, ಶ್ರೇಷ್ಠ ವಿಭೂತಿಗಳ ಪುಣ್ಯತಿಥಿ, ಮಹೋತ್ಸವಗಳ ನಿಮಿತ್ತದಲ್ಲಿ ಜನರನ್ನು ಒಟ್ಟುಗೂಡಿಸಿ ಅವರನ್ನು ಸಂಘಟಿಸುವುದು ಹಾಗೂ ಮುಂದೆ ಅವರಿಗೆ ಶಾಸ್ತ್ರವಿದ್ಯೆಯನ್ನು ಕಲಿಸುವುದು. ದೇವಸ್ಥಾನಗಳ ಮೂಲಕ ಶಾಸ್ತ್ರದ ಉಪಾಸನೆಯನ್ನು ಕಲಿಸಬೇಕು.

೨. ದೇವಸ್ಥಾನಗಳಲ್ಲಿ ಹಿಂದೂಗಳ ಸಂಘಟನೆಯಾದರೆ ಎಲ್ಲ ಮಂದಿರಗಳು ಸುರಕ್ಷಿತವಾಗಿರುವವು !

ಇಂದು ಕೆಲವು ದೇವಸ್ಥಾನಗಳ ಸ್ಥಿತಿ ಹೇಗಿದೆಯೆಂದರೆ, ಅಲ್ಲಿ ಆರತಿ ಮಾಡುವಾಗ ತಾಳ, ಮೃದಂಗ, ಝಾಂಜ್‌ ಇತ್ಯಾದಿ ಗಳನ್ನು ಯಂತ್ರದ ಮೂಲಕ ಬಾರಿಸುವುದು ಕಾಣಿಸುತ್ತದೆ. ಕೆಲವು ದಿನಗಳ ಹಿಂದೆ ಒಂದು ಚಲನಚಿತ್ರವನ್ನು (ವಿಡಿಯೊ) ನೋಡಿದೆ, ಅದರಲ್ಲಿ ೨೦-೨೫ ಚಿಕ್ಕ ಮಕ್ಕಳು ತಾಳ, ಮೃದಂಗ ಇತ್ಯಾದಿಗಳೊಂದಿಗೆ ಆರತಿ ಮಾಡುತ್ತಿದ್ದರು. ಅಲ್ಲಿ ತುಂಬಾ ಜನಸಂದಣಿ ಇತ್ತು. ಪ್ರತಿಯೊಂದು ದೇವಸ್ಥಾನದಲ್ಲಿ ಇಂತಹ ದೃಶ್ಯ ಕಾಣಿಸಿದರೆ, ದೇವಸ್ಥಾನಗಳು ಸುರಕ್ಷಿತವಾಗಿರುವವು.

೩. ಯುವಪೀಳಿಗೆಯು ಹನುಮಂತನ ಉಪಾಸನೆಯನ್ನು ಆರಂಭಿಸುವ ಆವಶ್ಯಕತೆ ಇದೆ !

ಇಂದಿನ ಹಿಂದೂ ಯುವಕರನ್ನು ಸಂಘಟಿಸುವುದು ಹಾಗೂ ಅವರನ್ನು ದೇವಸ್ಥಾನಗಳಿಗೆ ಜೋಡಿಸುವುದು ಆವಶ್ಯಕವಾಗಿದೆ. ಹನುಮಂತನಿಗೆ ‘ವಾಯುಪುತ್ರ’ ಎಂದು ಹೇಳುತ್ತಾರೆ, ‘ವಾಯು’ ಶಬ್ದವನ್ನು ತಿರುವುಮುರುವು ಮಾಡಿದರೆ ಅದು ‘ಯುವಾ’ ಆಗುತ್ತದೆ. ಭಾರತದಲ್ಲಿನ ಯುವಕರು ವಾಯುಪುತ್ರನ ಉಪಾಸನೆ ಆರಂಭಿಸಿದರೆ ಅದೊಂದು ದೊಡ್ಡ ಸಾಧನೆಯಾಗಬಹುದು.

೪. ಹಿಂದೂ ಪಾಲಕರು ಮಕ್ಕಳನ್ನು ದೇವಸ್ಥಾನಗಳಿಗೆ ಕರೆದುಕೊಂಡು ಹೋಗಲು ಸಮಯ ನಿರ್ಧರಿಸಬೇಕು !

ಹೆಚ್ಚಿನ ಹಿಂದೂ ತಂದೆ-ತಾಯಿಯಂದಿರಿಗೆ ಮಕ್ಕಳಿಗೆ ಅಭ್ಯಾಸ ಮಾಡುವುದು, ಶಾಲೆಗೆ ಹೋಗುವುದು, ಗೃಹಪಾಠಕ್ಕೆ ಹೋಗುವುದು ಅತೀ ಆವಶ್ಯಕವಾಗಿದೆ, ಅದರ ಹಾಗೆ ದೇವಸ್ಥಾನಕ್ಕೆ ಹೋಗುವುದು ಅಷ್ಟೇನು ಆವಶ್ಯಕವಾಗಿಲ್ಲ, ಎಂದು ಅನಿಸುತ್ತದೆ. ಆದ್ದರಿಂದ ಪಾಲಕರು ಮಕ್ಕಳಿಗೆ ಪ್ರತಿಯೊಂದು ವಿಷಯಕ್ಕಾಗಿ ಹೇಗೆ ಸಮಯ ನಿರ್ಧರಿಸುತ್ತಾರೆಯೋ, ಹಾಗೆಯೆ ಮಕ್ಕಳನ್ನು ದೇವಸ್ಥಾನಕ್ಕೆ ಕರೆದುಕೊಂಡು ಹೋಗಲು ಸಮಯ ನಿರ್ಧರಿಸಬೇಕು.

೫. ಮಕ್ಕಳಿಗೆ ಪರಕೀಯ ಆಕ್ರಮಕರರ ಇತಿಹಾಸ ತಿಳಿಸಿ !

ಕುತುಬ್‌ಮಿನಾರನ್ನು ಯಾರು ಕಟ್ಟಿದರು ? ತಾಜಮಹಾಲ್‌ ಯಾರು ನಿರ್ಮಿಸಿದರು ? ಇದು ನಮ್ಮ ಮಕ್ಕಳಿಗೆ ಗೊತ್ತಿರುತ್ತದೆ; ಆದರೆ ಸೋರಟಿ ಸೋಮನಾಥ ದೇವಸ್ಥಾನÀವನ್ನು ಯಾರು ಒಡೆದರು ? ಅಯೋಧ್ಯೆಯನ್ನು ಯಾರು ಹಾಳು ಮಾಡಿದರು ? ಇದು ನಮ್ಮ ಮಕ್ಕಳಿಗೆ ಏಕೆ ಗೊತ್ತಿಲ್ಲ ? ಭವ್ಯ ದೇವಸ್ಥಾನಗಳನ್ನು ನಿರ್ಮಾಣ ಮಾಡಲಾಯಿತು; ಆದರೆ ನಮ್ಮ ಸನಾತನಿ ಹಿಂದೂಗಳನ್ನು ಅಷ್ಟೇ ಸಕ್ಷಮ ಹಾಗೂ ಪರಾಕ್ರಮಿಗಳನ್ನಾಗಿ ಮಾಡುವುದೂ ಅಷ್ಟೇ ಆವಶ್ಯಕವಾಗಿದೆ. ಕೇವಲ ಪುರಾಣ ವಾಚನ ಮಾಡಿ ಇದು ಸಾಧ್ಯ ವಾಗದು, ಅದರೊಂದಿಗೆ ಆ ಮಕ್ಕಳನ್ನು ಪರಾಕ್ರಮಿ ಮಾಡಬೇಕು. – ಸುಶ್ರೀ ರಾಮಪ್ರಿಯಾಶ್ರೀಜೀ ಅವಘಡ, ಅಧ್ಯಕ್ಷೆ ರಾಮಪ್ರಿಯಾ ಫೌಂಡೇಶನ್, ಅಮರಾವತಿ, ಮಹಾರಾಷ್ಟ್ರ.

‘ಹಿಂದೂ ಜನಜಾಗೃತಿ ಸಮಿತಿ’ ದೇವಸ್ಥಾನ ರಕ್ಷಣೆಯ ಸೇನೆಯನ್ನು ನಿರ್ಮಿಸುವ ಕಾರ್ಯವನ್ನು ಮಾಡುತ್ತಿದೆ !

ದೇವಸ್ಥಾನಗಳನ್ನು ಕಟ್ಟಬೇಕು, ಅವು ತುಂಬಾ ಭವ್ಯವಾಗಿರಬೇಕು; ಆದರೆ ನನಗೇನು ಅನಿಸುತ್ತದೆ ಎಂದರೆ, ಹೊಸ ದೇವಸ್ಥಾನಗಳನ್ನು ಕಟ್ಟುವ ಬದಲು ಮೊದಲು ಯಾವ ಪ್ರಾಚೀನ ದೇವಸ್ಥಾನಗಳಿವೆಯೊ, ಅವುಗಳ ಜೀರ್ಣೋದ್ಧಾರವಾಗಬೇಕು. ದೊಡ್ಡ ಭವ್ಯ ದೇವಸ್ಥಾನಗಳನ್ನು ನಿರ್ಮಿಸಲಿಕ್ಕಿದ್ದರೆ, ಅವುಗಳ ರಕ್ಷಣೆ ಗಾಗಿ ಸೈನ್ಯ ಕೂಡ ಸಿದ್ಧವಿರಬೇಕು. ದೇವಸ್ಥಾನ ರಕ್ಷಣೆಯ ಸೈನ್ಯವನ್ನು ‘ಹಿಂದೂ ಜನಜಾಗೃತಿ ಸಮಿತಿ’ಯು ನಿರ್ಮಿಸುತ್ತಿದೆ. ಈ ವಿಷಯ ಅತ್ಯಂತ ಆವಶ್ಯಕ ಹಾಗೂ ಅನಿವಾರ್ಯವಾಗಿದೆ. ಅನಂತರವೆ ದೇವಸ್ಥಾನಗಳನ್ನು ನಿರ್ಮಿಸಬೇಕು.

– ಸುಶ್ರೀ ರಾಮಪ್ರಿಯಾಶ್ರೀಜೀ (ಮಾಯಿ) ಅವಘಡ