ದೇವಸ್ಥಾನಗಳನ್ನು ಸಾಮೂಹಿಕ ಉಪಾಸನೆಯ ಕೇಂದ್ರಗಳನ್ನಾಗಿಸಿ !
* ನಮ್ಮ ಸಮೀಪದ ದೇವಸ್ಥಾನ ಗಳಲ್ಲಿ ಪ್ರತಿದಿನ ಆರತಿ, ಪ್ರಾರ್ಥನೆ ಅಥವಾ ನಾಮಜಪ ಮಾಡಲು ಒಟ್ಟುಸೇರಿ !
* ದೇವಸ್ಥಾನಗಳಲ್ಲಿ ಹಿಂದೂಗಳಿಗೆ ‘ಧರ್ಮಶಿಕ್ಷಣವರ್ಗ’ ಮತ್ತು ‘ಬಾಲಸಂಸ್ಕಾರ ವರ್ಗ’ವನ್ನು ಪ್ರಾರಂಭಿಸಿ !
* ಸಂಸ್ಕ್ರತಪಠಣ, ಯೋಗಾಸನಗಳಂತಹ ಸಂಸ್ಕ್ರತಿಯನ್ನು ಕಾಪಾಡುವ ಉಪಕ್ರಮವನ್ನು ನಡೆಸಲು ಯೋಗದಾನ ನೀಡಿ !
* ವಾರಕ್ಕೊಮ್ಮೆಯಾದರೂ ದೇವಸ್ಥಾನದ ಸಾಮೂಹಿಕ ಸ್ವಚ್ಛತೆ ಮಾಡಿ !
ದೇವಸ್ಥಾನದಲ್ಲಿ ಪ್ರದಕ್ಷಿಣೆಗಳನ್ನು ಹೇಗೆ ಹಾಕಬೇಕು ?
* ಪ್ರದಕ್ಷಿಣೆಗಳನ್ನು ಹಾಕುವ ಮೊದಲು ದೇವರಿಗೆ ಪ್ರಾರ್ಥನೆ ಮಾಡಬೇಕು.
* ಎರಡೂ ಕೈಗಳನ್ನು ಜೋಡಿಸಿ ಭಾವಪೂರ್ಣ ನಾಮಜಪವನ್ನು ಮಾಡುತ್ತಾ ಮಧ್ಯಮ ಗತಿಯಲ್ಲಿ ಪ್ರದಕ್ಷಿಣೆಗಳನ್ನು ಹಾಕಬೇಕು. ಪ್ರದಕ್ಷಿಣೆಗಳನ್ನು ಹಾಕುವಾಗ ಗರ್ಭಗುಡಿಯನ್ನು (ಅಥವಾ ದೇವಸ್ಥಾನವನ್ನು) ಸ್ಪರ್ಶಿಸಬಾರದು.
* ಪ್ರದಕ್ಷಿಣೆಗಳನ್ನು ಹಾಕುವಾಗ ದೇವರ ಹಿಂದಿನ ಬದಿಗೆ ಬಂದ ಮೇಲೆ ನಿಂತು ದೇವರಿಗೆ ನಮಸ್ಕಾರ ಮಾಡಿಯೇ ಮುಂದೆ ಹೋಗಬೇಕು.
ದೇವರ ದರ್ಶನವನ್ನು ಹೇಗೆ ಪಡೆಯಬೇಕು ?
* ದೇವಸ್ಥಾನದಲ್ಲಿ ಘಂಟೆಯನ್ನು ಮೆಲುಧ್ವನಿಯಲ್ಲಿ ಬಾರಿಸಬೇಕು.
* ದೇವರ ಮೂರ್ತಿಯ ಎದುರಿ ನಲ್ಲಿರುವ ಆಮೆಯ (ಶಿವನ ದೇವಸ್ಥಾನದಲ್ಲಿ ನಂದಿಯ) ಬದಿಯಲ್ಲಿ ನಿಂತುಕೊಂಡು ಕೈಗಳನ್ನು ಜೋಡಿಸಿ ದರ್ಶನವನ್ನು ಪಡೆದುಕೊಳ್ಳಬೇಕು.
* ಮೊದಲು ದೇವರ ಚರಣಗಳಲ್ಲಿ ದೃಷ್ಟಿಯನ್ನಿಟ್ಟು ಲೀನರಾಗಬೇಕು, ಅನಂತರ ದೇವರ ಎದೆಯ ಮೇಲೆ ಮನಸ್ಸನ್ನು ಏಕಾಗ್ರಗೊಳಿಸಬೇಕು ಮತ್ತು ಕೊನೆಗೆ ದೇವರ ಕಣ್ಣುಗಳತ್ತ ನೋಡಿ ಅವರ ರೂಪವನ್ನು ಕಣ್ಣುಗಳಲ್ಲಿ ತುಂಬಿಕೊಳ್ಳಬೇಕು.