‘ಹಲಾಲ್‌ ಪ್ರಮಾಣಪತ್ರ’ದ ನಿರರ್ಥಕತೆ !

‘ಹಲಾಲ್‌ ಪ್ರಮಾಣಪತ್ರ’ದ ನಿಜಸ್ವರೂಪ

‘ಹಲಾಲ್‌ ಪ್ರಮಾಣಪತ್ರ’ ನೀಡುವ ಖಾಸಗಿ ಇಸ್ಲಾಮಿ ಸಂಸ್ಥೆಗಳ ಆವಶ್ಯಕತೆಯೇನು ?

ಭಾರತ ಸರಕಾರದ ‘ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ’ ಅಂತರ್ಗತ ‘ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ (Food Safety and Standard Authority of India -FSSAI)’ ಹಾಗೆಯೇ ವಿವಿಧ ರಾಜ್ಯಗಳಲ್ಲಿ ‘ಆಹಾರ ಮತ್ತು ಔಷಧ ಆಡಳಿತ’ (Food and Drug Administration- FDA) ಈ ಇಲಾಖೆಗಳನ್ನು ಸ್ಥಾಪಿಸಲಾಗಿದೆ. ಖಾದ್ಯಪದಾರ್ಥ ಗಳು ಹಾಗೆಯೇ ಔಷಧಗಳಿಗೆ ಸಂಬಂಧಿಸಿದ ಎಲ್ಲ ಅನುಮತಿಗಳನ್ನು ನೀಡುವ ಹಕ್ಕು ಈ ಇಲಾಖೆಗಳಿಗಿರುತ್ತದೆ. ಅದಕ್ಕಾಗಿ ಸಂಬಂಧಿಸಿದ ಕಂಪನಿಗೆ ಜಾಗದ ರಚನೆಯಿಂದ ಹಿಡಿದು ಅಗ್ನಿ ನಿರೋಧಕ ವ್ಯವಸ್ಥೆ ಮತ್ತು ಕಸದ ವಿಲೇವಾರಿ, ಇಂತಹ ಎಲ್ಲ ಆವಶ್ಯಕ ಅಂಶಗಳನ್ನು ಈಡೇರಿಸಬೇಕಾಗುತ್ತದೆ. ಇದಕ್ಕಾಗಿ ಸರಕಾರದಿಂದ ಶುಲ್ಕವನ್ನೂ ವಿಧಿಸಲಾಗುತ್ತದೆ.

‘ಯಾವುದಾದರೊಂದು ಪದಾರ್ಥವು ಸಸ್ಯಾಹಾರಿಯೋ, ಮಾಂಸಾಹಾರಿಯೋ’ ಎಂಬುದನ್ನೂ ಈ ಇಲಾಖೆಗಳಿಂದ ವಿವಿಧ ಪರಿಶೀಲನೆಗಳನ್ನು ಮಾಡಿ ಅದರಲ್ಲಿನ ಘಟಕಗಳ ಆಧಾರದಲ್ಲಿ ನಿರ್ಧರಿಸಲಾಗುತ್ತದೆ. ಇದಕ್ಕಾಗಿ ಈ ಇಲಾಖೆಗಳಲ್ಲಿ ಅತ್ಯಾಧುನಿಕ ಪ್ರಯೋಗಾಲಯ ಮತ್ತು ತರಬೇತಿ ಪಡೆದ ಕೆಲಸಗಾರರಿರುತ್ತಾರೆ. ಇಲ್ಲಿ ಎಲ್ಲ ಪರಿಶೀಲನೆಗಳನ್ನು ಮಾಡಿ ಆ ಪದಾರ್ಥಗಳಲ್ಲಿನ ಎಲ್ಲ ಘಟಕಗಳು ಮತ್ತು ಅವುಗಳ ಪ್ರಮಾಣದ ಒಂದು ಪಟ್ಟಿಯನ್ನು ಆ ಉತ್ಪನ್ನದ ಮೇಲೆ ಅಂಟಿಸಲಾಗುತ್ತದೆ. ಇಷ್ಟೇ ಅಲ್ಲ, ಆ ಪದಾರ್ಥವು ಸಸ್ಯಾಹಾರಿ ಯಾಗಿರುವುದನ್ನು ಗುರುತಿಸಲು ಅದರ ಮೇಲೆ ಒಂದು ಚೌಕೋನದಲ್ಲಿ ಹಸಿರು ಬಣ್ಣದ ದೊಡ್ಡ ಚುಕ್ಕೆಯನ್ನು ಮತ್ತು ಅದರಲ್ಲಿ ಒಂದೇ ಒಂದು ಮಾಂಸಾಹಾರಿ ಘಟಕವಿದ್ದರೂ ಅದರ ಮೇಲೆ ಚೌಕೋನದಲ್ಲಿ ಕೆಂಪು ಅಥವಾ ಕಂದು ಬಣ್ಣದ ಚುಕ್ಕೆಯನ್ನು ಮುದ್ರಿಸಲಾಗುತ್ತದೆ. ಅದಕ್ಕೂ ಮುಂದೆ ೧೬.೧೨.೨೦೨೧ ರಂದು ದೆಹಲಿ ಉಚ್ಚ ನ್ಯಾಯಾಲಯವು ಈ ಸಂದರ್ಭದ ಒಂದು ಅರ್ಜಿಯ ತೀರ್ಪಿನಲ್ಲಿ ಸಂಬಂಧಿತ ಪದಾರ್ಥಗಳಲ್ಲಿನ ಘಟಕಗಳ ಮೂಲ ಸ್ರೋತವನ್ನೂ ಮುಂಭಾಗದಲ್ಲಿ ಮುದ್ರಿಸುವ ಆದೇಶ ನೀಡಿದೆ. ಇದರ ಅರ್ಥ, ಇನ್ನು ಮುಂದೆ ಒಂದು ‘ಐಸ್‌ಕ್ರೀಮ್‌’ನಲ್ಲಿ ‘ಕ್ಯಾಪ್ರಿಕ್‌ ಯಾಸಿಡ್’ ಇದ್ದು ಅದನ್ನು ಪ್ರಾಣಿಗಳ ಕೊಬ್ಬಿನಿಂದ ಪಡೆದಿದ್ದಲ್ಲಿ ಉತ್ಪನ್ನಗಳ ಮೇಲೆ ಹಾಗೆ ಉಲ್ಲೇಖಿಸುವುದು ಕಡ್ಡಾಯವಾಗಿದೆ. ‘ಚ್ಯುಯಿಂಗ್‌ ಗಮ್‌’ನಲ್ಲಿ ಬಳಸುವ ‘ಜಿಲೆಟಿನ್‌’ನ್ನು ಹಂದಿ ಅಥವಾ ಗೋವಂಶದ ಅವಯವಗಳಿಂದ ಪಡೆದಿದ್ದಲ್ಲಿ ಅದನ್ನು ಉಲ್ಲೇಖಿಸಬೇಕಾಗುತ್ತದೆ.