ಕೇರಳದಲ್ಲಿನ ಭರತಪುಝಾ ನದಿಯ ಮೇಲೆ ಕಟ್ಟಲಾಗುವ ಸೇತುವೆಯ ಸಂರಚನೆಯಲ್ಲಿ ಬದಲಾವಣೆ ಮಾಡಲು ಸರಕಾರಕ್ಕೆ ಸಲ್ಲಿಸಿರುವ ಅರ್ಜಿಯನ್ನು ತಿರಸ್ಕರಿಸಿದಕ್ಕಾಗಿ ಅರ್ಜಿ ಸಲ್ಲಿಕೆ
ತಿರುವನಂತಪುರಂ (ಕೇರಳ) – ಕೇರಳದಲ್ಲಿನ ಭರತಪುಝಾ ನದಿಯ ಮೇಲೆ ರಾಜ್ಯ ಸರಕಾರದಿಂದ ಸೇತುವೆ ನಿರ್ಮಾಣ ಮಾಡಲಾಗುತ್ತಿದೆ. ಈ ಸೇತುವೆಯ ಸಂರಚನೆಯ ಸಂದರ್ಭದಲ್ಲಿ ಪ್ರಸಿದ್ಧ ನಿವೃತ್ತ ಇಂಜಿನಿಯರ್ ಈ. ಶ್ರೀಧರನ್ ಇವರು ಕೇರಳ ಉಚ್ಚ ನ್ಯಾಯಾಲಯದಲ್ಲಿ ಅರ್ಜಿ ದಾಖಲಿಸಿ, ಈ ಸೇತುವೆಯ ಸಂರಚನೆಯಲ್ಲಿ ಕೆಲವು ಬದಲಾವಣೆ ಸೂಚಿಸಿದ್ದಾರೆ. ಇದರಿಂದ ಈ ಸೇತುವೆಯ ಕಾಮಗಾರಿಯಿಂದ ನಿರ್ಮಾಣವಾಗುವ ಸಾಮಾಜಿಕ ಮತ್ತು ಧಾರ್ಮಿಕ ಸಮಸ್ಯೆ ದೂರ ಗೊಳಿಸುವ ಪ್ರಯತ್ನ ಇರುವುದಾಗಿ ಅವರು ಇದರಲ್ಲಿ ಸ್ಪಷ್ಟಪಡಿಸಿದ್ದಾರೆ. ಈಗಿನ ಸೇತುವೆಯ ಸಂರಚನೆಯಿಂದ ಇಲ್ಲಿಯ ೩ ದೇವಸ್ಥಾನಗಳಿಗೆ ಸಮಸ್ಯೆಗಳು ನಿರ್ಮಾಣವಾಗುವುದು. ಮುಖ್ಯ ನ್ಯಾಯಾಧೀಶ ಎ. ಮಹಮ್ಮದ್ ಮುಸ್ತಾಕ್ ಮತ್ತು ನ್ಯಾಯಮೂರ್ತಿ ಎಸ್. ಮನೂ ಇವರ ಸಮಾವೇಶ ಇರುವ ಖಂಡ ಪೀಠದಿಂದ ಅರ್ಜಿ ಸ್ವೀಕರಿಸಲು ನಿರಾಕರಿಸಿರುವುದರಿಂದ ಈ ಪ್ರಕರಣದಲ್ಲಿ ರಾಜ್ಯ ಸರಕಾರದ ನಿಲುವು ತಿಳಿದುಕೊಳ್ಳಲಾಗುವುದೆಂದು ಹೇಳಲಾಗಿದೆ. ನ್ಯಾಯಾಲಯಕ್ಕೆ ಈ ಪ್ರಕರಣದ ಕುರಿತು ಸಪ್ಟೆಂಬರ್ ೯ ವರೆಗೆ ವರದಿ ಮಂಡಿಸಲು ಆದೇಶಿಸಿದೆ. ಅದರ ನಂತರ ಅರ್ಜಿ ಸ್ವೀಕರಿಸಬೇಕಾ ಅಥವಾ ಇಲ್ಲ ? ಇದರ ನಿರ್ಣಯವಾಗುವುದು.
೧. ಶ್ರೀಧರನ್ ಇವರು ಸೇತುವೆಯ ದಕ್ಷಿಣದ ತೀರ ೨೦೦ ಮೀಟರ್ ತೆರವುಗೊಳಿಸುವ ಪ್ರಸ್ತಾವ ನೀಡಿದ್ದರು. ಅವರು ಈ ವಿಷಯದ ಕುರಿತು ರಾಜ್ಯಕ್ಕೆ ಉಚಿತ ತಾಂತ್ರಿಕ ಸಹಾಯ ನೀಡುವುದಾಗಿ ಹೇಳಿದ್ದರು. ೨೦೨೨ ರಲ್ಲಿ ಕೇರಳದ ಮುಖ್ಯಮಂತ್ರಿ ಮತ್ತು ಸಾರ್ವಜನಿಕ ಕಾಮಗಾರಿ ಇಲಾಖೆಯ ಸಚಿವ ಇವರಿಗೆ ಪತ್ರ ಕೂಡ ಕಳುಹಿಸಿದ್ದರು; ಆದರೆ ಶ್ರೀಧರನ್ ಇವರಿಗೆ ಪ್ರತಿಕ್ರಿಯೆ ದೊರೆತಿರಲಿಲ್ಲ. ಆದ್ದರಿಂದ ಅವರು ನ್ಯಾಯಾಲಯಕ್ಕೆ ಹೋಗಬೇಕಾಯಿತು ಮತ್ತು ‘ಈಗಿರುವ ಸೇತುವೆಯ ಪುನಃರಚನೆ ಮಾಡಲು ಅವರು ಪ್ರಸ್ತಾವದಲ್ಲಿ ವಿಚಾರ ಮಾಡುವಂತೆ ರಾಜ್ಯಕ್ಕೆ ಆದೇಶ ನೀಡಬೇಕೆಂದು ವಿನಂತಿಸಿದರು.
೨. ಶ್ರೀಧರನ ಇವರ ಅರ್ಜಿಯ ಪ್ರಕಾರ, ಪ್ರಸ್ತಾವಿತ ಸೇತುವೆ ಈಗಿನ ಸಂರಚನೆಯಿಂದ ಭರತಪುಝಾದ ತೀರದಲ್ಲಿನ ಉತ್ತರದಕಡೆಯ ಥಿರುನಾವಯ ಇಲ್ಲಿಯ ಶ್ರೀ ವಿಷ್ಣು ದೇವಸ್ಥಾನ ಮತ್ತು ಥವಾನೂರ ಇಲ್ಲಿಯ ದಕ್ಷಿಣ ತೀರದಲ್ಲಿನ ಶ್ರೀ ಶಿವ ಮತ್ತು ಶ್ರೀ ಬ್ರಹ್ಮನ ದೇವಸ್ಥಾನಗಳು ಹೀಗೆ ವಿಭಜನೆ ಆಗುವುದು. ಆದ್ದರಿಂದ ಅರ್ಜಿಯಲ್ಲಿ, ಈಗಿನ ಸೇತುವೆಯ ಯೋಜನೆ ಅವೈಜ್ಞಾನಿಕವಾಗಿದೆ. ಇಂಜಿನಿಯರ್ಗಳ ತತ್ವಗಳ ಉಲ್ಲಂಘನೆ ಮಾಡುತ್ತಾ ಮತ್ತು ‘ಕೇರಳ ಗಾಂಧಿ’ ಎಂದು ಸನ್ಮಾನ್ಯ ಸ್ವಾತಂತ್ರ್ಯ ಸೇನಾನಿ ಕೆ. ಕೇಲಪ್ಪನ್ ಇವರ ಸಮಾಧಿ ಅಂತಹ ಐತಿಹಾಸಿಕ ವಾಸ್ತುವಿಗೆ ಕೂಡ ತೊಂದರೆ ಆಗುವ ಸಾಧ್ಯತೆ ಇದೆ. ಕಾಮಗಾರಿಯ ಖರ್ಚು ಕಡಿಮೆಗೊಳಿಸಿ ರಾಜ್ಯದ ಖಜಾನೆಗೆ ಉಳಿತಾಯ ಮಾಡುವ ಪರ್ಯಾಯ ಮತ್ತು ವ್ಯವಹಾರದ ಪ್ರಸ್ತಾವವನ್ನು ನಿರ್ಲಕ್ಷಿಸುವುದು, ಇದು ಅತ್ಯಂತ ಅನ್ಯಾಯ ಕಾರಕವಾಗಿದ್ದು ಅಕ್ರಮವಾಗಿದೆ, ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ.
೩. ಈ ಬಗ್ಗೆ ಸರಕಾರಿ ನ್ಯಾಯವಾದಿಗಳು, ಸೇತುವೆಯ ‘ಪೈಲಿಂಗ್’ ಕಾರ್ಯ ಮೊದಲೇ ಆರಂಭವಾಗಿದೆ ಮತ್ತು ಕಾಂಟ್ರಾಕ್ಟರ್ ಕಾಮಗಾರಿಯ ಸ್ಥಳದಲ್ಲಿ ಸಂಸಾಧನಗಳನ್ನು ಸಂಗ್ರಹಿಸಿದ್ದಾರೆ. ಈ ಪ್ರಕ್ರಿಯೆಯ ಇಂದ ದೇವಸ್ಥಾನದ ಯಾವುದೇ ಸಂಪತ್ತಿ ಕೊಳ್ಳಲಾಗುವುದಿಲ್ಲ. ಈ ಅರ್ಜಿ ಎಂದರೆ ಕೇವಲ ನಡೆಯುತ್ತಿರುವ ವಿಕಾಸಾತ್ಮಕ ಕಾರ್ಯದಲ್ಲಿ ಅಡಚಣೆಯ ನಿರ್ಮಾಣ ಮಾಡುವ ಪ್ರಯತ್ನವಾಗಿದೆ ಎಂದು ಹೇಳಿದರು.
ಸಂಪಾದಕೀಯ ನಿಲುವುಹಿಂದುಗಳ ದೇವಸ್ಥಾನದ ಪ್ರಶ್ನೆ ಇರುವುದರಿಂದ ಕೇರಳದಲ್ಲಿನ ಕಮ್ಯುನಿಸ್ಟ್ ಮೈತ್ರಿ ಸರಕಾರವು ಈ. ಶ್ರೀಧರನ್ ಇವರ ಪ್ರಸ್ತಾವವನ್ನು ನಿರ್ಲಕ್ಷಿಸಿದ್ದಾರೆ ಇದರಲ್ಲಿ ಆಶ್ಚರ್ಯವೇನು ಇಲ್ಲ ? |