ಶ್ರೀ ಗಣೇಶನ ೧೨ ಹೆಸರುಗಳು, ಅವುಗಳ ಸ್ಥಳಗಳು ಮತ್ತು ಅವುಗಳ ಪೂಜೆಯಲ್ಲಿನ ವಸ್ತುಗಳ ಕಥೆ !

೧. ಶ್ರೀ ಗಣೇಶನ ೧೨ ಹೆಸರುಗಳು

ಪ್ರಥಮಂ ವಕ್ರತುಣ್ಡಂ ಚ ಏಕದನ್ತಂ ದ್ವಿತೀಯಕಮ್‌ |

ತೃತೀಯಂ ಕೃಷ್ಣಪಿಙõಗ್Áಕ್ಷಂ ಗಜವಕ್ತ್ರಂ ಚತುರ್ಥಕಮ್‌ ||

ಲಮ್ಬೋದರಂ ಪಞ್ಚಮಂ ಚ ಷಷ್ಠಂ ವಿಕಟಮೇವ ಚ |

ಸಪ್ತಮಂ ವಿಘ್ನರಾಜೇನ್ದ್ರಂ ಧೂಮ್ರವರ್ಣಂ ತಥಾಷ್ಟಮಮ್‌ ||

ನವಮಂ ಭಾಲಚನ್ದ್ರಂ ಚ ದಶಮಂ ತು ವಿನಾಯಕಮ್‌ |

ಏಕಾದಶಂ ಗಣಪತಿಂ ದ್ವಾದಶಂ ತು ಗಜಾನನಮ್‌ ||

ಅರ್ಥ : ಮೊದಲು ವಕ್ರತುಂಡ, ೨. ಏಕದಂತ, ೩. ಕೃಷ್ಣಪಿಂಗಾಕ್ಷ, ೪. ಗಜವಕ್ತ್ರ, ೫. ಲಂಬೋದರ, ೬. ವಿಕಟ, ೭.  ವಿಘ್ನರಾಜೇಂದ್ರ, ೮. ಧೂಮ್ರವರ್ಣ, ೯. ಭಾಲಚಂದ್ರ, ೧೦. ವಿನಾಯಕ, ೧೧. ಗಣಪತಿ ಮತ್ತು ೧೨. ಗಜಾನನ, ಹೀಗೆ ಶ್ರೀ ಗಣೇಶನಿಗೆ ಹನ್ನೆರಡು ಹೆಸರುಗಳಿವೆ.

೨. ಸಮರ್ಥ ರಾಮದಾಸಸ್ವಾಮಿಗಳು ಹೇಳಿದ ಶ್ರೀ ಗಣೇಶನ ೧೨ ಹೆಸರುಗಳ ಸ್ಥಾನಗಳ ಮಾಹಿತಿ

ಮೇಲಿನ ೧೨ ಹೆಸರುಗಳ ಗಣಪತಿಯ ಸ್ಥಾನಗಳು ದೇಶದ ವಿವಿಧ ಭಾಗಗಳಲ್ಲಿದ್ದು ಸಮರ್ಥ ರಾಮದಾಸಸ್ವಾಮಿಗಳು ಈ ಸ್ಥಾನಗಳನ್ನು ಹುಡುಕಿದ್ದಾರೆ.

ಅ. ವಕ್ರತುಂಡ : ಕನ್ನಾನೂರ, ತಮಿಳುನಾಡು

ಆ. ಏಕದಂತ : ಕೋಲಕಾತಾ, ಬಂಗಾಲ

ಇ. ಕೃಷ್ಣಪಿಂಗಾಕ್ಷ : ಕನ್ಯಾಕುಮಾರಿ

ಈ. ಗಜವಕ್ತ್ರ : ಭುವನೇಶ್ವರದ ಹತ್ತಿರ, ಓಡಿಶಾ

ಉ. ಲಂಬೋದರ : ಗಣಪತಿ ಪುಳೆ, ಮಹಾರಾಷ್ಟ್ರ

ಊ. ವಿಕಟ : ಹೃಷಿಕೇಶ, ಉತ್ತರಾಖಂಡ

ಎ. ವಿಘ್ನರಾಜೇಂದ್ರ : ಕುರುಕ್ಷೇತ್ರ, ಹರಿಯಾಣಾ

ಐ. ಧೂಮ್ರವರ್ಣ : ಕೇರಳ ಮತ್ತು ಟಿಬೆಟ್‌ ಈ ಎರಡೂ ಸ್ಥಳಗಳಲ್ಲಿ

ಓ. ಭಾಲಚಂದ್ರ : ರಾಮೇಶ್ವರ, ತಮಿಳುನಾಡು

ಔ. ವಿನಾಯಕ : ಕಾಶೀಕ್ಷೇತ್ರ, ಉತ್ತರಪ್ರದೇಶ

ಕ. ಮಹಾಗಣಪತಿ : ಗೋಕರ್ಣ ಮಹಾಬಳೇಶ್ವರ, ಕರ್ನಾಟಕ

ಖ. ಗಜಾನನ : ಪಾಂಡುಕೇಶ್ವರ ತೀರ್ಥಕ್ಷೇತ್ರ, ಉತ್ತರಾಖಂಡ

೩. ಭಾದ್ರಪದ ಶುಕ್ಲ ಚತುರ್ಥಿಯಂದು ಶ್ರೀ ಗಣೇಶನಿಗೆ ತುಳಸಿಯನ್ನು ಏಕೆ ಅರ್ಪಿಸುತ್ತಾರೆ ?

ಗಣೇಶ ಎಂದರೆ ಸತ್ತ್ವ, ರಜ ಮತ್ತು ತಮ ಈ ಗುಣಗಳ ಪ್ರತಿನಿಧಿಯಾಗಿದ್ದಾನೆ. ಚತುರ್ಥಿಯಂದು ಗಣೇಶನ ಉಪಾಸನೆಗೆ ಮಹತ್ವವಿದೆ. ಭಾದ್ರಪದ ಶುಕ್ಲ ಚತುರ್ಥಿಯಂದು ಗಣಪತಿ ಪೂಜೆಯಲ್ಲಿ ತುಳಸಿಯ ಸ್ಥಾನವು ಮಹತ್ವದ್ದಾಗಿದೆ; ಏಕೆಂದರೆ ‘ಗಣಪತಿಯ ತಪಶ್ಚರ್ಯವನ್ನು ಭಂಗಗೊಳಿಸಿರುವುದರಿಂದ ವೃಂದಾ ಎಂಬ ಹೆಸರಿನ ರಾಜಕನ್ಯೆಗೆ ತುಳಸಿಗಿಡದ ರೂಪ ಬರುವುದು’, ಎಂದು ಗಣಪತಿಯು ಶಾಪವನ್ನು ಕೊಟ್ಟನು. ಅವಳು ಗಣಪತಿಯ ತಪಶ್ಚರ್ಯವನ್ನು ಬಹಳ ಮಾಡಿದಳು ಮತ್ತು ಗಣಪತಿಯು ಪ್ರಸನ್ನನಾಗಿ, ‘ನನ್ನ ಪೂಜೆಯಲ್ಲಿ ನಿನಗೆ ಒಂದು ದಿನದ ಮಟ್ಟಿಗೆ ಸ್ಥಾನವಿರುವುದು’ ಎಂದು ಹೇಳಿದನು.

೪. ಮಂದಾರ ಮತ್ತು ಬನ್ನಿ (ಶಮೀ) ಇವುಗಳ ಬಗೆಗಿನ ಕಥೆ

ಗಣಪತಿಗೆ ಗರಿಕೆಯಂತೆಯೇ ಶಮೀ (ಬನ್ನಿ) ಎಲೆಗಳು ಇಷ್ಟವಾಗುತ್ತವೆ. ಗಣಪತಿಗೆ ಮಂದಾರದ ಗಿಡ ಇಷ್ಟವಾಗುತ್ತದೆ. ಕೇವಲ ಮಂದಾರದ ಬೇರಿನ ಪೂಜೆ ಮಾಡಿದರೂ ಗಣೇಶನ ಪೂಜೆಯು ಫಲಶೃತಿಯಾಗುತ್ತದೆ. ಔರ್ಯ ಋಷಿಗಳ ಕನ್ಯೆ ಶಮಿ ಮತ್ತು ಧೌಮ್ಯಋಷಿಗಳ ಸುಪುತ್ರ ಮಂದಾರ ಇವರ ಮದುವೆ ಆಯಿತು. ಒಮ್ಮೆ ಅವರ ಆಶ್ರಮಕ್ಕೆ ಭೃಶುಂಡಿಋಷಿಗಳು ಬಂದಾಗ ಅವರ ಆನೆಯಂತಹ ಮುಖವನ್ನು ನೋಡಿ ಶಮಿ ಮತ್ತು ಮಂದಾರ ಇವರು ನಗತೊಡಗಿದರು, ಆಗ ಭೃಶುಂಡಿಋಷಿಗಳು ‘ನೀವಿಬ್ಬರು ವೃಕ್ಷಯೋನಿಯಲ್ಲಿ ಜನ್ಮ ಪಡೆಯುವಿರಿ’, ಎಂದು ಶಾಪವನ್ನು ಕೊಟ್ಟರು ಮತ್ತು ಇಬ್ಬರು ವೃಕ್ಷಗಳಾದರು. ಇವರಿಬ್ಬರ ಬಿಡುಗಡೆಗಾಗಿ ಮಂದಾರನ ಗುರುಗಳಾದ ಶೈನಿಕ ಇವರು ಗಣಪತಿಯ ಕಠೋರ ತಪಶ್ಚರ್ಯವನ್ನು ಮಾಡಿದರು. ಗಣಪತಿಯು ಪ್ರಸನ್ನನಾದ ನಂತರ, ”ಭೃಶುಂಡಿಯು ಗಣೇಶನ ಭಕ್ತನಾಗಿರುವುದರಿಂದ ಅವನ ಶಾಪವು ಸುಳ್ಳಾಗಲಾರದು. ಬೇಕಾದರೆ ನಾನು ಮಂದಾರ ವೃಕ್ಷದ ಬುಡದಲ್ಲಿರುತ್ತೇನೆ ಮತ್ತು ಶಮಿಗೆ ನನ್ನ ಪೂಜೆಯಲ್ಲಿ ಸ್ಥಾನವನ್ನು ಕೊಡುತ್ತೇನೆ,” ಎಂದು ಹೇಳಿದನು.

೫. ಗಣಪತಿಗೆ ಗರಿಕೆಗಳನ್ನು ಏಕೆ ಅರ್ಪಿಸಲಾಗುತ್ತದೆ ?

ಅನಲಾಸುರ ಹೆಸರಿನ ಅಸುರನು ತಪಶ್ಚರ್ಯ ಮಾಡಿ ಭಗವಾನ ಶಂಕರನಿಂದ ಅಜೇಯನಾಗಲು ವರ ಬೇಡಿದನು. ಅವನು ಉಪದ್ರವ ಕೊಡಲು ಪ್ರಾರಂಭಿಸಿದನು. ಆ ಸಮಯದಲ್ಲಿ ಎಲ್ಲರೂ ತಮ್ಮ ರಕ್ಷಣೆಗಾಗಿ ಗಣಪತಿಯನ್ನು ಸ್ತುತಿಸತೊಡಗಿದರು. ಆಗ ಗಣಪತಿಯು ಪ್ರಕಟನಾಗಿ ಪ್ರಚಂಡ ಸ್ವರೂಪವನ್ನು ಧಾರಣೆ ಮಾಡಿ ಆ ಅಸುರನನ್ನು ನುಂಗಿದನು. ಆ ಸಮಯದಲ್ಲಿ ಎಲ್ಲರೂ ತಮ್ಮ ರಕ್ಷಣೆಗಾಗಿ ಗಣಪತಿಯನ್ನು ಸ್ತುತಿಸತೊಡಗಿದರು. ಆಗ ಗಣಪತಿಯು ಪ್ರಕಟನಾಗಿ ಪ್ರಚಂಡ ಸ್ವರೂಪವನ್ನು ಧಾರಣೆ ಮಾಡಿ ಆ ಅಸುರನನ್ನು ನುಂಗಿದನು. ಆ ದೈತ್ಯನ ಪ್ರಖರವಾದ ಅಗ್ನಿಯಂತಿರುವ ಪ್ರಚಂಡ ಶರೀರವು ಗಣಪತಿಯ ಹೊಟ್ಟೆಯೊಳಗೆ ಹೋಗಿ ಗಣಪತಿಯ ಶರೀರ ಉರಿಯತೊಡಗಿತು ಮತ್ತು ಆ ಉರಿಯು ಏನು ಮಾಡಿದರೂ ಶಾಂತವಾಗುತ್ತಿರಲಿಲ್ಲ. ಚಂದ್ರನು ತನ್ನ ಶೀತಲತೆ ಕೊಟ್ಟನು, ಆದರೂ ದಾಹ ಶಾಂತ ವಾಗುತ್ತಿರಲಿಲ್ಲ ಅಷ್ಟರಲ್ಲಿ ಅಲ್ಲಿ ಕೆಲವು ಋಷಿಗಳು ಗರಿಕೆಗಳನ್ನು ತಂದರು. ಅವರು ಗಣಪತಿಯನ್ನು ಸ್ತುತಿಸಿದರು ಮತ್ತು ಭಾವಪೂರ್ಣ ಅಂತಃಕರಣದಿಂದ ಆ ಗರಿಕೆಗಳನ್ನು ಗಣಪತಿಯ ಮಸ್ತಕದ ಮೇಲೆ ಅರ್ಪಿಸಿದರು ಆಗ ದಾಹ ಶಾಂತವಾಯಿತು. ಆಗ ಗಣಪತಿಯು ಎಲ್ಲ ದೇವತೆಗಳಿಗೆ, ”ನನಗೆ ಗರಿಕೆಗಳು ತುಂಬಾ ಇಷ್ಟವಾಗುತ್ತವೆ” ಎಂದು ಹೇಳಿದನು. ಅಂದಿನಿಂದ ಎಲ್ಲ ದೇವರು ಗರಿಕೆಗಳನ್ನು ಅರ್ಪಿಸಿ ಗಣಪತಿಯ ಪೂಜೆ ಮಾಡಲು ಪ್ರಾರಂಭಿಸಿದರು.

೬. ಗಣಪತಿಗೆ ಸಿಂಧೂರ ಹಚ್ಚುವ ಪದ್ಧತಿ ಯಾವಾಗ ಆರಂಭವಾಯಿತು ?

‘ಸಿಂಧೂರನನ್ನು ವಧಿಸಿದ ನಂತರ ಘುಷ್ಣೇಶ್ವರದ ಹತ್ತಿರದ ಸಿಂಧೂರವಾಡಾದಲ್ಲಿ ಗಣಪತಿಯು ಸಿಂಧೂರಾಸುರನ ರಕ್ತವನ್ನು ತನ್ನ ಮೈಗೆಲ್ಲ ಹಚ್ಚಿಕೊಂಡನು ಮತ್ತು ತನ್ನ ಅವತಾರ ಕಾರ್ಯವನ್ನು ಮುಗಿಸಿದನು’, ಎಂಬ ಕಥೆಯಿದೆ. ಅಂದಿನಿಂದ ಗಣಪತಿಗೆ ಸಿಂಧೂರ ವನ್ನು ಹಚ್ಚುವ ಪದ್ಧತಿಯು ಆರಂಭವಾಯಿತು.

೭. ಗಣೇಶನ ವಾಹನ ಇಲಿ ಏಕೆ ?

ಕ್ರೌಂಚ ಎಂಬ ಹೆಸರಿನ ಗಂಧರ್ವನು ದರಬಾರಿನಲ್ಲಿ ವಾಮದೇವ ಎಂಬ ಋಷಿಗೆ ಸಿಟ್ಟಿನಿಂದ ಒದ್ದನು. ಆದ್ದರಿಂದ ವಾಮದೇವರು ಶಾಪವನ್ನು ನೀಡಿರುವುದರಿಂದ ಆ ಗಂಧರ್ವನು ಇಲಿಯಾದನು. ಅದು ಪರಾಶರಋಷಿಗಳ ಆಶ್ರಮದಲ್ಲಿ ಹೋಗಿ ಧಾನ್ಯದ ಸಂಗ್ರಹವನ್ನು ನಾಶಗೊಳಿಸಲು ಪ್ರಾರಂಭಿಸಿತು. ಅದಕ್ಕೇ ಬೇಸತ್ತು ಪರಾಶರಋಷಿಗಳು ಗಣೇಶನನ್ನು ಪ್ರಾರ್ಥಿಸಿದರು. ಆಗ ಗಣಪತಿಯು ಅದನ್ನು ಶಾಶ್ವತವಾಗಿ ತನ್ನ ಹತೋಟಿಯಲ್ಲಿಡಲು ತನ್ನ ವಾಹನವನ್ನಾಗಿ ಮಾಡಿಕೊಂಡನು. ಅಂದಿನಿಂದ ಇಲಿಯು ಗಣೇಶನ ವಾಹನವಾಗಿದೆ.

ಗಣೇಶ ಎಂದರೆ ಪವಿತ್ರದ ಪ್ರತೀಕ. ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ ಲಕ್ಷಗಟ್ಟಲೆ ಹಿಂದೂಗಳು ನೂರಾರು ವರ್ಷಗಳ ವರೆಗೆ ಎಲ್ಲ ಮಂಗಳಕಾರ್ಯವನ್ನು ಗಣೇಶನ ಸಾಕ್ಷಿಯಿಂದ ಮಾಡುತ್ತಿದ್ದಾರೆ. ಅವನ ಚರಣಗಳಲ್ಲಿ ಭಾವಪೂರ್ಣ ವಂದನೆಗಳು !

ಲೇಖಕರು : ರಮಾಕಾಂತ ಪಂಡಿತ ಸಾಯೀದಾಸಾನಂದ, ಮಾಟುಂಗ, ಮುಂಬೈ