ಸದ್ಯ, ‘ಹಲಾಲ್ ಜಿಹಾದ್’ (‘ಹಲಾಲ್’ ಅಂದರೆ ಇಸ್ಲಾಂನ ಪ್ರಕಾರ, ಮಾನ್ಯವಾದುದು) ಒಂದು ಗಂಭೀರ ಆರ್ಥಿಕ ಸಂಕಟ ಭಾರತೀಯರ ಮೇಲೆ ತಲೆದೋರಿದೆ. ಹಲಾಲ್ ಪರಿಕಲ್ಪನೆಯು ಈಗ ಕೇವಲ ಮಾಂಸಕ್ಕೆ ಮಾತ್ರ ಸೀಮಿತವಾಗಿಲ್ಲ. ಈಗ ಅನೇಕ ಶಾಖಾಹಾರಿ ಪದಾರ್ಥಗಳು, ಉದಾ ಧಾನ್ಯ, ಖಾದ್ಯ ತೈಲ, ಒಣ ಹಣ್ಣು (ಡ್ರೈಫ್ರೂಟ್), ಸಿಹಿತಿಂಡಿ, ಚಾಕೊಲೇಟು, ತಂಪು ಪಾನೀಯ ಇತ್ಯಾದಿಗಳನ್ನು ಕೂಡ ಹಲಾಲ್ ಎಂದು ಪ್ರಮಾಣೀಕರಿಸಲಾಗುತ್ತಿದೆ. ಪ್ರತಿಯೊಂದು ಕ್ಷೇತ್ರದಲ್ಲಿ ಹರಡುತ್ತಿರುವ ಇಂತಹ ಘಾತಕ ಹಲಾಲ್ ಪಿತೂರಿಯಿಂದ ಹಿಂದೂಗಳ ಪವಿತ್ರ ಹಬ್ಬ – ಉತ್ಸವಗಳು ಸಹ ಹೊರತಾಗಿಲ್ಲ. ಗಣೇಶೋತ್ಸವದಲ್ಲಿ ಶ್ರೀ ಗಣೇಶನ ದೈನಂದಿನ ನೈವೇದ್ಯಕ್ಕಾಗಿ ಹಿಂದೂ ಭಕ್ತರು ಸಿಹಿತಿಂಡಿಗಳನ್ನು ಮತ್ತು ವಿವಿಧ ಪದಾರ್ಥಗಳನ್ನು ಮಾರುಕಟ್ಟೆಯಿಂದ ಖರೀದಿಸುತ್ತಾರೆ; ಆದರೆ ಅದೇ ನೈವೇದ್ಯ ಇಂತಹ ಪದ್ಧತಿಯಿಂದ ‘ಹಲಾಲ್’ ಪ್ರಮಾಣೀಕರಿಸಲಾಗಿದ್ದರೆ… ? ಆದ್ದರಿಂದ ಗಣೇಶನೊಂದಿಗೆ ನಮ್ಮ ಮನೆಗಳಿಗೆ ಹಲಾಲ್ ಉತ್ಪನ್ನಗಳು ಬರುತ್ತಿಲ್ಲವಲ್ಲ? ಒಬ್ಬ ಭಕ್ತನಾಗಿ ಪೂಜಾ ಸಾಹಿತ್ಯ, ಶ್ರೀ ಗಣೇಶ ಪ್ರಸಾದ, ಆಹಾರ ಪದಾರ್ಥಗಳು ಹಲಾಲ್ ಪ್ರಮಾಣೀಕೃತಗೊಂಡಿಲ್ಲವಲ್ಲ ಎಂದು ಖಚಿತಪಡಿಸಿಕೊಳ್ಳಿ.
೧. ಸಮಾನಾಂತರ ಇಸ್ಲಾಮಿಕ್ ಆರ್ಥಿಕವ್ಯವಸ್ಥೆಯ ರಚನೆ !
ಹಲಾಲ್ ಜಿಹಾದ್ ಮಾಧ್ಯಮದಿಂದ ದೇಶವಿರೋಧಿ ಶಕ್ತಿಗಳು ತಮ್ಮದೇ ಆದ ಪ್ರತ್ಯೇಕ ಆರ್ಥಿಕತೆಯನ್ನು ರಚಿಸಿವೆ. ಈ ಮಾಧ್ಯಮದ ಮೂಲಕ ಭಾರತವನ್ನು ಇಸ್ಲಾಮಿಕ್ ರಾಷ್ಟ್ರವನ್ನಾಗಿಸುವ ಷಡ್ಯಂತ್ರಗಳನ್ನು ರೂಪಿಸಲಾಗುತ್ತಿದೆ. ಈ ಮೂಲಕ ಭಾರತದ ಆರ್ಥಿಕತೆಯನ್ನು ಸಡಿಲಗೊಳಿಸುವ ಪ್ರಯತ್ನಿಸಲಾಗುತ್ತಿದೆ. ಭಾರತ ಸರಕಾರದ ‘ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ’ (ಎಫ್.ಎಸ್.ಎಸ್.ಎ.ಐ.) ಮತ್ತು ‘ಆಹಾರ ಮತ್ತು ಔಷಧ ಆಡಳಿತ’ (ಎಫ.ಡಿ.ಎ.)ಗಳಂತಹ ಆಹಾರ ಉತ್ಪನ್ನಗಳನ್ನು ಪ್ರಮಾಣೀಕರಿಸುವ ಸರಕಾರೀ ಸಂಸ್ಥೆಗಳು ಅಸ್ತಿತ್ವದಲ್ಲಿರುವಾಗಲೂ ‘ಹಲಾಲ ಪ್ರಮಾಣಪತ್ರದ’ ಮೂಲಕ ಸಮನಾಂತರ ಇಸ್ಲಾಮಿಕ ಆರ್ಥಿಕತೆಯನ್ನು ರಚಿಸಲಾಗುತ್ತಿದೆ. ಮೊದಲು ಮಾಂಸ ಮಾರಾಟಕ್ಕೆ ಮಾತ್ರ ಸೀಮಿತವಾಗಿದ್ದ ‘ಹÀಲಾಲ’ ಎಂಬ ಇಸ್ಲಾಮಿಕ್ ಪರಿಕಲ್ಪನೆಯಿಂದಾಗಿ ಇಂದು ‘ಮೆಕ್‌ಡೊನಾಲ್ಡ್’, ‘ಕೀಫ್‌ಸಿ’, ‘ಬರ್ಗರ್ ಕಿಂಗ್’, ‘ಪಿಜ್ಜಾ ಹಟ್’ಗಳಂತಹ ಅಂತಾರಾಷ್ಟ್ರೀಯ ಸಂಸ್ಥೆಗಳು ಹಿಂದೂ, ಜೈನ, ಬೌದ್ಧ, ಸಿಕ್ಖ್ ಮತ್ತು ಇತರ ಮುಸ್ಲಿಮೇತರ ಸಮಾಜದ ಮೇಲೆ ಬಲವಂತವಾಗಿ ‘ಹಲಾಲ್ ಪ್ರಮಾಣೀಕರಿಸಿದ’ ವಸ್ತುಗಳನ್ನು ಮಾರಾಟ ಮಾಡುತ್ತಿವೆ. ಶೇ. ೧೫ ರಷ್ಟು ಮುಸಲ್ಮಾನರಿಗಾಗಿ ಶೇ. ೮೦ ರಷ್ಟು ಹಿಂದೂ ಸಮಾಜದ ಮೇಲೆ ಹಲಾಲ ಬಲವಂತವಾಗಿ ಹೇರಲಾಗುತ್ತಿದೆ.
೨. ಗಣೇಶೋತ್ಸವವನ್ನು ಹಲಾಲ್ ಮುಕ್ತಗೊಳಿಸಲು…
ಗಣೇಶೋತ್ಸವ ಒಂದು ದೊಡ್ಡ ಹಬ್ಬವಾಗಿದೆ. ಲೋಕಮಾನ್ಯ ತಿಲಕರು ಪರಕೀಯರ ಆಡಳಿತದ ವಿರುದ್ಧ ಜನಜಾಗೃತಿ ಮೂಡಿಸುವ ಉದ್ದೇಶದಿಂದ ಸಾರ್ವಜನಿಕ ಗಣೇಶೋತ್ಸವವನ್ನು ಆರಂಭಿಸಿದರು. ಈ ಉದ್ದೇಶವನ್ನು ಸಾಧಿಸಲು, ಗಣೇಶೋತ್ಸವ ಮಂಡಳಿಗಳು ಪ್ರದರ್ಶನಗಳು, ಫ್ಲೆಕ್ಸ್ ಪ್ರದರ್ಶನಗಳು, ಉಪನ್ಯಾಸಗಳು, ಕರಪತ್ರಗಳು ಇತ್ಯಾದಿಗಳ ಮೂಲಕ ‘ಹಲಾಲ್ ಪ್ರಮಾಣಪತ್ರ’ದ ಕುರಿತು ಸಾರ್ವಜನಿಕ ಜಾಗೃತಿ ಮೂಡಿಸಬಹುದು.
ಈ ಹಿನ್ನೆಲೆಯಲ್ಲಿ ಹಿಂದೂ ಜನಜಾಗೃತಿ ಸಮಿತಿ ವತಿಯಿಂದ ‘ದೇಶದ ಆರ್ಥಿಕತೆಯ ಮೇಲೆ ಹೊಸ ದಾಳಿ: ಹಲಾಲ್ ಜಿಹಾದ್?’ ಗ್ರಂಥವನ್ನು ಮುದ್ರಿಸಲಾಗಿದೆ. ಓರ್ವ ಸಾಮಾನ್ಯ ಭಕ್ತನೆಂದೂ ವೈಯಕ್ತಿಕ ಮಟ್ಟದಲ್ಲಿ ನಾವು ಜಾಗೃತಿ ಮೂಡಿಸಬೇಕು ಮತ್ತು ದೇಶದ ಆರ್ಥಿಕತೆಯನ್ನು ಉಳಿಸಿಕೊಳ್ಳಲು ಎಚ್ಚರಿಕೆಯಿಂದ ಖರೀದಿಯನ್ನು ಮಾಡಬೇಕು.
೩. ‘ಹಲಾಲ್ ಜಿಹಾದ್’ ಇದು ಆರ್ಥಿಕ ಸ್ತರದ ಯುದ್ಧ !
ಆರ್ಥಸಂಪನ್ನ ವ್ಯಕ್ತಿಯನ್ನೇ ರಾಜ್ಯ ವ್ಯವಸ್ಥೆಯಲ್ಲಿ ಪ್ರಭಾವಿ ವ್ಯಕ್ತಿ ಎಂದು ಪರಿಗಣಿಸಲಾಗುತ್ತದೆ. ಹಾಗೆಯೇ ಆರ್ಥಿಕ ಸುಭದ್ರತೆಯ ಕಾರಣದಿಂದಲೇ ಅಮೇರಿಕಾ, ಇಂಗ್ಲೆಂಡ್ ಮೊದಲಾದ ದೇಶಗಳನ್ನು ಮುಂದುವರಿದ ದೇಶಗಳು ಎಂದು ಕರೆಯಲಾಗುತ್ತದೆ. ಅದಕ್ಕಾಗಿಯೇ ಆರ್ಥಿಕತೆಯು ಬಹಳ ಮಹತ್ವದ್ದಾಗಿದೆ. ಜಗತ್ತನ್ನು ನಾಶ ಮಾಡಲು ಪ್ರಯತ್ನಿಸುತ್ತಿರುವ ಜಿಹಾದಿಗಳ ಕೈಗೆ ಒಂದು ವೇಳೆ ಆರ್ಥಿಕತೆ ಸಿಕ್ಕಿದರೆ ? ಇದಕ್ಕಾಗಿ ಹಲಾಲ ಅರ್ಥವ್ಯವಸ್ಥೆಯನ್ನು ವಿರೋಧಿಸುವುದು ಆವಶ್ಯಕವಾಗಿದೆ. ಹಲಾಲ ಜಿಹಾದ ಆರ್ಥಿಕ ಮಟ್ಟದಲ್ಲಿ ಒಂದು ಯುದ್ಧವೇ ಆಗಿದೆ.
– ಶ್ರೀ. ರಮೇಶ ಶಿಂದೆ, ರಾಷ್ಟ್ರೀಯ ವಕ್ತಾರ, ಹಿಂದೂ ಜನಜಾಗೃತಿ ಸಮಿತಿ, ಹಾಗೆಯೇ ‘ಹಲಾಲ್ ಜಿಹಾದ್’ ಪುಸ್ತಕದ ಲೇಖಕರು