ಕಟ್ಟರವಾದಿ ಸಂಘಟನೆ ‘ಹಿಫಾಜತ್-ಎ-ಇಸ್ಲಾಂ’ ನ ಮುಖಂಡರನ್ನು ಭೇಟಿ ಮಾಡಿದ ಮಹಮ್ಮದ ಯೂನಸ

ಢಾಕಾ – ಶೇಖ್ ಹಸೀನಾ ಸರಕಾರ ಪತನವಾದ ಬಳಿಕ, ಮಹಮ್ಮದ್ ಯೂನಸ್ ಇವರ ನಾಯಕತ್ವದಲ್ಲಿ ಸ್ಥಾಪನೆಯಾಗಿರುವ ಬಾಂಗ್ಲಾದೇಶದ ಮಧ್ಯಂತರ ಸರಕಾರವು ಕಟ್ಟರವಾದಿಗಳ ಎದುರು ಮಂಡಿಯೂರಿದೆ. ಆಗಸ್ಟ್ 31, 2024 ರಂದು ಮಹಮ್ಮದ ಯೂನಸ ಅವರು ಢಾಕಾದಲ್ಲಿ ಕಟ್ಟರವಾದಿ ಸಂಘಟನೆ ‘ಹಿಫಾಜತ್-ಎ-ಇಸ್ಲಾಂ’ ನ ನಾಯಕ ಮಾಮುನುಲ್ ಹಕ್ ಮತ್ತು ಗುಂಪಿನ ಇತರ ಸದಸ್ಯರೊಂದಿಗೆ ಸಭೆ ನಡೆಸಿದರು. ಈ ಸಭೆಯಲ್ಲಿ ಚುನಾವಣಾ ಪ್ರಕ್ರಿಯೆಯಲ್ಲಿ ಸುಧಾರಣೆ ಮಾಡುವುದು ಮತ್ತು ನಿಗದಿತ ಸಮಯದಲ್ಲಿ ಚುನಾವಣೆ ನಡೆಸುವ ಕುರಿತು ಚರ್ಚೆ ನಡೆಸಲಾಯಿತು.

‘ಹಿಫಾಜತ್-ಎ-ಇಸ್ಲಾಂ’ ನ ಭಾರತ ದ್ವೇಷ !

ಮಹಮ್ಮದ ಯೂನಸ ಮತ್ತು ಮಾಮುನುಲ ಹಕ ಇವರ ಭೇಟಿಯು ಭಾರತಕ್ಕೆ ಚಿಂತೆಯ ವಿಷಯವಾಗಿದೆ. ‘ಹಿಫಾಜತ್-ಎ-ಇಸ್ಲಾಂ’ ನಾಯಕರು ತಮ್ಮ ಪ್ರಚೋದನಕಾರಿ ಹೇಳಿಕೆ ನೀಡುವಲ್ಲಿ ಮತ್ತು ಭಾರತ ವಿರೋಧಿ ನಿಲುವಿಗಾಗಿ ಕುಖ್ಯಾತರಾಗಿದ್ದಾರೆ. ಶೇಖ್ ಹಸೀನಾರ ಸರಕಾರದ ಕಾಲದಲ್ಲಿ ಮಾಮುನುಲ್ ಹಕ್ ನನ್ನು ಹಿಂಸಾಚಾರವನ್ನು ಪ್ರಚೋದಿಸುವುದರೊಂದಿಗೆ ವಿವಿಧ ಆರೋಪಗಳಡಿಯಲ್ಲಿ ಬಂಧಿಸಲಾಗಿತ್ತು. ಬಾಂಗ್ಲಾದೇಶದಲ್ಲಿ ಸ್ಥಾಪಿಸಲಾದ ಮಧ್ಯಂತರ ಸರಕಾರವು ಮಾಮುನುಲ್ ಹಕ್ ಮತ್ತು ಇತರ ಜಿಹಾದಿ ನಾಯಕರನ್ನು ಬಿಡುಗಡೆ ಮಾಡಿದೆ.

ಸಂಪಾದಕೀಯ ನಿಲುವು

  • ಕಟ್ಟರವಾದಿಗಳ ಎದುರು ಮಂಡಿಯೂರಿದ ಬಾಂಗ್ಲಾದೇಶದ ಮಧ್ಯಂತರ ಸರಕಾರದ ಮುಖಂಡರು
  • ಬಾಂಗ್ಲಾದೇಶದಲ್ಲಿನ ಜಿಹಾದಿ, ಕಟ್ಟರವಾದಿ, ಮತಾಂಧ ಮತ್ತು ಭಯೋತ್ಪಾದಕರಿಂದ ಭವಿಷ್ಯದಲ್ಲಿ ಪಾಕಿಸ್ತಾನದಂತೆ ಅಲ್ಲಿಯೂ ಅರಾಜಕತೆಯಾದರೆ ಆಶ್ಚರ್ಯವೆನಿಲ್ಲ !