|
ರಾಮನಾಥಿ – ದೇವಸ್ಥಾನದಲ್ಲಿ ಭಕ್ತರಿಂದ ಅರ್ಪಿಸಲಾಗುವ ಪ್ರಸಾದದ ಶುದ್ಧತೆ ಮತ್ತು ಪೂಜೆಯ ಪಾವಿತ್ರ ಕಾಪಾಡುವುದಕ್ಕಾಗಿ ಓಂ ಪ್ರತಿಷ್ಠಾನದಿಂದ ಪರಿಸರ ಪೂರಕ ಗಣೇಶೋತ್ಸವದ ಅಡಿಯಲ್ಲಿ ಅಭಿಯಾನ ನಡೆಸಲಾಗುತ್ತಿದೆ. ಈ ಅಭಿಯಾನದ ಪ್ರಯುಕ್ತ ‘ಓಂ ಪ್ರಮಾಣಪತ್ರ’ ವಿತರಣೆಯ ಶುಭಾರಂಭವನ್ನು ಹರಿತಾಲಿಕಾದ (ಗೌರಿ ಹಬ್ಬದ) ಶುಭದಿನದಂದು (ಸೆಪ್ಟೆಂಬರ್ ೬.೨೦೨೪) ಸನಾತನ ಸಂಸ್ಥೆಯ ಸಂಸ್ಥಾಪಕ ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ ಇವರ ಶುಭಹಸ್ತದಿಂದ ಮಾಡಲಾಯಿತು. ಈ ಸಮಯದಲ್ಲಿ ಅವರ ಶುಭ ಹಸ್ತದಿಂದ ಪ್ರಮಾಣಪತ್ರಕ್ಕೆ ಸ್ಪರ್ಶ ಮಾಡಿ ಪ್ರಮಾಣಪತ್ರವನ್ನು ‘ಸನಾತನ ಪ್ರಸಾದ ನಿರ್ಮಿತಿ ಕೇಂದ್ರ’, ರಾಮನಾಥಿ ಆಶ್ರಮಕ್ಕೆ ಪ್ರದಾನಿಸಲಾಯಿತು.
‘ಹಿಂದೂ ಶುದ್ಧತೆ ಮಾನದಂಡ ಪ್ರಮಾಣಿತ’ ಅಂಗಡಿಗಳಿಂದ ಪ್ರಸಾದ ಮತ್ತು ಪೂಜಾ ಸಾಮಗ್ರಿಗಳನ್ನು ಖರೀದಿಸಲು ‘ಓಂ ಪ್ರತಿಷ್ಠಾನ’ ಮತ್ತು ವಿವಿಧ ಹಿಂದುತ್ವನಿಷ್ಠ ಸಂಘಟನೆಗಳಿಂದ ಜೂನ್ ೧೪, ೨೦೨೪ ರಿಂದ ತ್ರಂಬಕೇಶ್ವರದಲ್ಲಿ ಕರೆ ನೀಡಲಾಗಿತ್ತು. ಆ ಸಮಯದಲ್ಲಿ ಅಖಿಲ ಭಾರತೀಯ ಸಂತ ಸಮಿತಿ ಧರ್ಮ ಸಮಾಜ, ಮಹಾರಾಷ್ಟ್ರ ಕ್ಷೇತ್ರದ ಅಧ್ಯಕ್ಷ ಮಹಂತ ಆಚಾರ್ಯ ಪೀಠಾಧೀಶ್ವರ ಡಾ. ಅನಿಕೇತ ಶಾಸ್ತ್ರಿ ಮಹಾರಾಜ, ಸ್ವಾತಂತ್ರ್ಯ ವೀರ ಸಾವರ್ಕರ್ ರಾಷ್ಟ್ರೀಯ ಸ್ಮಾರಕದ ಕಾರ್ಯಾಧ್ಯಕ್ಷ ರಣಜಿತ ಸಾವರ್ಕರ್, ಹಿಂದೂ ಜನಜಾಗೃತಿ ಸಮಿತಿಯ ಮಹಾರಾಷ್ಟ್ರ ಮತ್ತು ಛತ್ತೀಸ್ಗಡ್ ರಾಜ್ಯದ ಸಂಘಟಕ ಮತ್ತು ಮಹಾರಾಷ್ಟ್ರ ಮಂದಿರ ಮಹಾಸಂಘದ ಸಮನ್ವಯಕ ಶ್ರೀ. ಸುನಿಲ ಘನವಟ, ಸಾವರ್ಕರ್ ಪ್ರತಿಷ್ಠಾನದ ಕೋಷಾಧ್ಯಕ್ಷ ಮಂಜರಿ ಮರಾಠೆ ಇವರಿಂದ ತ್ರಂಭಕೇಶ್ವರದಲ್ಲಿ ಮೊದಲ ಪ್ರಮಾಣ ಪತ್ರ ಅರ್ಪಿಸಿ ಮಂದಿರ ಪರಿಸರದಲ್ಲಿನ ಕೆಲವು ಆಯ್ಕೆ ಮಾಡಿರುವ ಪ್ರಸಾದ ಮಾರಾಟಗಾರರಿಗೆ ‘ಓಂ ಪ್ರಮಾಣ ಪತ್ರ’ ವಿತರಿಸಲಾಗಿತ್ತು.
ಓಂ ಪ್ರತಿಷ್ಠಾನ’ದಿಂದ ಹಮ್ಮಿಕೊಳ್ಳಲಾಗುತ್ತಿರುವ ಅಭಿಯಾನದ ಈ ಚಳುವಳಿ ಅತ್ಯಂತ ಶ್ಲಾಘನೀಯವಾಗಿದೆ – ಸಚ್ಚಿದಾನಂದ ಪರಬ್ರಹ್ಮ ಡಾ. ಅಠವಲೆ
‘ಹಿಂದೂ ಧರ್ಮಶಾಸ್ತ್ರದ ಪ್ರಕಾರ, ದೇವರಿಗೆ ಅರ್ಪಿಸುವ ಪ್ರಸಾದ ಮತ್ತು ಪೂಜಾ ಸಾಹಿತ್ಯ ಎಷ್ಟು ಸಾತ್ವಿಕವಾಗಿರುತ್ತದೆ, ಅಷ್ಟು ಪೂಜಕನಿಗೆ ಅದರ ಆಧ್ಯಾತ್ಮಿಕ ಮಟ್ಟದಲ್ಲಿ ಲಾಭವಾಗುತ್ತದೆ. ಶುದ್ಧ ಮತ್ತು ಸಾತ್ವಿಕ ಗಣೇಶೋತ್ಸವ ಆಚರಿಸುವುದಕ್ಕಾಗಿ ಮತ್ತು ಅದರ ಪಾವಿತ್ರ್ಯ ಕಾಪಾಡುವುದಕ್ಕಾಗಿ ‘ಓಂ ಪ್ರತಿಷ್ಠಾನ’ದಿಂದ ನಡೆಸುವ ಈ ಅಭಿಯಾನ ಅತ್ಯಂತ ಶ್ಲಾಘನೀಯವಾಗಿದೆ’, ಎಂದು ಸಚ್ಚಿದಾನಂದ ಪರಬ್ರಹ್ಮ ಡಾ. ಅಠವಲೆ ಇವರು ಈ ಸಮಯದಲ್ಲಿ ಉದ್ಗರಿಸಿದರು. ಪೂಜಕನು ಆಯಾ ದೇವತೆಗಳ ನಾಮಜಪ ಮಾಡುತ್ತಾ ಪೂಜಾ ಅರ್ಚನೆ ಮಾಡಿದರೆ ಅದರ ಶುದ್ಧತೆ ಮತ್ತು ಸಾತ್ವಿಕತೆ ಹೆಚ್ಚು ಪ್ರಮಾಣದಲ್ಲಿ ಹೆಚ್ಚುತ್ತದೆ. ಆದ್ದರಿಂದ ವಾತಾವರಣದಲ್ಲಿನ ಸಾತ್ವಿಕತೆ ಹೆಚ್ಚಾಗಲು ಸಹಾಯವಾಗುವುದು, ಇದರಿಂದ ಈ ಚಳುವಳಿ ಫಲಪ್ರದವಾಗಲಿದೆ’, ಎಂದೂ ಕೂಡ ಅವರು ಹೇಳಿದರು.
ಓಂ ಪ್ರಮಾಣಪತ್ರದ ಉದ್ದೇಶ
‘ಓಂ ಪ್ರಮಾಣಪತ್ರ’ ಇದು ಒಂದು ಹಿಂದೂ ಸಂಘಟನೆಗಾಗಿ ಚಳುವಳಿ ಹಾಗೂ ಹಿಂದೂಗಳ ಅಸ್ತಿತ್ವಕ್ಕಾಗಿ ನಡೆಸಲಾಗುವ ಚಳುವಳಿಯಾಗಿದೆ. ಸ್ವಾತಂತ್ರ್ಯ ವೀರ ಸಾವರ್ಕರ್ ಇವರ ಮೊಮ್ಮಗ ರಣಜಿತ ಸಾವರ್ಕರ್ ಇವರ ನೇತೃತ್ವದಲ್ಲಿ ಆರಂಭವಾಗಿರುವ ಈ ಅಭಿಯಾನಕ್ಕಾಗಿ ‘ಓಂ ಪ್ರತಿಷ್ಠಾನ’ ಸ್ಥಾಪಿಸಲಾಯಿತು. ಹೀಗೆ ಇದ್ದರೂ ಕೂಡ ಈ ಪ್ರತಿಷ್ಠಾನ ಎಲ್ಲಾ ಹಿಂದುಗಳಿಗಾಗಿ ಇರುವುದು. ‘ಪ್ರಸಾದದ ಸಾಮಗ್ರಿ ಸಂಪೂರ್ಣವಾಗಿ ಶುದ್ಧ ಸಾಮಗ್ರಿಗಳಾಗಿದೆಯೋ ಅಥವಾ ಇಲ್ಲ ?’, ಎಂಬುದು ‘ಓಂ ಪ್ರಮಾಣಪತ್ರ’ ನೀಡುವ ಮೊದಲು ನೋಡಲಾಗುವುದು.
ಹಿಂದೂ ಅಂಗಡಿದಾರರ ಸಕ್ಷಮಗೊಳಿಸಲು ‘ಓಂ ಪ್ರಮಾಣಪತ್ರ’ !
ದೇಶಾದ್ಯಂತದ ಅಂಗಡಿದಾರರಿಗೆ ‘ಓಂ ಶುದ್ಧತಾ ಪ್ರಮಾಣಪತ್ರ’ ನೀಡಲಾಗುತ್ತಿದೆ. ಹಿಂದೂ ಮಾರಾಟಗಾರರಿಂದ ಮಾರಲಾಗುವ ಉತ್ಪಾದನೆಯು ಹಿಂದೂಗಳೇ ತಯಾರಿಸಿದ್ದಾರೆಯೇ, ಇದನ್ನು ಕೂಡ ಖಚಿತಪಡಿಸಲಾಗುವುದು. ‘ಓಂ ಶುದ್ಧತಾ ಪ್ರಮಾಣಪತ್ರ’ ಇದು ಕೇವಲ ಹಣಗಳಿಸಲು ಆರಂಭಿಸಲಾದ ವ್ಯವಸಾಯವಾಗಿಲ್ಲ ಅಥವಾ ಸರಕಾರಿ ವ್ಯವಸ್ಥೆಗೆ ಸವಾಲು ಹಾಕುವ ಪ್ರಯತ್ನ ಕೂಡ ಇಲ್ಲ. ಇದು ಹಿಂದೂಗಳನ್ನು ಸಕ್ಷಮಗೊಳಿಸುವುದಕ್ಕಾಗಿ ಮಾಡಲಾಗುವ ಪ್ರಯತ್ನವಾಗಿದೆ. ಓಂ ಪ್ರಮಾಣಪತ್ರದ ಕುರಿತು ಮುಸಲ್ಮಾನರು ಪ್ರಶ್ನೆ ಕೇಳುವ ಮೊದಲು ಅನುಮಾನ ಪಡುವ ಹಿಂದೂ ಜನಾಂಗದಲ್ಲಿಯೇ ಬಹಳಷ್ಟು ಜನರಿದ್ದಾರೆ; ಆದರೆ ಇದರಲ್ಲಿನ ಯಾರು ಹಲಾಲ್ ಪ್ರಮಾಣ ಪತ್ರದ ವಿರುದ್ಧ ಧ್ವನಿ ಎತ್ತಿರುವುದು ಕೇಳಿಬಂದಿಲ್ಲ.
‘ಓಂ ಪ್ರಮಾಣಪತ್ರ’ದ ಸಹಾಯದಿಂದ ಶುದ್ಧ ಮಾನದಂಡ ಪ್ರಮಾಣಗಳ ಹೆಸರುಗಳು ಹೇಗೆ ಹುಡುಕುವುದು ?
‘ಓಂ ಶುದ್ಧತೆ ಪ್ರಮಾಣಪತ್ರ’ದ ಮೇಲೆ ಇರುವ ‘ಕ್ಯೂಆರ್ ಕೋಡ್’ ಸ್ಕ್ಯಾನ್ ಮಾಡಿದರೆ, ಓಂ ಶುದ್ಧತೆ ಪ್ರಮಾಣಪತ್ರ ಪಡೆದಿರುವ ಕೇಂದ್ರಗಳ ಹೆಸರು ನಮಗೆ ಮೊಬೈಲ್ ಅಲ್ಲಿ ಕಾಣುವುದು. ಈ ಹೆಸರು ಮತ್ತು ಪ್ರತ್ಯಕ್ಷ ಕೇಂದ್ರದ ಹೆಸರು ಒಂದೇ ಆಗಿದ್ದರೆ, ಆಗ ನೀವು ಯೋಗ್ಯ ಸ್ಥಳದಲ್ಲಿ ಇರುವುದಾಗಿ ತಿಳಿಯುವುದು. ‘ಕ್ಯೂ ಆರ್ ಕೋಡ್’ ಏನಾದರೂ ಸ್ಕ್ಯಾನ್ ಮಾಡಿದ ನಂತರ ಕಾಣಿಸುವ ಹೆಸರು ಮತ್ತು ಕೇಂದ್ರದ ಹೆಸರು ಒಂದೇ ಇರದಿದ್ದರೆ ಆ ಪ್ರಮಾಣ ಪತ್ರ ಕಾನೂನ ಬಾಹಿರವಾಗಿದೆ, ಆ ಕೇಂದ್ರದ ಅಲ್ಲ ಇದು ನಮಗೆ ತಿಳಿಯುವುದು. ಅಂತಹ ಸಮಯದಲ್ಲಿ ಅಲ್ಲಿ ಖರೀದಿ ಮಾಡದೆ, ನಾವು ಅದರ ದೂರು ಕೂಡ ನೀಡಬಹುದು. ಹಿಂದುಗಳ ವ್ಯಾಪಾರ ವೃದ್ಧಿಗಾಗಿ ‘ಓಂ ಶುದ್ಧತೆ ಪ್ರಮಾಣ ಪತ್ರ’ದ ಚಳುವಳಿಯಲ್ಲಿ ಸಹಭಾಗಿ ಆಗಲು ಓಂ ಪ್ರತಿಷ್ಠಾನದಿಂದ ಕರೆ ನೀಡಲಾಗಿದೆ.