ಗಣೇಶಮೂರ್ತಿಯ ಪ್ರಾಣಪ್ರತಿಷ್ಠೆ ಕುರಿತು ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯವು ‘ಯುನಿವರ್ಸಲ್ ಔರಾ ಸ್ಕ್ಯಾನರ್ (ಯು.ಎ.ಎಸ್)’ ಉಪಕರಣದ ಮೂಲಕ ಮಾಡಿದ ವೈಜ್ಞಾನಿಕ ಪರೀಕ್ಷೆ

ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯವು ‘ಯುನಿವರ್ಸಲ್ ಔರಾ ಸ್ಕ್ಯಾನರ್ (ಯು.ಎ.ಎಸ್)’ ಉಪಕರಣದ ಮೂಲಕ ಮಾಡಿದ ವೈಜ್ಞಾನಿಕ ಪರೀಕ್ಷೆ

‘ಭಾದ್ರಪದ ಶುಕ್ಲ ಚತುರ್ಥಿಯ ದಿನ ಮಣ್ಣಿನ ಗಣಪತಿಯನ್ನು ತಯಾರಿಸಿ, ಅದನ್ನು ಎಡಗೈ ಮೇಲಿಟ್ಟು ಅಲ್ಲಿಯೇ ಸಿದ್ಧಿವಿನಾಯಕ ಹೆಸರಿನಿಂದ ಪ್ರಾಣ ಪ್ರತಿಷ್ಠೆ ಮತ್ತು ಪೂಜೆಯನ್ನು ಮಾಡಿ ಕೂಡಲೇ ವಿಸರ್ಜನೆ ಮಾಡಬೇಕು ಎಂಬ ಶಾಸ್ತ್ರವಿದೆ. ಆದರೆ ಮಾನವರು ಉತ್ಸವ ಪ್ರಿಯರಾಗಿರುವುದರಿಂದ ಇಷ್ಟರಿಂದಲೇ ಅವರಿಗೆ ಸಮಾಧಾನವಾಗಲಿಲ್ಲ. ಆದುದರಿಂದ ಒಂದೂವರೆ, ಐದು, ಏಳು ಅಥವಾ ಹತ್ತು ದಿನ ಗಣಪತಿಯ ಮೂರ್ತಿಯನ್ನು ಇಟ್ಟು ಉತ್ಸವ ಮಾಡತೊಡಗಿದರು’, ಎಂದು ‘ಶಾಸ್ತ್ರ ಅಸೆ ಸಾಂಗತೆ’ (ಮರಾಠಿ) ಎಂಬ ಗ್ರಂಥದಲ್ಲಿದೆ. ‘ಗಣೇಶಚತುರ್ಥಿಯಂದು ಪ್ರಾಣಪ್ರತಿಷ್ಠೆ ಮಾಡಿರುವ ಗಣಪತಿಯ ಮೂರ್ತಿಯಲ್ಲಿ ಮುಂದಿನ ದಿನಗಳಲ್ಲಿ ಆಧ್ಯಾತ್ಮಿಕ ಸ್ತರದಲ್ಲಿ ಏನಾದರೂ ಬದಲಾವಣೆಯಾಗುತ್ತದೆಯೇ ?’, ಎಂಬುದನ್ನು ವಿಜ್ಞಾನದ ಮೂಲಕ ಅಭ್ಯಾಸ ಮಾಡುವ ಸಲುವಾಗಿ ಗೋವಾದ ಮಡಕಯಿಯ ಸನಾತನದ ಸಾಧಕ ಶ್ರೀ. ಉಮೇಶ ನಾಯಿಕ್ ಇವರ ಮನೆಯಲ್ಲಿ ಐದು ದಿನ ಪೂಜಿಸಿದ ಗಣೇಶಮೂರ್ತಿಯನ್ನು ‘ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ’ದ ವತಿಯಿಂದ ೧೩.೯.೨೦೧೮ (ಗಣೇಶಚತುರ್ಥಿ) ರಿಂದ ೧೭.೯.೨೦೧೮ (ಐದನೇ ದಿನ) ಈ ಅವಧಿಯಲ್ಲಿ ಪ್ರತಿದಿನ ಪರಿಶೀಲನೆ ಮಾಡಲಾಯಿತು. ಈ ಪರಿಶೀಲನೆಗೆ ‘ಯುನಿವರ್ಸಲ್ ಔರಾ ಸ್ಕ್ಯಾನರ್’ (ಯು.ಎ.ಎಸ್.) ಉಪಕರಣವನ್ನು ಉಪಯೋಗಿಸಲಾಯಿತು. ಈ ಪರಿಶೀಲನೆಯ ಸ್ವರೂಪ, ಅದರ ಮಾಪನದ ನೋಂದಣಿ ಹಾಗೂ ಅದರ ವಿವರಣೆಯನ್ನು ಮುಂದೆ ಕೊಡಲಾಗಿದೆ.

೧. ಪರಿಶೀಲನೆಯ ಸ್ವರೂಪ

ಆಧುನಿಕ ವೈದ್ಯೆ (ಸೌ.) ನಂದಿನಿ ಸಾಮಂತ

ಈ ಪರಿಶೀಲನೆಯಲ್ಲಿ ೧೩.೯.೨೦೧೮ ರಂದು (ಗಣೇಶ ಚತುರ್ಥಿಯಂದು) ಸಾಧಕರ ಮನೆಗೆ ತಂದಿರುವ ಗಣೇಶಮೂರ್ತಿಯ ಪೂಜೆಯ ಮೊದಲು ಮತ್ತು ಪೂಜೆಯ ನಂತರ ‘ಯು.ಎ.ಎಸ್’ ಉಪಕರಣದ ಮೂಲಕ ಮಾಡಿರುವ ಮಾಪನದ ನೋಂದಣಿ ಮಾಡಲಾಯಿತು. ಅನಂತರ ೧೬.೯. ೨೦೨೮ ರ ವರೆಗೆ ಪ್ರತಿದಿನ ಈ ಮೂರ್ತಿಯನ್ನು ಪೂಜಿಸುವ ಮೊದಲು ಮತ್ತು ಪೂಜಿಸಿದ ನಂತರ, ೧೭.೯.೨೦೧೮ ರಂದು ಉತ್ತರಪೂಜೆಯ ಮೊದಲು ಮತ್ತು ಉತ್ತರಪೂಜೆಯ ನಂತರ ‘ಯು.ಎ.ಎಸ್.’ ಉಪಕರಣದ ಮಾಪನದ ನೋಂದಣಿ ಮಾಡಲಾಯಿತು. ನೋಂದಣಿ ಮಾಡಿರುವ ಎಲ್ಲ ಅಂಶಗಳ ತುಲನಾತ್ಮಕ ಅಭ್ಯಾಸ ಮಾಡಲಾಯಿತು.

೨. ಮಾಡಿರುವ ಮಾಪನದ ನೋಂದಣಿ ಮತ್ತು ವಿವೇಚನೆ

೨ ಅ. ನಕಾರಾತ್ಮಕ ಊರ್ಜೆಯ ವಿಷಯದಲ್ಲಿ ಮಾಡಿರುವ ಮಾಪನದ ನೋಂದಣಿಯ ವಿವೇಚನೆ

೨ ಅ ೧. ಗಣೇಶಮೂರ್ತಿಯಲ್ಲಿ ನಕಾರಾತ್ಮಕ ಊರ್ಜೆ ಸ್ವಲ್ಪವೂ ಇರಲಿಲ್ಲ : ಯಾವುದೇ ದಿನದಂದು ಮಾಡಿದ ಗಣೇಶಮೂರ್ತಿಯ ಮಾಪನದಲ್ಲಿ ‘ಇನ್ಫ್ರಾರೆಡ್’ ಹಾಗೂ ‘ಅಲ್ಟ್ರಾವೈಲೆಟ್’ ಈ ನಕಾರಾತ್ಮಕ ಊರ್ಜೆಯು ಕಂಡುಬರಲಿಲ್ಲ.

೨ ಆ. ಸಕಾರಾತ್ಮಕ ಊರ್ಜೆಯ ವಿಷಯದಲ್ಲಿ ಮಾಡಿರುವ ಮಾಪನದ ನೋಂದಣಿಯ ವಿವೇಚನೆ

೨ ಆ ೧. ಐದು ದಿನ ಪೂಜಿಸಿದ ಗಣೇಶಮೂರ್ತಿಯ ಸಕಾರಾತ್ಮಕ ಊರ್ಜೆಯ ಪ್ರಭಾವಲಯದಲ್ಲಿ ಪ್ರತಿದಿನ ಆಗಿರುವ ಬದಲಾವಣೆ : ಎಲ್ಲ ವ್ಯಕ್ತಿ, ವಾಸ್ತು ಅಥವಾ ವಸ್ತುಗಳಲ್ಲಿ ಸಕಾರಾತ್ಮಕ ಊರ್ಜೆ ಇದ್ದೇ ಇರುತ್ತದೆ ಎಂದೇನಿಲ್ಲ. ಗಣೇಶಮೂರ್ತಿಯನ್ನು ಮನೆಗೆ ತಂದ ನಂತರ ಅದರ ಪ್ರಾಣಪ್ರತಿಷ್ಠೆ ಮಾಡುವ ಮೊದಲು ಅದರಲ್ಲಿ ಸಕಾರಾತ್ಮಕ ಊರ್ಜೆ ಇತ್ತು, ಎಂಬುದು ಅದನ್ನು ‘ಯು.ಎ.’ಸ್ಕ್ಯಾನರ್‌ನ ಭುಜಗಳಿಂದ ಮಾಡಿದ ೧೮೦ ಅಂಶ ಕೋನದಿಂದ ಅರಿವಾಯಿತು. ಆದ್ದರಿಂದ ಮೂರ್ತಿಯ ಸಕಾರಾತ್ಮಕ ಊರ್ಜೆಯ ಪ್ರಭಾವಲಯವನ್ನು ಸಹ ಅಳೆಯಲು ಸಾಧ್ಯವಾಯಿತು. ‘ಐದು ದಿನ ಪೂಜಿಸಿದ ಗಣೇಶಮೂರ್ತಿಯ ಸಕಾರಾತ್ಮಕ ಊರ್ಜೆಯ ಪ್ರಭಾವಲಯವು ಪ್ರತಿದಿನ ಎಷ್ಟಿತ್ತು ?’, ಎಂಬುದನ್ನು ಈ ಮುಂದಿನ ಕೋಷ್ಟಕದಲ್ಲಿ ಕೊಡಲಾಗಿದೆ.

ಈ ಮೇಲಿನ ಕೋಷ್ಟಕದಿಂದ ಈ ಮುಂದಿನ ಅಂಶಗಳು ಆರಿವಾಗುತ್ತವೆ.

ಅ. ಗಣೇಶಮೂರ್ತಿಯ ಪೂಜೆಯ ನಂತರ ಅದರ ಸಕಾರಾತ್ಮಕ ಊರ್ಜೆಯ ಪ್ರಭಾವಲಯ ಹೆಚ್ಚಾಗುತ್ತದೆ.

ಆ. ಮರುದಿನ ಗಣೇಶಮೂರ್ತಿಯ ಸಕಾರಾತ್ಮಕ ಊರ್ಜೆಯ ಪ್ರಭಾವಲಯವು ಅತ್ಯಧಿಕವಾಗಿತ್ತು ಹಾಗೂ ಅನಂತರ ಅದು ಪ್ರತಿದಿನ ಕಡಿಮೆಯಾಗುತ್ತಾ ಹೋಯಿತು.

೨ ಇ. ಒಟ್ಟು ಪ್ರಭಾವಲಯದ ವಿಷಯದಲ್ಲಿ ಮಾಡಿರುವ ಮಾಪನದ ನೋಂದಣಿಯ ವಿವೇಚನೆ

೨ ಇ ೧. ಐದು ದಿನ ಪೂಜಿಸಿದ ಗಣೇಶಮೂರ್ತಿಯ ಒಟ್ಟು ಪ್ರಭಾವಲಯದಲ್ಲಿ ಪ್ರತಿದಿನ ಆಗಿರುವ ಬದಲಾವಣೆ :

ಸಾಮಾನ್ಯ ವ್ಯಕ್ತಿ ಅಥವಾ ವಸ್ತುವಿನ ಒಟ್ಟು ಪ್ರಭಾವಲಯವು ಸಾಧಾರಣ ೧ ಮೀಟರನಷ್ಟಿರುತ್ತದೆ. ‘ಐದು ದಿನ ಪೂಜಿಸಿದ ಗಣೇಶಮೂರ್ತಿಯ ಒಟ್ಟು ಪ್ರಭಾವಲಯ ಪ್ರತಿದಿನ ಎಷ್ಟಿತ್ತು ?’, ಎಂಬುದು ಈ ಮುಂದಿನ ಕೋಷ್ಟಕದಲ್ಲಿ ಕೊಡಲಾಗಿದೆ.

ಮೇಲಿನ ಕೋಷ್ಟಕದಿಂದ ಈ ಮುಂದಿನ ವಿಷಯಗಳು ಅರಿವಾಗುತ್ತವೆ.

ಅ. ಗಣೇಶಮೂರ್ತಿಯ ಪೂಜೆಯ ನಂತರ ಅದರ ಒಟ್ಟು ಪ್ರಭಾವಲಯವು ಹೆಚ್ಚಾಗುತ್ತದೆ.

ಆ. ಮರುದಿನ ಗಣೇಶಮೂರ್ತಿಯ ಒಟ್ಟು ಪ್ರಭಾವಲಯವು ಅತ್ಯಧಿಕವಿತ್ತು ಹಾಗೂ ಅನಂತರ ಅದು ಪ್ರತಿದಿನ ಕಡಿಮೆಯಾಗುತ್ತಾ ಹೋಯಿತು.

ಈ ಮೇಲಿನ ಎಲ್ಲ ವಿಷಯಗಳ ಅಧ್ಯಾತ್ಮಶಾಸ್ತ್ರೀಯ ವಿಶ್ಲೇಷಣೆಯನ್ನು ‘ವಿಷಯ ೩’ ರಲ್ಲಿ ಕೊಡಲಾಗಿದೆ.

೩. ಮಾಡಿರುವ ಮಾಪನದ ನೋಂದಣಿಯ ಅಧ್ಯಾತ್ಮಶಾಸ್ತ್ರೀಯ ವಿಶ್ಲೇಷಣೆ

೩ ಅ. ಗಣೇಶಮೂರ್ತಿಯು ಶ್ರೀ ಗಣೇಶನ ಸಾತ್ತ್ವಿಕ ಆಕಾರಬಂಧ ಇರುವುದು ಹಾಗೂ ಜೇಡಿ ಮಣ್ಣಿನಿಂದ ಮಾಡಿರುವುದರಿಂದ ಅದರಲ್ಲಿ ಪೂಜೆಯ ಮೊದಲು ಕೂಡ ನಕಾರಾತ್ಮಕ ಊರ್ಜೆ ಇಲ್ಲದೆ ಸಕಾರಾತ್ಮಕ ಊರ್ಜೆಯೇ ಇರುವುದು : ‘ಶಬ್ದ, ಸ್ಪರ್ಶ, ರೂಪ, ರಸ, ಗಂಧ ಹಾಗೂ ಅವುಗಳಿಗೆ ಸಂಬಂಧಿಸಿದ ಶಕ್ತಿ ಒಟ್ಟಾಗಿರುತ್ತದೆ’, ಎಂಬುದು ಅಧ್ಯಾತ್ಮದ ಒಂದು ಸಿದ್ಧಾಂತವಾಗಿದೆ. ಅದಕ್ಕನುಸಾರ ಎಲ್ಲಿ ಶ್ರೀ ಗಣೇಶನ ‘ರೂಪ’ (ಮೂರ್ತಿ) ಇದೆಯೊ, ಅಲ್ಲಿ ಅದಕ್ಕೆ ಸಂಬಂಧಿಸಿದ ಶಕ್ತಿ, ಅಂದರೆ ಸ್ಪಂದನವೂ ಇರುತ್ತದೆ. ಪ್ರಯೋಗದಲ್ಲಿನ ಗಣೇಶ ಮೂರ್ತಿಯು ಧರ್ಮಶಾಸ್ತ್ರಕ್ಕನುಸಾರ ಯೋಗ್ಯ ಆಕಾರದ ಹಾಗೂ ಜೇಡಿ ಮಣ್ಣಿನಿಂದ ಮಾಡಿರುವುದರಿಂದ ಸಾತ್ತ್ವಿಕವಾಗಿತ್ತು. ಇಂತಹ ಮೂರ್ತಿಯಲ್ಲಿ ಗಣೇಶನ ಸ್ಪಂದನವು ಬಂದೇ ಬರುತ್ತದೆ. ಆದುದರಿಂದ ಆ ಮೂರ್ತಿಯಲ್ಲಿ ಪೂಜೆಯ ಮೊದಲೂ ನಕಾರಾತ್ಮಕ ಊರ್ಜೆ ಕಂಡು ಬರಲಿಲ್ಲ. ತದ್ವಿರುದ್ಧ ಆ ಮೂರ್ತಿಯಲ್ಲಿ ಸಕಾರಾತ್ಮಕ ಊರ್ಜೆ ಕಂಡುಬಂದಿತು.

೩ ಆ. ಗಣೇಶಮೂರ್ತಿಯ ಪೂಜೆ ಮಾಡಿದ ನಂತರ ಶ್ರೀ ಗಣೇಶನ ಸ್ಪಂದನಗಳು ಮೂರ್ತಿಯಲ್ಲಿ ಆಕರ್ಷಿಸಲ್ಪಟ್ಟಿರುವುದರಿಂದ ಮೂರ್ತಿಯಲ್ಲಿನ ಸಕಾರಾತ್ಮಕ ಊರ್ಜೆ ಹಾಗೂ ಮೂರ್ತಿಯ ಒಟ್ಟು ಪ್ರಭಾವಲಯಗಳು ಹೆಚ್ಚಾಗುವುದು : ‘ಎಲ್ಲಿ ದೇವರ ರೂಪವಿದೆಯೋ, ಅಲ್ಲಿ ದೇವರಿಗೆ ಸಂಬಂಧಿಸಿದ ಶಕ್ತಿ ಇರುತ್ತದೆ’, ಎಂಬ ಅಧ್ಯಾತ್ಮದ ಸಿದ್ಧಾಂತಕ್ಕನುಸಾರ ಪ್ರತಿದಿನ ಶ್ರೀ ಗಣೇಶನ ಮೂರ್ತಿಗೆ ಪೂಜೆ ಮಾಡಿದಾಗ ಶ್ರೀ ಗಣೇಶನ ಸ್ಪಂದನವು ಮೂರ್ತಿಯಲ್ಲಿ ಆಕರ್ಷಿಸಲ್ಪಟ್ಟಿತು. ಆದ್ದರಿಂದ ಪ್ರತಿದಿನ ಮೂರ್ತಿಯ ಪೂಜೆಯ ನಂತರ ಪೂಜೆಯ ಮೊದಲಿನ ತುಲನೆಯಲ್ಲಿ ಪೂಜೆಯ ನಂತರ ಮೂರ್ತಿಯ ಸಕಾರಾತ್ಮಕ ಊರ್ಜೆಯ ಪ್ರಭಾವಲಯ ಮತ್ತು ಅದರ ಒಟ್ಟು ಪ್ರಭಾವಲಯದಲ್ಲಿ ವೃದ್ಧಿಯಾಗಿರುವುದು ಕಂಡುಬಂದಿತು.

೩ ಇ. ಗಣೇಶಮೂರ್ತಿಯ ಪ್ರಾಣಪ್ರತಿಷ್ಠೆ ಮಾಡಿದ ನಂತರ ಅದರಲ್ಲಿನ ದೇವತ್ವವು ಒಂದೇ ದಿನವಿರುವುದು : ಮಣ್ಣಿನ ಗಣೇಶ ಮೂರ್ತಿಯಲ್ಲಿ ಪ್ರಾಣಪ್ರತಿಷ್ಠೆ ಮಾಡಿ ತಂದಿರುವ ದೇವತ್ವವು ಒಂದು ದಿನ ಇರುತ್ತದೆ. ಇದರ ಅರ್ಥ ಗಣೇಶಮೂರ್ತಿಯ ವಿಸರ್ಜನೆಯನ್ನು ಯಾವ ದಿನ ಮಾಡಿದರೂ ಮೂರ್ತಿಯಲ್ಲಿನ ದೇವತ್ವವು ಮರುದಿನ ನಷ್ಟವಾಗಿರುತ್ತದೆ; ಆದ್ದರಿಂದ ಅದೇ ದಿನ ಅಥವಾ ಮರುದಿನ ಮೂರ್ತಿಯ ವಿಸರ್ಜನೆಯಾಗಬೇಕೆಂಬುದು ಶಾಸ್ತ್ರವಾಗಿದೆ. (ಆಧಾರ : ‘ಶಾಸ್ತ್ರ ಅಸೆ ಸಾಂಗತೆ (ಮರಾಠಿ)’, ಪುಟ ೧೧೫-೧೧೬)

ಈ ಮೇಲಿನ ವಿಷಯಕ್ಕನುಸಾರವೆ ಪ್ರಯೋಗದಲ್ಲಿಯೂ ಕಂಡುಬಂದಿದೆ. ಮರುದಿನದ ನಂತರ ಪ್ರತಿದಿನ ಮೂರ್ತಿಯ ಸಕಾರಾತ್ಮಕ ಊರ್ಜೆಯ ಪ್ರಭಾವಲಯ ಮತ್ತು ಅದರ ಒಟ್ಟು ಪ್ರಭಾವಲಯದಲ್ಲಿ ಉತ್ತರೋತ್ತರ ಇಳಿಕೆಯಾಗಿರುವುದು ಕಾಣಿಸಿತು.

೩ ಈ. ಗಣೇಶಮೂರ್ತಿಯಲ್ಲಿರುವ ದೇವತ್ವದ ಪರಿಣಾಮವೆಂದು ಮೂರ್ತಿಯಲ್ಲಿ ೨೧ ದಿನಗಳ ವರೆಗೆ ಚೈತನ್ಯವಿರುವುದು : ‘ಮೂರ್ತಿಯಲ್ಲಿ ಪ್ರಾಣಪ್ರತಿಷ್ಠೆ ಮಾಡಿ ತಂದಿರುವ ದೇವತ್ವವು ಒಂದು ದಿನಕ್ಕಿಂತ ಹೆಚ್ಚು ಕಾಲ ಉಳಿಯುವುದಿಲ್ಲ’, ಎಂದು ಈ ಮೇಲಿನ ‘ವಿಷಯ ೩ ಇ’ಯಲ್ಲಿ ಹೇಳಲಾಗಿದೆ. ಹೀಗಿರುವಾಗ ‘ಗಣೇಶೋತ್ಸವದಲ್ಲಿ ಒಂದು ದಿನಕ್ಕಿಂತ ಹೆಚ್ಚು ಕಾಲ ಪೂಜಿಸುವ ಗಣೇಶಮೂರ್ತಿಯ ಉಪಾಸನೆಯ ಲಾಭ ಭಕ್ತರಿಗೆ ಹೇಗೆ ಸಿಗುವುದು ?’, ಎಂಬ ಪ್ರಶ್ನೆ ಉದ್ಭವಿಸಬಹುದು. ಅದರ ಉತ್ತರ ಹೀಗಿದೆ – ‘ಮೂರ್ತಿಯಲ್ಲಿನ ದೇವತ್ವವು ನಷ್ಟವಾದರೂ, ಆ ದೇವತ್ವದ ಪರಿಣಾಮವೆಂದು ಮೂರ್ತಿಯಲ್ಲಿ ೨೧ ದಿನಗಳವರೆಗೆ ಚೈತನ್ಯವು ಇರುತ್ತದೆ ಹಾಗೂ ಗಣೇಶೋತ್ಸವದ ಕಾಲದಲ್ಲಿ ಮೂರ್ತಿಯ ಪೂಜೆ-ಅರ್ಚನೆ ಆಗುತ್ತಿರುವುದರಿಂದ ಪೂಜಕರ ಭಕ್ತಿಭಾವಕ್ಕನುಸಾರ ಮೂರ್ತಿಯಲ್ಲಿನ ಚೈತನ್ಯದಲ್ಲಿ (ಸಕಾರಾತ್ಮಕ ಊರ್ಜೆಯಲ್ಲಿ) ಪೂಜೆಯ ನಂತರ ಹೆಚ್ಚಳವೂ ಆಗಬಹುದು. ೨೧ ದಿನಗಳ ನಂತರ ಮೂರ್ತಿಯಲ್ಲಿನ ಚೈತನ್ಯವು ಕ್ರಮೇಣ ಕಡಿಮೆಯಾಗುತ್ತಾ ಹೋಗುತ್ತದೆ. (ಆಧಾರ : ಸನಾತನ ಸಂಸ್ಥೆಯ ಪ್ರಕಾಶನ ‘ಶ್ರೀ ಗಣಪತಿ’)

– ಆಧುನಿಕ ವೈದ್ಯೆ (ಸೌ.) ನಂದಿನಿ ದುರ್ಗೇಶ ಸಾಮಂತ, ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ, ಗೋವಾ. (೧೯.೯.೨೦೧೮)

ವಿ-ಅಂಚೆ : mav.research೨೦೧೪@gmail.com

ಕೆಟ್ಟ ಶಕ್ತಿ : ವಾತಾವರಣದಲ್ಲಿ ಉತ್ತಮ ಹಾಗೂ ಕೆಟ್ಟ ಎರಡೂ ಶಕ್ತಿಗಳು ಕಾರ್ಯನಿರತವಾಗಿರುತ್ತವೆ. ಒಳ್ಳೆಯ ಶಕ್ತಿ ಒಳ್ಳೆಯ ಕಾರ್ಯಕ್ಕಾಗಿ ಮಾನವನಿಗೆ ಸಹಾಯ ಮಾಡುತ್ತವೆ ಹಾಗೂ ಕೆಟ್ಟ ಶಕ್ತಿಗಳು ಅವನಿಗೆ ತೊಂದರೆ ಕೊಡುತ್ತವೆ. ಹಿಂದಿನ ಕಾಲದಲ್ಲಿ ಋಷಿಮುನಿಗಳ ಯಜ್ಞಗಳಲ್ಲಿ ರಾಕ್ಷಸರು ವಿಘ್ನಗಳನ್ನು ತಂದಿರುವ ಅನೇಕ ಕಥೆಗಳು ವೇದ-ಪುರಾಣಗಳಲ್ಲಿ ಇರುತ್ತವೆ. ‘ಅಥರ್ವವೇದದಲ್ಲಿ ಅನೇಕ ಕಡೆಗಳಲ್ಲಿ ಕೆಟ್ಟ ಶಕ್ತಿ, ಉದಾ. ಅಸುರರು, ರಾಕ್ಷಸರು, ಪಿಶಾಚಿ, ಇವರ ಪ್ರತಿಬಂಧದ ಮಂತ್ರಗಳನ್ನು ಹೇಳಲಾಗಿದೆ. ಕೆಟ್ಟ ಶಕ್ತಿಗಳ ತೊಂದರೆಯ ನಿವಾರಣೆಗಾಗಿ ವಿವಿಧ ಆಧ್ಯಾತ್ಮಿಕ ಉಪಾಯಗಳನ್ನು ವೇದ ಮತ್ತು ಧರ್ಮಗ್ರಂಥಗಳಲ್ಲಿ ಹೇಳಲಾಗಿದೆ.

ಸೂಕ್ಷ್ಮದಲ್ಲಿ ಕಾಣಿಸುವುದು, ಕೇಳಿಸುವುದು ಇತ್ಯಾದಿ (ಪಂಚಸೂಕ್ಷ್ಮಜ್ಞಾನೇಂದ್ರಿಯಗಳಿಂದ ಜ್ಞಾನಪ್ರಾಪ್ತಿಯಾಗುವುದು) : ಕೆಲವು ಸಾಧಕರ ಅಂತರ್ದೃಷ್ಟಿ ಜಾಗೃತವಾಗುತ್ತದೆ, ಅಂದರೆ ಸಾಮಾನ್ಯವಾಗಿ ಕಣ್ಣಿಗೆ ಕಾಣದಂತಹವುಗಳು ಅವರಿಗೆ ಸೂಕ್ಷ್ಮದಲ್ಲಿ ಗೋಚರಿಸುತ್ತವೆ ಮತ್ತು ಇನ್ನು ಕೆಲವರಿಗೆ ಸೂಕ್ಷ್ಮದನಾದ ಅಥವಾ ಶಬ್ದಗಳು ಕೇಳಿಸುತ್ತವೆ.