‘ಮಹಮ್ಮದ್ ಅಫ್ಜಲ್ ಗೆ ಗಲ್ಲು ಶಿಕ್ಷೆ ಪ್ರಯೋಜನವಾಗಲಿಲ್ಲ (ಅಂತೆ) ! – ಓಮರ್ ಅಬ್ದುಲ್ಲಾ

ನ್ಯಾಷನಲ್ ಕಾನ್ಫರೆನ್ಸ್ ಪಕ್ಷದ ನಾಯಕ ಓಮರ್ ಅಬ್ದುಲ್ಲಾ ಇವರ ದೇಶದ್ರೋಹಿ ಹೇಳಿಕೆ

ಶ್ರೀನಗರ (ಜಮ್ಮು ಕಾಶ್ಮೀರ್) – ಮಹಮ್ಮದ್ ಅಫ್ಜಲ್ ಗೆ ಗಲ್ಲು ಶಿಕ್ಷೆ ನೀಡಿ ಏನು ಸಾಧ್ಯವಾಗಿಲ್ಲ. ಜಮ್ಮು ಕಾಶ್ಮೀರದ ಕೈಯಲ್ಲಿ ಇದ್ದಿದ್ದರೆ, ನಾವು ಈ ಗಲ್ಲು ಶಿಕ್ಷೆಗೆ ಎಂದಿಗೂ ಬೆಂಬಲಿಸುತ್ತಿರಲಿಲ್ಲ, ಎಂದು ನ್ಯಾಷನಲ್ ಕಾಂಫರೆನ್ಸ ಪಕ್ಷದ ನಾಯಕ ಓಮರ್ ಅಬ್ದುಲ್ಲಾ ಇವರು ಹೇಳಿದರು. ಜಮ್ಮು ಕಾಶ್ಮೀರದಲ್ಲಿ ವಿಧಾನಸಭೆಯ ಚುನಾವಣೆ ನಡೆಯುವುದಿದೆ. ಅದರ ಹಿನ್ನೆಲೆಯಲ್ಲಿ ಅವರು ಈ ಹೇಳಿಕೆ ನೀಡಿದ್ದಾರೆ. ೨೦೦೧ ರಲ್ಲಿ ಸಂಸತ್ತಿನ ಮೇಲೆ ದಾಳಿಗಾಗಿ ಮಹಮ್ಮದ್ ಅಫ್ಜಲ್ ಇವನಿಗೆ ನ್ಯಾಯಾಲಯ ಗಲ್ಲುಶಿಕ್ಷೆ ವಿಧಿಸಲಾಗಿತ್ತು.
ಓಮರ್ ಅಬ್ದುಲ್ಲಾ ಇವರ ಹೇಳಿಕೆಯ ಕುರಿತು ಪ್ರತಿಕ್ರಿಯೆ ವ್ಯಕ್ತಪಡಿಸುವಾಗ ಭಾಜಪದ ನಾಯಕ ಸಾಜಿದ್ ಯೂಸುಫ್ ಇವರು, ಜಮ್ಮು ಕಾಶ್ಮೀರದ ಜನರಿಗೆ ನ್ಯಾಯ ನೀಡುವ ದೃಷ್ಟಿಯಿಂದ ಮಹಮ್ಮದ್ ಅಫ್ಜಲ್ ಇವನಿಗೆ ಗಲ್ಲು ಶಿಕ್ಷೆ ವಿಧಿಸುವುದು ಆವಶ್ಯಕವಾಗಿತ್ತು ಎಂದು ಹೇಳಿದರು.

ಸಂಪಾದಕೀಯ ನಿಲುವು

ಜಿಹಾದಿ ಭಯೋತ್ಪಾದಕನೆಂದು ಮಹಮ್ಮದ್ ಅಫಜಲ್ ಒಬ್ಬನಿಗೆ‌ಗೆ ಗಲ್ಲು ಶಿಕ್ಷೆ ನೀಡಿದ್ದರಿಂದ ಬಹುಶಃ ಓಮರ್ ಅಬ್ದುಲ್ಲಾ ಇವರಿಗೆ ಹಾಗೆ ಅನಿಸಿರಬಹುದು. ಭಾರತದಿಂದ ಇಲ್ಲಿಯವರೆಗೆ ಬಂಧಿಸಿರುವ ನೂರಾರು ಭಯೋತ್ಪಾದಕರಿಗೆ ಮತ್ತು ಅವರಿಗೆ ಸಹಾಯ ಮಾಡುವ ಭಯೋತ್ಪಾದಕರಿಗೆ ಗಲ್ಲು ಶಿಕ್ಷೆ ವಿಧಿಸಿದ್ದರೆ, ಇಲ್ಲಿಯವರೆಗೆ ಕಾಶ್ಮೀರದಲ್ಲಿನ ಭಯೋತ್ಪಾದನೆ ನಾಶವಾಗುತ್ತಿತ್ತು.