ಬಾಂಗ್ಲಾದೇಶದಲ್ಲಿನ ಘಟನೆ : ಹಿಂದೂಗಳೇ ನೀವು ನಿಮ್ಮ ರಕ್ಷಣೆಗಾಗಿ ಸಿದ್ದರಾಗಿದ್ದೀರಾ ? – ಪಂಡಿತ ಧೀರೇಂದ್ರಕೃಷ್ಣ ಶಾಸ್ತ್ರಿ ಪ್ರಶ್ನೆ

ಬಾಂಗ್ಲಾದೇಶದ ಹಿಂದೂಗಳ ಕುರಿತು ಪಂಡಿತ ಧೀರೇಂದ್ರಕೃಷ್ಣ ಶಾಸ್ತ್ರಿ ಅವರಿಂದ ಭಾರತದ ಹಿಂದೂಗಳಿಗೆ ಪ್ರಶ್ನೆ

ನವ ದೆಹಲಿ – ಬಾಂಗ್ಲಾದೇಶದ ಹಿಂದೂಗಳ ಮನೆಯನ್ನು ಸುಡಲಾಯಿತು. ಅದನ್ನು ನೋಡಿ `ಭಾರತದಲ್ಲಿರುವ ಹಿಂದೂಗಳು ಏನಾದರೂ ಸಿದ್ಧತೆಯನ್ನು ಮಾಡಿಕೊಂಡಿದ್ದಾರೆಯೇ ? ಇಲ್ಲದಿದ್ದರೆ ನಿವೂ ಇದೇ ರೀತಿ ಸುಟ್ಟುಹೋಗುತ್ತೀರಿ’, ಎಂದು ಮಧ್ಯಪ್ರದೇಶದ ಛತರಪುರದ ಬಾಗೇಶ್ವರಧಾಮ ಪಂಡಿತ ಧೀರೇಂದ್ರಕೃಷ್ಣ ಶಾಸ್ತ್ರಿಯವರು ಹಿಂದೂಗಳಿಗೆ ಎಚ್ಚರಿಕೆ ನೀಡಿದ್ದಾರೆ. ಅವರು ಪತ್ರಕರ್ತ ಸುಶಾಂತ ಸಿನ್ಹಾ ಇವರ `ಪಾಡಕಾಸ್ಟ’ಗೆ ನೀಡಿರುವ ಸಂದರ್ಶನದಲ್ಲಿ ಮಾತನಾಡುತ್ತಿದ್ದರು. ಪಂಡಿತ್ ಧೀರೇಂದ್ರಕೃಷ್ಣ ಶಾಸ್ತ್ರಿಯವರು ಮುಂಬರುವ ನವೆಂಬರನಲ್ಲಿ ಬಾಗೇಶ್ವರ ಧಾಮದಿಂದ ಓರಛಾ(ಮಧ್ಯಪ್ರದೇಶ) ಹೀಗೆ 160 ಕಿ.ಮೀ. `ಹಿಂದೂ ಜೊಡೊ ಯಾತ್ರೆ’ ಮಾಡುವವರಿದ್ದಾರೆ.

ಪತ್ರಕರ್ತ ಸುಶಾಂತ್ ಸಿನ್ಹಾ ಅವರು, ‘ಬಾಂಗ್ಲಾದೇಶದಲ್ಲಿರುವ ಹಿಂದೂಗಳ ಮೇಲೆ ಏನು ನಡೆದಿದೆಯೋ, ಅದರಿಂದ ಹಿಂದೂಗಳಿಗೆ ಏನೂ ವ್ಯತ್ಯಾಸವಾಗುವುದಿಲ್ಲವೇ? ‘ ಎಂದು ಕೇಳಿದಾಗ, ಧೀರೇಂದ್ರಕೃಷ್ಣ ಶಾಸ್ತ್ರಿಯವರು,

1. ನಮ್ಮೆದುರಿಗೆ ನಮ್ಮ ಸಹೋದರಿ ಮತ್ತು ಮಗಳನ್ನು ಯಾರಾದರೂ ಓಡಿಸಿಕೊಂಡು ಹೋದರೆ, ನಮಗೆ ಹೇಗೆ ಅನಿಸುತ್ತದೆ ?

2. ಸ್ವಲ್ಪ ವಿಚಾರ ಮಾಡಿರಿ, ಯಾವ ದೇಶದಲ್ಲಿ ನೀವು ವರ್ಷಾನುಗಟ್ಟಲೆ ಉದ್ಯೋಗ ಮಾಡಿ ಒಂದೊಂದು ಪೈಸೆಯನ್ನು ಉಳಿತಾಯ ಮಾಡಿ ಮನೆ, ಅಂಗಡಿಯನ್ನು ಕಟ್ಟಿದ್ದೀರಿ ಮತ್ತು 20 ಜನರು ಬಂದು ನಿಮ್ಮನ್ನು ಲೂಟಿ ಮಾಡುತ್ತಾರೆ, ಆಗ ನಿಮಗೆ ಹೇಗೆನಿಸುತ್ತದೆ ಎಂದು ನೀವು ನಿಜವಾಗಿ ಹೇಳಿ ?

3. ನಿಮ್ಮದೇ ಮಗಳು, ನೀವು ಹೂವಿನಂತೆ ದೊಡ್ಡವಳನ್ನಾಗಿ ಮಾಡಿದಿರೋ, ಅತ್ಯಂತ ನಾಜೂಕಾಗಿರುವ ಮಗಳು, ಅವಳ ಮೇಲೆ ಒಂದು ದಿನ ಒಬ್ಬ ಕ್ರೂರ ರಾಕ್ಷಸನು ಕಾಮಕ್ಕಾಗಿ ಕ್ರೂರತೆಯಿಂದ ಬಲಾತ್ಕಾರ ಮಾಡುತ್ತಾನೆ. ನಿಜವಾಗಿ ಹೇಳಿರಿ. ನಿಮಗೆ ಹೇಗೆನಿಸುತ್ತದೆ ?

4. ದೇವಿಯ ದೇವಸ್ಥಾನಕ್ಕೆ ಹೋಗಿ ನೀವು ಪೂಜಿಸುತ್ತೀರಿ. ಆ ದೇವಿಯ ಮೂರ್ತಿಯನ್ನು ಒಡೆದು ಯಾರಾದರೂ ಎಸೆದರೆ, ನನಗೆ ಹೇಳಿರಿ, ಅದನ್ನು ನೋಡಿ ನಿಮಗೆ ಹೇಗೆನಿಸಬಹುದು ?

5. ಯಾವ ದೇಶದಲ್ಲಿ ನೀವು ವಾಸಿಸುತ್ತಿದ್ದೀರಿ, ಅದೇ ದೇಶದಲ್ಲಿ ನೀವು ಅಲ್ಪಸಂಖ್ಯಾತರಾಗಿ, ನಿಮಗೆ ದೇಶವನ್ನು ತೊರೆಯುವ ಬೆದರಿಕೆಯನ್ನು ಕೇಳಬೇಕಾದರೆ, ಯಾವ ಪೂರ್ವಜರು ಬಾಂಗ್ಲಾದೇಶದ ಸ್ವಾತಂತ್ರ್ಯಕ್ಕಾಗಿ ಬಲಿದಾನ ನೀಡಿದರು ಮತ್ತು ದೇಶದೊಂದಿಗೆ ನಿಂತಿದ್ದರು, ಅವರಿಗೆ `ದೇಶವನ್ನು ಬಿಡಿರಿ, ಬಾಂಗ್ಲಾದೇಶವನ್ನು ಬಿಡಿರಿ’ ಎಂದು ಹೇಳಿದರೆ ನಿಮಗೆ ಹೇಗೆನಿಸಬಹುದು ?

6. ಯಾವ ದೇಶದಲ್ಲಿ ನಿಮ್ಮ ಪೂರ್ವಜರ ನೆನಪಿದೆಯೋ, ಯಾವ ದೇಶದಲ್ಲಿ ನಿಮ್ಮ ಮನೆಯಿದೆಯೋ, ಆ ಮನೆಯ ಅಂಗಳ, ಅಲ್ಲಿರುವ ಹುಣಸೇಹಣ್ಣಿನ, ಮಾವಿನಹಣ್ಣಿನ, ಲಿಂಬೆಯ ಮರವನ್ನು ಬಿಟ್ಟು ಹೋಗುವಾಗ ನಿಮಗೆ ಹೇಗೆನಿಸಬಹುದು ?

7. ನಿಮ್ಮ ಮನೆಯನ್ನು ಸುಟ್ಟು ನಿಮ್ಮ ಕನಸನ್ನು ಬೂದಿ ಮಾಡಿದರೆ, ನಿಜವಾಗಿ ಹೇಳಿರಿ ನಿಮಗೆ ಹೇಗೆ ಅನಿಸುತ್ತದೆ ?’

8. ಆದರೆ ಭಾರತದ ದೌರ್ಭಾಗ್ಯವೆಂದರೆ ಭಾರತೀಯ ಹಿಂದೂಗಳು ಈ ರೀತಿ ಯೋಚಿಸಲಾರರು ಮತ್ತು ಎಚ್ಚರವಾಗಿರುವುದಿಲ್ಲ. ಒಂದು ದಿನ ಅವರು ನಮ್ಮನ್ನು ಮುಗಿಸುತ್ತಾರೆ. ಯಾವುದಾದರೂ ಷಡ್ಯಂತ್ರ್ಯದಲ್ಲಿ ನಮ್ಮನ್ನು ಸಿಲುಕಿಸುತ್ತಾರೆ; ಆದರೆ ಈ ದೇಶದ ದುರ್ದೈವವೆಂದರೆ, ಹಿಂದೂಗಳಿಗೆ ಎಷ್ಟು ಸಲ ಕರೆದರೂ, ಅವರು ಮನೆಯಿಂದ ಹೊರಗೆ ಬೀಳುವುದಿಲ್ಲ. ನಿಮಗೆ ನಿಮ್ಮ ಮನಸ್ಸು ಮತ್ತು ಮಕ್ಕಳು ಒಂದು ದಿನ ದೇಶಕ್ಕಾಗಿ ನೀವು ಏನು ಮಾಡಿದಿರಿ ಎಂದು ಖಂಡಿತವಾಗಿಯೂ ಕೇಳುತ್ತಾರೆ ? ಬಾಂಗ್ಲಾದೇಶದಲ್ಲಿ ಹಿಂದೂಗಳ ಮನೆಗೆ ಬೆಂಕಿ ಹತ್ತಿದೆ, ಅವರು ಭಾರತದ ಹಿಂದೂಗಳಿಗೆ ನೀವು ಇಂತಹ ಘಟನೆಗಳನ್ನು ಎದುರಿಸುವ ಸಿದ್ಧತೆಯನ್ನು ಮಾಡಿಕೊಂಡಿದ್ದೀರಾ ಎಂದು ಕೇಳುತ್ತಿದ್ದಾರೆ ? ಎಂದು ಹೇಳಿದರು.

ಸಂಪಾದಕೀಯ ನಿಲುವು

ಭಾರತದಲ್ಲಿ ಕಳೆದ 75 ವರ್ಷಗಳಿಂದ ಹಿಂದೂಗಳು ಹೊಡೆತವನ್ನು ತಿನ್ನುತ್ತಲೇ ಇರುವುದರಿಂದ ಮತ್ತು ಎಲ್ಲಾ ಪಕ್ಷಗಳ ಸರಕಾರಗಳು ಹಿಂದೂಗಳ ರಕ್ಷಣೆಗಾಗಿ ಏನೂ ಮಾಡದೇ ಇರುವುದರಿಂದ ಹಿಂದೂಗಳು ಬಾಂಗ್ಲಾದೇಶದಂತಹ ಸ್ಥಿತಿಯನ್ನು ಎದುರಿಸಬೇಕಾಗುವುದು. ಹೀಗಾದರೆ ಬಾಂಗ್ಲಾದೇಶದಲ್ಲಿ ಹಿಂದೂಗಳ ಸಂದರ್ಭದಲ್ಲಿ ಆಗಿರುವುದು ಪುನರಾವೃತ್ತಿಯಾಗುವುದು ಇದು ವಾಸ್ತವ !