ಬಾಂಗ್ಲಾದೇಶದಲ್ಲಿ ಶ್ರೀ ಗಣೇಶ ಮೂರ್ತಿಯ ಮೇಲೆ ಬಿಸಿನೀರು, ಇಟ್ಟಿಗೆ, ಕಲ್ಲುಗಳಿಂದ ದಾಳಿ

  • ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲಿನ ದಾಳಿ ಮುಂದುವರಿಕೆ !

  • ಮೂರ್ತಿ ಮತ್ತು ಹಿಂದೂಗಳ ಮೇಲೆ ಬಿಸಿನೀರು, ಇಟ್ಟಿಗೆ, ಕಲ್ಲು ತೂರಾಟ

ಚಿತಗಾಂವ (ಬಾಂಗ್ಲಾದೇಶ) – ಇಲ್ಲಿನ ಕದಮ ಮುಬಾರಕ ಪ್ರದೇಶದಲ್ಲಿ ಸೆಪ್ಟೆಂಬರ್ 6 ರಂದು ಗಣೇಶ ಮೂರ್ತಿ ತೆಗೆದುಕೊಂಡು ಹೋಗುತ್ತಿದ್ದ ಹಿಂದೂ ಭಕ್ತರ ಮೇಲೆ ಜಿಹಾದಿ ಮುಸ್ಲಿಮರು ದಾಳಿ ನಡೆಸಿದ್ದಾರೆ. ಮುಸ್ಲಿಮರು ಅವರ ಮೇಲೆ ಬಿಸಿನೀರು, ಕಲ್ಲು ಮತ್ತು ಇಟ್ಟಿಗೆಗಳನ್ನು ಎಸೆದರು. ಮಾಜಿ ಪ್ರಧಾನಿ ಶೇಖ್ ಹಸೀನಾ ಅವರ ಪಕ್ಷ ಅವಾಮಿ ಲೀಗ್ ಈ ದಾಳಿಯನ್ನು ಖಂಡಿಸಿದೆ. ಅವಾಮಿ ಲೀಗ್ ಪೋಸ್ಟ್ ಮಾಡಿದ ವೀಡಿಯೊದಲ್ಲಿ, ‘ಅಲ್ಪಸಂಖ್ಯಾತರ ಮೇಲೆ ಏಕೆ ದಾಳಿ ಮಾಡಲಾಗುತ್ತಿದೆ?’ ಎಂದು ಕೇಳಿದೆ.

‘ಬತರಗಲಿ ಧವಪಾರಾ ಸರ್ವಜನೀನ ಪೂಜಾ ಸಮಿತಿ’ಯ ಸದಸ್ಯರಾದ ಕುಶಲಕರ್ಮಿ ಉತ್ತಮ ಪಾಲ್ ಅವರ ಕಾರ್ಖಾನೆಯಿಂದ ಗಣೇಶನ ಮೂರ್ತಿಯನ್ನು ವಾಹನದಲ್ಲಿ ತರಲಾಗುತ್ತಿತ್ತು. ಅವರು ವಿಗ್ರಹದೊಂದಿಗೆ ಹಿಂದೂ ಮೋಮಿನ್ ರಸ್ತೆಯನ್ನು ತಲುಪಿದಾಗ, ಎತ್ತರದ ಕಟ್ಟಡದಿಂದ ಶ್ರೀ ಗಣೇಶ ಮೂರ್ತಿ ಮತ್ತು ಹಿಂದೂ ಭಕ್ತರ ಮೇಲೆ ಬಿಸಿನೀರು ಎರಚಲಾಯಿತು. ಪ್ರತ್ಯಕ್ಷದರ್ಶಿಗಳ ಪ್ರಕಾರ ಹಿಂದೂಗಳ ಮೇಲೆ ಇಟ್ಟಿಗೆ ಮತ್ತು ಕಲ್ಲುಗಳನ್ನು ಎಸೆಯಲಾಯಿತು. ಇದರಲ್ಲಿ ಇಬ್ಬರು ಹಿಂದೂ ಯುವಕರು ಗಾಯಗೊಂಡಿದ್ದಾರೆ. ಈ ಕಟ್ಟಡವು ಕದಮ್ ಮುಬಾರಕ್ ಮಸೀದಿ ಬಳಿ ಇದೆ. ಇದಾದ ಬಳಿಕ ಕಟ್ಟಡದಲ್ಲಿದ್ದ ಹಿಂದೂ ಭಕ್ತರು ಹಾಗೂ ಮುಸ್ಲಿಮರ ನಡುವೆ ವಾಗ್ವಾದ ನಡೆದಿದೆ.

ಕಟ್ಟಡದ ಪ್ರತಿಯೊಂದು ಕೊಠಡಿಗಳನ್ನು ವೀಕ್ಷಿತ ಭದ್ರತಾ ಪಡೆ !

ಈ ದಾಳಿಯ ಮಾಹಿತಿ ತಿಳಿದ ನಂತರ ನೂರಾರು ಹಿಂದೂಗಳು ಚಿತ್ತಗಾಂವನ ಮೋಮಿನ್ ರಸ್ತೆ ಮತ್ತು ಜಮಾಲ್ ಖಾನ್ ವಾರ್ಡ್‌ನಲ್ಲಿ ಪ್ರತಿಭಟನೆ ನಡೆಸಿದರು. ಯಾವುದೇ ಅಹಿತಕರ ಘಟನೆಯು ಸಂಭವಿಸಬಾರದು ಎಂದು ಕದಮ ಮುಬಾರಕ್ ಪ್ರದೇಶದಲ್ಲಿ ಪೊಲೀಸ್ ಮತ್ತು ಸಶಸ್ತ್ರ ಪಡೆಗಳ ದೊಡ್ಡ ತುಕಡಿಯನ್ನು ನಿಯೋಜಿಸಲಾಗಿತ್ತು. ಇದಾದ ಬಳಿಕ ಭದ್ರತಾ ಪಡೆಗಳು ದಾಳಿ ನಡೆಸಿದ ಕಟ್ಟಡದ ಪ್ರತಿಯೊಂದು ಕೊಠಡಿಯನ್ನು ಶೋಧಿಸಿದರು.

ಸಂಪಾದಕೀಯ ನಿಲುವು

ಮುಸ್ಲಿಂ ಬಹುಸಂಖ್ಯಾತ ದೇಶಗಳಲ್ಲಿ ಹಿಂದೂಗಳು ಅಸುರಕ್ಷಿತರಾಗಿದ್ದಾರೆ ಮತ್ತು ಹಿಂದೂ ಬಹುಸಂಖ್ಯಾತ ಭಾರತದಲ್ಲಿ ಮುಸ್ಲಿಮರು ಸುರಕ್ಷಿತವಾಗಿರಬಹುದು, ಇದಕ್ಕೆ ವಿರುದ್ಧವಾಗಿ ಅವರು ಹಿಂದೂಗಳ ಮೇಲೆ ಮಾತ್ರ ದಾಳಿ ಮಾಡುತ್ತಾರೆ, ಇದು ವಾಸ್ತವ. ಆದರೂ ‘ಭಾರತದಲ್ಲಿ ಮುಸ್ಲಿಮರು ಅಸುರಕ್ಷಿತರಾಗಿದ್ದಾರೆ’ ಎಂದು ಹೇಳಲಾಗುತ್ತದೆ ಮತ್ತು ಇಸ್ಲಾಮಿಕ್ ದೇಶಗಳಲ್ಲಿ ಅಸುರಕ್ಷಿತ ಹಿಂದೂಗಳ ಬಗ್ಗೆ ಯಾರೂ ಮಾತನಾಡುವುದಿಲ್ಲ !