ಶಿಮ್ಲಾ (ಹಿಮಾಚಲ ಪ್ರದೇಶ)ದಲ್ಲಿ ಲವ್ ಜಿಹಾದ್ ನಂತಹ ಘಟನೆಗಳು ನಡೆಯುತ್ತಿವೆ ! – ಕಾಂಗ್ರೆಸ್ ಸರಕಾರದ ಸಚಿವ ಅನಿರುದ್ಧ ಸಿಂಗ್

  • ಶಿಮ್ಲಾ (ಹಿಮಾಚಲ ಪ್ರದೇಶ)ದಲ್ಲಿ ಅಕ್ರಮ ಮಸೀದಿ ಪ್ರಕರಣ

  • ಹಿಂದೂಗಳು ಮತ್ತೆ ಮೆರವಣಿಗೆ ನಡೆಸಿ ಮಸೀದಿಗೆ ಮುತ್ತಿಗೆ

  • ಕಾಂಗ್ರೆಸ್ ಸರಕಾರದ ಸಚಿವ ಅನಿರುದ್ಧ ಸಿಂಗ್ ಇವರಿಂದ ಹೇಳಿಕೆ

ಶಿಮ್ಲಾ (ಹಿಮಾಚಲ ಪ್ರದೇಶ) – ಇಲ್ಲಿನ ಸಂಜೌಲಿ ಉಪನಗರದಲ್ಲಿರುವ 5 ಅಂತಸ್ತಿನ ಅಕ್ರಮ ಮಸೀದಿ ವಿರುದ್ಧ ಹಿಂದೂಗಳ ಆಂದೋಲನ ಮುಂದುವರಿದಿದೆ. ಈ ಅಕ್ರಮ ಮಸೀದಿ ವಿರುದ್ಧ ಸೆಪ್ಟೆಂಬರ 5ರಂದು ದೇವಭೂಮಿ ಪ್ರಾದೇಶಿಕ ಸಂಘಟನೆಯ ಅಧ್ಯಕ್ಷ ರೂಮಿತ್ ಸಿಂಗ್ ಠಾಕೂರ್ ನೇತೃತ್ವದಲ್ಲಿ ನೂರಾರು ಜನರು ಸಂಜೌಲಿ ಮಾರುಕಟ್ಟೆಯಲ್ಲಿ ಪ್ರತಿಭಟನೆ ನಡೆಸಿ ಮಸೀದಿಯನ್ನು ಸುತ್ತುವರೆದರು. ಇನ್ನು 2 ದಿನಗಳಲ್ಲಿ ಮಸೀದಿ ವಿರುದ್ಧ ಕ್ರಮ ಕೈಗೊಳ್ಳುವಂತೆ ಸರಕಾರಕ್ಕೆ ಕಾಲಮಿತಿ ನೀಡಿದ್ದಾರೆ. ಇದೇ ವೇಳೆ ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಕಾಂಗ್ರೆಸ್ ಸರಕಾರದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಅನಿರುದ್ಧ ಸಿಂಗ ಮಾತನಾಡಿ, ”ಸಂಜೌಲಿ ಮಾರುಕಟ್ಟೆಯಲ್ಲಿ ಮಹಿಳೆಯರು ಓಡಾಡಲು ಕಷ್ಟವಾಗಿದ್ದು, ‘ಲವ್ ಜಿಹಾದ್’ ನಂತಹ ಘಟನೆಗಳು ನಡೆಯುತ್ತಿದ್ದೂ ಇದು ರಾಜ್ಯ ಮತ್ತು ದೇಶಕ್ಕೆ ಅಪಾಯಕಾರಿಯಾಗಿದೆ” ಎಂದು ಹೇಳಿದ್ದಾರೆ. ಅವರ ಈ ಹೇಳಿಕೆ ಬಗ್ಗೆ ಎಂ.ಐ.ಎಂ. ಮುಖ್ಯಸ್ಥ ಸಂಸದ ಅಸಾದುದ್ದೀನ್ ಓವೈಸಿ ಟೀಕಿಸಿದ್ದಾರೆ.

ಅಕ್ರಮವಾಗಿ ಮಸೀದಿ ನಿರ್ಮಿಸಲಾಗಿದೆ ! – ಸಚಿವರ ಹೇಳಿಕೆ

ಸಚಿವ ಅನಿರುದ್ಧ ಸಿಂಗ ಮಾತನಾಡಿ, ಈ ಮಸೀದಿಯನ್ನು ಅಕ್ರಮವಾಗಿ ನಿರ್ಮಿಸಲಾಗಿದೆ ಎಂದು ಹೇಳಿದ್ದಾರೆ. ಮೊದಲು ಇದನ್ನು ಒಂದೇ ಅಂತಸ್ತಿನಲ್ಲಿ ನಿರ್ಮಿಸಲಾಯಿತು, ನಂತರ ಅದನ್ನು ಅನುಮತಿ ಪಡೆಯದೇ 5 ಅಂತಸ್ತಿನ ಮಸೀದಿಯಾಗಿ ಪರಿವರ್ತಿಸಲಾಯಿತು. ಈ ಮಸೀದಿಯ ನೀರು ಮತ್ತು ವಿದ್ಯುತ್ ಸಂಪರ್ಕವನ್ನು ಆಡಳಿತ ಏಕೆ ಕಡಿತಗೊಳಿಸಲಿಲ್ಲ ? ಈ ಪ್ರದೇಶದಲ್ಲಿ ನಡೆಯುವ ಹೊಡೆದಾಟ, ಹಿಂಸಾಚಾರದಲ್ಲಿ ಸ್ಥಳೀಯರಷ್ಟೇ ಅಲ್ಲ, ಹೊರಗಿನವರೂ ಭಾಗಿಯಾಗಿದ್ದಾರೆ. ಕೆಲಸಕ್ಕಾಗಿ ರಾಜ್ಯಕ್ಕೆ ಬರುವವರ ಸೂಕ್ತ ಪರಿಶೀಲನೆ ನಡೆಸಬೇಕು. ಹಿಮಾಚಲ ಪ್ರದೇಶದ ಸ್ಥಳೀಯರು ಮಾತ್ರ ವ್ಯಾಪಾರಕ್ಕಾಗಿ ಪರವಾನಗಿ ಹೊಂದಿರಬೇಕು.

ಈ ವಿಚಾರದಲ್ಲಿ ವಿರೋಧ ಪಕ್ಷ ಭಾಜಪ ಕೂಡ ಅನಿರುದ್ಧ ಸಿಂಗ ಅವರನ್ನು ಬೆಂಬಲಿಸಿದೆ. ಮಲಾಣಾ ಪ್ರದೇಶದಲ್ಲಿ ಸೆಪ್ಟೆಂಬರ್ 1 ರಂದು ವ್ಯಾಪಾರಿ ಯಶಪಾಲ್ ಸಿಂಗ್ ಮೇಲೆ ಕೆಲವು ಮುಸ್ಲಿಮರು ಹಲ್ಲೆ ನಡೆಸಿದ್ದರು. ಇದರಲ್ಲಿ ಸಿಂಗ್ ತಲೆಗೆ 14 ಹೊಲಿಗೆ ಹಾಕಲಾಗಿದೆ. ಇದಾದ ನಂತರ ಆಕ್ರೋಶಗೊಂಡ ಜನರು ಅಲ್ಲಿನ ಮಸೀದಿಯೊಂದರ ಮುಂದೆ ಪ್ರತಿಭಟನೆ ನಡೆಸಿ ಅದನ್ನು ಕೆಡವುವಂತೆ ಒತ್ತಾಯಿಸಿದರು.

ಓವೈಸಿಯವರ ಟೀಕೆಗೆ ಅನಿರುದ್ಧ ಸಿಂಗ ಅವರ ಪ್ರತ್ಯುತ್ತರ

ಸಚಿವ ಅನಿರುದ್ಧ ಸಿಂಗ ಅವರ ಹೇಳಿಕೆಗೆ ಸಂಸದ ಅಸಾದುದ್ದೀನ್ ಓವೈಸಿ ಮಾತನಾಡಿ, ಹಿಮಾಚಲ ಪ್ರದೇಶ ಸರಕಾರ ಭಾಜಪ ಪಕ್ಷದ್ದಾಗಿದೆಯೊ ಅಥವಾ ಕಾಂಗ್ರೆಸ್ ಪಕ್ಷದ್ದು ? ಎಂದು ಕೇಳಿದ್ದಾರೆ. ಹಿಮಾಚಲ ಪ್ರದೇಶದ ‘ಮೊಹಬ್ಬತ್ ಕಿ ದುಕಾನ್’ನಲ್ಲಿ ಬರೀ ದ್ವೇಷವಿದೆ ಎಂದು ಹೇಳಿದರು.
ಓವೈಸಿ ಹೇಳಿಕೆಗೆ ಪ್ರತಿಕ್ರಿಯಿಸಿದ ಅನಿರುದ್ಧ ಸಿಂಗ್, “ದೇವಸ್ಥಾನಗಳು ಮತ್ತು ಮಸೀದಿಗಳು ಖಾಸಗಿ ಆಸ್ತಿಯಲ್ಲ. ಇಲ್ಲಿ ನ್ಯಾಯೋಚಿತ ಮತ್ತು ಅಕ್ರಮದ ವಿಷಯವಿದೆ. ಓವೈಸಿಯವರ ರಾಜಕೀಯ ಕೇವಲ ಒಂದು ಸಮುದಾಯದ ಬಲದ ಮೇಲೆ ಕೆಲಸ ಮಾಡುತ್ತದೆ. ಅವರು ತಮ್ಮ ರಾಜ್ಯವನ್ನು ನಿರ್ವಹಿಸಬೇಕು. ಹೊರಗಿನಿಂದ ಬರುವವರ ಸಮಸ್ಯೆ ಗಂಭೀರವಾಗಿದ್ದು ಅದನ್ನು ಗುರುತಿಸುವುದು ಆವಶ್ಯಕವಾಗಿದೆ. ಅಪರಾಧ ಹಿನ್ನೆಲೆಯ ಜನರು ಹಿಮಾಚಲ ಪ್ರದೇಶಕ್ಕೆ ಬರುತ್ತಿದ್ದಾರೆ ಎಂದು ಹೇಳಿದರು.

ಹಿಮಾಚಲ ಪ್ರದೇಶದಲ್ಲಿ ರೋಹಿಂಗ್ಯಾ ಮುಸ್ಲಿಮರ ನುಸುಳುವಿಕೆ !

ಸಪ್ಟೆಂಬರ್ 4 ರಂದು ವಿಧಾನಸಭೆಯಲ್ಲಿ ಸಚಿವ ಅನಿರುದ್ಧ್ ಸಿಂಗ ಮಾತನಾಡಿ, ಹಿಮಾಚಲ ಪ್ರದೇಶಕ್ಕೆ ಪ್ರತಿದಿನ ಹೊಸ ಹೊಸ ಜನರು ಬರುತ್ತಿದ್ದಾರೆ. ವಿಳಾಸವೇ ಇಲ್ಲದಿರುವಂತಹ ಜಮಾತ್‌ನವರು ಎಲ್ಲಿಂದಲೋ ಬರುತ್ತಿದ್ದಾರೆ. ಇವರು ರೋಹಿಂಗ್ಯಾ ಮುಸ್ಲಿಮರೇ? ಬಾಂಗ್ಲಾದೇಶದಿಂದ ಬಂದ 1-2 ಜನರನ್ನು ನಾನು ಸ್ವತಃ ಗುರುತಿಸಿದ್ದೇನೆ. ಇದುವರೆಗೆ 6 ಸಾವಿರದ 357 ಚದರ ಅಡಿ ವಿಸ್ತೀರ್ಣದ ಈ ಮಸೀದಿಯ ನಿರ್ಮಾಣ ಅಕ್ರಮ ನಡೆದಿದೆ. ಹೆಚ್ಚು ಆತಂಕಕಾರಿ ಸಂಗತಿಯೆಂದರೆ, ಈ ಪ್ರಕರಣದ ವಿಚಾರಣೆಗೆ ಬರುತ್ತಿದ್ದ ವ್ಯಕ್ತಿ, ತನಗೂ ಈ ಪ್ರಕರಣಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಹೇಳಿರುವುದು ಶಿಮ್ಲಾ ಮಹಾನಗರ ಪಾಲಿಕೆಗೆ 2023 ರಲ್ಲಿ ತಿಳಿಯಿತು. ಆಡಳಿತಾಧಿಕಾರಿಗಳು ಅವರ ದಾಖಲೆಗಳನ್ನು ಪರಿಶೀಲಿಸಲಿಲ್ಲವೇ ?, ಎಂದು ಅವರು ಪ್ರಶ್ನಿಸಿದರು.

ನ್ಯಾಯಾಲಯದಲ್ಲಿ ಮಸೀದಿ ಪ್ರಕರಣ ಬಾಕಿ ಇದೆ

ಶಿಮ್ಲಾ ಮಹಾನಗರ ಪಾಲಿಕೆಯ ಆಯುಕ್ತ ಭೂಪೇಂದ್ರ ಅತ್ರಿ ಮಾತನಾಡಿ, ಮಸೀದಿಗೆ ಕೇವಲ ಒಂದು ಮಹಡಿಯನ್ನು ನಿರ್ಮಿಸಲು ಅನುಮತಿ ನೀಡಲಾಗಿದೆ; ಆದರೆ ಇನ್ನೂ 3 ಮಹಡಿಗಳನ್ನು ಅಕ್ರಮವಾಗಿ ನಿರ್ಮಿಸಲಾಗಿದೆ. ಈ ಪ್ರಕರಣ ನ್ಯಾಯಾಲಯದಲ್ಲಿ ಬಾಕಿ ಉಳಿದಿದ್ದು, ವಕ್ಫ್ ಬೋರ್ಡ್ ಕೂಡ ಇದರಲ್ಲಿ ಭಾಗಿಯಾಗಿದೆ. ಈ ಪ್ರಕರಣ ನ್ಯಾಯಾಲಯದ ಮೆಟ್ಟಿಲೇರಿದಾಗಿನಿಂದ ಯಾವುದೇ ಕಟ್ಟಡ ನಿರ್ಮಾಣವಾಗಿಲ್ಲ. ಹಿಂದೂ ಜಾಗರಣ ಮಂಚ್‌ನ ಮಾಜಿ ರಾಜ್ಯಾಧ್ಯಕ್ಷ ಕಮಲ ಗೌತಮ್ ಮಾತನಾಡಿ, ಮಸೀದಿ ನಿರ್ಮಾಣವಾಗಿರುವ ಸ್ಥಳ ಹಿಮಾಚಲ ಪ್ರದೇಶ ಸರಕಾರದ ಭೂಮಿಯಾಗಿದೆ. ವಕ್ಫ್ ಬೋರ್ಡ್ ಇದು ಬೋರ್ಡ್ ಆಗಿರದೇ ಭೂ ಮಾಫಿಯಾ ಆಗಿದೆ. ಹಿಮಾಚಲ ಪ್ರದೇಶವು ಅಪರಾಧಿಗಳ ಆಶ್ರಯ ಸ್ಥಾನವಾಗಿದೆ. ಈ ಪವಿತ್ರ ಭೂಮಿ ಅಪಾಯದಲ್ಲಿದೆ.