ಅಹಿಲ್ಯಾನಗರ ನಗರದಲ್ಲಿ ಮತಾಂಧನಿಂದ ಹಿಂದೂ ಮಹಿಳೆಗೆ ಥಳಿತ !

 

ಅಹಿಲ್ಯಾನಗರ – ನಗರದ ಮೋಜಿ ಓಣಿಯಲ್ಲಿ ಸೆಪ್ಟೆಂಬರ್ ೫ ರಂದು ದ್ವಿಚಕ್ರ ವಾಹನದ ಪಾರ್ಕಿಂಗ್ ನ ಕ್ಷುಲ್ಲಕ ಕಾರಣದಿಂದ ಶಕುರ ಶೇಖ್ ಎಂಬ ವ್ಯಕ್ತಿಯು ಓರ್ವ ಹಿಂದೂ ಮಹಿಳೆಗೆ ಏಕವಚನದಲ್ಲಿ ಮತ್ತು ಜಾನಾಂಗಿಯ ಭಾಷೆಯಲ್ಲಿ ಬೈಗುಳ ನೀಡಿದನು. ಈ ಸಮಯದಲ್ಲಿ ಶಕುರ್ ಇವನ ಮಗ ಅಜೀಜ್ ಶೇಖ್ ಮಹಿಳೆಯ ವಿಡಿಯೋ ಮಾಡುತ್ತಿದ್ದನು. ಆಗ ಆ ಮಹಿಳೆ ವಿಡಿಯೋಗೆ ವಿರೋಧಿಸಿದಾಗ ಅಜೀಜ್ ಶೇಖನು, ‘ನಾನು ವಿಡಿಯೋ ವೈರಲ್ ಮಾಡಿ ನಿನಗೆ ಕಳಂಕ ತರುವೆನು.’ ಶಕುರ್ ಮತ್ತು ಅಜೀಜ್ ಇವರು ಮಹಿಳೆಗೆ ಹೊಡೆದರು. ಆ ಸಮಯದಲ್ಲಿ ಅಜೀಜನು ಮಹಿಳೆಯ ಅತ್ಯಾಚಾರ ಮಾಡಿದನು. ಅದೇ ಸಮಯದಲ್ಲಿ ಶಕುರ್ ಶೇಖ್ ಮತ್ತು ಅವನ ಸೋದರ ಸಂಬಂಧಿ ಅಖಲಾಖ ಶೇಖ್ ಮತ್ತು ಅಜೀಜ ಶೇಖ್ ಇವರು ಮಹಿಳೆಯಗೆ, ‘ನಿಮಗೆ ಹೇಗೆ ಹೊರಗೆ ಅಟ್ಟಬೇಕು ಎಂಬುದು ನಮಗೆ ಚೆನ್ನಾಗಿ ತಿಳಿದಿದೆ. ನೀನು ನಾಳೆಯಿಂದ ಇಲ್ಲಿ ಹೇಗೆ ಬರುತ್ತೀಯಾ ಅದನ್ನು ನೋಡುತ್ತೇವೆ. ನಿನ್ನನ್ನು ಮುಗಿಸುತ್ತೇವೆ,’ ಎಂದು ಬೆದರಿಕೆ ಹಾಕಿದರು. ಆಕೆ ಕೆಳಗೆ ಬಿದ್ದಿರುವಾಗ ಆಕೆಯ ತಾಯಿ ಎಬ್ಬಿಸಲು ಬಂದಾಗ ಅವರಿಗೂ ಕೂಡ ಈ ಇಬ್ಬರು ಬೈಗುಳ ಬೈದು ಹೊಡೆದಿದ್ದಾರೆ ಹಾಗೂ ಮಹಿಳೆಯ ಸ್ನೇಹಿತೆಗೆ ಕೂಡ ಬೆದರಿಸಿದ್ದಾರೆ. ಈ ಪ್ರಕರಣದಲ್ಲಿ ಸಂತ್ರಸ್ತೆಯ ಪತಿಯು ಕೋತವಾಲಿ ಪೋಲಿಸ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪೊಲೀಸರು ಶಕುರ, ಅಜೀಜ್ ಶೇಖ್ ಮತ್ತು ಅಖಲಖ ಶೇಖ್ ಇವರ ವಿರುದ್ಧ ದೂರು ದಾಖಲಿಸಿ ಅವರನ್ನು ಬಂಧಿಸಿದ್ದಾರೆ. ಅವರಿಗೆ ಪೊಲೀಸ್ ಕಸ್ಟಡಿ ವಿಧಿಸಿದ್ದಾರೆ. ಶಕುರ್ ಇವನು ಮೋಚಿ ಗಲ್ಲಿಯಲ್ಲಿ ತನ್ನ ಜಾಗ ಇಲ್ಲದಿದ್ದರೂ ರಸ್ತೆಯ ಮೇಲೆ ಅತಿಕ್ರಮಣ ಮಾಡಿ ಅಂಗಡಿ ಹಾಕಿದ್ದಾನೆ. ಅದರಲ್ಲಿನ ಕೆಲವು ಅಂಗಡೀದಾರರಿಂದ ಅವನು ಬಾಡಿಗೆ ಕೂಡ ಪಡೆಯುತ್ತಾನೆ. ಮತಾಂಧರ ಈ ಮೋಚಿ ಗಲ್ಲಿಯಲ್ಲಿನ ದುರ್ವರ್ತನೆಯಿಂದ ಸ್ಥಳೀಯ ಹಿಂದುಗಳು ಆ ಸ್ಥಳದಿಂದ ತಮ್ಮ ಅಂಗಡಿ ಮತ್ತು ಜಾಗ ಇದ್ದರೂ ಕೂಡ ಏನು ಮಾಡಲು ಸಾಧ್ಯವಾಗುತ್ತಿಲ್ಲ.

ಹಿಂದೂ ಮಹಿಳೆಯ ಕ್ಷಾತ್ರ ವೃತ್ತಿ !

ಪರಿಸರದಲ್ಲಿನ ರೌಡಿ ಪ್ರವೃತ್ತಿಯ ಶಕುರ್ ಅಜೀಜ್ ಮತ್ತು ಅಖಲಕ್ ಇವರ ದಬ್ಬಾಳಿಕೆಗೆ ಹೆದರದೆ ನಿರ್ಭಯದಿಂದ ತನ್ನ ಮತ್ತು ತಾಯಿಯನ್ನು ಕಾಪಾಡುವ ಈ ಹಿಂದು ಮಹಿಳೆಯು ಸ್ವಸಂರಕ್ಷಣೆಗಾಗಿ ಯಾವಾಗ ಶಕುರ ಇವನಿಗೆ ಕಪಾಳಕ್ಕೆ ಹೊಡೆದಳು ಆಗ ಅಲ್ಲಿ ಉಪಸ್ಥಿತರಿರುವರು ಆಶ್ಚರ್ಯ ಚಕಿತರಾದರು. ಪೊಲೀಸ ಠಾಣೆಯಲ್ಲಿಗೆ ತಾವಾಗಿ ಹೋಗಿರುವಾಗ ಮೇಲಿನ ಮೂರು ರೌಡಿಗಳಲ್ಲಿ ಒಬ್ಬನು ಪೊಲೀಸ ಠಾಣೆಯಲ್ಲಿ ಕೂಡ ಹಿಂದೂ ಮಹಿಳೆಯನ್ನು ಸಿಟ್ಟಿನಿಂದ ನೋಡುತ್ತಾ ಮಾನಸಿಕ ಒತ್ತಡ ಹೇರುವ ಪ್ರಯತ್ನ ಮಾಡಿದನು. ಪೊಲೀಸರು ಯಾವಾಗ ಘಟನಾಸ್ಥಳಕ್ಕೆ ಮತ್ತೆ ಮಹಿಳೆಯನ್ನು ಕರೆದುಕೊಂಡು ಹೋದಾಗ ಉಪಸ್ಥಿತ ಗುಂಪಿನಲ್ಲಿನ ಓರ್ವ ಮತಾಂಧ ಮಾಹಿತಿ ಹೇಳುವ ಮಹಿಳೆಯ ವಿಡಿಯೋ ಮಾಡುತ್ತಿದ್ದನು. ಆಗ ಮಾಹಿತಿ ಹೇಳುತ್ತಿರುವ ಮಹಿಳೆಯು ಜಾಗರೂಕತೆಯಿಂದ ಆಕೆ ಈ ವಿಷಯ ಪೊಲೀಸರ ಗಮನಕ್ಕೆ ತಂದು ಕೊಟ್ಟ ನಂತರ ಮೊಬೈಲ್ ಕಸಿದುಕೊಂಡು ವಿಡಿಯೋ ಡಿಲೀಟ್ ಮಾಡಲಾಯಿತು.

ಸಂಪಾದಕೀಯ ನಿಲುವು

  • ಇಂತಹ ಕೃತ್ಯ ಮಾಡುವ ಮತಾಂಧಾರರಿಗೆ ಧೈರ್ಯ ಮಾಡದಂತೆ ಹಿಂದುಗಳು ಸಂಘಟನೆ ಮಾಡುವ ಅಗತ್ಯವಿದೆ !
  • ಮತಾಂಧರ ಹೆಚ್ಚುತ್ತಿರುವ ದುರ್ವರ್ತನೆ ತಡೆಯುವುದಕ್ಕಾಗಿ ಸರಕಾರದಿಂದ ಕಠಿಣ ಶಿಕ್ಷೆ ವಿಧಿಸುವುದು ಕೂಡ ಅಷ್ಟೇ ಆವಶ್ಯಕವಾಗಿದೆ !