ಮೊಬೈಲ್ ಬಳಕೆಯಿಂದ ಮೆದುಳಿನ ಕ್ಯಾನ್ಸರ್ ಆಗುವುದಿಲ್ಲ ! – ವಿಜ್ಞಾನಿ

ಮೂರು ದಶಕಗಳ ಸುದೀರ್ಘ ಸಂಶೋಧನೆಯ ನಂತರ ವಿಜ್ಞಾನಿಗಳಿಂದ ನಿಷ್ಕರ್ಷ !

ಮೇಲಬರ್ನ (ಆಸ್ಟ್ರೇಲಿಯಾ) – ಮೊಬೈಲ್ ಬಳಕೆಯಿಂದ ಮೆದುಳಿನ ಅರ್ಬುದ ರೋಗ ಆಗುವುದಿಲ್ಲ, ಎಂದು ಮೂರು ದಶಕಗಳ ಸುಧೀರ್ಘ ಸಂಶೋಧನೆಯ ನಂತರ ನಿಷ್ಕರ್ಷಕ್ಕೆ ಬರಲಾಗಿದೆ. ಇಲ್ಲಿಯವರೆಗೆ ಹೀಗೆ ತಿಳಿಯಲಾಗಿತ್ತು, ರೇಡಿಯೋ ಲಹರಿಗಳು ಅತ್ಯಂತ ಅಪಾಯಕಾರಿ ಆಗಿದ್ದು ನಿರಂತರ ಮೊಬೈಲ್ ಬಳಕೆಯಿಂದ ಮೆದುಳಿನ ಅರ್ಬುದರೋಗ ಆಗುತ್ತದೆ. ೨೦೧೧ ರಲ್ಲಿ ‘ಇಂಟರ್ನ್ಯಾಷನಲ್ ಏಜೆನ್ಸಿ ಫಾರ್ ರಿಸರ್ಚ್ ಅಂಡ್ ಕ್ಯಾನ್ಸರ್’ ಈ ಸಂಸ್ಥೆಯು ಒಂದು ಅಧ್ಯಯನದಲ್ಲಿ ನಿಷ್ಕರ್ಷಕ್ಕೆ ಬಂದಿರುವುದು ಈ ಅರಿವಿಗೆ ಇನ್ನೊಂದು ಆಧಾರ ದೊರೆತಿದೆ; ಆದರೆ ರೇಡಿಯೋ ಲಹರಿಯ ಪರಿಣಾಮ ಮನುಷ್ಯನ ಆರೋಗ್ಯದ ಮೇಲೆ ಯಾವ ಬೀರುತ್ತದೆ ? ಈ ವಿಷಯದ ಅಧ್ಯಯನ ಇನ್ನೂ ಮುಂದುವರೆದಿದೆ. ಈಗ ನಡೆದಿರುವ ಈ ಸಂಶೋಧನೆಯ ಸಂದರ್ಭದಲ್ಲಿನ ಲೇಖನ ‘ಎನ್ವೊರ್ಮೆಂಟಲ್ ಇಂಟರ್ನ್ಯಾಷನಲ್’ ಈ ಜರ್ನಲ್ ಅಂಕಣದಲ್ಲಿ ಪ್ರಸಿದ್ಧಗೊಳಿಸಲಾಗಿದೆ.

೧. ವಿಶೇಷ ಎಂದರೆ ಈ ಸಂಶೋಧನೆ ‘ರೇಡಿಯೋ ಲಹರಿಯಿಂದ ಮೆದುಳಿನ ಅರ್ಬುದ ರೋಗ ಆಗುವ ಸಾಧ್ಯತೆ ಇದೆ’, ಎಂಬ ಅರಿವನ್ನು ಕೇಂದ್ರ ಸ್ಥಾನದಲ್ಲಿಟ್ಟು ಅಧ್ಯಯನ ನಡೆಸಲಾಗಿದೆ. ಮೆದುಳಿಗೂ ಅರ್ಬುದ ರೋಗದ ಈ ಲಹರಿಗಳಿಗೆ ಯಾವುದೇ ಸಂಬಂಧ ಇಲ್ಲ, ಎಂಬುದು ಇದರಿಂದ ನಿಷ್ಕರ್ಷ ಸಿಕ್ಕಂತಾಯಿತು.

೨. ಸುಧೀರ್ಘ ಅಧ್ಯಯನದ ನಂತರ ಬಹಳಷ್ಟು ವಿಜ್ಞಾನಿಗಳು ಮೆದುಳಿನ ಅರ್ಬುದ ರೋಗದ ಹಿಂದಿನ ಕಾರಣ ಎಂದು ತಿಳಿಯಲಾಗಿರುವ ಈ ಅಭಿಪ್ರಾಯ ಬದಲಾಗಿದೆ.

೩. ೧೯೯೪ ರಿಂದ ೨೦೨೨ ಈ ಕಾಲಾವಧಿಯಲ್ಲಿ ೬೩ ಅಧ್ಯಯನದ ನಿಷ್ಕರ್ಷ ದೈನಿಕದಲ್ಲಿ ಪ್ರಸಾರ ಮಾಡಲಾಗಿತ್ತು. ಕಳೆದ ೩ ದಶಕದಲ್ಲಿನ ಈ ಸಂಶೋಧನೆಯಿಂದ, ‘ವಯರ್ಲೆಸ್ ತಂತ್ರಜ್ಞಾನ’ದ ಪ್ರಚಾರ ಜಗತ್ತಿನಾದ್ಯಂತ ಬೃಹತ್ ಪ್ರಮಾಣದಲ್ಲಿ ಆಗಿದ್ದರೂ ಮೆದುಳಿನ ಅರ್ಬುದ ರೋಗ ಆಗಿರುವ ರೋಗಿಗಳ ಸಂಖ್ಯೆಯಲ್ಲಿ ಹೆಚ್ಚಳ ಆಗಿಲ್ಲ ಎಂಬುದು ಈ ಸಂಶೋಧನೆಯಿಂದ ಗಮನಕ್ಕೆ ಬಂದಿತು.