ಸಮಾನ ನ್ಯಾಯ ಯಾವಾಗ ?

ದೇಶವಿರೋಧಿ ಕಾರ್ಯ ಚಟುವಟಿಕೆಗಳಿಂದಾಗಿ ನಿಷೇಧಕ್ಕೊಳಗಾದ ‘ಪಿ.ಎಫ್‌.ಐ.’ಗೆ ಸಂಬಂಧಿಸಿದ ಭಯೋತ್ಪಾದಕರಿಗೆ ಮನೆಯಲ್ಲಿ ಆಶ್ರಯ ನೀಡಿದನೆಂಬ ಸಂಶಯವಿರುವ ಜಲಾಲುದ್ದೀನನಿಗೆ ಆಗಸ್ಟ್ ೧೩ ರಂದು ಸರ್ವೋಚ್ಚ ನ್ಯಾಯಾಲಯ ಜಾಮೀನು ನೀಡಿದೆ. ಜಲಾಲುದ್ದೀನನನ್ನು ಬಂಧಿಸಿದ ನಂತರ ‘ಯುಎಪಿಎ’ ಕಲಮ್‌ ಅನ್ವಯಗೊಳಿಸಲಾಯಿತು. ಜಲಾಲುದ್ದೀನನಿಗೆ ಜಾಮೀನು ನೀಡುವಾಗ ‘ಜಾಮೀನು ನಿಯಮ ಆಗಿದೆ ಹಾಗೂ ಸೆರೆಮನೆ ಅಪವಾದ ಆಗಿದೆ’, ಎಂಬ ತತ್ತ್ವವು ‘ಯುಎಪಿಎ’ಯಂತಹ ಪ್ರಕರಣಗಳಲ್ಲಿಯೂ ಅನ್ವಯವಾಗುತ್ತದೆ, ಎಂದು ಹೇಳಲಾಯಿತು. ಅಷ್ಟು ಮಾತ್ರವಲ್ಲ, ‘ನ್ಯಾಯಾಲಯವು ಆರೋಪಿಯ ಜಾಮೀನಿನ ಮನವಿಯನ್ನು ತಳ್ಳಿ ಹಾಕಿದರೆ, ಅದು ಆರೋಪಿಯ ಮೂಲಭೂತ ಅಧಿಕಾರದ ಉಲ್ಲಂಘನೆಯಾಗುತ್ತದೆ. ಪರಿಚ್ಛೇದ ೨೧ ಕ್ಕನುಸಾರ ಜೀವಿಸುವ ಹಾಗೂ ಸ್ವಾತಂತ್ರ್ಯದ ಅಧಿಕಾರದ ಉಲ್ಲಂಘನೆಯಾಗುತ್ತದೆ’, ಎಂದೂ ಸರ್ವೋಚ್ಚ ನ್ಯಾಯಾಲಯವು ವಿಶೇಷವಾಗಿ ನಮೂದಿಸಿದೆ. ಇದೇ ರೀತಿ ಎರಡು ದಿನಗಳ ಹಿಂದೆ ಇನ್ನೊಂದು ಪ್ರಕರಣದಲ್ಲಿ ಸರ್ವೋಚ್ಚ ನ್ಯಾಯಾಲಯ ದೆಹಲಿಯ ಮಾಜಿ ಮುಖ್ಯಮಂತ್ರಿ ಮನೀಷ ಸಿಸೋಡಿಯಾ ಇವರಿಗೂ ಜಾಮೀನು ನೀಡುವಾಗ ‘ಶಿಕ್ಷೆಯೆಂದು ಜಾಮೀನು ನಿರಾಕರಿಸಲು ಸಾಧ್ಯವಿಲ್ಲ’, ಎಂದು ಹೇಳಿತ್ತು. ಸರ್ವೋಚ್ಚ ನ್ಯಾಯಾಲಯ ಒಂದೇ ವಾರದಲ್ಲಿ ಎರಡು ಪ್ರಕರಣಗಳಲ್ಲಿ ಜಾಮೀನು ನೀಡುವಾಗ ‘ಜಾಮೀನು ನಿಯಮವಾಗಿದೆ ಹಾಗೂ ಸೆರೆಮನೆ ಅಪವಾದವಾಗಿದೆ’, ಎಂಬುದನ್ನು ಪುನರುಚ್ಚರಿಸಿದೆ. ಜಲಾಲುದ್ದೀನ್‌ ಶಂಕಿತನಾಗಿದ್ದ ಈ ಪ್ರಕರಣವನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌.ಐ.ಎ.) ತನಿಖೆ ನಡೆಸಿದ್ದು ಹಾಗೂ ಈ ಪ್ರಕರಣವು ನೇರವಾಗಿ ದೇಶದ ಭದ್ರತೆಗೆ ಸಂಬಂಧಿಸಿದೆ. ಹೀಗಿರುವಾಗ ಸರ್ವೋಚ್ಚ ನ್ಯಾಯಾಲಯ ಜಲಾಲುದ್ದೀನನಿಗೆ ಜಾಮೀನು ನೀಡಿದೆ, ಎಂಬುದನ್ನು ಇಲ್ಲಿ ಗಮನಿಸಬೇಕಿದೆ.

ಒಂದೆಡೆ ಜಾಮೀನು ಮಂಜೂರಾಗುತ್ತಿದೆ, ಇನ್ನೊಂದೆಡೆ ದೇಶದಾದ್ಯಂತ ವಿವಿಧ ರಾಜ್ಯಗಳಲ್ಲಿ ವಿವಿಧ ಕಥಿತ ಖಟ್ಲೆಗಳಲ್ಲಿ ಹಿಂದುತ್ವನಿಷ್ಠರಿಗೆ, ಸಾಧು-ಸಂತರಿಗೆ ಮಾತ್ರ ಈ ಮೇಲಿನ ೨ ಜಾಮೀನಿನಂತಹ ಸಾಂತ್ವನ ಎಲ್ಲಿಯೂ ಸಿಗುವುದು ಕಾಣಿಸುವುದಿಲ್ಲ. ಮಾಲೆಗಾವ್‌ ಸ್ಫೋಟ ಪ್ರಕರಣದಲ್ಲಿ ಸಾಧ್ವಿ ಪ್ರಜ್ಞಾಸಿಂಹ, ಕರ್ನಲ್‌ ಪುರೋಹಿತರಿಗೆ ದೀರ್ಘಕಾಲ ಸೆರೆಮನೆಯಲ್ಲಿರಬೇಕಾಯಿತು. ಡಾ. ನರೇಂದ್ರ ದಾಭೋಳ್ಕರ್‌ ಹತ್ಯೆಯ ಪ್ರಕರಣದಲ್ಲಿ ಡಾ. ವೀರೇಂದ್ರಸಿಂಹ ತಾವಡೆಯವರಿಗೆ ಸಂಪೂರ್ಣ ಖಟ್ಲೆಯ ಅವಧಿಯಲ್ಲಿ ಅವರು ನಿರ್ದೋಷಿಯೆಂದು ಮುಕ್ತರಾಗುವವರೆಗೆ ೮ ವರ್ಷಗಳ ವರೆಗೆ ಅವರಿಗೆ ಜಾಮೀನು ಸಿಗಲಿಲ್ಲ. ದೇಶದ್ರೋಹಿ ಕೃತ್ಯಗಳಲ್ಲಿನ ಶಂಕಿತ ವ್ಯಕ್ತಿಗಳಿಗೆ ಜಾಮೀನು ಸಿಗುತ್ತದೆ ಹಾಗೂ ಹತ್ಯೆಯ ಕೇವಲ ಆರೋಪ ಇರುವವರಿಗೆ ಅದು ಸಿಗುವುದಿಲ್ಲ, ಇದು ಅವರ ಮೇಲಾಗುವ ಅನ್ಯಾಯವಲ್ಲವೇ ? ಪ್ರಾಧ್ಯಾಪಕ ಕಲ್ಬುರ್ಗಿ ಮತ್ತು ಗೌರಿ ಲಂಕೇಶ ಹತ್ಯೆಯ ಪ್ರಕರಣದಲ್ಲಿ ಶಂಕಿತರಿಗೆ ಜಾಮೀನು ಪಡೆಯಲು ದೀರ್ಘಕಾಲ ನಿರೀಕ್ಷೆ ಮಾಡಬೇಕಾಯಿತು. ಆದ್ದರಿಂದ ಯಾವ ನ್ಯಾಯ ಜಲಾಲುದ್ದೀನ ಮತ್ತು ಮನೀಷ ಸಿಸೋಡಿಯಾ ಇವರಿಗೆ ನ್ಯಾಯಾಲಯಗಳಿಂದ ಸಿಗುತ್ತದೆಯೋ, ಅದು ದೇಶದಾದ್ಯಂತದ ಹಿಂದುತ್ವನಿಷ್ಠರ ವಿವಿಧ ಖಟ್ಲೆಗಳಲ್ಲಿ ಏಕೆ ಸಿಗುವುದಿಲ್ಲ ? ಈ ನ್ಯಾಯಾಲಯಗಳಿಗೆ ಹಿಂದುತ್ವನಿಷ್ಠರಿಗೆ ಜಾಮೀನು ನೀಡದಿರುವುದು, ‘ಆರೋಪಿಯ ಮೂಲಭೂತ ಅಧಿಕಾರದ ಉಲ್ಲಂಘನೆಯಾಗಿದೆ’, ಎಂದು ಏಕೆ ಅನಿಸುವುದಿಲ್ಲ ? ‘ಹಿಂದುತ್ವನಿಷ್ಠರಿಗೆ ಈ ಮೂಲಭೂತ ಅಧಿಕಾರ ಇಲ್ಲವೆಂದು ಕಾನೂನಿನಲ್ಲಿ ಹೇಳಲಾಗಿದೆಯೇ ?’, ಎನ್ನುವ ಪ್ರಶ್ನೆ ಸಾಮಾನ್ಯ ಹಿಂದೂಗಳಲ್ಲಿ ಉದ್ಭವಿಸುವುದು ಸ್ವಾಭಾವಿಕವಾಗಿದೆ.

ಭಾರತದಲ್ಲಿ ಕಾನೂನಿನ ರಾಜ್ಯವಿದ್ದು ಕಾನೂನು ಎಲ್ಲರಿಗೂ ಸಮಾನವಾಗಿದೆ, ಎನ್ನಲಾಗುತ್ತದೆ, ಹಾಗಾದರೆ ಪ್ರತ್ಯಕ್ಷ ಯಾವಾಗ  ಆಗುವುದು ? ಆದ್ದರಿಂದ ನೂರಾರು ಪ್ರಕರಣಗಳಲ್ಲಿ ಹಿಂದುತ್ವನಿಷ್ಠರ, ಸಾಧು-ಸಂತರ ಮೇಲಿನ ವಿವಿಧ ಖಟ್ಲೆಗಳು ನೆನೆಗುದಿಯಲ್ಲಿದ್ದು ಅವರಿಗೆ ದೀರ್ಘಕಾಲ ಜಾಮೀನು ಸಿಗದೇ ಸೆರೆಮನೆಯಲ್ಲಿದ್ದಾರೆ, ಅವರಿಗೂ ಈ ಮೇಲಿನ ನಿಯಮಗಳ ಆಧಾರದಲ್ಲಿ ನ್ಯಾಯ ಸಿಗಬೇಕೆಂದು ಈಗ ಸರ್ವೋಚ್ಚ ನ್ಯಾಯಾಲಯ ಅದರಲ್ಲಿ ಗಮನಹರಿಸಬೇಕೆಂದು ಹಿಂದೂಗಳಿಗೆ ಅನಿಸುತ್ತದೆ !