ಅಮ್ರೊಹಾ (ಉತ್ತರ ಪ್ರದೇಶ) ಇಲ್ಲಿನ ಪಿಯರ್ಸ್ ಚಡ್ಡ ಕಾಲೇಜಿನಲ್ಲಿನ ಘಟನೆ
ಅಮ್ರೋಹಾ (ಉತ್ತರ ಪ್ರದೇಶ) – ಇಲ್ಲಿನ ಪಿಯರ್ಸ್ ಚಡ್ಡಾ ಮಹಾವಿದ್ಯಾಲಯದಲ್ಲಿನ ಹಿಂದೂ ವಿದ್ಯಾರ್ಥಿಗಳು ತಮ್ಮ ಕೈಯಲ್ಲಿ ಕೆಂಪು ದಾರ ಕಟ್ಟಿಕೊಳ್ಳುವುದು ಮತ್ತು ಹಣೆಯ ಮೇಲೆ ತಿಲಕವನ್ನು ಹಚ್ಚಿಕೊಳ್ಳದಂತೆ ಪ್ರಿನ್ಸಿಪಾಲ್ ಮೊಹ್ಸಿನ್ ಅಲಿ ತಡೆದಿದ್ದಾರೆ ಎಂದು ಆರೋಪಿಸಿದ್ದಾರೆ. ಈ ಪ್ರಕರಣದ ಬಗ್ಗೆ ಮಾಹಿತಿ ಪಡೆದ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ತಿನ ಸಂಘಟನೆಯ ವಿದ್ಯಾರ್ಥಿಗಳು ಮೊಹಸಿನ್ ಅಲಿ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಸಿದರು.
ಹಿಂದೂ ವಿದ್ಯಾರ್ಥಿಗಳು, ಮುಸಲ್ಮಾನ ವಿದ್ಯಾರ್ಥಿಗಳ ಬಗ್ಗೆ ಮೊಹ್ಸಿನ್ ಅಲಿ ಅವರ ವರ್ತನೆ ಸಂಪೂರ್ಣವಾಗಿ ವಿಭಿನ್ನವಾಗಿದೆ. ಮುಸಲ್ಮಾನ ವಿದ್ಯಾರ್ಥಿಗಳಿಗೆ ತರಗತಿಯಲ್ಲಿ ನಿಯಮಿತ ಪ್ರಾರ್ಥನೆಯ ಸಮಯದಲ್ಲಿ ಕೈಜೋಡಿಸದಂತೆ ಹೇಳಲಾಗುತ್ತಿದೆ ಹಾಗೆಯೇ ಶುಕ್ರವಾರ ರಜೆ ನೀಡಲಾಗುತ್ತದೆ. ಮೊಹ್ಸಿನ್ ಅಲಿ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ವಿದ್ಯಾರ್ಥಿಗಳು ಒತ್ತಾಯಿಸಿದ್ದಾರೆ.
ಸಂಪಾದಕೀಯ ನಿಲುವುಉತ್ತರ ಪ್ರದೇಶದಲ್ಲಿನ ಭಾಜಪ ಸರಕಾರವು ಇದರ ಬಗ್ಗೆ ತನಿಖೆ ನಡೆಸಿ ಕ್ರಮ ಕೈಗೊಳ್ಳಬೇಕೆಂದು ಹಿಂದೂಗಳಿಗೆ ಅನ್ನಿಸುತ್ತದೆ ! |