ಜಿಹಾದಿ ಭಯೋತ್ಪಾದಕ ಚಟುವಟಿಕೆ ನಡೆಸುವ ಪಾಕಿಸ್ತಾನದ ಪ್ರಧಾನಮಂತ್ರಿ ಶಾಹಬಾಜ್ ಶರೀಫ್ ಇವರ ಹಾಸ್ಯಸ್ಪದ ಹೇಳಿಕೆ !
ಇಸ್ಲಾಮಾಬಾದ್ (ಪಾಕಿಸ್ತಾನ) – ಪಾಕಿಸ್ತಾನ ಎಲ್ಲಾ ನೆರೆಯವರ ಜೊತೆಗೆ ಶಾಂತಿಪೂರ್ಣ ಸಂಬಂಧ ಹೊಂದಬೇಕಿದೆ; ಆದರೆ ನಮ್ಮ ದೇಶ ಯಾವುದೇ ಬೆಲೆ ನೀಡಿ ನಮ್ಮ ಸ್ವಾತಂತ್ರ್ಯ ಮತ್ತು ಸಾರ್ವಭೌಮತ್ವದ ಜೊತೆಗೆ ರಾಜಿಮಾಡಿಕೊಳ್ಳುವುದಿಲ್ಲ. ಹಾಗೂ ಪಾಕಿಸ್ತಾನದ ಇತರ ಯಾವುದೇ ದೇಶದ ವಿರುದ್ಧ ಆಕ್ರಮಣಕಾರಿ ನಿಲುವು ತಾಳುವುದು ಕೂಡ ಯಾವುದೇ ಉದ್ದೇಶವಿಲ್ಲ. ಶಾಂತಿ ಮತ್ತು ಸ್ಥಿರತೆ ಕಾಪಾಡುವುದಕ್ಕಾಗಿ ಪಾಕಿಸ್ತಾನ ಯಾವಾಗಲೂ ಮಹತ್ವದ ಪಾತ್ರ ನಿರ್ವಹಿಸಿದೆ. ಶಾಂತಿ ಕಾಪಾಡುವುದು ಇದು ನಮ್ಮ ಕರ್ತವ್ಯವಾಗಿದೆ; ಕಾರಣ ಪ್ರಗತಿ ಮತ್ತು ಶಾಂತಿ ಪರಸ್ಪರ ಜೋಡಣೆ ಆಗಿವೆ, ಎಂದು ಪಾಕಿಸ್ತಾನದ ಪ್ರಧಾನಮಂತ್ರಿ ಶಾಹಬಾಜ ಶರೀಫ್ ಇವರು ಹೇಳಿಕೆ ನೀಡಿದರು. ಅವರು ಪಾಕಿಸ್ತಾನದ ಸೈನ್ಯದ ಒಂದು ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು.
ಪಾಕಿಸ್ತಾನದ ಸೈನ್ಯದಳ ಪ್ರಮುಖ ಜನರಲ್ ಅಸೀಮ್ ಮುನೀರ್ ಇವರು ಅವರ ಭಾಷಣದಲ್ಲಿ ಕಾಶ್ಮೀರದ ಅಂಶಗಳು ಪ್ರಸ್ತಾಪಿಸಿದರು. ಅವರು, ಕಾಶ್ಮೀರದ ಅಂಶಗಳು ಪಾಕಿಸ್ತಾನಕ್ಕಾಗಿ ಯಾವಾಗಲೂ ಮಹತ್ವದ ಅಂಶಗಳಾಗಿವೆ. ಅದು ಕೇವಲ ರಾಷ್ಟ್ರೀಯ ಅಂಶವಾಗದೆ ಅದು ಪ್ರಾದೇಶಿಕ ಮತ್ತು ಜಾಗತೀಕ ಮಹತ್ವದ ಅಂಶವಾಗಿದೆ ಎಂದು ಹೇಳಿದರು.
ಸಂಪಾದಕೀಯ ನಿಲುವುಇದಕ್ಕಾಗಿ ಪಾಕಿಸ್ತಾನವು ನೆರೆಯ ದೇಶದಲ್ಲಿನ ಭಯೋತ್ಪಾದಕ ಚಟುವಟಿಕೆ ನಿಲ್ಲಿಸುವುದರ ಜೊತೆಗೆ ಭಯೋತ್ಪಾದಕರ ಸಾಕುವುದು ನಿಲ್ಲಿಸಬೇಕು. ಹಾಗೂ ಪಾಕಿಸ್ತಾನ ಆಕ್ರಮಿತ ಕಾಶ್ಮೀರವನ್ನು ಬಿಟ್ಟು ತೊಲಗಬೇಕು ! |