ಬೆಂಗಳೂರು – ಗೌರಿ ಲಂಕೇಶ ಹತ್ಯೆ ಪ್ರಕರಣದಲ್ಲಿ ಶಂಕಿತರಾದ ಭರತ ಕುರ್ಣೆ, ಸುಧನ್ವಾ ಗೋಂಧಳೇಕರ, ಸುಜೀತ ಕುಮಾರ ಮತ್ತು ಶ್ರೀಕಾಂತ ಪಾಂಗರಕರ್ ಇವರಿಗೆ ಬೆಂಗಳೂರು ಉಚ್ಚ ನ್ಯಾಯಾಲಯವು ಸೆಪ್ಟೆಂಬರ್ ೪ ರಂದು ಜಾಮೀನು ನೀಡಿದೆ. ಹಿರಿಯ ನ್ಯಾಯವಾದಿ ಅರುಣ ಶ್ಯಾಮ, ನ್ಯಾಯವಾದಿ ಅಮರ ಕೊರ್ರಿಯಾ, ವಕೀಲೆ ದಿವ್ಯಾ ಬಾಳೆಹಿತ್ತಲು ಮತ್ತು ನ್ಯಾಯವಾದಿ ಉಮಾಶಂಕರ ಮೇಗುಂಡಿ ಇವರು ಉಚ್ಚ ನ್ಯಾಯಾಲಯದಲ್ಲಿ ಶಂಕಿತರ ಪರವಾಗಿ ವಾದ ಮಂಡಿಸಿದರು. ವಿಶೇಷ ಸರಕಾರಿ ನ್ಯಾಯವಾದಿ ಅಶೋಕ ನಾಯಕ್ ಇವರು ರಾಜ್ಯ ಸರಕಾರದ ವತಿಯಿಂದ ವಾದ ಮಂಡಿಸಿದರು. ಈ ಪ್ರಕರಣದಲ್ಲಿ ಕಳೆದ ೮ ತಿಂಗಳಲ್ಲಿ ೪ ಶಂಕಿತರಿಗೆ ಜಾಮೀನು ಸಿಕ್ಕಿದ್ದು ಈಗ ಜಾಮೀನು ಸಿಕ್ಕಿದವರ ಸಂಖ್ಯೆ ೮ ಆಗಿದೆ.