ಎಸ್.ಡಿ.ಪಿ.ಐ. ಪಕ್ಷವು ಗದ್ದಲ ಮಾಡಿದ ಬಳಿಕ ಸರಕಾರ ಕೈಗೊಂಡ ನಿರ್ಧಾರ
(ಹಿಜಾಬ್ ಎಂದರೆ ಮುಸ್ಲಿಂ ಮಹಿಳೆ ತನ್ನ ತಲೆ ಮತ್ತು ಕುತ್ತಿಗೆಯನ್ನು ಮುಚ್ಚಿಕೊಳ್ಳಲು ಬಳಸುವ ವಸ್ತ್ರವಾಗಿದೆ)
ಬೆಂಗಳೂರು – ಕಾಂಗ್ರೆಸ್ ಸರಕಾರವು ಕುಂದಾಪುರದ ಸರಕಾರಿ ಕಾಲೇಜಿನ ಪ್ರಾಂಶುಪಾಲ ಬಿ.ಜಿ. ರಾಮಕೃಷ್ಣ ಅವರಿಗೆ ಘೋಷಿಸಲಾಗಿದ್ದ ‘ಅತ್ಯುತ್ತಮ ಪ್ರಾಂಶುಪಾಲ ಪ್ರಶಸ್ತಿ’ಯನ್ನು ತಡೆಹಿಡಿದಿದೆ. ಪ್ರಾಂಶುಪಾಲ ಬಿ.ಜಿ. ರಾಮಕೃಷ್ಣ ಅವರಿಗೆ ಪ್ರಶಸ್ತಿ ಘೋಷಿಸಿದ ನಂತರ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್.ಡಿ.ಪಿ.ಐ.) ಗದ್ದಲ ನಡೆಸಿದ ನಂತರ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಎಸ್.ಡಿ.ಪಿ.ಐ. ಇದು ನಿಷೇಧಿತ ಭಯೋತ್ಪಾದಕ ಸಂಘಟನೆ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ರಾಜಕೀಯ ಸಂಘಟನೆ ಆಗಿದೆ. ರಾಜ್ಯ ಸರಕಾರ ಸೆಪ್ಟೆಂಬರ್ 5 ರಂದು ಇರುವ ಶಿಕ್ಷಕರ ದಿನಾಚರಣೆಯ ಸಂದರ್ಭದಲ್ಲಿ, 41 ಶಿಕ್ಷಕರು, ಮುಖ್ಯೋಪಾಧ್ಯಾಪಕರು ಮತ್ತು ಉಪನ್ಯಾಸಕರಿಗೆ ‘ಅತ್ಯತ್ತಮ ಶಿಕ್ಷಕ/ಮುಖ್ಯೋಪಾಧ್ಯಾಪಕ ಪ್ರಶಸ್ತಿ’ ಪುರಸ್ಕಾರ ಘೋಷಿಸಿತ್ತು.
‘ರಾಮಕೃಷ್ಣ ವಿದ್ಯಾರ್ಥಿಗಳೊಂದಿಗೆ ಹೇಗೆ ನಡೆದುಕೊಂಡರು’ ಎಂಬುದು ಕಳವಳಕಾರಿ ವಿಷಯವಂತೆ !’ – ಶಿಕ್ಷಣ ಸಚಿವ ಮಧು ಬಂಗಾರಪ್ಪ
ಪ್ರಾಂಶುಪಾಲ ರಾಮಕೃಷ್ಣ ಅವರಿಗೆ ಘೋಷಿಸಿದ ಪ್ರಶಸ್ತಿಯನ್ನು ತಡೆಹಿಡಿಯುವ ನಿರ್ಧಾರದ ಬಗ್ಗೆ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ಎಸ್.ಡಿ.ಪಿ.ಐ. ಮನವಿಯನ್ನು ಸರಿಯಾಗಿದೆಯೆಂದು ಹೇಳಿದ್ದಾರೆ. “ರಾಮಕೃಷ್ಣ ಅವರಿಗೆ ಪ್ರಶಸ್ತಿ ಘೋಷಿಸಿದ ಪ್ರಶಸ್ತಿ ಸಮಿತಿಯು ಒಂದು ನಿರ್ದಿಷ್ಟ ಸಮಸ್ಯೆಯನ್ನು ಕಡೆಗಣಿಸಿದೆ ಎಂದು ನಾನು ಭಾವಿಸುತ್ತೇನೆ. ಈ ಸಮಸ್ಯೆ ಪತ್ತೆಯಾದ ನಂತರ ನಾವು ಈ ಪ್ರಶಸ್ತಿಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದ್ದೇವೆ. ನಾವು ಪರಿಸ್ಥಿತಿಯನ್ನು ಸ್ಪಷ್ಟಪಡಿಸುತ್ತೇವೆ ಮತ್ತು ಮಾಹಿತಿಯನ್ನು ನೀಡುತ್ತಿದ್ದೇವೆ. ನಾನು ಪ್ರಶಸ್ತಿ ಸಮಿತಿಗೆ ಮರು ಮೌಲ್ಯಮಾಪನ ಮಾಡಿ ನಮಗೆ ವರದಿ ನೀಡುವಂತೆ ನಿರ್ದೇಶನ ನೀಡಿದ್ದೇವೆ. ರಾಮಕೃಷ್ಣ ಅವರು ವಿದ್ಯಾರ್ಥಿಗಳೊಂದಿಗೆ ಹೇಗೆ ನಡೆದುಕೊಂಡರು ಎಂಬುದು ಚಿಂತೆಯ ವಿಷಯವಾಗಿದೆ’’ ಎಂದರು. (ರಾಮಕೃಷ್ಣ ಇವರು ಕಾಲೇಜಿನ ನಿಯಮಗಳನ್ನು ಪಾಲಿಸಿ ಮುಸ್ಲಿಂ ಹುಡುಗಿಯರಿಗೆ ಹಿಜಾಬ್ ಧರಿಸಲು ನಿರ್ಬಂಧಿಸಿದ್ದರು. ಇದರಿಂದ ಅವರ ತತ್ವನಿಷ್ಠೆ ಕಂಡು ಬರುತ್ತದೆ. ಇಂತಹ ಶಿಕ್ಷಕರು ಕಾಂಗ್ರೆಸ್ ಸರಕಾರಕ್ಕೆ ಮುಳ್ಳಾಗುತ್ತಾರೆ ಎನ್ನುವುದನ್ನು ಗಮನಿಸಬೇಕು ! – ಸಂಪಾದಕರು)
ರಾಮಕೃಷ್ಣರು ಕಾಲೇಜಿನಲ್ಲಿ ಹಿಜಾಬ್ ನಿಷೇಧಿಸಿದ್ದರು
ಡಿಸೆಂಬರ್ 2021 ರಲ್ಲಿ ಉಡುಪಿಯ ಸರಕಾರಿ ಕಾಲೇಜಿನಲ್ಲಿ ಹಿಜಾಬ್ ಧರಿಸುವುದನ್ನು ನಿಷೇಧಿಸಲಾಯಿತು. ನಂತರ ಫೆಬ್ರವರಿ 2022 ರಲ್ಲಿ ಹಿಜಾಬ್ ಧರಿಸಿ ಕಾಲೇಜಿಗೆ ಬಂದ 28 ವಿದ್ಯಾರ್ಥಿನಿಯರಿಗೆ ಕಾಲೇಜಿಗೆ ಪ್ರವೇಶ ನಿರಾಕರಿಸಲಾಯಿತು. ಈ ವಿಷಯವು ಕರ್ನಾಟಕ ಉಚ್ಚ ನ್ಯಾಯಾಲಯಕ್ಕೆ ಹೋದ ನಂತರ, ‘ಇಸ್ಲಾಮಿ ಶ್ರದ್ಧೆಯ ಪ್ರಕಾರ ಹಿಜಾಬ್ ಅತ್ಯಗತ್ಯ ಅಭ್ಯಾಸವಲ್ಲ’ ಎಂದು ಮುಸ್ಲಿಂ ವಿದ್ಯಾರ್ಥಿಗಳ ಅರ್ಜಿಗಳನ್ನು ವಜಾಗೊಳಿಸಲಾಯಿತು. ಆ ಸಮಯದಲ್ಲಿ ಕಾಲೇಜಿನಲ್ಲಿ ಬಿ.ಜಿ. ರಾಮಕೃಷ್ಣ ಮುಖ್ಯೋಪಾಧ್ಯಾಯರಾಗಿದ್ದರು. ಹಾಗಾಗಿ ಅಂದಿನ ಹಿಜಾಬ್ ನಿಷೇಧ ನಿರ್ಧಾರದ ಹಿನ್ನೆಲೆಯಲ್ಲಿ ದ್ವೇಷದಿಂದ ಎಸ್.ಡಿ.ಪಿ.ಐ. ರಾಮಕೃಷ್ಣ ಅವರಿಗೆ ಪ್ರಶಸ್ತಿ ಬರದಂತೆ ಒತ್ತಡ ಹೇರಿದೆ.