
ದೇವಸ್ಥಾನಗಳು ಭಕ್ತರ ಬಳಿಯೇ ಇರಬೇಕು, ಆಗಲೇ ದೇವರ ಸೇವೆ ಭಾವಪೂರ್ಣವಾಗಿ ನಡೆಯುತ್ತದೆ. ಸರಕಾರೀಕರಣದಿಂದಾಗಿ ದೇವಸ್ಥಾನದಲ್ಲಿ ದೇವರ ಸೇವೆ ಭಾವಪೂರ್ಣವಾಗಿ ನಡೆಯುವುದಿಲ್ಲ, ಅದೇ ರೀತಿಯಲ್ಲಿ ಇಂತಹ ಸರಕಾರದಲ್ಲಿರುವ ದೇವಸ್ಥಾನ ಗಳಲ್ಲಿ ಭ್ರಷ್ಟಾಚಾರ ಬೇಗನೇ ನುಸುಳುತ್ತಿದೆ. ಇದರಿಂದಾಗಿ ದೇವರು ದೇವಸ್ಥಾನ ದಿಂದ ಹೊರ ನಡೆಯುತ್ತಾನೆ ಮತ್ತು ಭಕ್ತರಿಗೆ ದೇವಸ್ಥಾನಕ್ಕೆ ದರ್ಶನಕ್ಕೆ ಹೋಗುವುದರಿಂದ ಯಾವುದೇ ಲಾಭ ಸಿಗುವುದಿಲ್ಲ.
ಯಜ್ಞವನ್ನು ವಿರೋಧಿಸುವವರು, ಇದನ್ನು ನೆನಪಿನಲ್ಲಿಡಬೇಕು !
ಬುದ್ಧಿಜೀವಿಗಳು ಯಜ್ಞದಲ್ಲಿ ಆಹುತಿ ನೀಡುವ ವಸ್ತುಗಳ ಕುರಿತು, ಆ ವಸ್ತುಗಳನ್ನು ಯಜ್ಞದಲ್ಲಿ ಯಾಕೆ ಸುಡುತ್ತೀರಿ ? ಎಂದು ಕೇಳುತ್ತಾರೆ. ಹೀಗೆ ಹೇಳುವುದು ಇಂಜೆಕ್ಷನ್ ನೀಡಿ ಯಾರಿಗಾದರೂ ನೋವು ಯಾಕೆ ಕೊಡುತ್ತೀರಿ ? ಎಂದು ಕೇಳಿದಂತಿದೆ. ಇಂಜೆಕ್ಷನ್‌ನಿಂದ ಹೇಗೆ ಪ್ರಯೋಜನಗಳಾಗುತ್ತವೆಯೋ, ಹಾಗೆಯೇ ಯಜ್ಞದಲ್ಲಿ ಆಹುತಿ ನೀಡು ವುದರಿಂದಲೂ ಲಾಭಗಳಾಗುತ್ತವೆ ಎಂಬುದು ಅವರಿಗೆ ತಿಳಿಯುವುದಿಲ್ಲ.
ಎಲ್ಲಿ ವಿಜ್ಞಾನಿಗಳು ಮತ್ತು ಎಲ್ಲಿ ಸೂಕ್ಷ್ಮದ ಅಭ್ಯಾಸವಿರುವ ಋಷಿ-ಮುನಿಗಳು
ಎಲ್ಲಿ ಪರಗ್ರಹಕ್ಕೆ ಹೋಗುವ ಯಾನವನ್ನು ಶೋಧಿಸಿದ ತಕ್ಷಣ ವಿಜ್ಞಾನ ವನ್ನು ಕೊಂಡಾಡುವ ಬುದ್ಧಿಜೀವಿಗಳು, ಇನ್ನು ಎಲ್ಲಿ ಕೇವಲ ಈ ವಿಶ್ವದಲ್ಲಷ್ಟೇ ಅಲ್ಲ, ತಮ್ಮ ಸೂಕ್ಷ್ಮ ದೇಹದಿಂದ ಸಪ್ತ ಲೋಕ ಮತ್ತು ಸಪ್ತಪಾತಾಳಗಳಿಗೂ ಕ್ಷಣಾರ್ಧದಲ್ಲಿ ಸೂಕ್ಷ್ಮರೂಪದಲ್ಲಿ ಹೋಗಬಲ್ಲ ಸೂಕ್ಷ್ಮ ಜ್ಞಾನದ ಅಭ್ಯಾಸವಿರುವ ಹಿರಿಯ ಋಷಿ-ಮುನಿಗಳು !
ಸಾತ್ವಿಕತೆ ಮತ್ತು ಸಂಘಟನೆಯೇ ರಾಷ್ಟ್ರದ ಉತ್ಕರ್ಷದ ಮೂಲಮಂತ್ರ ! – ಜಗದ್ಗುರು ಶ್ರೀ ರಾಮಾನಂದಾಚಾರ್ಯ ನರೇಂದ್ರಾಚಾರ್ಯಜಿ
ಪ.ಪೂ. ಡಾ. ಆಠವಲೆ ಅವರು ಅವತಾರಿ ಪುರುಷರು ! – ಜಗದ್ಗುರು ಶ್ರೀ ರಾಮಾನಂದಾಚಾರ್ಯ ನರೇಂದ್ರಾಚಾರ್ಯಜೀ
ಕೊನೆಗೆ ಈಶ್ವರನ ನಿಯಮಗಳು ಮತ್ತು ಲೆಕ್ಕಾಚಾರಗಳೇ ಮುಖ್ಯ !
‘ಮನುಷ್ಯ ಮತ್ತು ದೇವರ ನಡುವಿನ ತುಲನೆಯ ಬಗ್ಗೆ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ವಿಚಾರ’ದ ಅಧ್ಯಾತ್ಮಶಾಸ್ತ್ರೀಯ ವಿಶ್ಲೇಷಣೆ ಮತ್ತು ಅದರಿಂದ ಕಲಿಯಬೇಕಾದ ಬೋಧನೆ ಅಂದರೆ ‘ಜೀವನವನ್ನು ಸಾರ್ಥಕಗೊಳಿಸಲು ಕಠಿಣ ಸಾಧನೆ ಮಾಡದೇ ಪರ್ಯಾಯವಿಲ್ಲ !
ಧರ್ಮಾಂಧರು ಮಾಡಿದ ರಾಷ್ಟ್ರಹಾನಿ ಮತ್ತು ಅದರ ಕಡೆಗೆ ಆದ ಅಕ್ಷಮ್ಯ ನಿರ್ಲಕ್ಷ್ಯ !